ನಟಿ ಕಂಗನಾ ರಣಾವತ್‌ಗೆ ದೊಡ್ಡ ಸಹಾಯ ಮಾಡಿದ ಬಾಲಿವುಡ್ ನಟ ಜಾನ್ ಅಬ್ರಹಾಂ; ಎಲ್ಲರೆದುರು ಕೊಂಡಾಡಿದ ಸಂಸದೆ
ಬಾಲಿವುಡ್ ನಟಿ, ಸಂಸದೆ ಕಂಗನಾ ರಣಾವತ್ ನಟಿಸಿ ನಿರ್ಮಿಸಿರುವ ‘ಭಾರತ್ ಭಾಗ್ಯ ವಿಧಾತಾ’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. 26/11ರ ಮುಂಬೈ ಭಯೋತ್ಪಾದಕ ದಾಳಿಯ ವೇಳೆ ಕಾಮಾ ಆಸ್ಪತ್ರೆಯ ನರ್ಸ್‌ಗಳು 400 ಜನರ ಪ್ರಾಣ ಉಳಿಸಿದ ನೈಜ ಸಾಹಸದ ಕಥೆ ಇದಾಗಿದೆ.
-
ಬಾಲಿವುಡ್ ನಟಿ, ಸಂಸದೆ ಕಂಗನಾ ರಣಾವತ್ ಅವರು ಮತ್ತೆ ಸಿನಿಮಾರಂಗದಲ್ಲಿ ಸಕ್ರಿಯವಾಗಿದ್ದಾರೆ. ‘ಭಾರತ್ ಭಾಗ್ಯ ವಿಧಾತಾ’ (Bharat Bhhagya Viddhaata) ಎಂಬ ಹೊಸ ಸಿನಿಮಾದಲ್ಲಿ ಕಂಗನಾ ನಟಿಸಿದ್ದು, ಸದ್ಯ ಇದರ ಟ್ರೇಲರ್ ರಿಲೀಸ್ ಆಗಿದೆ. ಅಂದಹಾಗೆ, ಈ ಸಿನಿಮಾದ ಟ್ರೇಲರ್ ರಿಲೀಸ್ ವೇಳೆ ಬಾಲಿವುಡ್ ನಟ ಜಾನ್ ಅಬ್ರಾಹಂಗೆ ಧನ್ಯವಾದ ಹೇಳಿದ್ದಾರೆ. ಅದಕ್ಕೆ ಕಾರಣವನ್ನು ಸಹ ಕಂಗನಾ ತಿಳಿಸಿದ್ದಾರೆ.
ಕಂಗನಾ ಸಿನಿಮಾಗೆ ಟೈಟಲ್ ಕೊಟ್ಟ ಜಾನ್
ಹೌದು, ಕಂಗನಾ ರಣಾವತ್ ನಟಿಸಿ, ನಿರ್ಮಾಣ ಮಾಡಿರುವ ‘ಭಾರತ್ ಭಾಗ್ಯ ವಿಧಾತಾ’ ಸಿನಿಮಾದ ಶೀರ್ಷಿಕೆಯನ್ನು ನೀಡಿದ್ದು ಬೇರಾರು ಅಲ್ಲ, ನಟ ಜಾನ್ ಅಬ್ರಹಾಂ. ಎಲ್ಲರೆದುರು ಈ ವಿಚಾರವನ್ನು ಕಂಗನಾ ಬಹಿರಂಗಪಡಿಸಿದ್ದಾರೆ. ಆರಂಭದಲ್ಲಿ ಈ ಸಿನಿಮಾಗೆ ‘ನರ್ಸಸ್ ಆಫ್ ಕಾಮಾ’ (Nurses of Cama) ಎಂದು ಹೆಸರಿಡಲಾಗಿತ್ತು. ಆದರೆ, ಚಿತ್ರದ ಕೆಲಸಗಳು ಮುಂದುವರಿದಂತೆ, ಈ ಕಥೆ ಮತ್ತು ಅದರ ವಿಶಾಲವಾದ ಸಂದೇಶವನ್ನು ಮತ್ತಷ್ಟು ಉತ್ತಮವಾಗಿ ಬಿಂಬಿಸಲು ಬೇರೆ ಶೀರ್ಷಿಕೆ ಸೂಕ್ತ ಎಂದು ಚಿತ್ರತಂಡಕ್ಕೆ ಅನಿಸಿತ್ತಂತೆ.
Kangana Ranaut: ಐಶ್ವರ್ಯಾ ರೈ ಲುಕ್ ಬಗ್ಗೆ ಟ್ರೋಲ್ ಮಾಡಿದವರಿಗೆ ಕಂಗನಾ ತಿರುಗೇಟು!
ಪ್ರಧಾನಿಯಿಂದ ಸ್ಫೂರ್ತಿ
"ಭಾರತದ ದುಡಿಯುವ ವರ್ಗವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು "ದೇಶದ ಹಣೆಬರಹವನ್ನು ರೂಪಿಸುವವರು, ದೇಶದ ಭಾಗ್ಯವಿಧಾತರು.." ಎಂಬ ಮಾತುಗಳಿಂದ ಸ್ಫೂರ್ತಿ ಪಡೆದು ಈ ಸಿನಿಮಾಕ್ಕೆ ‘ಭಾರತ್ ಭಾಗ್ಯ ವಿಧಾತಾ’ ಎಂಬ ಶೀರ್ಷಿಕೆಯನ್ನು ಇಡಲಾಯಿತು. ಈ ಪದಗಳು ತಮಗೆ ಮತ್ತು ತಮ್ಮ ಇಡೀ ತಂಡಕ್ಕೆ ತುಂಬಾ ಬೇಗನೇ ಕನೆಕ್ಟ್ ಆದವು" ಎಂದು ಕಂಗನಾ ಹೇಳಿದ್ದಾರೆ.
ಹಣ ಪಡೆಯದೇ ಟೈಟಲ್ ಕೊಟ್ಟ ಜಾನ್
ಈ ಟೈಟಲ್ ಇಡಬೇಕೆಂದು ನಿರ್ಧರಿಸಿದಾಗ, ಒಂದು ದೊಡ್ಡ ಅಡಚಣೆ ಇತ್ತು. ಆ ಶೀರ್ಷಿಕೆ ಆಗಲೇ ಬೇರೆಯವರ ಬ್ಯಾನರ್‌ನಲ್ಲಿ ನೋಂದಣಿಯಾಗಿತ್ತು. ಅದು ನಟ ಜಾನ್ ಅಬ್ರಹಾಂ ಅವರ ಒಡೆತನದ ಬ್ಯಾನರ್ ಆಗಿತ್ತು. "ಈ ಶೀರ್ಷಿಕೆಯನ್ನು ನಮಗೆ ಬಿಟ್ಟುಕೊಡುವಂತೆ ಜಾನ್ ಅಬ್ರಹಾಂ ಅವರನ್ನು ವಿನಂತಿಸಿದಾಗ, ಅವರು ತಕ್ಷಣವೇ ಒಪ್ಪಿಕೊಂಡರು. ಅದಕ್ಕಾಗಿ ಯಾವುದೇ ಹಣವನ್ನು ಕೂಡ ನಿರೀಕ್ಷಿಸದೆ ಕೇವಲ ಒಂದೇ ದಿನದಲ್ಲಿ ಶೀರ್ಷಿಕೆಯನ್ನು ನಮಗೆ ಹಸ್ತಾಂತರಿಸಿದರು. ಚಿತ್ರರಂಗದಲ್ಲಿ ಇಂತಹ ಉದಾರತೆ ಅತ್ಯಂತ ವಿರಳ. ಸಾಮಾನ್ಯವಾಗಿ ಜನರು ಶೀರ್ಷಿಕೆಗಳನ್ನು ಸುಲಭವಾಗಿ ಬಿಟ್ಟುಕೊಡುವುದಿಲ್ಲ, ಆದರೆ ಅವರು ನಮಗಾಗಿ ಯಾವುದೇ ಹಣವನ್ನು ಪಡೆಯದೇ ನೀಡಿದರು. ಹಾಗಾಗಿ ನಾನು ಅವರಿಗೆ ತುಂಬಾ ಕೃತಜ್ಞಳಾಗಿದ್ದೇನೆ" ಎಂದು ಕಂಗನಾ ತಿಳಿಸಿದ್ದಾರೆ.
Kangana Ranaut: ಕಂಗನಾ ಮಂಗಳಸೂತ್ರ ಧರಿಸಿದ್ದಕ್ಕೆ? ಕೊಟ್ಟ ಕಾರಣ ಇದು
‘ಭಾರತ್ ಭಾಗ್ಯ ವಿಧಾತಾ’ ಸಿನಿಮಾದ ಬಗ್ಗೆ
ಅಂದಹಾಗೆ, ಈ ಸಿನಿಮಾವು 26/11 ರ ಮುಂಬೈ ಭಯೋತ್ಪಾದಕ ದಾಳಿಯ ಸಂದರ್ಭದಲ್ಲಿ ಅಲ್ಲಿನ ‘ಕಾಮಾ ಆಸ್ಪತ್ರೆ’ಯ ನರ್ಸ್‌ಗಳ ಸಾಹಸದ ಕಥೆಯನ್ನು ಆಧರಿಸಿದೆ. ಭೀಕರ ದಾಳಿ ಮತ್ತು ಗದ್ದಲದ ನಡುವೆಯೂ ಅವರು ಸುಮಾರು 400 ಜನರ ಪ್ರಾಣವನ್ನು ಉಳಿಸಲು ತಮ್ಮದೇ ಜೀವವನ್ನು ಆ ನರ್ಸ್‌ಗಳು ಹೇಗೆ ಪಣಕ್ಕಿಟ್ಟರು ಎಂಬುದನ್ನು ಈ ಸಿನಿಮಾದಲ್ಲಿ ಹೇಳಲಾಗಿದೆಯಂತೆ.