Agadha Movie: ನ್ಯಾಚುರಲ್ ಥ್ರಿಲ್ಲರ್ ಮೂವಿ ‘ಅಗಾಧ’ ಈ ಒಟಿಟಿಗೆ ಎಂಟ್ರಿ!
Agadha Movie: ‘ಅಗಾಧ’ ಚಿತ್ರವು ಇದೇ ಸೆಪ್ಟೆಂಬರ್ 25 ರಂದು ಜೀ 5 ತೆಲುಗು ಒಟಿಟಿ ವೇದಿಕೆಯಲ್ಲಿ ಡಿಜಿಟಲ್ ಪ್ರೀಮಿಯರ್ ಆಗಲು ಸಜ್ಜಾಗಿದೆ. ರಹಸ್ಯ, ಆಧ್ಯಾತ್ಮಿಕತೆ ಹಾಗೂ ಕಣ್ಣಿಗೆ ಕಾಣದ ಅಲೌಕಿಕ ಶಕ್ತಿಗಳ ರೋಚಕ ಲೋಕವನ್ನು ಈ ಚಿತ್ರ ಪ್ರೇಕ್ಷಕರ ಎದುರು ಅನಾವರಣಗೊಳಿಸಲಿದೆ. ಕಾಮಾಕ್ಷಿ ಭಾಸ್ಕರ್ಲ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅವರೊಂದಿಗೆ ಶ್ರವಣ್ ರೆಡ್ಡಿ, ಉಲ್ಕಾ ಗುಪ್ತಾ, ಜೋವಿಕಾ ವಿಜಯ್ ಕುಮಾರ್, ರೋಷನ್ ಬಶೀರ್, ಭಾನು ಚಂದರ್ ಹಾಗೂ ವನಿತಾ ವಿಜಯಕುಮಾರ್ ಸೇರಿದಂತೆ ಪ್ರತಿಭಾವಂತ ಕಲಾವಿದರ ದಂಡೇ ಚಿತ್ರದಲ್ಲಿದೆ.
ಅಗಾಧ ಮೂವಿ -
ಎಂ. ಎಸ್. ರಾಜು ನಿರ್ದೇಶನದ ಬಹುನಿರೀಕ್ಷಿತ ಮಿಸ್ಟಿಕಲ್ ಸೂಪರ್ ನ್ಯಾಚುರಲ್ ಥ್ರಿಲ್ಲರ್ ‘ಅಗಾಧ’ (Agadha Movie) ಚಿತ್ರವು ಇದೇ ಸೆಪ್ಟೆಂಬರ್ 25 ರಂದು ಜೀ 5 ತೆಲುಗು (Zee5 ) (Zee 5 OTT) ಒಟಿಟಿ ವೇದಿಕೆಯಲ್ಲಿ ಡಿಜಿಟಲ್ ಪ್ರೀಮಿಯರ್ ಆಗಲು ಸಜ್ಜಾಗಿದೆ. ರಹಸ್ಯ, ಆಧ್ಯಾತ್ಮಿಕತೆ ಹಾಗೂ ಕಣ್ಣಿಗೆ ಕಾಣದ ಅಲೌಕಿಕ ಶಕ್ತಿಗಳ ರೋಚಕ ಲೋಕವನ್ನು ಈ ಚಿತ್ರ ಪ್ರೇಕ್ಷಕರ ಎದುರು ಅನಾವರಣಗೊಳಿಸಲಿದೆ. ಕಾಮಾಕ್ಷಿ ಭಾಸ್ಕರ್ಲ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅವರೊಂದಿಗೆ ಶ್ರವಣ್ ರೆಡ್ಡಿ, ಉಲ್ಕಾ ಗುಪ್ತಾ, ಜೋವಿಕಾ ವಿಜಯ್ ಕುಮಾರ್, ರೋಷನ್ ಬಶೀರ್, ಭಾನು ಚಂದರ್ ಹಾಗೂ ವನಿತಾ ವಿಜಯಕುಮಾರ್ ಸೇರಿದಂತೆ ಪ್ರತಿಭಾವಂತ ಕಲಾವಿದರ ದಂಡೇ ಚಿತ್ರದಲ್ಲಿದೆ.
ಚಿತ್ರದ ಕಥಾಹಂದರವು ಮಹಾದೇವಿ (ಕಾಮಾಕ್ಷಿ ಭಾಸ್ಕರ್ಲ) ಎಂಬ ಆಧ್ಯಾತ್ಮಿಕ ಶಕ್ತಿಯುಳ್ಳ ಯುವತಿಯ ಸುತ್ತ ಸಾಗುತ್ತದೆ. ಆಕೆಯ ಬದುಕಿನಲ್ಲಿ ಸಂಭವಿಸುವ ನಿಗೂಢ ಸಾವುಗಳು ಹಾಗೂ ಸೋದರಸಂಬಂಧಿಯ ಅನಿರೀಕ್ಷಿತ ಆತ್ಮಹತ್ಯೆಯು ಕಥೆಗೆ ದಿಢೀರ್ ತಿರುವು ನೀಡುತ್ತವೆ.
ಇದನ್ನೂ ಓದಿ: Bigg Boss Kannada 13: ಆಸಿಯಾ ಸ್ನೇಹದಲ್ಲಿ ಲಾಭವನ್ನು ನೋಡುತ್ತಾರೆ! ತಾಂಡವ್ ನೇರ ಮಾತು
ಈ ದುರಂತಗಳ ಹಿಂದಿನ ಸತ್ಯವನ್ನು ಭೇದಿಸಲು ಹೊರಡುವ ಆಕೆ, ಅಂತಿಮವಾಗಿ ನಿಷೇಧಿತ ಅರಣ್ಯದ ಗುಹೆಯೊಂದನ್ನು ಪ್ರವೇಶಿಸುತ್ತಾಳೆ. ಅಲ್ಲಿ ಆಕೆಗೆ ‘ಅಗಾಧ’ ಎಂಬ ಅಗೋಚರ, ಅಲೌಕಿಕ ಶಕ್ತಿಯ ಮುಖಾಮುಖಿಯಾಗುತ್ತದೆ. ನಂಬಿಕೆ, ಆತಂಕ, ಭಯ ಮತ್ತು ಅಜ್ಞಾತ ಲೋಕದ ಗಡಿಯ ನಡುವೆ ಸಾಗುವ ಆಕೆಯ ಈ ಅನ್ವೇಷಣೆಯೇ ಚಿತ್ರದ ಜೀವಾಳ.
ನಿರ್ದೇಶಕ ಎಂ. ಎಸ್. ರಾಜು ಅವರು ಸೂಪರ್ ನ್ಯಾಚುರಲ್ ಹಾರರ್, ಮಿಸ್ಟ್ರಿ ಹಾಗೂ ಫ್ಯಾಂಟಸಿ ಅಂಶಗಳನ್ನು ಸಮತೋಲನದಲ್ಲಿ ಇಟ್ಟುಕೊಂಡು ವಿಶಿಷ್ಟ ಕಥಾಹಂದರವನ್ನು ಹೆಣೆದಿದ್ದಾರೆ. ಸಾಂಪ್ರದಾಯಿಕ ಬೆದರಿಸುವ ತಂತ್ರಗಳಿಗೆ ಸೀಮಿತವಾಗದೆ, ಪುರಾಣ ಪ್ರೇರಿತ ಅಂಶಗಳು ಹಾಗೂ ನಿಗೂಢ ಸನ್ನಿವೇಶಗಳ ಮೂಲಕ ನಿರೂಪಣೆಯನ್ನು ಕಟ್ಟಿಕೊಡಲಾಗಿದೆ.
ನಾಯಕಿಯ ಜೊತೆಯಲ್ಲೇ ಪ್ರೇಕ್ಷಕರೂ ಒಂದೊಂದೇ ರಹಸ್ಯಗಳನ್ನು ಭೇದಿಸುತ್ತಾ ಸಾಗುವಂತೆ ದೃಶ್ಯಗಳನ್ನು ವಿನ್ಯಾಸಗೊಳಿಸಲಾಗಿದ್ದು, ಕಾಮಾಕ್ಷಿ ಭಾಸ್ಕರ್ಲ ತಮ್ಮ ಪ್ರಬುದ್ಧ ಅಭಿನಯದಿಂದ ಮಹಾದೇವಿ ಪಾತ್ರಕ್ಕೆ ಭದ್ರ ಬುನಾದಿಯಾಗಿದ್ದಾರೆ.
ಚಿತ್ರಕ್ಕೆ ತಾಂತ್ರಿಕವಾಗಿಯೂ ಉತ್ತಮ ಬೆಂಬಲ ದೊರೆತಿದ್ದು, ನಾನಿ ಚಮಿಡಿಶೆಟ್ಟಿ ಅವರ ಛಾಯಾಗ್ರಹಣ, ರಾಕೇಶ್ ವೆಂಕಟಾಪುರಂ ಅವರ ಸಂಗೀತ ಹಾಗೂ ಜುನೈದ್ ಸಿದ್ದಿಕಿ ಅವರ ಸಂಕಲನ ನಿಗೂಢ ವಾತಾವರಣವನ್ನು ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಿವೆ. ಕಾಶಿ ವಿಶಾಲಾಕ್ಷಿ ಬಲುಸು ನಿರ್ಮಾಣದ ಈ ಚಿತ್ರವು ಚಿತ್ರಮಂದಿರಗಳಲ್ಲಿ ತನ್ನ ದೈವಿಕ ರಹಸ್ಯ ಮತ್ತು ದಟ್ಟ ಅರಣ್ಯದ ರೋಚಕತೆಯಿಂದ ಸದ್ದು ಮಾಡಿತ್ತು.
ಇದನ್ನೂ ಓದಿ: Ramayana: ರಾಮಾಯಣ ಸಿನಿಮಾದ ದೃಶ್ಯಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಮುಕೇಶ್ ಖನ್ನಾ
ಇದೀಗ ಜೀ 5 ತೆಲುಗಿನಲ್ಲಿ ಪ್ರಸಾರವಾಗುತ್ತಿರುವುದರಿಂದ, ಆಧ್ಯಾತ್ಮಿಕ ಥ್ರಿಲ್ಲರ್ ಹಾಗೂ ಮಿಸ್ಟ್ರಿ ಜಾನರ್ ಇಷ್ಟಪಡುವ ಪ್ರೇಕ್ಷಕರು ಮನೆಯಲ್ಲೇ ಕುಳಿತು ಈ ರೋಚಕ ಚಿತ್ರವನ್ನು ವೀಕ್ಷಿಸಬಹುದಾಗಿದೆ. ಈ ಸಿನಿಮಾವನ್ನು ತೆಲುಗು, ಕನ್ನಡ ಸೇರಿದಂತೆ ಬಹುಭಾಷೆಯಲ್ಲಿ ಸಿನಿಪ್ರಿಯರು ವೀಕ್ಷಣೆ ಮಾಡಬಹುದಾಗಿದೆ.