Sivakarthikeyan: ಬಹುನಿರೀಕ್ಷಿತ ʻಪರಾಶಕ್ತಿʼ ಸಿನಿಮಾದಲ್ಲಿ ʻಡಾಲಿʼ ಧನಂಜಯ್ ನಟನೆ; ಏನು ಪಾತ್ರ?
Dhananjay in Parashakti: ನಿರ್ದೇಶಕಿ ಸುಧಾ ಕೊಂಗರ ಅವರ ಸಾರಥ್ಯದಲ್ಲಿ ಮೂಡಿಬರುತ್ತಿರುವ 'ಪರಾಶಕ್ತಿ' ಚಿತ್ರದಲ್ಲಿ ನಟ ಧನಂಜಯ ಅವರು ಒಂದು ಪ್ರಮುಖ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಶಿವಕಾರ್ತಿಕೇಯನ್ ಅವರ 25ನೇ ಮತ್ತು ಜಿ.ವಿ. ಪ್ರಕಾಶ್ ಅವರ 100ನೇ ಚಿತ್ರವಾಗಿರುವ ಇದರಲ್ಲಿ ಶ್ರೀಲೀಲಾ ನಾಯಕಿಯಾಗಿದ್ದಾರೆ.
-
ಶಿವಕಾರ್ತಿಕೇಯನ್, ರವಿ ಮೋಹನ್, ಶ್ರೀಲೀಲಾ, ಅಥರ್ವ ನಟನೆಯ ಬಹುನಿರೀಕ್ಷಿತ ʻಪರಾಶಕ್ತಿʼ ಸಿನಿಮಾವು ಜನವರಿ 10ರಂದು ತೆರೆಕಾಣಲು ಸಜ್ಜಾಗಿದೆ. ಈ ಚಿತ್ರದ ಮೇಲೆ ಅಭಿಮಾನಿಗಳಿಗೂ ದೊಡ್ಡ ನಿರೀಕ್ಷೆ ಇದೆ. ಈಗಾಗಲೇ ಸ್ಯಾಂಡಲ್‌ವುಡ್ ಮೂಲದ ನಟಿ ಶ್ರೀಲೀಲಾ ಇದರಲ್ಲಿ ನಾಯಕಿಯಾಗಿರುವುದು ಒಂದು ಕಡೆಯಾದರೆ, ಕನ್ನಡದ ಮತ್ತೋರ್ವ ಕಲಾವಿದ ನಟ ಡಾಲಿ ಧನಂಜಯ ಕೂಡ ಈ ಚಿತ್ರದಲ್ಲಿ ಬಣ್ಣ ಹಚ್ಚಿರುವುದು ವಿಶೇಷ.
ಆಡಿಯೋ ಲಾಂಚ್‌ನಲ್ಲಿ ಡಾಲಿ ಭಾಗಿ
ಪರಾಶಕ್ತಿ ಸಿನಿಮಾದಲ್ಲಿ ಧನಂಜಯ ನಟಿಸಿರುವ ಬಗ್ಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಅಷ್ಟೊಂದು ಗುಟ್ಟಾಗಿ ಇದನ್ನು ಇಡಲಾಗಿತ್ತು. ಆದರೆ ಈಚೆಗೆ ನಡೆದ ಪರಾಶಕ್ತಿ ಆಡಿಯೋ ಲಾಂಚ್‌ನಲ್ಲಿ ನಟ ಧನಂಜಯ ಭಾಗಿಯಾಗಿದ್ದರು. ಆಗಲೇ ಧನು ಕೂಡ ಪರಾಶಕ್ತಿಯ ಭಾಗವಾಗಿದ್ದಾರೆ ಎಂಬ ವಿಚಾರ ಬಹಿರಂಗವಾಗಿದೆ. ಅಂದಹಾಗೆ, ಧನಂಜಯ್ ಅವರಿಗೆ ಈ ಸಿನಿಮಾದಲ್ಲಿ ಏನು ಪಾತ್ರ? ಧನಂಜಯ್ ಇಲ್ಲಿ ಒಂದು ಸಣ್ಣ ಹಾಗೂ ಮುಖ್ಯವಾದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ.
Daali Dhananjaya: ನಟ ಧನಂಜಯ-ಧನ್ಯತಾ ಮದುವೆಗೆ ವಿಶೇಷ ಸ್ಟ್ಯಾಂಪ್ ನೀಡಿ ಶುಭ ಕೋರಿದ ಅಂಚೆ ಇಲಾಖೆ
ಪರಾಶಕ್ತಿ ಸಿನಿಮಾ ಬಗ್ಗೆ ಧನಂಜಯ ಮಾತು
ಆಡಿಯೋ ಲಾಂಚ್‌ನಲ್ಲಿ ಮಾತನಾಡಿದ್ದ ಧನಂಜಯ, "ಈ ಚಿತ್ರದಲ್ಲಿ ನನಗೆ ಒಂದು ಪಾತ್ರ ನೀಡಿದ್ದಕ್ಕಾಗಿ ಸುಧಾ ಕೊಂಗರ ಅವರಿಗೆ ಧನ್ಯವಾದಗಳು, ಈ ಪಾತ್ರ ಚಿಕ್ಕದಾಗಿದೆ, ಆದರೆ ನನಗೆ ತುಂಬಾ ಇಷ್ಟವಾಯಿತು. ಶಿವಕಾರ್ತಿಕೇಯನ್ ಜೊತೆ ನಟಿಸಲು ಅವಕಾಶ ಸಿಕ್ಕಿತು, ಅವರು ನನಗೆ ದೊಡ್ಡ ಸ್ಫೂರ್ತಿ. ಜೊತೆಗೆ ರವಿ ಮೋಹನ್ ಅವರೊಂದಿಗೆ ಬೆರೆಯಲು ಅವಕಾಶ ಸಿಕ್ಕಿತ್ತು. ಅಥರ್ವ, ನಮ್ಮ ಶ್ರೀಲೀಲಾ ಕೂಡ ಈ ಸಿನಿಮಾದಲ್ಲಿದ್ದಾರೆ" ಎಂದು ಹೇಳಿದ್ದರು.
ಅದ್ದೂರಿಯಾಗಿ ತೆರೆಗೆ ಬರಲಿರುವ ಪರಾಶಕ್ತಿ
ಪರಾಶಕ್ತಿ ಸಿನಿಮಾವು ಶಿವಕಾರ್ತಿಕೇಯನ್ ಅವರ 25ನೇ ಸಿನಿಮಾವಾಗಿದ್ದು, ದೊಡ್ಡ ಬಜೆಟ್‌ನಲ್ಲಿ ಆಕಾಶ್ ಭಾಸ್ಕರನ್ ಅವರು ನಿರ್ಮಾಣ ಮಾಡಿದ್ದಾರೆ. ಸೂರರೈ ಪೋಟ್ರು ಖ್ಯಾತಿಯ ಸುಧಾ ಕೊಂಗರ ಅವರು ಈ ಚಿತ್ರವನ್ನು ನಿರ್ದೇಶಿಸಿದ್ದು, 1965ರ ಕಾಲಘಟ್ಟದ ಕಥೆಯನ್ನು ಈ ಸಿನಿಮಾ ಒಳಗೊಂಡಿದೆ. ಇನ್ನು, ಸಂಗೀತ ನಿರ್ದೇಶಕ ಜಿ ವಿ ಪ್ರಕಾಶ್ ಕುಮಾರ್ ಅವರಿಗೂ ಇದು 100ನೇ ಸಿನಿಮಾ ಅನ್ನೋದು ವಿಶೇಷ.
ಡಾಲಿ ಪಿಕ್ಚರ್ಸ್‌ನ 6ನೇ ಸಿನಿಮಾ ಘೋಷಿಸಿದ ನಟ ಧನಂಜಯ; ʻಹೆಗ್ಗಣ ಮುದ್ದುʼ ಸಿನಿಮಾಗೆ ಅರುಣ್ ಸಾಗರ್ ಪುತ್ರಿ ನಾಯಕಿ
ಇನ್ನು, ಈ ಸಿನಿಮಾದಲ್ಲಿ ತೆಲುಗಿನ ರಾಣಾ ದಗ್ಗುಬಾಟಿ, ಮಲಯಾಳಂನ ಬೆಸಿಲ್ ಜೋಸೆಫ್ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಕಾಶ್ ಬೆಳವಾಡಿ, ಗುರು ಸೋಮಸುಂದರಂ, ಚೇತನ್, ಪಪ್ರಿ ಘೋಷ್ ಮುಂತಾದವರು ನಟಿಸಿದ್ದಾರೆ.