ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Filmfare Awards event: ಫಿಲ್ಮ್‌ಫೇರ್ ಪ್ರಶಸ್ತಿ ಸಮಾರಂಭ; ಏರ್‌ಪೋರ್ಟ್‌ನಲ್ಲಿಯೇ ನಟಿ ಅಂಜಲಿ ಗರಂ, ಕಾರಣ ಇದು

actress anjali : ದಕ್ಷಿಣ ಭಾರತದ ಚಲನಚಿತ್ರೋದ್ಯಮದಲ್ಲಿ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ ಎಂದು ಪರಿಗಣಿಸಲಾದ ಫಿಲ್ಮ್‌ಫೇರ್‌ ಆಯೋಜಕರ ವಿರುದ್ಧ ಟೀಕೆಗಳು ವ್ಯಕ್ತವಾಗುತ್ತಿವೆ. ಕಾರ್ಯಕ್ರಮಕ್ಕೆ ಕರೆಸಿ ಅವಮಾನ ಮಾಡಿದ್ದಾರೆ ಎಂದು ನಟಿ ಅಂಜಲಿ ಗರಂ ಆಗಿದ್ದ ವಿಡಿಯೋ ವೈರಲ್ ಆಗ್ತಿದೆ. ಹೊಸ ಕಲಾವಿದರಿಗೆ ವೇದಿಕೆಯಲ್ಲಿ ಮಾತನಾಡಲು ಅವಕಾಶ ನೀಡುವುದಿಲ್ಲ ಎಂದು ನಿಹಾರಿಕಾ ಕೊನಿಡೇಲಾ ಈಗಾಗಲೇ ಧ್ವನಿ ಎತ್ತಿದ್ದಾರೆ.

ಫಿಲ್ಮ್‌ಫೇರ್ ಪ್ರಶಸ್ತಿ ಸಮಾರಂಭ; ಏರ್‌ಪೋರ್ಟ್‌ನಲ್ಲಿಯೇ ನಟಿ ಅಂಜಲಿ ಗರಂ

ನಟಿ ಅಂಜಲಿ -

Yashaswi Devadiga
Yashaswi Devadiga Feb 24, 2026 10:56 AM

ದಕ್ಷಿಣ ಭಾರತದ ಚಲನಚಿತ್ರೋದ್ಯಮದಲ್ಲಿ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ ಎಂದು ಪರಿಗಣಿಸಲಾದ ಫಿಲ್ಮ್‌ಫೇರ್ (Filmfare) ಆಯೋಜಕರ ವಿರುದ್ಧ ಟೀಕೆಗಳು ವ್ಯಕ್ತವಾಗುತ್ತಿವೆ. ಕಾರ್ಯಕ್ರಮಕ್ಕೆ ಕರೆಸಿ ಅವಮಾನ ಮಾಡಿದ್ದಾರೆ ಎಂದು ನಟಿ ಅಂಜಲಿ (Anjali) ಗರಂ ಆಗಿದ್ದ ವಿಡಿಯೋ ವೈರಲ್ ಆಗ್ತಿದೆ. ಹೊಸ ಕಲಾವಿದರಿಗೆ ವೇದಿಕೆಯಲ್ಲಿ ಮಾತನಾಡಲು ಅವಕಾಶ ನೀಡುವುದಿಲ್ಲ ಎಂದು ನಿಹಾರಿಕಾ ಕೊನಿಡೇಲಾ ಈಗಾಗಲೇ ಧ್ವನಿ ಎತ್ತಿದ್ದಾರೆ. ಇದರ ಬೆನ್ನಲ್ಲೇ ನಟಿ ಅಂಜಲಿ ಕೂಡ ಆಯೋಜಕರಿಂದ ಕಹಿ ಅನುಭವವನ್ನು ಅನುಭವಿಸಿರುವುದಾಗಿ ಹೇಳಿಕೊಂಡಿದ್ದಾರೆ.

ಅಂಜಲಿ ಅಸಮಾಧಾನ

'ಗ್ಯಾಂಗ್ಸ್ ಆಫ್ ಗೋದಾವರಿ' ಚಿತ್ರದಲ್ಲಿನ ಅದ್ಭುತ ಅಭಿನಯಕ್ಕಾಗಿ ಅಂಜಲಿ ಅವರನ್ನು ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು. ಈ ಪ್ರಶಸ್ತಿಯನ್ನು ಸ್ವೀಕರಿಸಲು ಅವರು ಬಂದಿದ್ದರು. ಆಕೆಯನ್ನು ಬರಮಾಡಿಕೊಳ್ಳಲು ಫಿಲ್ಮ್‌ಫೇರ್ ಆಯೋಜಕರು ಯಾರೊಬ್ಬರು ಬಹಳ ಹೊತ್ತು ಹೋಗಿರಲಿಲ್ಲ.

ಇದನ್ನೂ ಓದಿ: Rashmika-Vijay Wedding: ಮಹೆಂದಿ, ಹಳದಿ , ಸಂಗೀತ್ ಸೆರೆಮನಿ ದಿನಾಂಕ ರಿವೀಲ್‌; ʻವಿರೋಶ್ʼಮದುವೆ ಸಂಭ್ರಮ

ಇದು ಆಕೆಯ ಬೇಸರಕ್ಕೆ ಕಾರಣವಾಗಿತ್ತು. ಮುಕ್ಕಾಲು ಗಂಟೆಯಿಂದ ಯಾರೂ ನಮ್ಮನ್ನು ಗಮನಿಸುವವರು ಇಲ್ಲ ಎಂದು ಅಂಜಲಿ ಜೊತೆಗಿರುವ ವ್ಯಕ್ತಿ ಮಾತನಾಡುತ್ತಿರುವುದು, ಅಂಜಲಿ ಕೂಡ ಅಸಮಾಧಾನ ವ್ಯಕ್ತಪಡಿಸುತ್ತಿರುವ ವೀಡಿಯೋ ವೈರಲ್ ಆಗುತ್ತಿದೆ.



ಆಯೋಜಕರ ಬಗ್ಗೆ ನೆಟ್ಟಿಗರು ಟೀಕೆ

ವಿಮಾನ ನಿಲ್ದಾಣದಲ್ಲಿ ತನ್ನನ್ನು ಯಾರೂ ಗಮನಿಸುತ್ತಿಲ್ಲ ಮತ್ತು ತನಗಾಗಿ ಯಾವುದೇ ವಾಹನ ವ್ಯವಸ್ಥೆ ಮಾಡಿಲ್ಲ ಎಂದು ಅಂಜಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈಗ ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇದೀಗ ಫಿಲ್ಮ್‌ಫೇರ್ ಆಯೋಜಕರ ಬಗ್ಗೆ ನೆಟ್ಟಿಗರು ಟೀಕಿಸುತ್ತಿದ್ದಾರೆ.

ಫಿಲ್ಮ್‌ಫೇರ್ ಸೌತ್ ಅವಾರ್ಡ್ಸ್ ಈವೆಂಟ್ ಬಗ್ಗೆ ತೆಲುಗು ನಟಿ, ನಿರ್ಮಾಪಕಿ ನಿಹಾರಿಕಾ ಕೊನಿದೇಲ ಕೂಡ ಬೇಸರ ವ್ಯಕ್ತಪಡಿಸಿದ್ದರು. ಹೊಸ ಪ್ರತಿಭೆಗಳಿಗೆ ಪ್ರಶಸ್ತಿ ನೀಡಿ ಪ್ರೋತ್ಸಾಹಿಸುವುದು ಸರಿ. ಆದರೆ ಇಂತಹ ದೊಡ್ಡ ವೇದಿಕೆಗಳಲ್ಲಿ ಅವರಿಗೆ ಕೊನೆ ಪಕ್ಷ ಒಂದು ನಿಮಿಷ ಮಾತನಾಡಲು ಅವಕಾಶ ಕೊಡಬೇಕಿತ್ತು ಎಂದು ಬರೆದಿಕೊಂಡಿದ್ದರು. ಇದು ಕಾರ್ಯಕ್ರಮ ನಿರ್ವಹಣೆಯ ಬಗ್ಗೆ ಮತ್ತಷ್ಟು ಚರ್ಚೆಗೆ ನಾಂದಿ ಹಾಡಿದೆ.

ಇದನ್ನೂ ಓದಿ: Samantha Ruth Prabhu : ರಾಜ್‌ರಿಂದ ನಾಗ ಚೈತನ್ಯಗೆ ವಿಚ್ಛೇದನ ನೀಡಿದ್ರಾ ಸಮಂತಾ? ಸ್ಯಾಮ್‌ ಕೊಟ್ಟ ಸ್ಪಷ್ಟನೆ ಇದು

ಟಾಲಿವುಡ್ ಯುವ ನಾಯಕಿ ಅಂಜಲಿ ಸತತವಾಗಿ ಹಿಟ್ ಸಿನಿಮಾಗಳನ್ನು ಮಾಡುತ್ತಿದ್ದಾರೆ. ತಮಿಳು ಸಿನಿಮಾಗಳಿಂದ ಬಹಳ ಜನಪ್ರಿಯರಾದರು. ತೆಲುಗಿನಲ್ಲಿ ಸ್ಟಾರ್ ಹೀರೋಗಳೊಂದಿಗೆ ನಟಿಸಿದ್ದಾರೆ. ಕೊನೆಯದಾಗಿ ರಾಮ್ ಚರಣ್ ನಾಯಕನಾಗಿ ನಟಿಸಿದ ಗೇಮ್ ಚೇಂಜರ್ ಚಿತ್ರದಲ್ಲಿ. ಬಲುಪು, ಮತ್ತು ಗೀತಾಂಜಲಿ ಮುಂತಾದ ಚಿತ್ರಗಳಲ್ಲಿ ನಟಿಸುವ ಮೂಲಕ ಪ್ರೇಕ್ಷಕರನ್ನು ಮೆಚ್ಚಿಸಿದರು.