Valentines Day Shopping 2025: ಆಗಲೇ ಶುರುವಾಯ್ತು ವ್ಯಾಲೆಂಟೈನ್ಸ್ ಡೇ ಶಾಪಿಂಗ್ !
Valentines Day Shopping 2025: ಈ ಸಾಲಿನ ವ್ಯಾಲೆಂಟೈನ್ಸ್ ಡೇ ಶಾಪಿಂಗ್ ಈಗಾಗಲೇ ಆರಂಭಗೊಂಡಿದೆ. ಮಾಲ್‌ಗಳಲ್ಲಿ ಮಾತ್ರವಲ್ಲ, ಸಾಕಷ್ಟು ಶಾಪ್‌ಗಳಲ್ಲಿ, ಟ್ರೆಂಡಿ ರೆಡ್ ಶೇಡ್ ಔಟ್‌ಫಿಟ್‌ಗಳನ್ನು ಪ್ರದರ್ಶಿಸಿ ಗ್ರಾಹಕರನ್ನು ಸೆಳೆಯಲಾಗುತ್ತಿದೆ. ಈ ಎಲ್ಲದರ ಈ ಕುರಿತಂತೆ ಇಲ್ಲಿದೆ ಸಂಕ್ಷಿಪ್ತ ವರದಿ.
-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಈ ವರ್ಷದ ವ್ಯಾಲೆಂಟೈನ್ಸ್ ಡೇ ಶಾಪಿಂಗ್ (Valentines Day Shopping 2025) ಎಲ್ಲೆಡೆ ಶುರುವಾಗಿದೆ. ಹೌದು, ಮಾಲ್‌ಗಳಲ್ಲಿ ಮಾತ್ರವಲ್ಲ, ಚಿಕ್ಕ ಪುಟ್ಟ ಶಾಪ್‌ಗಳಲ್ಲೂ ಈಗಾಗಲೇ ವ್ಯಾಲೆಂಟೈನ್ಸ್ ಡೇ ಶಾಪಿಂಗ್ ಆರಂಭಗೊಂಡಿದೆ. ಕೆಲವು ಶಾಪ್‌ಗಳು ಈ ದಿನಕ್ಕೆಂದು ನಾನಾ ಬಗೆಯ ಆಫರ್‌ಗಳನ್ನು ನೀಡುತ್ತಿದ್ದರೆ, ಇನ್ನು ಕೆಲವು ಶಾಪ್‌ಗಳು ರೆಡ್ ಶೇಡ್ ಔಟ್‌ಫಿಟ್‌ಗಳನ್ನು ಪ್ರದರ್ಶಿಸಿ ಗ್ರಾಹಕರನ್ನು ಸೆಳೆಯುತ್ತಿವೆ. ಮತ್ತೆ ಕೆಲವು ಇಂತಿಷ್ಟು ಶಾಪಿಂಗ್ ಮಾಡಿದವರಿಗೆ ನಾನಾ ಬಗೆಯ ಗಿಫ್ಟ್ ಐಟಂಗಳನ್ನು ಉಚಿತವಾಗಿ ನೀಡುತ್ತಿವೆ.
ಎಲ್ಲೆಡೆ ರೆಡ್ ಕಲರ್ ಮೇನಿಯಾ
ಮಾಲ್‌ಗಳಲ್ಲಿ ಸಾಕಷ್ಟು ಶಾಪ್‌ಗಳು ತಮ್ಮ ಶೋಕೇಸ್‌ಗಳಲ್ಲಿ ಬೊಂಬೆಗಳಿಗೆ ಈ ಸೀಸನ್‌ನ ಟ್ರೆಂಡಿ ಕಲರ್ಸ್ ಹಾಗೂ ರೆಡ್‌ನ ನಾನಾ ವರ್ಣದ ಔಟ್‌ಫಿಟ್‌ಗಳನ್ನು ತೊಡಿಸಿ ಪ್ರದರ್ಶನಕ್ಕಿಟ್ಟಿವೆ ಎನ್ನುತ್ತಾರೆ ಶಾಪಿಂಗ್ ಎಕ್ಸ್‌ಪರ್ಟ್ ಹಾಗೂ ಸ್ಟೈಲಿಸ್ಟ್ ಜೆನ್. ಅವರ ಪ್ರಕಾರ, ಈ ಸೀಸನ್‌ನಲ್ಲಿ ಆದಷ್ಟೂ ರೆಡ್ ಉಡುಪುಗಳಿಗೆ ಬೇಡಿಕೆಯಂತೆ.
ಆಕರ್ಷಕ ರೆಡ್ ಶೇಡ್ ಔಟ್‌ಫಿಟ್ಸ್ ಪ್ರದರ್ಶನ
ಇನ್ನು ಕೆಲವು ಶಾಪ್‌ಗಳಲ್ಲಿ, ಪ್ರದರ್ಶನಕ್ಕಿಡುವ ಬೊಂಬೆಗಳಿಗೆ ರೆಡ್ ಟೀ ಶರ್ಟ್ ಹಾಗೂ ರೆಡ್ ಔಟ್‌ಫಿಟ್‌ಗಳನ್ನು ಹಾಕಿ ವ್ಯಾಲೆಂಟೈನ್ಸ್ ಡೇ ಶಾಪಿಂಗ್‌ನ ಪ್ರಚಾರ ಮಾಡಲಾಗುತ್ತಿದೆ ಎನ್ನುತ್ತಾರೆ ಶಾಪ್‌ವೊಂದರ ಸೇಲ್ಸ್ ಮ್ಯಾನೇಜರ್.
ಶಾಪಿಂಗ್ ಪ್ರಿಯರೇ ಗಮನಿಸಿ
ವ್ಯಾಲೆಂಟೈನ್ಸ್ ಡೇ ಸಮಯದಲ್ಲಿ ಶಾಪಿಂಗ್ ಮಾಡುವವರು ಆದಷ್ಟೂ ಈ ಸೀಸನ್ ಕಲರ್‌ನ ಔಟ್‌ಫಿಟ್‌ಗಳನ್ನು ಕೊಳ್ಳುವುದಾದಲ್ಲಿ ಆದಷ್ಟೂ ಈ ಪ್ರೇಮಿಗಳ ದಿನಾಚರಣೆ ಮುಗಿದ ನಂತರವೂ ಧರಿಸಬಹುದಾದಂತಹ ಔಟ್‌ಫಿಟ್‌ಗಳನ್ನು ಆಯ್ಕೆ ಮಾಡಿ. ಇಲ್ಲವಾದಲ್ಲಿ ಒಮ್ಮೆ ಧರಿಸಿದ ನಂತರ ಈ ಡ್ರೆಸ್‌ಗಳು ಮೂಲೆಗೆ ಸೇರಬಹುದು ಎಂದು ಟಿಪ್ಸ್ ನೀಡುತ್ತಾರೆ ಸ್ಟೈಲಿಸ್ಟ್‌ಗಳು.
ಈ ಸುದ್ದಿಯನ್ನೂ ಓದಿ | Winter Denim Crop Top Fashion: ವಿಂಟರ್‌ನಲ್ಲಿ ಹೀಗಿರಲಿ ಬಿಂದಾಸ್ ಡೆನಿಮ್ ಕ್ರಾಪ್ ಟಾಪ್ ಸ್ಟೈಲಿಂಗ್!
ವ್ಯಾಲೆಂಟೈನ್ಸ್ ಡೇ ಶಾಪಿಂಗ್ ಟಿಪ್ಸ್
- ಸೀಸನ್‌ನಲ್ಲಿ ಟ್ರೆಂಡಿಯಾಗಿರುವ ಔಟ್‌ಫಿಟ್ ಖರೀದಿಸಿ.
- ಕಪಲ್ ಫ್ಯಾಷನ್ ಆದಲ್ಲಿ ಟ್ವಿನ್ನಿಂಗ್ ಮಾಡುವಂತಹ ಡ್ರೆಸ್‌ಗಳ ಆಯ್ಕೆ ಮಾಡಿ.
- ಡಿಸ್ಕೌಂಟ್ಸ್ ಹಾಗೂ ಆಫರ್ಸ್ ಮೋಹಕ್ಕೆ ಕಡಿಮೆ ಹೆಚ್ಚೆಚ್ಚು ಕೊಳ್ಳಬೇಡಿ.
(ಲೇಖಕಿ: ಫ್ಯಾಷನ್ ಪತ್ರಕರ್ತೆ)