ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಅಶ್ಲೀಲ ವೆಬ್‌ಸೈಟ್‌ನಲ್ಲಿ ತಮ್ಮದೇ ಮಾರ್ಫ್‌ ಫೋಟೋ ನೋಡಿ ಶಾಕ್‌ ಆಗಿದ್ದ ನಟಿ ಜಾಹ್ನವಿ ಕಪೂರ್;‌ ಎಐ ಬಗ್ಗೆ ಇರುವ ಭಯವೇನು?

ಜಾಹ್ನವಿ ಕಪೂರ್ ಅವರು ಹದಿಹರೆಯದ ದಿನಗಳಲ್ಲಿ ಎದುರಿಸಿದ ಆಘಾತಕಾರಿ ಸೈಬರ್ ಕ್ರೈಂ ಘಟನೆಯನ್ನು ಬಿಚ್ಚಿಟ್ಟಿದ್ದಾರೆ. ಕೇವಲ 15 ವರ್ಷದವರಿದ್ದಾಗ ಅಶ್ಲೀಲ ವೆಬ್‌ಸೈಟ್‌ನಲ್ಲಿ ತಮ್ಮದೇ ಮಾರ್ಫ್ ಮಾಡಿದ ಫೋಟೋ ಕಂಡು ಜಾಹ್ನವಿ ಬೆಚ್ಚಿಬಿದ್ದಿದ್ದರು. ಇಂದಿನ ಎಐ (AI) ಮತ್ತು ಡೀಪ್‌ಫೇಕ್ ತಂತ್ರಜ್ಞಾನವು ನಟಿಯರ ವ್ಯಕ್ತಿತ್ವಕ್ಕೆ ಧಕ್ಕೆ ತರುತ್ತಿದೆ ಎಂದು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಶ್ಲೀಲ ಸೈಟ್‌ನಲ್ಲಿ ತಮ್ಮದೇ ಫೋಟೋ ನೋಡಿ ಶಾಕ್‌ ಆಗಿದ್ದ ನಟಿ ಜಾಹ್ನವಿ ಕಪೂರ್

-

Avinash GR
Avinash GR Apr 5, 2026 3:33 PM

ಬಾಲಿವುಡ್‌ ನಟಿ ಜಾಹ್ನವಿ ಕಪೂರ್ ಅವರು ತಮ್ಮ ಬದುಕಿನ ಹದಿಹರೆಯದ ದಿನಗಳಲ್ಲಿ ಕಂಡ ಒಂದು ಆಘಾತಕಾರಿ ವಿಚಾರವನ್ನು ಹಂಚಿಕೊಂಡಿದ್ದಾರೆ. ಈ ಘಟನೆ ನಡೆದಾಗ ಜಾಹ್ನವಿ ಅವರಿಗಿನ್ನೂ ಕೇವಲ 15 ವರ್ಷ! ಅಷ್ಟಕ್ಕೂ ಅಂದು ಆಗಿದ್ದೇನು? ಅಶ್ಲೀಲ ವೆಬ್‌ಸೈಟ್‌ವೊಂದರಲ್ಲಿ ತಮ್ಮ ಒಂದು ಮಾರ್ಫಿಂಗ್ ಮಾಡಿದ ಫೋಟೋವನ್ನು ಜಾಹ್ನವಿ ನೋಡಿದ್ದರಂತೆ! ಆನ್‌ಲೈನ್ ಜಗತ್ತಿನಲ್ಲಿ ಇದೆಲ್ಲಾ ಕಾಮನ್‌ ಎಂದು ಆರಂಭದಲ್ಲಿ ತಮಗೆ ತಾವೇ ಸಮಾಧಾನ ಮಾಡಿಕೊಂಡಿದ್ದ ಜಾಹ್ನವಿಗೆ ನಂತರ ಆ ಘಟನೆಯು ದೀರ್ಘಕಾಲದ ಅವರ ಮೇಲೆ ಪರಿಣಾಮ ಬೀರಿತ್ತು.

ಅದು ಶಾಲೆಯಲ್ಲಿ ನಡೆದ ಘಟನೆ

ಈಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಜಾಹ್ನವಿ, "ಅದು ಡೀಪ್ ಫೇಕ್ ಆಗಿತ್ತೋ ಇಲ್ಲವೋ ಗೊತ್ತಿಲ್ಲ, ಆದರೆ ಅಂತಹದ್ದೇ ಏನೋ ಆಗಿತ್ತು. ಒಂದು ಅಶ್ಲೀಲ ಸೈಟ್‌ನಲ್ಲಿ ನಾನು ನನ್ನದೇ ಚಿತ್ರವನ್ನು ನೋಡಿದ್ದೆ. ಶಾಲೆಯಲ್ಲಿ ನಮಗೆ ಐಟಿ ಕ್ಲಾಸ್ ಇರುತ್ತಿತ್ತು. ಹುಡುಗರು ತಮಾಷೆಗಾಗಿ ಅಂತಹ ಸೈಟ್‌ಗಳನ್ನು ನೋಡುತ್ತಿದ್ದರು. ಅಲ್ಲಿ ನನ್ನ ಚಿತ್ರಗಳಿದ್ದವು. ಇದು ಶಾಲೆಯಲ್ಲಿದ್ದಾಗ ನಡೆದ ಘಟನೆ, ನಿಜಕ್ಕೂ ಅದು ವಿಚಿತ್ರವಾದ ಅನುಭವವಾಗಿತ್ತು" ಎಂದು ತಮ್ಮ ಬದುಕಿನ ಒಂದು ಆಘಾತಕಾರಿ ಘಟನೆಯನ್ನು ಜಾಹ್ನವಿ ಹಂಚಿಕೊಂಡಿದ್ದಾರೆ.

Janhvi Kapoor: ಬಾಯ್ ಫ್ರೆಂಡ್ ಜೊತೆ ನಟಿ ಜಾಹ್ನವಿ ಕಪೂರ್ ತಿರುಮಲ ದೇವಸ್ಥಾನಕ್ಕೆ ಭೇಟಿ- ವಿಡಿಯೊ ವೈರಲ್

ಎಐ ನಿರ್ಮಿತ ಫೋಟೋಗಳ ಬಗ್ಗೆ ಜಾಹ್ನವಿ ಬೇಸರ

"ಒಂದು ಹಂತದಲ್ಲಿ ಇದೆಲ್ಲವನ್ನೂ ನಾನು ಎದುರಿಸಲೇಬೇಕು ಎಂದು ಅಂದುಕೊಂಡಿದ್ದೆ. ಸೋಶಿಯಲ್ ಮೀಡಿಯಾದ ಇಂತಹ ವಿಚಾರಗಳಲ್ಲಿ ಯಾವುದೇ ನೈತಿಕತೆ ಇರುವುದಿಲ್ಲ. ಆದರೆ ಈಗ ಎಐ-ನಿರ್ಮಿತ ಚಿತ್ರಗಳು ಇಂದಿಗೂ ನನ್ನನ್ನು ಬಾಧಿಸುತ್ತಿವೆ. ಈಗಿನ ಪರಿಸ್ಥಿತಿಯ ಬಗ್ಗೆ ನನಗೆ ಸಮಾಧಾನವಿಲ್ಲ. ಅಧಿಕೃತ ಸುದ್ದಿ ಸಂಸ್ಥೆಗಳ ಪುಟಗಳೂ ಸಹ ಇಂತಹ ಎಐ ಚಿತ್ರಗಳನ್ನು ಹಂಚಿಕೊಳ್ಳುತ್ತಿವೆ. ಈ ಎಐ ಚಿತ್ರಗಳಲ್ಲಿ ನಾನು ಎಂದಿಗೂ ಧರಿಸದ ಬಟ್ಟೆಗಳಲ್ಲಿ ಅಥವಾ ನೀಡದ ಭಂಗಿಗಳಲ್ಲಿ ನನ್ನನ್ನು ತೋರಿಸಲಾಗಿರುತ್ತದೆ" ಎಂದು ಜಾಹ್ನವಿ ಕಪೂರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‌

"ನಾನೇ ಅಂತಹ ಫೋಟೋಗಳನ್ನು ವೈರಲ್‌ ಮಾಡಿದ್ದೇನೆ ಎಂಬಂತೆ ಅದನ್ನು ಹರಿಬಿಡಲಾಗುತ್ತದೆ. ಅದು ನನ್ನ ಬಗ್ಗೆ ಒಂದು ರೀತಿಯ ಕೆಟ್ಟ ಅಭಿಪ್ರಾಯವನ್ನು ಮೂಡಿಸುತ್ತದೆ. ನಾಳೆ ನಾನು ಯಾವುದೋ ನಿರ್ದೇಶಕನಿಗೆ 'ನನಗೆ ಈ ಬಟ್ಟೆ ಧರಿಸಲು ಮುಜುಗರವಾಗುತ್ತಿದೆ' ಎಂದು ಹೇಳಿದರೆ, ಅವರು ಈ ಎಐ ಫೋಟೋಗಳನ್ನು ತೋರಿಸಿ, 'ನೀವು ಇದನ್ನು ಮೊದಲೇ ಇಂತಹ ಬಟ್ಟೆ ಧರಿಸಿದ್ದೀರಲ್ಲ' ಎಂದು ಪ್ರಶ್ನೆ ಮಾಡಬಹುದು" ಎಂದು ಜಾಹ್ನವಿ ಹೇಳಿದ್ದಾರೆ.