ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Actor Niranjan: 'ಒಡೆಯ' ಸಿನಿಮಾದ ಮೂಲಕ ಖ್ಯಾತಿ ಗಳಿಸಿದ್ದ ನಿರಂಜನ್ ಮೇಲೆ ಹಲ್ಲೆ; ಬಾರ್‌ನಲ್ಲಿ ಕಿರಿಕ್‌

Darshan: ಬೆಂಗಳೂರಿನಲ್ಲಿ ನಟ ನಿರಂಜನ್ ​ ಮೇಲೆ ಬಿಯರ್​ ಬಾಟಲ್​ನಿಂದ ಹಲ್ಲೆ ನಡೆದಿದೆ. ಮಾರ್ಚ್ 28ರಂದು ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಸುಬ್ರಹ್ಮಣ್ಯಪುರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಒಡೆಯ ಚಿತ್ರದಲ್ಲಿ ದರ್ಶನ್ (Actor Darshan) ತಮ್ಮನ ಪಾತ್ರದಲ್ಲಿ ನಿರಂಜನ್‌ ನಟಿಸಿದ್ದರು.

'ಒಡೆಯ' ಸಿನಿಮಾದ ಮೂಲಕ ಖ್ಯಾತಿ ಗಳಿಸಿದ್ದ ನಟ ನಿರಂಜನ್ ಮೇಲೆ ಹಲ್ಲೆ

ನಟ ನಿರಂಜನ್‌ -

Yashaswi Devadiga
Yashaswi Devadiga Apr 6, 2026 11:19 AM

ಬೆಂಗಳೂರಿನಲ್ಲಿ ನಟ ನಿರಂಜನ್ (Actor Niranjan)​ ಮೇಲೆ ಬಿಯರ್​ ಬಾಟಲ್​ನಿಂದ ಹಲ್ಲೆ ನಡೆದಿದೆ. ಮಾರ್ಚ್ 28ರಂದು ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಸುಬ್ರಹ್ಮಣ್ಯಪುರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಒಡೆಯ (Odeya Movie) ಚಿತ್ರದಲ್ಲಿ ದರ್ಶನ್ (Actor Darshan) ತಮ್ಮನ ಪಾತ್ರದಲ್ಲಿ ನಿರಂಜನ್‌ ನಟಿಸಿದ್ದರು.

ಕಿರಿಕ್ ತೆಗೆದು ಹಲ್ಲೆ

ಬಾರ್​ನಲ್ಲಿ‌ ಕಿರಿಕ್ ತೆಗೆದು ಹಲ್ಲೆ ನಡೆಸಿ ದುಷ್ಕರ್ಮಿಗಳು ಪರಾರಿ ಆಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಮಾರ್ಚ್ 28ರಂದು ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.ಒಡೆಯ ಚಿತ್ರದಲ್ಲಿ ದರ್ಶನ್ ತಮ್ಮನ ಪಾತ್ರದಲ್ಲಿ ನಿರಂಜನ್ ನಟಿಸಿದ್ದರು. ಕೆಲಸ ನಿಮಿತ್ತ ನಟ ಯಶಸ್ ಸೂರ್ಯ ನಿವಾಸಕ್ಕೆ ನಿರಂಜನ್ ತೆರಳಿದ್ದರು.

ಇದನ್ನೂ ಓದಿ: Amruthadhaare Serial: ಇಂದು ಅಮೃತಧಾರೆ ಮಹಾಸಂಚಿಕೆ; ಜೋಡಿ ಜೀವಗಳ ರೊಮ್ಯಾಂಟಿಕ್ ಎಪಿಸೋಡ್‌

ಬಿಯರ್​ ಬಾಟಲ್​ನಿಂದ ನಟನ ಮೇಲೆ ಹಲ್ಲೆ

ಕೆಲಸ ಮುಗಿಸಿ ಮಂತ್ರಿ ಅಲೈಯನ್ಸ್ ಬಳಿಯ ಬಾರ್​ಗೆ ನಟ ಬಂದಿದ್ದರು. ನೀರು‌ ಕುಡಿಯಲೆಂದು ಬಾರ್​ಗೆ ಬಂದಿದ್ದಾಗಿ ನಿರಂಜನ್ ಹೇಳಿಕೊಂಡಿದ್ದಾರೆ. ಈ ವೇಳೆ ಬಾರ್​ ಅಲ್ಲಿ ಇದ್ದ ವ್ಯಕ್ತಿಯೋರ್ವ ನಿರಂಜನ್​ ತಳ್ಳಿದ್ದಕ್ಕೆ ಗಲಾಟೆ ಶುರುವಾಗಿದೆ.

`ನೀನು ನಟನಾದರೆ ನನಗೇನು' ಎಂದು ಅಪರಿಚಿತ ವ್ಯಕ್ತಿ ಬೈದಿದ್ದಾನೆ. ಸ್ವಲ್ಪ ಹೊತ್ತಿನ ಬಳಿಕ ಬಂದ ನಾಲ್ವರಿಂದ ನಿರಂಜನ್​ ಜತೆ ಮತ್ತೆ ಕಿರಿಕ್ ಆಗಿದೆ.ಈ ವೇಳೆ ಬಿಯರ್​ ಬಾಟಲ್​ನಿಂದ ನಟನ ಮೇಲೆ ಹಲ್ಲೆ ಮಾಡಿದ್ದಾರೆ ದುಷ್ಕರ್ಮಿಗಳು.

ಇದನ್ನೂ ಓದಿ: Anchor Anushree : ರೋಷನ್ ಜ್ಯೂಸ್‌ನಲ್ಲಿ ಏನಾದ್ರು ಮಿಕ್ಸ್ ಮಾಡಿ ಕೊಟ್ಟುಬಿಟ್ರೆ ಅನ್ನೋ ಭಯ ಇತ್ತು; ಅನುಶ್ರೀ

ಘಟನೆ ಸಂಬಂಧ ಸುಬ್ರಹ್ಮಣ್ಯಪುರ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದೆ. 2017ರ ‘ಜಲ್ಸಾ’ (2017) ಚಿತ್ರದ ಮೂಲಕ ನಿರಂಜನ್ ಬಣ್ಣದ ಲೋಕಕ್ಕೆ ಕಾಲಿಟ್ಟರು. ನಂತರ ಕೆಲ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ.'ಒಡೆಯ' ಮಾಸ್ ಹಾಗೂ ಕ್ಲಾಸ್ ಸಿನಿಮಾ. ಇದು 'ವೀರಂ' ಸಿನಿಮಾ ರಿಮೇಕ್ ಆಗಿತ್ತು. ಕಾಮಿಡಿ, ಲವ್, ಅಣ್ಣತಮ್ಮಂದಿರ ಸಂಬಂಧ ತುಂಬಿರುವದ ಕಮರ್ಷಿಯಲ್ ಪ್ಯಾಕೇಜ್ 'ಒಡೆಯ'.