Valentine’s Day Couple Fashion 2025: ವ್ಯಾಲೆಂಟೈನ್ಸ್ ವೀಕ್ ಸೀಸನ್‌ನಲ್ಲಿ ಕಪಲ್ಸ್ ಔಟ್‌ಫಿಟ್ಸ್‌ಗೆ ಹೆಚ್ಚಾದ ಬೇಡಿಕೆ
Valentine’s Day Couple Fashion 2025: ಈ ಬಾರಿಯ ವ್ಯಾಲೆಂಟೈನ್ಸ್ ವೀಕ್ ಸೀಸನ್‌ನಲ್ಲಿ ಕಪಲ್ಸ್ ಔಟ್‌ಫಿಟ್ಸ್ ಬೇಡಿಕೆ ಹೆಚ್ಚಿಸಿಕೊಂಡಿವೆ. ನಾನಾ ಬಗೆಯ ಟ್ರೆಂಡಿ ಡಿಸೈನ್‌ನ ಕಪಲ್ ಉಡುಪುಗಳು ಆಗಮಿಸಿವೆ. ಯಾವ್ಯಾವ ಬಗೆಯವನ್ನು, ಹೇಗೆಲ್ಲಾ ಆಯ್ಕೆ ಮಾಡಿಕೊಳ್ಳಬಹುದು? ಎಂಬುದರ ಕುರಿತು ಸ್ಟೈಲಿಸ್ಟ್‌ಗಳು ಇಲ್ಲಿ ತಿಳಿಸಿದ್ದಾರೆ.

ಚಿತ್ರಕೃಪೆ: ಪಿಕ್ಸೆಲ್

| ಶೀಲಾ ಸಿ. ಶೆಟ್ಟಿ, ಬೆಂಗಳೂರು
ಈ ಬಾರಿಯ ವ್ಯಾಲೆಂಟೈನ್ಸ್ ವೀಕ್ ಸೀಸನ್‌ನಲ್ಲಿ, ಕಪಲ್ಸ್ ಔಟ್‌ಫಿಟ್ಸ್ (Valentine’s Day Couple Fashion 2025) ಬೇಡಿಕೆ ಹೆಚ್ಚಿಸಿಕೊಂಡಿವೆ. ಹೌದು, ಮೊದಲಿನಂತೆ ನೋಡಲು ಒಂದೇ ರೀತಿ ಯೂನಿಫಾರ್ಮ್‌ನಂತೆ ಕಾಣುವ ಟ್ವಿನ್ನಿಂಗ್ ಔಟ್‌ಫಿಟ್ಸ್‌ಗಿಂತ ಕಾಂಟ್ರಾಸ್ಟ್ ವೇರ್, ಮಿಕ್ಸ್-ಮ್ಯಾಚ್, ಥೀಮ್ ಕಾನ್ಸೆಪ್ಟ್‌ಗೆ ಹೊಂದುವಂತಹ ಕಸ್ಟಮೈಸ್ಡ್ ಕಪಲ್ ಔಟ್‌ಫಿಟ್‌ಗಳು ಇಂದು ಟ್ರೆಂಡಿಯಾಗಿವೆ ಎನ್ನುತ್ತಾರೆ ಸ್ಟೈಲಿಸ್ಟ್ ರಾಜ್.

ಮೊದಲಿನಂತೆ ಈಗ ಕೇವಲ ಯಂಗ್‌ಸ್ಟರ್ಸ್ ವ್ಯಾಲೆಂಟೇನ್ಸ್ ಡೇ ಸೆಲೆಬ್ರೇಷನ್ ಮಾಡುವುದಿಲ್ಲ, ಬದಲಿಗೆ ವಯಸ್ಸಿನ ಭೇದ-ಭಾವವಿಲ್ಲದೇ ಎಲ್ಲರೂ ಈ ದಿನವನ್ನು ಸೆಲೆಬ್ರೇಟ್ ಮಾಡುವುದು ಕಾಮನ್ ಆಗಿದೆ. ಪತಿ-ಪತ್ನಿಯಾಗಬಹುದು, ಪ್ರೇಮಿಗಳಾಗಬಹುದು, ಒಟ್ಟಿನಲ್ಲಿ, ಇವರಿಗೆಲ್ಲರಿಗೂ ಹೊಂದುವಂತಹ ನಾನಾ ಬಗೆಯ ಟ್ರೆಂಡಿ ಡಿಸೈನ್‌ನ ಕಪಲ್ ಉಡುಪುಗಳು ಆಗಮಿಸಿವೆ ಎನ್ನುತ್ತಾರೆ ಸ್ಟೈಲಿಸ್ಟ್ ಧವನ್.
ಯೂನಿಸೆಕ್ಸ್ ಔಟ್‌ಫಿಟ್
ಇನ್ನು, ಈ ಮಿಡ್ ವಿಂಟರ್ ಸೀಸನ್‌ನಲ್ಲಿ ಟ್ರೆಂಡಿಯಾಗಿರುವ ಡೆನಿಮ್ ಜಾಕೆಟ್, ಸ್ಟ್ರೇಟ್ ಕಟ್ ಪ್ಯಾಂಟ್ಸ್, ಸ್ಲಿಮ್ ಫಿಟ್ ಹಾಗೂ ನ್ಯಾರೋ ಪ್ಯಾಂಟ್ ಯೂನಿಸೆಕ್ಸ್ ಡಿಸೈನ್‌ನಲ್ಲಿ ದೊರಕುತ್ತಿವೆ. ಇವುಗಳೊಂದಿಗೆ ನೋಡಲು ಒಂದೇ ಬಗೆಯದ್ದಾಗಿ ಕಾಣಿಸುವ ಡಿಸೈನರ್‌ವೇರ್‌ಗಳು ಬಂದಿವೆ. ಸ್ಲಿಮ್ ಫೀಟ್ ಬ್ಲೇಝರ್, ಬಾಂಬರ್ ಜಾಕೆಟ್, ಫಂಕಿ ಕೋಟ್, ಪ್ಯಾಂಟ್‌ಸೂಟ್ ಕೂಡ ಈ ಕೆಟಗರಿಗೆ ಸೇರಿವೆ.

ಗ್ಲಾಮರಸ್ ಜೋಡಿಗಳ ಔಟ್‌ಫಿಟ್ಸ್
ರೊಮ್ಯಾಂಟಿಕ್ ಜೋಡಿಗಳಿಗೆಂದೇ ನಾನಾ ಬಗೆಯ ಗ್ಲಾಮರಸ್ ಔಟ್‌ಫಿಟ್‌ಗಳು ಬಿಡುಗಡೆಗೊಂಡಿವೆ. ಇವುಗಳಲ್ಲಿ ಕ್ಯಾಶುವಲ್ ಹಾಗೂ ಹಾಲಿಡೇ ಡಿಸೈನರ್‌ವೇರ್ಸ್ ಸೇರಿಕೊಂಡಿವೆ.
ಸೆಲೆಬ್ರಿಟಿ ಕಪಲ್‌ನಂತೆ ಕಾಣಿಸುವ ಔಟ್‌ಫಿಟ್ಸ್
ಮೆನ್ಸ್ ಫ್ಯಾಷನ್‌ನಲ್ಲಿ ಪ್ರಿಂಟೆಡ್ ಟೀ -ಶರ್ಟ್ ಇಲ್ಲವೇ, ಸ್ಲಿಮ್ ಶರ್ಟ್‌ಗಳು, ಪಾಸ್ಟೆಲ್ ಕಲರ್‌ನವು ಟ್ರೆಂಡಿಯಾಗಿವೆ. ಇನ್ನು, ಯುವತಿಯರಿಗೆ ಪಾಸ್ಟೆಲ್ ಶೇಡ್‌ನ ಬಾಡಿಕಾನ್ ಡ್ರೆಸ್, ಡಿಟೇಲ್ ರಫಲ್ಸ್ ಡ್ರೆಸ್, ಶಾರ್ಟ್ ಪೆಪ್ಲಮ್ಸ್ , ಸಿಲ್ಲೋಟ್ಸ್, ಮಿನಿ ಸ್ಲೀವ್ ಫ್ರಾಕ್, ಬ್ಯಾಕ್ ಕಟೌಟ್ ಮ್ಯಾಕ್ಸಿ, ಪೆನ್ಸಿಲ್ ಸ್ಕರ್ಟ್ಸ್, ಕ್ರಾಪ್ ಟಾಪ್ ವಿತ್ ಶಾರ್ಟ್ ಪ್ಯಾಂಟ್, ಮಿನಿ, ಮೈಕ್ರೋ, ಮಿಡಿ ಸ್ಕರ್ಟ್ಸ್, ಬಾಡಿ ಹಗ್ಗಿಂಗ್ ಫ್ರಾಕ್‌ಗಳು ಬಂದಿವೆ.

ಪಾರ್ಟಿಗೆ ಮಿನುಗುವ ಔಟ್‌ಫಿಟ್ಸ್
ಈ ಸೀಸನ್‌ನ ಲಂಚ್-ಬ್ರಂಚ್ ಪಾರ್ಟಿ, ಕಾಫಿ ಬ್ರೇಕ್, ಕ್ಯಾಂಡಲ್ ಲೈಟ್ ಡಿನ್ನರ್, ಮಾಸ್ ಪಾರ್ಟಿ, ಡಾನ್ಸ್ ಪಾರ್ಟಿಗಳಿಗೆ ಶಿಮ್ಮರ್ ಡ್ರೆಸ್‌ಗಳು ಲಗ್ಗೆ ಇಟ್ಟಿವೆ. ಸಿಲ್ವರ್, ಗೋಲ್ಡ್, ಮೆಟಾಲಿಕ್ ಶೇಡ್‌ನವು ಟ್ರೆಂಡಿಯಾಗಿವೆ.
ಈ ಸುದ್ದಿಯನ್ನೂ ಓದಿ | Valentine’s Chocolate Day Speacial 2025: ವ್ಯಾಲೆಂಟೈನ್ಸ್ ವೀಕ್ ಗಿಫ್ಟ್ ಟಾಪ್ ಲಿಸ್ಟ್‌ನಲ್ಲಿ ಹಾರ್ಟ್ ಶೇಪ್ ಚಾಕೊಲೇಟ್ಸ್
ಕಪಲ್ಸ್ ಔಟ್‌ಫಿಟ್ಸ್ ಸಿಂಪಲ್ ಟಿಪ್ಸ್
- ಕಪಲ್ಸ್ ಡಿಸೈನರ್‌ವೇರ್‌ಗಳನ್ನು ಕೊಳ್ಳುವಾಗ ಅವು ಟ್ರೆಂಡ್‌ಗೆ ಹೊಂದುತ್ತವೆಯೇ ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು.
- ರೆಡ್ ಕಾಂಬಿನೇಷನ್ ಇರುವ ಡಿಸೈನರ್‌ವೇರ್‌ಗಳು ಟ್ರೆಂಡಿಯಾಗಿವೆ.
(ಲೇಖಕಿ: ಫ್ಯಾಷನ್ ಪತ್ರಕರ್ತೆ)