Dewald Brevis injury update: ಹ್ಯಾಟ್ರಿಕ್ ಸೋಲಿನಿಂದ ಕಂಗೆಟ್ಟ ಚೆನ್ನೈ ತಂಡಕ್ಕೆ ಸ್ಟಾರ್ ಆಟಗಾರನ ಎಂಟ್ರಿ; ಸುಳಿವು ಕೊಟ್ಟ ಕೋಚ್
IPL 2026: "ಮುಂದಿನ ಪಂದ್ಯಕ್ಕೆ ಬ್ರೆವಿಸ್ ಸರಿಯಾಗಿ ಆಡುತ್ತಾರೆಂದು ನಾವು ಭಾವಿಸುತ್ತೇವೆ. ಮುಂದಿನ ಪಂದ್ಯದ ನಡುವೆ ನಮಗೆ ಐದು ದಿನಗಳ ಸಮಯವಿದೆ. ನಾವು ಬಲಿಷ್ಠವಾಗಿ ಮರಳುತ್ತೇವೆ. ಮತ್ತು ಆಶಾದಾಯಕವಾಗಿ, ಈ ಮುಂದಿನ ಐದು ದಿನಗಳು ನಾವು ಯೋಜಿಸಿದಂತೆ ನಡೆಯುತ್ತವೆ" ಎಂದು ಫ್ಲೆಮಿಂಗ್ ಹೇಳಿದರು.
Dewald Brevis -
ಬೆಂಗಳೂರು, ಎ.6: ಸತತ ಮೂರು ಪಂದ್ಯಗಳಲ್ಲಿ ಸೋಲು ಕಂಡಿರುವ ಚೆನ್ನೈ ಸೂಪರ್ ಕಿಂಗ್ಸ್(CSK )ಗೆ ಮುಂದಿನ ಪಂದ್ಯದಲ್ಲಿ ಸ್ಟಾರ್ ಆಟಗಾರನ ನೆರವು ಸಿಗುವ ಸಾಧ್ಯತೆಯಿದೆ. ಸ್ನಾಯು ಸೆಳೆತದಿಂದ ಆರಂಭಿಕ ಮೂರು ಪಂದ್ಯಗಳಿಂದ ಹೊರಗುಳಿದ್ದ ಸ್ಫೋಟಕ ಬ್ಯಾಟರ್ ಡೆವಾಲ್ಡ್ ಬ್ರೇವಿಸ್(Dewald Brevis injury update) ತಂಡ ಸೇರುವ ಬಗ್ಗೆ ಕೋಚ್ ಸ್ಟೀಫನ್ ಫ್ಲೆಮಿಂಗ್(Stephen Fleming) ಸುಳಿವು ನೀಡಿದ್ದಾರೆ.
ಭಾನುವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆರ್‌ಸಿಬಿ ವಿರುದ್ಧ ಚೆನ್ನೈ 43 ರನ್‌ಗಳಿಂದ ಸೋಲು ಕಂಡಿತ್ತು. ಈ ಪಂದ್ಯದ ಬಳಿಕ ಮಾತನಾಡಿದ ಫ್ಲೆಮಿಂಗ್, ಏಪ್ರಿಲ್ 11 ರಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯವನ್ನು ಬ್ರೆವಿಸ್ ಆಡುವ ಸಾಧ್ಯತೆ ಇದೆ ಎಂದರು.
"ಮುಂದಿನ ಪಂದ್ಯಕ್ಕೆ ಬ್ರೆವಿಸ್ ಸರಿಯಾಗಿ ಆಡುತ್ತಾರೆಂದು ನಾವು ಭಾವಿಸುತ್ತೇವೆ. ಮುಂದಿನ ಪಂದ್ಯದ ನಡುವೆ ನಮಗೆ ಐದು ದಿನಗಳ ಸಮಯವಿದೆ. ನಾವು ಬಲಿಷ್ಠವಾಗಿ ಮರಳುತ್ತೇವೆ. ಮತ್ತು ಆಶಾದಾಯಕವಾಗಿ, ಈ ಮುಂದಿನ ಐದು ದಿನಗಳು ನಾವು ಯೋಜಿಸಿದಂತೆ ನಡೆಯುತ್ತವೆ" ಎಂದು ಫ್ಲೆಮಿಂಗ್ ಹೇಳಿದರು.
ಶಿವಂ ದುಬೆ ಸಿಎಸ್‌ಕೆ ತಂಡದ ಮಧ್ಯಮ ಕ್ರಮಾಂಕದಲ್ಲಿರುವ ಏಕೈಕ ಅನುಭವಿ ಆಟಗಾರ, ಅವರೂ ಸಹ ನಿರೀಕ್ಷೆಯಂತೆ ಆಟವಾಡಿಲ್ಲ. ಬ್ರೆವಿಸ್ ಅವರ ಉಪಸ್ಥಿತಿ ತಂಡವು ಪ್ರಸ್ತುತ ಒತ್ತಡದಲ್ಲಿ ಆಡುತ್ತಿದೆ. ತಂಡದ ನಾಯಕ ಋತುರಾಜ್ ಗಾಯಕ್ವಾಡ್, ಧೋನಿ ತಂಡಕ್ಕೆ ಮರಳುವ ಬಗ್ಗೆ ಮಾಹಿತಿ ನೀಡಿದರು. 'ಧೋನಿ ನಿಧಾನವಾಗಿ ಮತ್ತೆ ಆಟಕ್ಕೆ ಮರಳುತ್ತಿದ್ದಾರೆ. ಕೆಲವೊಮ್ಮೆ ಸಮಯ ತೆಗೆದುಕೊಳ್ಳುತ್ತದೆ. ಅವರು ಆಡಲು ಸಿದ್ಧರಿದ್ದರೆ, ಅದು ಶೀಘ್ರದಲ್ಲೇ ಆಗುತ್ತದೆ' ಎಂದು ಹೇಳಿದರು.
RCB vs CSK: ಶೇನ್ ವಾರ್ನ್, ಕುಂಬ್ಳೆಯ ಐಪಿಎಲ್ ದಾಖಲೆ ಸರಿಗಟ್ಟಿದ ಪಾಟೀದಾರ್
ಆರ್‌ಸಿಬಿ ತವರು ಮೈದಾನದಲ್ಲಿ ಮೊದಲು ಬ್ಯಾಟಿಂಗ್ ಮಾಡಿ ಮೂರು ವಿಕೆಟ್ ಕಳೆದುಕೊಂಡು ಬರೋಬ್ಬರಿ 250 ರನ್‌ಗಳ ಬೃಹತ್ ಮೊತ್ತವನ್ನು ಗಳಿಸಿತು. ಬೃಹತ್ ಮೊತ್ತವನ್ನು ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್ ಪರ ಸರ್ಫರಾಜ್ ಖಾನ್ 25 ಎಸೆತಗಳಲ್ಲಿ 50 ರನ್ ಬಾರಿಸಿ ಭರವಸೆ ಮೂಡಿಸಿದರು. ಇವರು ಎಂಟು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳೊಂದಿಗೆ ತಂಡಕ್ಕೆ ನೆರವಾದರು. ಇನ್ನು ಪ್ರಶಾಂತ್ ವೀರ್ 29 ಎಸೆತಗಳಲ್ಲಿ ಆರು ಬೌಂಡರಿ ಮತ್ತು ಆರು ಸಿಕ್ಸರ್ ಗಳೊಂದಿಗೆ 43 ರನ್ ಬಾರಿಸಿದರು. ಜೇಮೀ ಓವರ್ಟನ್ 16 ಎಸೆತಗಳಲ್ಲಿ 37 ರನ್ ಬಾರಿಸಿದರು. ನಾಲ್ಕು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳೊಂದಿಗೆ ಅವರ 57 ರನ್‌ಗಳ ಜೊತೆಯಾಟವು ಸಿಎಸ್‌ಕೆ ತಂಡ ಗೆಲ್ಲುವ ಲಕ್ಷಣಗಳನ್ನು ತೋರಿತು. ಆದರೆ ತಂಡವು ಅಂತಿಮವಾಗಿ 19.4 ಓವರ್‌ಗಳಲ್ಲಿ 207 ರನ್‌ಗಳಿಗೆ ತನ್ನೆಲ್ಲ ವಿಕೆಟ್ ಗಳನ್ನು ಕಳೆದುಕೊಂಡಿತು. ಈ ಮೂಲಕ ತಂಡ ಸೋಲು ಅನುಭವಿಸಿತು.