ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Valentine’s Chocolate Day Speacial 2025: ವ್ಯಾಲೆಂಟೈನ್ಸ್ ವೀಕ್ ಗಿಫ್ಟ್ ಟಾಪ್ ಲಿಸ್ಟ್‌ನಲ್ಲಿ ಹಾರ್ಟ್ ಶೇಪ್ ಚಾಕೊಲೇಟ್ಸ್

Valentine’s Chocolate Day Speacial 2025: ವ್ಯಾಲೆಂಟೈನ್ಸ್ ವೀಕ್‌ನಲ್ಲಿ ಬರುವ ಚಾಕೊಲೇಟ್ ಡೇ ದಿನದಂದು ನೀಡುವ ಗಿಫ್ಟ್ ಲಿಸ್ಟ್‌ನಲ್ಲಿ ಈದೀಗ ಹಾರ್ಟ್ ಶೇಪ್‌ನ ಚಾಕೋಲೇಟ್ಸ್ ಅತಿ ಹೆಚ್ಚು ಬೇಡಿಕೆ ಹೆಚ್ಚಿಸಿಕೊಂಡಿದೆ. ಈ ಕುರಿತಂತೆ ಇಲ್ಲಿದೆ ವರದಿ.

ವ್ಯಾಲೆಂಟೈನ್ಸ್ ವೀಕ್ ಗಿಫ್ಟ್ ಲಿಸ್ಟ್‌ನಲ್ಲಿ ಹಾರ್ಟ್ ಶೇಪ್ ಚಾಕೊಲೇಟ್ಸ್

ಚಿತ್ರಕೃಪೆ: ಪಿಕ್ಸೆಲ್

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ವ್ಯಾಲೆಂಟೈನ್ಸ್ ವೀಕ್‌ನಲ್ಲಿ ಬರುವ ಚಾಕೋಲೇಟ್ ಡೇ (Valentine’s Chocolate Day Speacial 2025) ಹಿನ್ನೆಲೆಯಲ್ಲಿ, ಹಾರ್ಟ್ ಶೇಪ್ ಇರುವಂತಹ ನಾನಾ ಬಗೆಯ ವೈವಿಧ್ಯಮಯ ಚಾಕೋಲೇಟ್ ಬಾಕ್ಸ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ. ಹೃದಯದ ಸಂಕೇತವಾದ ಹಾರ್ಟ್ ಶೇಪ್ ಚಾಕೊಲೇಟ್‌ಗಳು ನಾನಾ ಬಗೆಯ ಆಕರ್ಷಕ ಗಿಫ್ಟ್ ಬಾಕ್ಸ್‌ಗಳಲ್ಲಿ ಬಿಡುಗಡೆಗೊಂಡಿದ್ದು, ಯುವಕ-ಯುವತಿಯರನ್ನು ಹಾಗೂ ಪ್ರೇಮಿಗಳನ್ನು ಆಕರ್ಷಿಸುತ್ತಿವೆ. ಪರಿಣಾಮ, ವಿವಿಧ ವಿನ್ಯಾಸದ ಬಣ್ಣಬಣ್ಣದ ಆಕರ್ಷಕ ಗಿಫ್ಟ್ ಬಾಕ್ಸ್‌ಗಳಲ್ಲಿ, ಲೆಕ್ಕವಿಲ್ಲದಷ್ಟು ರುಚಿಯ ಹಾಗೂ ಫ್ಲೇವರ್‌ನ ಬಗೆಬಗೆಯ ಚಾಕೊಲೇಟ್‌ಗಳು ಗ್ರಾಹಕರನ್ನು ಸೆಳೆದಿವೆ.

4

ಆಕರ್ಷಿಸುತ್ತಿರುವ ಹಾರ್ಟ್ ಶೇಪ್ ಚಾಕೊಲೇಟ್ಸ್ ಗಿಫ್ಟ್ ಬಾಕ್ಸ್

ಇನ್ನು, ಈ ವ್ಯಾಲೆಂಟೈನ್ಸ್ ವೀಕ್‌ನಲ್ಲಿ ಚಾಕೋಲೇಟ್ ಡೇ ಯಂದು ಕೊಡಬಹುದಾದ ಹಾರ್ಟ್ ಶೇಪ್ ಚಾಕೊಲೇಟ್‌ಗಳಿರುವ ನಾನಾ ಬಗೆಯ ಬೊಕ್ಕೆಗಳು ಹಾಗೂ ಬಾಕ್ಸ್‌ಗಳು ಈ ಸೀಸನ್‌ನಲ್ಲಿ ಟ್ರೆಂಡಿಯಾಗಿವೆ. ಚಿಕ್ಕ ಸೈಜ್‌ ನಿಂದಿಡಿದು ದೊಡ್ಡ ಸೈಜ್‌ನ ಬೊಕೆ ಮಾದರಿಯಲ್ಲಿ ಇವು ದೊರಕುತ್ತಿವೆ. ಅವುಗಳಲ್ಲಿ ಚಾಕೊಲೇಟ್‌ಗಳನ್ನು ಆಕರ್ಷಕವಾಗಿ ಹೂವಿನಂತೆ ಜೋಡಿಸಿರುವುದು ವಿಶೇಷವಾಗಿ ಎಲ್ಲರನ್ನು ಸೆಳೆಯುತ್ತಿದೆ ಎನ್ನುತ್ತಾರೆ ಮಾರಾಟಗಾರರು.

5

ವೈವಿಧ್ಯಮಯ ಹಾರ್ಟ್ ಶೇಪ್ ಚಾಕೋಲೇಟ್ ಬೊಕೆ

ಚಾಕೊಲೇಟ್ ಹಾರ್ಟ್ ಬೊಕೆ, ಚಾಕೊಲೇಟ್ ರೋಸ್ ಪ್ಲಸ್ ಹಾರ್ಟ್ ಬೊಕೆ, ಕಲರ್ & ರೆಡ್ ರೋಸ್ ವಿತ್ ಹಾರ್ಟ್ ಬೊಕೆಗಳು, ಕಸ್ಟಮೈಸ್ಡ್ ವಿನ್ಯಾಸದಲ್ಲೂ ದೊರೆಯುತ್ತಿವೆ. ಇನ್ನು, ದೂರದ ಊರಿನಲ್ಲಿರುವ ತಮ್ಮ ಪ್ರೇಮಿಗೆ ಆನ್‌ಲೈನ್‌ನಲ್ಲೂ ಶುಭಾಶಯ ತಿಳಿಸುವ ಸೌಲಭ್ಯವನ್ನು ನೀಡಲಾಗುತ್ತಿರುವುದು, ಈ ಬಾರಿ ಚಾಕೊಲೇಟ್ ಬಿಸ್‌ನೆಸ್ ಹೆಚ್ಚಾಗಲು ಕಾರಣ ಎನ್ನುತ್ತಾರೆ ಮಾಲ್‌ವೊಂದರ ಚಾಕೊಲೇಟ್ ಶಾಪ್‌ನ ಮ್ಯಾನೇಜರ್. ಅವರ ಪ್ರಕಾರ, ಯಂಗ್‌ಸ್ಟರ್ಸ್ ಅತಿ ಹೆಚ್ಚು ಚಾಕೊಲೇಟ್ ಪ್ರಿಯರು ಎನ್ನುತ್ತಾರೆ.

6

ಈ ಸುದ್ದಿಯನ್ನೂ ಓದಿ | Valentines Day Fashion 2025: ವ್ಯಾಲೆಂಟೈನ್ಸ್ ಡೇ ಸಂಭ್ರಮಕ್ಕೆ ಸಾಥ್ ನೀಡಲು ಬಂತು ಹೃದಯಾಕಾರದ ಕಿವಿಯೊಲೆಗಳು

ಚಾಕೊಲೇಟ್ಸ್ ಪ್ರೇಮಿಗಳಿಗೆ ಒಂದಿಷ್ಟು ಟಿಪ್ಸ್

* ಖರೀದಿಸುವ ಮುನ್ನ ಮ್ಯಾನುಫ್ಯಾಕ್ಚರ್ಡ್ ಡೇಟ್ & ಎಕ್ಸ್‌ಪೈರಿ ಡೇಟ್ ಗಮನಿಸಿ, ಖರೀದಿಸಿ.

* ಕುಕ್ಕೀಸ್ ಹಾಗೂ ಚಾಕೊಲೇಟ್ ಒಟ್ಟೊಟ್ಟಿಗೆ ಇರುವಂತವು ಈ ಬಾರಿ ಬೇಡಿಕೆ ಪಡೆದಿವೆ.

* ಹೆಚ್ಚು ದಿನಗಳ ಕಾಲ ಇಟ್ಟು ಸೇವಿಸಬಹುದಾದ ಫ್ಲೇವರ್‌ನದ್ದನ್ನು ಖರೀದಿಸಿ.

(ಲೇಖಕಿ: ಫ್ಯಾಷನ್ ಪತ್ರಕರ್ತೆ)