ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ತ್ರಿವೇಣಿ ಬರೆದ ಕಾದಂಬರಿ ಆಧರಿಸಿ ಬರ್ತಿದೆ ʻಸರಳ ಸುಬ್ಬರಾವ್‌ʼ ಸಿನಿಮಾ; 70ರ ದಶಕಕ್ಕೆ ಜಾರಿದ ನಟ ಅಜಯ್‌ ರಾವ್‌

Sarala Subbarao Movie: ಅಜಯ್‌ ರಾವ್‌ ಅಭಿನಯದ ಸರಳ ಸುಬ್ಬರಾವ್‌ ಚಿತ್ರವು ಖ್ಯಾತ ಲೇಖಕಿ ತ್ರಿವೇಣಿ ಅವರ ಕಾದಂಬರಿ ಆಧರಿಸಿದೆ. 1970ರ ಕಾಲಘಟ್ಟದ ಮೈಸೂರಿನ ಹಿನ್ನೆಲೆಯಲ್ಲಿ ಈ ಸುಂದರ ಪ್ರೇಮಕಥೆ ಸಾಗಲಿದ್ದು, ಅಜಯ್‌ ರಾವ್‌ ಮತ್ತು ಮಿಶಾ ನಾರಂಗ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.

ತ್ರಿವೇಣಿ ಕಾದಂಬರಿ ಆಧರಿತ ʻಸರಳ ಸುಬ್ಬರಾವ್‌ʼ ಸಿನಿಮಾದ ಟ್ರೇಲರ್‌ ರಿಲೀಸ್‌

-

Avinash GR
Avinash GR Feb 3, 2026 5:14 PM

ಕನ್ನಡ ಚಿತ್ರರಂಗದಲ್ಲಿ ಸದಭಿರುಚಿ ಸಿನಿಮಾಗಳ ನಿರ್ದೇಶಕ ಎಂದೇ ಗುರುತಿಸಿಕೊಂಡ ಮಂಜು ಸ್ವರಾಜ್ ಇದೀಗ ಸರಳ ಸುಬ್ಬರಾವ್‌ ಹೆಸರಿನ ಹೊಸ ಸಿನಿಮಾವನ್ನು ತೆರೆಗೆ ತರಲು ಸಜ್ಜಾಗಿದ್ದಾರೆ. ಅಜೇಯ್ ರಾವ್ ಹಾಗೂ ಮಿಶಾ ನಾರಂಗ್ ಮುಖ್ಯಭೂಮಿಕೆಯಲ್ಲಿರುವ "ಸರಳ ಸುಬ್ಬರಾವ್" ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. 1970ರ ಕಾಲಘಟ್ಟದ ಪ್ರೇಮ ಕಥಾನಕ ಹೊಂದಿರುವ ಈ ಸಿನಿಮಾವು ಫೆಬ್ರವರಿ 12 ರಂದು ಬಿಡುಗಡೆಯಾಗಲಿದೆ. ಟ್ರೇಲರ್ ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.

ತ್ರಿವೇಣಿ ಅವರ ಕಾದಂಬರಿ ಆಧಾರಿತ ಸಿನಿಮಾಗಳು ಗೆದ್ದಿವೆ

"ತ್ರಿವೇಣಿ ಅವರು ಬರೆದ ಕಾದಂಬರಿ ಆಧರಿಸಿದ ಕಥೆ "ಸರಳ ಸುಬ್ಬರಾವ್". ಈವರೆಗೂ ಕನ್ನಡದಲ್ಲಿ ತ್ರಿವೇಣಿ ಅವರ ಕಾದಂಬರಿಗಳನ್ನು ಆಧರಿಸಿ ಬಂದಿರುವ ಚಿತ್ರಗಳೆಲ್ಲಾ ಗೆದ್ದಿದೆ. ಕನ್ನಡದಲ್ಲಿ ತೀರ ಅಪರೂಪ ಎನ್ನಬಹುದಾದ ಕಥೆ ಕೂಡ. ನಮ್ಮ ಚಿತ್ರ ಎಲ್ಲರಿಗೂ ಮೆಚ್ಚುಗೆಯಾಗುವ ಭರವಸೆ ಇದೆ. ಹೆಚ್ಚು ಕಡಿಮೆ ನೂರು ವರ್ಷಗಳ ಇತಿಹಾಸವಿರುವ ಮೈಸೂರಿನ ಮನೆಯೊಂದರಲ್ಲಿ ನಮ್ಮ ಚಿತ್ರದ ಚಿತ್ರೀಕರಣ ನಡೆದಿದೆ. ಈಗಾಗಲೇ ಟೀಸರ್, ಟ್ರೇಲರ್ ಹಾಗೂ ಹಾಡುಗಳ ಮೂಲಕ ನಮ್ಮ ಚಿತ್ರ ನೋಡುಗರ ಮನ ಗೆದ್ದಿದೆ. ರಂಗಾಯಣ ರಘು, ವೀಣಾ ಸುಂದರ್, ರಘು ರಾಮನಕೊಪ್ಪ, ವಿಜಯ್ ಚಂಡೂರ್ ಹೀಗೆ ದೊಡ್ಡ ತಾರಾಬಳಗವೇ ಈ ಚಿತ್ರದಲ್ಲಿದೆ‌" ಎನ್ನುತ್ತಾರೆ ನಿರ್ದೇಶಕ ಮಂಜು ಸ್ವರಾಜ್.

Krishna Ajay Rao: ಯುದ್ಧಕಾಂಡ ಸಿನಿಮಾಕ್ಕಾಗಿ ನಟ ಅಜಯ್‌ ರಾವ್‌ ಮಾಡಿ ಸಾಲ ಎಷ್ಟು ಗೊತ್ತಾ?

ಪ್ರೇಮಿಗಳ ದಿನಕ್ಕೆ ಕೊಡುಗೆಯಾಗಿ ಬರಲಿದೆ

"ನಾನು ಹುಟ್ಟಿದ್ದು 1980ರಲ್ಲಿ.. ಈ ಚಿತ್ರದ ಕಥೆ ನಡೆಯುವುದು 1970ರ ಕಾಲಘಟ್ಟದಲ್ಲಿ. ಕನ್ನಡದಲ್ಲಿ ಅಪರೂಪ ಎನ್ನಬಹುದಾದ ಕಥೆಯನ್ನು ನಿರ್ದೇಶಕ ಮಂಜು ಸ್ವರಾಜ್ ಹಾಗೂ ನಿರ್ಮಾಪಕ ಲೋಹಿತ್ ಆಯ್ಕೆ ಮಾಡಿಕೊಂಡಿದ್ದಾರೆ. ರೆಟ್ರೊ ಶೈಲಿಯಲ್ಲಿ ಕಾಣಿಸಿಕೊಂಡಿರುವುದಕ್ಕೆ ಖುಷಿಯಿದೆ. ನಮ್ಮ ಸಿನಿಮಾದ ಟ್ರೇಲರ್ ಎಲ್ಲರ ಗಮನ ಸೆಳೆದಿದೆ. ಪ್ರೇಮಿಗಳ ದಿನದ ಸಂದರ್ಭದಲ್ಲಿ ನಮ್ಮ ಚಿತ್ರ ತೆರೆಗೆ ಬರಲಿದೆ. ಎಲ್ಲರೂ ಚಿತ್ರಮಂದಿರಗಳಲ್ಲಿ ಕುಟುಂಬ ಸಮೇತ ನಮ್ಮ ಚಿತ್ರ ನೋಡುವ ಮೂಲಕ ಪ್ರೋತ್ಸಾಹಿಸಿ" ಎಂದರು ನಟ ಅಜೇಯ್ ರಾವ್.

ನಿರ್ಮಾಪಕರು ಹೇಳಿದ್ದೇನು?

"ನಿರ್ದೇಶಕ ಮಂಜು ಸ್ವರಾಜ್ ಹೇಳಿದ ಈ ಕಥೆ ಬಹಳ ಇಷ್ಟವಾಯಿತು. ಹಾಗಾಗಿ ನಿರ್ಮಾಣಕ್ಕೆ ಮುಂದಾದೆ. ಅಜೇಯ್ ರಾವ್ ಸೇರಿದಂತೆ ಚಿತ್ರತಂಡದ ಎಲ್ಲರ ಸಹಕಾರದಿಂದ ನಮ್ಮ ಚಿತ್ರ ಚೆನ್ನಾಗಿ ಮೂಡಿಬಂದಿದೆ. ಫೆಬ್ರವರಿ 12 ರಂದು ನಮ್ಮ ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಎಲ್ಲರೂ ನೋಡಿ‌. ಪ್ರೋತ್ಸಾಹ ನೀಡಿ"‌ ಎಂದರು ನಿರ್ಮಾಪಕ ಲೋಹಿತ್ ನಂಜುಂಡಯ್ಯ. ಈ ಸಿನಿಮಾಕ್ಕೆ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಪ್ರದೀಪ್ ಪದ್ಮಕುಮಾರ್ ಛಾಯಾಗ್ರಹಣ ಹಾಗೂ ಬಸವರಾಜ್ ಅರಸ್ ಸಂಕಲನ ಮಾಡಿದ್ದಾರೆ.