ಬೆಂಗಳೂರಿನ ಪಾದಚಾರಿ ಮಾರ್ಗಗಳ ಸ್ಥಿತಿ ನೋಡಿ; ವಿಡಿಯೊ ಶೇರ್ ಮಾಡಿದ ಕೆನಡಾ ವ್ಯಕ್ತಿ ಹೇಳಿದ್ದೇನು?
Viral Video: ಸಿಲಿಕಾನ್ ಸಿಟಿ ಬೆಂಗಳೂರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದರೂ ಇಲ್ಲಿನ ಮೂಲ ಸೌಕರ್ಯಗಳ ಸಮಸ್ಯೆ ಮಾತ್ರ ಬಗೆಹರಿದಿಲ್ಲ ಎಂಬುದನ್ನು ಕೆನಡಾ ಮೂಲದ ವ್ಯಕ್ತಿಯೊಬ್ಬರು ಹಂಚಿಕೊಂಡಿದ್ದಾರೆ. ಬೆಂಗಳೂರು ನಗರದ ಅತ್ಯಂತ ಪ್ರತಿಷ್ಠಿತ ಪ್ರದೇಶದಲ್ಲಿ ಒಂದಾದ ಇಂದಿರಾನಗರದ ಪಾದಚಾರಿ ಮಾರ್ಗಗಳ ಸಮಸ್ಯೆಯನ್ನು ಅವರು ಶೇರ್ ಮಾಡಿಕೊಂಡಿದ್ದು ಸದ್ಯ ಭಾರಿ ವೈರಲ್ ಆಗಿದೆ.
ಬೆಂಗಳೂರಿನ ಪಾದಚಾರಿ ರಸ್ತೆಯ ಅವ್ಯವಸ್ಥೆ -
ಬೆಂಗಳೂರು, ಡಿ. 22: ನಗರ ಪ್ರದೇಶದಲ್ಲಿ ನೆಲೆಯೂರಲು ಬಹಳಷ್ಟು ಮಂದಿ ಬಯಸುತ್ತಾರೆ. ಅದರಲ್ಲೂ ಬೆಂಗಳೂರಿನಲ್ಲಿ ಉದ್ಯೋಗಾವಕಾಶ ಮತ್ತು ಶಿಕ್ಷಣ ಪಡೆಯಲು ದೇಶದ ವಿವಿಧ ಭಾಗಗಳಿಂದ. ವಿದೇಶದಿಂದ ಸಾಕಷ್ಟು ಜನರು ಭೇಟಿ ನೀಡುತ್ತಾರೆ. ಇಷ್ಟೆಲ್ಲ ಖ್ಯಶತಿ ಪಡೆದಿದ್ದರೂ ಇಲ್ಲಿನ ಮೂಲಸೌಕರ್ಯಗಳ ಸಮಸ್ಯೆ ಮಾತ್ರ ಬಗೆಹರಿದಿಲ್ಲ ಎಂಬುದನ್ನು ಕೆನಡಾ ಮೂಲದ ವ್ಯಕ್ತಿಯೊಬ್ಬರು ತಿಳಿಸಿದ್ದಾರೆ. ಬೆಂಗಳೂರು ನಗರದ ಅತ್ಯಂತ ಪ್ರತಿಷ್ಠಿತ ಪ್ರದೇಶದಲ್ಲಿ ಒಂದಾದ ಇಂದಿರಾನಗರದ ಪಾದಚಾರಿ ಮಾರ್ಗಗಳ ಸಮಸ್ಯೆಯನ್ನು ವಿಡಿಯೊ ಮೂಲಕ ಅವರು ಶೇರ್ ಮಾಡಿಕೊಂಡಿದ್ದು, ಸದ್ಯ ಭಾರಿ ವೈರಲ್ (Viral Video) ಆಗಿದೆ.
ಕೆನಡಾದ ವ್ಯಕ್ತಿಯೊಬ್ಬರು ಬೆಂಗಳೂರಿನ ಪಾದಚಾರಿ ರಸ್ತೆಗಳ ಸಮಸ್ಯೆಗಳ ಬಗ್ಗೆ ಮಾತನಾಡಿದ್ದಾರೆ. ಇಂದಿರಾನಗರದ ಡಬಲ್ ರೋಡ್‌ನಲ್ಲಿ ಅವರು ತಮ್ಮ ಪುಟ್ಟ ಮಗನೊಂದಿಗೆ ಪಾದಚಾರಿ ಮಾರ್ಗದಲ್ಲಿ ನಡೆಯಲು ಪ್ರಯತ್ನಿಸುವಾಗ ಎದುರಾದ ಸಮಸ್ಯೆಯನ್ನು ವಿವರಿಸಿದ್ದಾರೆ. ಅವರು ಮತ್ತು ಅವರ ಚಿಕ್ಕ ಮಗ ಅಸುರಕ್ಷಿತ ಪಾದಚಾರಿ ಮಾರ್ಗಗಳಲ್ಲಿ ಸಂಚರಿಸುತ್ತಿರುವ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ತಮ್ಮ ಪೋಸ್ಟ್‌ನಲ್ಲಿ ಬೆಂಗಳೂರಿನ ಅತ್ಯಂತ ಪ್ರತಿಷ್ಠಿತ ಪ್ರದೇಶಗಳಲ್ಲಿ ಒಂದಾದ ಇಂದಿರಾನಗರದಲ್ಲಿ ಮಕ್ಕಳೊಂದಿಗೆ ನಡೆದುಕೊಂಡು ಹೋಗುವ ಪೋಷಕರಿಗೆ ಇದು ದೈನಂದಿನ ಸಮಸ್ಯೆಯಾಗಿದೆ ಎಂದು ಕೆನಡಾ ನಿವಾಸಿ ಫ್ರೈಸೆನ್ ವಿವರಿಸಿದ್ದಾರೆ.
ವಿಡಿಯೊ ನೋಡಿ:
ಇಲ್ಲಿನ ಪಾದಚಾರಿ ಮಾರ್ಗಗಳು ಕಿತ್ತುಹೋಗಿದ್ದು, ನಡೆಯುವಾಗ ಎಡವಿ ಬೀಳುವ ಸಾಧ್ಯತೆ ಇದೆ. ಚರಂಡಿಗಳು ಸರಿಯಾಗಿ ಮುಚ್ಚದೆ ತೆರೆದ ಸ್ಥಿತಿಯಲ್ಲಿದ್ದು, ಮಕ್ಕಳ ಪಾಲಿಗೆ ಇವು ಮೃತ್ಯು ಪಾಶದಂತಿವೆ ಎಂದು ಹೇಳಿದ್ದಾರೆ. ಇಲ್ಲಿ ಓಡಾಟ ನಡೆಸುವುದು ಸುರಕ್ಷಿತವಾಗಿಲ್ಲ ಎಂದು ಹೇಳಿದ್ದಾರೆ.
ಬ್ಯಾಂಕ್‍ನಲ್ಲಿ ಹಣವಿಟ್ಟರೆ ಸುರಕ್ಷಿತ ಅಂದುಕೊಂಡಿದ್ದೀರಾ? ಗ್ರಾಹಕರ ದುಡ್ಡನ್ನೇ ಕದ್ದ ಕ್ಯಾಶಿಯರ್
ಸದ್ಯ ಬೆಂಗಳೂರಿನ ಪಾದಚಾರಿ ಮೂಲಸೌಕರ್ಯ ಬಗ್ಗೆ ಮಾತನಾಡಿದ ಈ ವಿಡಿಯೊ ಗಮನ ಸೆಳೆದಿದೆ. ಬೆಂಗಳೂರಿನ ಪಾದಚಾರಿ ರಸ್ತೆಗಳ ತೊಂದರೆಗಳನ್ನು ಉಲ್ಲೇಖಿಸುತ್ತ ಫ್ರೈಸೆನ್, ಇದರ ಹೊರತಾಗಿಯೂ, ಇಂದಿರಾನಗರದ ಸ್ಥಿತಿ ಭಾರತದ ಇತರ ಪ್ರದೇಶದಿಂದ ಉತ್ತಮವಾಗಿದೆ ಎಂದು ಹೇಳಿದ್ದಾರೆ. ಇಲ್ಲಿ ಕನಿಷ್ಠ ಪಾದಚಾರಿ ಮಾರ್ಗಗಳಿವೆ. ಆದರೆ ಅನೇಕ ಮಹಾನಗರಗಳಲ್ಲಿ, ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ನಡೆಯುವುದು ಅಸಾಧ್ಯ ಎಂದು ಹೇಳಿದ್ದಾರೆ.
ನಗರದ ಬೀದಿಗಳಲ್ಲಿ ಪಾದಚಾರಿಗಳು ಎದುರಿಸುತ್ತಿರುವ ತೊಂದರೆಗಳನ್ನು ವಿಡಿಯೊ ಸ್ಪಷ್ಟವಾಗಿ ತಿಳಿಸುತ್ತದೆ ಎಂದು ನೆಟ್ಟಿಗರೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ. ಮತ್ತೊಬ್ಬರು ನಾವು ಈ ಅವ್ಯವಸ್ಥೆಗೆ ಹೊಂದಿಕೊಂಡು ಹೋಗಿದ್ದೇವೆ. ಆದರೆ ಹೊರಗಿನ ಜನ ಬಂದಾಗ ಮಾತ್ರ ನಮ್ಮ ನಗರದ ಅಸಲಿ ಮುಖವಾಡ ತೆರೆಯುತ್ತದೆ ಎಂದು ಬರೆದುಕೊಂಡಿದ್ದಾರೆ.