ಕರ್ನಾಟಕ ಬಜೆಟ್​ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Valentine’s Week Hairstyle Trend: ವ್ಯಾಲೆಂಟೈನ್ಸ್ ವೀಕ್‌ನಲ್ಲಿ ಟ್ರೆಂಡಿಯಾದ 5 ಬ್ಯೂಟಿಫುಲ್ ಹೇರ್ ಸ್ಟೈಲ್ಸ್

Valentine’s Week Hairstyle Trend 2025: ವ್ಯಾಲೆಂಟೈನ್ಸ್ ವೀಕ್‌ನ ಈ ಸೀಸನ್‌ನಲ್ಲಿ, ಬ್ಯೂಟಿ ಲೋಕದಲ್ಲಿ ನಾನಾ ಶೈಲಿಯ ಹೇರ್‌ ಸ್ಟೈಲ್‌ಗಳು ಡಿಕ್ಲೇರ್ ಆಗಿದ್ದು, ಅವುಗಳಲ್ಲಿ5 ಶೈಲಿಯ ಬ್ಯೂಟಿಫುಲ್ ಕೇಶವಿನ್ಯಾಸಗಳು ಟ್ರೆಂಡಿಯಾಗಿದೆ. ಹಾಗಾದಲ್ಲಿ, ಅವು ಯಾವುವು? ಸ್ಟೈಲಿಂಗ್ ಹೇಗೆ? ಈ ಕುರಿತಂತೆ ಹೇರ್‌ ಸ್ಟೈಲಿಸ್ಟ್‌ಗಳು ಟಿಪ್ಸ್ ನೀಡುವುದರ ಮೂಲಕ ಸಿಂಪಲ್ಲಾಗಿ ವಿವರಿಸಿದ್ದಾರೆ.

ವ್ಯಾಲೆಂಟೈನ್ಸ್ ವೀಕ್‌ನಲ್ಲಿ ಟ್ರೆಂಡಿಯಾದ 5 ಬ್ಯೂಟಿಫುಲ್ ಹೇರ್ ಸ್ಟೈಲ್ಸ್

ಚಿತ್ರಕೃಪೆ: ಪಿಕ್ಸೆಲ್

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ವ್ಯಾಲೆಂಟೈನ್ಸ್ ವೀಕ್‌ನಲ್ಲಿ ಆಕರ್ಷಕವಾಗಿ ನೀವು ಕಾಣಿಸಬೇಕೆ! ಹಾಗಾದಲ್ಲಿ ಟ್ರೆಂಡಿಯಾಗಿರುವ ಈ ಹೇರ್‌ ಸ್ಟೈಲ್‌ಗಳನ್ನು (Valentine’s Week Hairstyle Trend 2025) ಒಮ್ಮೆ ಮಾಡಿ, ನೋಡಿ! ಹಾಗೆನ್ನುತ್ತಾರೆ ಹೇರ್‌ ಸ್ಟೈಲಿಸ್ಟ್‌ಗಳು. ಇನ್ನು, ಇದಕ್ಕೆ ಪೂರಕ ಎಂಬಂತೆ, ಈಗಾಗಲೇ, ಬ್ಯೂಟಿ ಲೋಕವು ಒಂದಿಷ್ಟು ಹೇರ್‌ ಸ್ಟೈಲ್‌ಗಳನ್ನು ಡಿಕ್ಲೇರ್ ಮಾಡಿದ್ದು, ಅಂತರ್ಜಾಲದಲ್ಲಿ ಇವುಗಳನ್ನು ವಿನ್ಯಾಸಗೊಳಿಸುವ ವಿಡಿಯೋಗಳನ್ನು ಬಿಡುಗಡೆಗೊಳಿಸಿದೆ. ಮೆಸ್ಸಿ ಫ್ರೀ ಹೇರ್‌ ಸ್ಟೈಲ್‌, ಕೂದಲನ್ನು ಫ್ರಿಯಾಗಿ ಬಿಟ್ಟರೂ, ಸ್ಟ್ರೇಟ್‌ನಿಂಗ್ ಬದಲು ವೆವ್ವಿ ಅಥವಾ ಕರ್ಲ್ ಮಾಡುವುದರಿಂದ ಇದು ನೋಡಲು ಮೆಸ್ಸಿಯಾಗಿ ಕಾಣಿಸಬಹುದು. ಆಗ, ಒಂದೆಡೆ ಕಿವಿಯ ಹಿಂದೆ ಹೇರ್ ಆಕ್ಸೆಸರೀಸ್ ಮೂಲಕ ಕ್ಲಿಪ್ ಹಾಕಿದಲ್ಲಿ, ನೋಡಲು ಅಂದವಾಗಿ ಕಾಣಿಸುತ್ತದೆ. ಹಾಫ್ ಪಿನ್ ಮಾಡಿದಂತೆ ಮತ್ತು ಆಫ್ ಫ್ರೀ ಹೇರ್‌ ಸ್ಟೈಲ್‌ನಂತಹ ವಿನ್ಯಾಸ ಆಕರ್ಷಕವಾಗಿ ಬಿಂಬಿಸುತ್ತದೆ.

1

ಟಾಪ್ ನಾಟ್ ವಿನ್ಯಾಸ

ತಲೆಯ ಹಿಂಭಾಗದಲ್ಲಿ ಸ್ವಲ್ಪ ಕೂದಲನ್ನು ಬಿಟ್ಟು, ಉಳಿದೆಲ್ಲಾ ಕೂದಲನ್ನು ಒಟ್ಟು ಸೇರಿಸಿ, ನಾಟ್ ಹಾಕಿ, ಮೇಲೆ ಕಟ್ಟಬೇಕು. ಇದಕ್ಕೆ ಚಿಕ್ಕ ಬಟನ್ ಫ್ಲವರ್ಸ್, ಪರ್ಲ್ಸ್ ಆಕ್ಸೆಸರೀಸ್‌ಗಳಿಂದ ಅಲಂಕರಿಸಿದರೆ ಸುಂದರವಾಗಿ ಕಾಣಿಸುತ್ತದೆ.

ಲೋ ಬನ್ ಅಲಂಕಾರ

ನೀವು ಕೂದಲನ್ನು ಫ್ರೀಯಾಗಿ ಬಿಡುವುದು ಬೇಡ, ಡಿಸೆಂಟ್ ಲುಕ್ ಬೇಕು ಎನ್ನುವುದಾದಲ್ಲಿ, ಸ್ವಲ್ಪ ಕೂದಲನ್ನು ಒಟ್ಟಾಗಿ ಸೇರಿಸಿ, ಸೈಡ್ ಬನ್ ಅಥವಾ ಬ್ಯಾಕ್ ಸೈಡ್‌ನಲ್ಲಿ ಸೆಂಟರ್ ಬನ್ ಹಾಕಬಹುದು. ಇದು ಅತಿ ಸುಲಭದ ಕೇಶ ವಿನ್ಯಾಸ ಎನ್ನಬಹುದು.

2

ಫಿಶ್‌ಟೇಲ್ ಹೇರ್ ಸ್ಟೈಲ್

ನೋಡಲು ಮೀನಿನ ಬಾಲದಂತೆ ಕಾಣಿಸುವ ಈ ಕೇಶ ವಿನ್ಯಾಸದಲ್ಲಿ, ಕೂದಲನ್ನು ಸಮವಾಗಿ ಎರಡು ಭಾಗ ಮಾಡಿಕೊಂಡು, ಎರಡೂ ಬದಿಯಿಂದಲೂ ಸ್ವಲ್ಪ ಸ್ವಲ್ಪ ಕೂದಲನ್ನು ತೆಗೆದುಕೊಂಡು, ಜಡೆ ಹೆಣೆಯುತ್ತಾ ಹೋದರೆ ಜಡೆ ಸುಂದರವಾಗಿ ಕಾಣಿಸುತ್ತದೆ. ಇದನ್ನು ಸೆಂಟರ್‌ನಲ್ಲಾಗಲಿ ಕೊಂಚ ಕಿವಿಯ ಹಿಂದೆಯಾಗಲಿ ಹೆಣೆಯಬಹುದು. ಸ್ಟೈಲಿಶ್ ಆಗಿ ಕಾಣಿಸುತ್ತದೆ.

ಫಂಕಿ ಲುಕ್‌ಗಾಗಿ ಹನ್ ಹೇರ್‌ ಸ್ಟೈಲ್‌

  • ಅರ್ಧ ತಲೆಯ ಮೇಲ್ಭಾಗದ ಕೂದಲನ್ನು ಜುಟ್ಟಿನಂತೆ ಹಾಕಿ ನಂತರ ಬನ್‌ನಂತೆ ಮಾಡಿ. ಉಳಿದ ಕೆಳಭಾಗದ ಕೂದಲನ್ನು ಹಾಗೆಯೇ ಫ್ರಿಯಾಗಿ ಬಿಡಬೇಕು. ಇದು ಫಂಕಿ ಲುಕ್, ಯಂಗ್ ಲುಕ್ ನೀಡುತ್ತದೆ ಎನ್ನುತ್ತಾರೆ ಹೇರ್‌ ಸ್ಟೈಲಿಸ್ಟ್‌ ಮಾಲಾ.
  • ನಿಮ್ಮ ಔಟ್‌ಫಿಟ್‌ಗೆ ಮ್ಯಾಚ್ ಆಗುವಂತಹ ಹೇರ್‌ ಸ್ಟೈಲ್‌ ಮಾಡಿ.
  • ನಿಮ್ಮ ಮುಖದ ಆಕಾರಕ್ಕೆ ಹೇರ್‌ ಸ್ಟೈಲ್‌ ಹೊಂದಬೇಕು.
  • ಪಾರ್ಟಿಗಾದಲ್ಲಿ ಯಾವುದು ಬೆಸ್ಟ್ ಎಂಬುದನ್ನು ಮೊದಲೇ ಟ್ರಯಲ್ ಮಾಡಿ ನೋಡಿ.
  • ಉದ್ದ ಅಥವಾ ಗಿಡ್ಡ ಕೂದಲಿಗೆ ತಕ್ಕಂತೆ ಹೇರ್‌ ಸ್ಟೈಲ್‌ ಮಾಡಿ.
  • ಕೂದಲನ್ನು ವಾಶ್ ಮಾಡಿ, ಹೇರ್‌ ಸ್ಟೈಲ್‌ ಮಾಡಿ.

(ಲೇಖಕಿ: ಫ್ಯಾಷನ್ ಪತ್ರಕರ್ತೆ)

ಈ ಸುದ್ದಿಯನ್ನೂ ಓದಿ | Valentine’s Day Fashion 2025: ಹೀಗಿರಲಿ ನಿಮ್ಮ ವ್ಯಾಲೆಂಟೇನ್ಸ್ ಡೇ ಫ್ಯಾಷನ್ ಸ್ಟೇಟ್‌ಮೆಂಟ್ಸ್