ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Actress Rajini: 'ಅಮೃತವರ್ಷಿಣಿ' ರಜಿನಿ ವಿರುದ್ಧ ಫಿಲ್ಮ್‌ ಚೇಂಬರ್ ಮೆಟ್ಟಿಲೇರಿದ ಚಿತ್ರತಂಡ!

Actress Rajini: ರಜಿನಿ ಅವರು ತಾವು ನಟಿಸಿರುವ ಸಿನಿಮಾದ ಪ್ರಚಾರಕ್ಕೆ ಸಹಕರಿಸುತ್ತಿಲ್ಲ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಸಿನಿಮಾದ ನಿರ್ದೇಶಕ ಮತ್ತು ನಿರ್ಮಾಪಕರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ (ಫಿಲ್ಮ್‌ ಚೇಂಬರ್‌) (Film chamber) ಅಧಿಕೃತವಾಗಿ ದೂರು ನೀಡಿದ್ದಾರೆ.

ರಜಿನಿ ವಿರುದ್ಧ  ಫಿಲ್ಮ್‌ ಚೇಂಬರ್ ಮೆಟ್ಟಿಲೇರಿದ ಚಿತ್ರತಂಡ!

ನಟಿ ರಜಿನಿ -

Yashaswi Devadiga
Yashaswi Devadiga May 5, 2026 8:32 AM

'ಅಸುರನ ಕೈಯಲ್ಲಿ ಪಾರಿಜಾತ' ಚಿತ್ರದಲ್ಲಿ ʻಅಮೃತವರ್ಷಿಣಿʼ ಧಾರಾವಾಹಿ ಖ್ಯಾತಿಯ ರಜಿನಿ (rajini actress) ಅವರು ನಟಿಸಿದ್ದಾರೆ. ಈ ಸಿನಿಮಾವನ್ನ ವಿಘ್ನೇಶ್‌ ನಿರ್ದೇಶಿಸಿದ್ದು, ಕಾರ್ತಿಕ್‌ (Karthik) ಅವರು ಮೀಕ್ಷಾ ಬ್ಯಾನರ್‌ ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ. ಸಿನಿಮಾ ಬಹುತೇಕ ಸಿದ್ದವಾಗಿದ್ದು, ಇದೇ ಮೇ 22ರಂದು ತೆರೆಕಾಣಲು ಸಜ್ಜಾಗಿದೆ. ರಜಿನಿ ಅವರು ತಾವು ನಟಿಸಿರುವ ಸಿನಿಮಾದ ಪ್ರಚಾರಕ್ಕೆ ಸಹಕರಿಸುತ್ತಿಲ್ಲ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಸಿನಿಮಾದ ನಿರ್ದೇಶಕ ಮತ್ತು ನಿರ್ಮಾಪಕರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ (ಫಿಲ್ಮ್‌ ಚೇಂಬರ್‌) (Film chamber) ಅಧಿಕೃತವಾಗಿ ದೂರು ನೀಡಿದ್ದಾರೆ.

ಫಿಲಂ ಚೇಂಬರ್​​ಗೆ ದೂರು

ಈಚೆಗಷ್ಟೇ ಮದುವೆಯಾಗಿರುವ ‘ಅಮೃತವರ್ಷಿಣಿ’ ಸೀರಿಯಲ್​ ನಟಿ ರಜಿನಿ ವಿರುದ್ಧ ಸಿನಿಮಾದ ನಿರ್ದೇಶಕ ಮತ್ತು ನಿರ್ಮಾಪಕರುಗಳು ಫಿಲಂ ಚೇಂಬರ್​​ಗೆ ದೂರು ನೀಡಿದ್ದಾರೆ.

ಇದನ್ನೂ ಓದಿ: Varanasi Movie: ರಾಜಮೌಳಿ 'ವಾರಣಾಸಿ' ಚಿತ್ರಕ್ಕೆ ನೀರಿನ ಸಮಸ್ಯೆ; ಶೂಟಿಂಗ್ ಸ್ಥಗಿತ

ಚಿತ್ರತಂಡದ ಫೋನ್‌ ಕರೆಗಳನ್ನು ರಜಿನಿ ಸ್ವೀಕರಿಸುತ್ತಿಲ್ಲ ಮತ್ತು ನಿರ್ದೇಶಕರ ನಂಬರ್‌ ಅನ್ನ ಬ್ಲಾಕ್‌ ಮಾಡಿದ್ದಾರೆ ಎಂದು ವಿಘ್ನೇಶ್‌ ಆಕ್ರೋಶ ಹೊರಹಾಕಿದ್ದಾರೆ. ಸಿನಿಮಾದ ಪ್ರಚಾರಕ್ಕೆ ಬರುವಂತೆ ನಟಿಯನ್ನು ಕರೆದರೆ ಹೆಚ್ಚುವರಿ ಹಣ ಕೇಳುತ್ತಿದ್ದಾರೆ ಎಂದು ನಿರ್ದೇಶಕ ವಿಘ್ನೇಶ್ ಹೇಳಿದ್ದಾರೆ.

ರಜಿನಿ ಅವರು ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡ ಸಂಭಾವನೆಯನ್ನ ಪಡೆದಿದ್ದಾರೆ. ಸಿನಿಮಾದದ ಪ್ರಚಾರಕ್ಕಾಗಿ ಬರಲು ನಟಿ ರಜಿನಿ ಅವರು ಹೆಚ್ಚುವರಿ ಹಣದ ಬೇಡಿಕೆ ಇಟ್ಟಿದ್ದಾರೆ. ಸಿನಿಮಾ ರೀಲ್ಸ್‌ಗಳನ್ನ ಸೋಷಿಯಲ್‌ ಮೀಡಿಯಾಗಳಲ್ಲಿ ಹಂಚಿಕೊಳ್ಳಲು ಕೇಳಿದಾಗಲೂ, ಅದಕ್ಕೆ ಪ್ರತ್ಯೇಕ ಹಣ ನೀಡುವಂತೆ ಕೇಳುತ್ತಿದ್ದಾರೆ ಎನ್ನಲಾಗಿದೆ.

ಚಿಕ್ಕ ವಯಸ್ಸಿಗೆ ನಟನೆ ಆರಂಭಿಸಿದ ರಜಿನಿ ಅವರು ತುಮಕೂರು ಮೂಲದವರು. ಬಾಲ್ಯದಲ್ಲಿಯೇ ಸಾಕಷ್ಟು ಕಷ್ಟಗಳನ್ನ ಅನುಭವಿಸಿದ ನಟಿಗೆ ‘ಅಮೃತವರ್ಷಿಣಿ’ ಧಾರಾವಾಹಿ ದೊಡ್ಡ ಬ್ರೇಕ್‌ ತಂದುಕೊಟ್ಟಿತ್ತು.

ಇದನ್ನೂ ಓದಿ: Naagin 7: ಇದೊಂದು ಕಾರಣಕ್ಕೆ ಸಖತ್‌ ಟ್ರೋಲ್‌ ಆಯ್ತು ನಾಗಿನ್ ಸೀರಿಯಲ್‌!

ಧಾರಾವಾಹಿ ಮುಕ್ತಯವಾಗಿ ದಶಕ ಕಳೆದರು ಇಂದಿಗೂ ಇವರನ್ನ ಅಮೃತಾ ಪಾತ್ರದಲ್ಲಿಯೇ ವೀಕ್ಷಕರು ಗುರುತಿಸುವುದು.