ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Ajay Devgn: ಬಾಕ್ಸ್ ಆಫೀಸ್‌ನಲ್ಲಿ ‘ದೃಶ್ಯಂ 3’ ಸಿನಿಮಾದ ಅಬ್ಬರ ಶುರು; ಮೊದಲ ದಿನವೇ ದಾಖಲೆ ಪ್ರಮಾಣದ ಕಲೆಕ್ಷನ್‌ ಗ್ಯಾರಂಟಿ!

Drishyam 3 Movie: ‘ದೃಶ್ಯಂ 3’ ಸಿನಿಮಾ ಬಾಕ್ಸ್ ಆಫೀಸ್ ಅಂಗಳದಲ್ಲಿ ಅತಿ ದೊಡ್ಡ ಸಂಚಲನ ಮೂಡಿಸಿದ್ದು, ಮೊದಲ ದಿನವೇ ಬರೋಬ್ಬರಿ ₹60 ಕೋಟಿ ಗಳಿಸುವ ಸೂಚನೆ ನೀಡಿದೆ. ಗಾಂಧಿ ಜಯಂತಿಯ ರಜಾ ದಿನದಂದು ತೆರೆಕಂಡ ಈ ಚಿತ್ರವು ಪ್ರೇಕ್ಷಕರನ್ನು ಸೆಳೆಯುತ್ತಿದೆ. ಅಜಯ್ ದೇವ್‌ಗನ್ ಅವರ ಹಳೆಯ ದಾಖಲೆಗಳನ್ನು ಈ ಸಿನಿಮಾ ಧೂಳಿಪಟ ಮಾಡುವ ಸಾಧ್ಯತೆ ಇದೆ.

Ajay Devgn: ʻದೃಶ್ಯಂ 3ʼ ಅಬ್ಬರ ಶುರು; ಮೊದಲ ದಿನವೇ ಬಾಕ್ಸ್ ಆಫೀಸ್ ಧೂಳಿಪಟ

-

Avinash GR
Avinash GR Oct 2, 2026 7:14 PM

ಅಜಯ್‌ ದೇವ್‌ಗನ್‌ ನಟನೆಯ ‘ದೃಶ್ಯಂ 3’ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ಅಕ್ಟೋಬರ್ 2ರ ಗಾಂಧಿ ಜಯಂತಿಯ ರಜಾದಿನದಂದು ದೇಶಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಿರುವ ಈ ಚಿತ್ರಕ್ಕೆ ಪ್ರೇಕ್ಷಕರಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಚಿತ್ರಮಂದಿರಗಳು ಹೌಸ್‌ಫುಲ್ ಪ್ರದರ್ಶನ ಕಾಣುತ್ತಿವೆ. ಮೂಲಗಳ ಪ್ರಕಾರ, ಅಭಿಷೇಕ್ ಪಾಠಕ್ ನಿರ್ದೇಶನದ ಈ ಚಿತ್ರವು ನಿರೀಕ್ಷೆಗೂ ಮೀರಿದ ಭರ್ಜರಿ ಓಪನಿಂಗ್ ದಾಖಲಿಸಿದೆ.

60 ಕೋಟಿ ರೂ.ಗಳಿಗೂ ಅಧಿಕ ಗಳಿಕೆ

ಚಿತ್ರದ ಅಡ್ವಾನ್ಸ್ ಬುಕಿಂಗ್ ಮೊದಲೇ ಭರ್ಜರಿಯಾಗಿದ್ದು, ಬಿಡುಗಡೆಯ ಮೊದಲ ದಿನ ದೇಶದಲ್ಲಿ ಸುಮಾರು 50 ಕೋಟಿ ರೂಪಾಯಿ ನಿವ್ವಳ ಕಲೆಕ್ಷನ್ ಆಗಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ರಜಾದಿನ ಹಾಗೂ ಸಿನಿಮಾದ ಮೇಲಿನ ಅಪಾರ ಕ್ರೇಜ್‌ನಿಂದಾಗಿ, ಮೊದಲ ದಿನದ ಗಳಿಕೆ ಅಂದಾಜು 55 ರಿಂದ 60 ಕೋಟಿ ರೂಪಾಯಿ ಅಥವಾ ಅದಕ್ಕಿಂತಲೂ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಬಾಕ್ಸ್ ಆಫೀಸ್ ಮೂಲಗಳು ಹೇಳುತ್ತವೆ. ಒಂದುವೇಳೆ ಇದು ನಿಜವಾದರೆ, ಈ ವರ್ಷ ಬಾಲಿವುಡ್‌ನಲ್ಲಿ ‘ಧುರಂಧರ್: ದಿ ರಿವೇಂಜ್’ ಚಿತ್ರದ ಬಳಿಕ ಎರಡನೇ ಅತಿ ದೊಡ್ಡ ಓಪನಿಂಗ್ ಕಂಡ ಸಿನಿಮಾವಾಗಿ ‘ದೃಶ್ಯಂ 3’ ಹೊರಹೊಮ್ಮಲಿದೆ.

ಹಳೆಯ ದಾಖಲೆಗಳು ಧೂಳಿಪಟ

ಅಷ್ಟೇ ಅಲ್ಲದೆ, ಈ ಸಿನಿಮಾ ಅಜಯ್ ದೇವ್‌ಗನ್ ಅವರ ಸಿನಿ ಕೆರಿಯರ್‌ನಲ್ಲೇ ಮೊದಲ ದಿನ ಅತಿ ಹೆಚ್ಚು ಗಳಿಕೆ ಕಂಡ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. 2024ರ ದೀಪಾವಳಿಗೆ ಬಿಡುಗಡೆಯಾಗಿದ್ದ ‘ಸಿಂಗಂ ಅಗೇನ್’ ಭಾರತದಲ್ಲಿ ಮೊದಲ ದಿನ 43.70 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಇದು ಅಜಯ್‌ ದೇವ್‌ಗನ್‌ ಅವರ ಚಿತ್ರವೊಂದರ ಮೊದಲ ದಿನದ ಗರಿಷ್ಠ ಗಳಿಕೆಯ ದಾಖಲೆಯಾಗಿತ್ತು. ಈಗ ‘ದೃಶ್ಯಂ: ದಿ ಕನ್‌ಕ್ಲೂಷನ್’ ಆ ಎಲ್ಲಾ ಹಳೆಯ ದಾಖಲೆಗಳನ್ನು ಧೂಳಿಪಟ ಮಾಡಿ, ಅಜಯ್‌ ವೃತ್ತಿಜೀವನದಲ್ಲಿ ನೂತನ ಮೈಲಿಗಲ್ಲು ಸ್ಥಾಪಿಸುವ ಹಾದಿಯಲ್ಲಿದೆ. ಎಲ್ಲೆಡೆ ಪಾಸಿಟಿವ್‌ ವಿಮರ್ಶೆಗಳು ವ್ಯಕ್ತವಾಗುತ್ತಿರುವುದರಿಂದ, ಭಾರತದಲ್ಲೇ ಈ ಚಿತ್ರದ ಒಟ್ಟು ಲೈಫ್‌ಟೈಮ್ ಗಳಿಕೆ 300 ಕೋಟಿ ರೂ. ಗಡಿ ದಾಟುವ ನಿರೀಕ್ಷೆಯಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

Ajay Devgn: ʼಸು ಫ್ರಮ್‌ ಸೋʼ ವೀಕ್ಷಿಸಿದ ಬಾಲಿವುಡ್‌ ಸ್ಟಾರ್‌ ಅಜಯ್‌ ದೇವಗನ್‌; ಬಾಲಿವುಡ್‌ಗೆ ರಿಮೇಕ್‌ ಆಗುತ್ತಾ?

ಮಲಯಾಳಂನಲ್ಲಿ ಮೋಹನ್‌ಲಾಲ್ ನಟಿಸಿದ್ದ ‘ದೃಶ್ಯಂ’ ಹಾಗೂ ‘ದೃಶ್ಯಂ 2’ ಸಿನಿಮಾಗಳನ್ನು ರಿಮೇಕ್‌ ಮಾಡಿದ್ದ ಅಜಯ್‌ ದೇವ್‌ಗನ್‌, ಈ ಬಾರಿ ‘ದೃಶ್ಯಂ: ದಿ ಕನ್‌ಕ್ಲೂಷನ್’ ಚಿತ್ರಕ್ಕಾಗಿ ಹೊಸ ಕಥೆಯೊಂದಿಗೆ ಬಂದಿದ್ದಾರೆ. ಇದು ಸಂಪೂರ್ಣ ಸ್ವಮೇಕ್‌ ಆಗಿದೆ. ‘ದೃಶ್ಯಂ 3’ ಸಿನಿಮಾವನ್ನು ಮೋಹನ್‌ಲಾಲ್‌ ಅವರು ಮೇ ತಿಂಗಳಿನಲ್ಲಿ ಬಿಡುಗಡೆ ಮಾಡಿದ್ದರು, ಅಜಯ್‌ ದೇವ್‌ಗನ್‌ ಅವರ ‘ದೃಶ್ಯಂ 3’ ಈಗ ತೆರೆಕಂಡಿದೆ. ಆ ಚಿತ್ರದ ಕಥೆಗಿಂತ ಈ ಸಿನಿಮಾದ ಕಥೆ ಎಷ್ಟು ಭಿನ್ನವಾಗಿದೆ ಎಂಬ ಕುತೂಹಲ ಸಿನಿಪ್ರಿಯರಲ್ಲಿದೆ.

ಹಿಂದಿಯ 'ದೃಶ್ಯಂ 3' ಸಿನಿಮಾದ ಗಳಿಕೆ ಹೆಚ್ಚಲು ಇದು ಕೂಡ ಒಂದು ಪ್ರಮುಖ ಕಾರಣವಾಗಿದೆ. ಈ ಚಿತ್ರದಲ್ಲಿ ಅಜಯ್ ದೇವ್‌ಗನ್ ಜೊತೆಗೆ ಟಬು, ಶ್ರಿಯಾ ಶರಣ್, ಜೈದೀಪ್ ಅಹ್ಲಾವತ್, ಇಶಿತಾ ದತ್ತಾ, ಕಮಲೇಶ್ ಸಾವಂತ್, ಪ್ರಕಾಶ್‌ ರಾಜ್ ಹಾಗೂ ಮೃಣಾಲ್ ಜಾಧವ್ ಮುಂತಾದವರು ನಟಿಸಿದ್ದಾರೆ.