ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಬೆಂಗಳೂರಿನ ರಾಕ್‌ಲೈನ್ ಸ್ಟುಡಿಯೋದಲ್ಲಿ ಶ್ರೀಮುರಳಿ ನಟನೆಯ 'ಉಗ್ರಾಯುಧಮ್' ಚಿತ್ರಕ್ಕೆ ಬಿರುಸಿನ ಚಿತ್ರೀಕರಣ

'ರೋರಿಂಗ್ ಸ್ಟಾರ್' ಶ್ರೀಮುರಳಿ ಅಭಿನಯದ 'ಉಗ್ರಾಯುಧಮ್' ಚಿತ್ರದ ಶೂಟಿಂಗ್ ಬೆಂಗಳೂರಿನ ರಾಕ್‌ಲೈನ್ ಸ್ಟುಡಿಯೋದಲ್ಲಿ ನಿರ್ಮಿಸಲಾದ ಬೃಹತ್ ಸೆಟ್‌ನಲ್ಲಿ ಭರದಿಂದ ಸಾಗಿದೆ. 700 ವರ್ಷಗಳ ಹಿಂದಿನ ಚಾರಿತ್ರಿಕ ಕಥಾಹಂದರ ಹೊಂದಿರುವ ಈ ಸಿನಿಮಾವನ್ನು ಜಯರಾಮ್ ದೇವಸಮುದ್ರ ಅವರು ನಿರ್ಮಿಸುತ್ತಿದ್ದಾರೆ.

ನಟ ಶ್ರೀಮುರಳಿ ಅಭಿನಯದ 'ಉಗ್ರಾಯುಧಮ್' ಚಿತ್ರಕ್ಕೆ ಬಿರುಸಿನ ಚಿತ್ರೀಕರಣ

-

Avinash GR
Avinash GR Aug 11, 2026 3:43 PM

ʻರೋರಿಂಗ್ ಸ್ಟಾರ್ʼ ಶ್ರೀಮುರಳಿ ಅಭಿನಯದ, ಬಹುನಿರೀಕ್ಷಿತ 'ಉಗ್ರಾಯುಧಮ್' ಸಿನಿಮಾದ ಚಿತ್ರೀಕರಣ ಬೆಂಗಳೂರಿನ ರಾಕ್‌ಲೈನ್ ಸ್ಟುಡಿಯೋದಲ್ಲಿ ಭರದಿಂದ ಸಾಗಿದೆ. ʻನಿದ್ರಾದೇವಿ ನೆಕ್ಸ್ಟ್ ಡೋರ್ʼ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ನಿರ್ಮಾಪಕರಾಗಿ ಪದಾರ್ಪಣೆ ಮಾಡಿದ ಜಯರಾಮ್ ದೇವಸಮುದ್ರ ಅವರು ತಮ್ಮ 'ಸುರಮ್ ಮೂವೀಸ್' ಬ್ಯಾನರ್ ಅಡಿಯಲ್ಲಿ ಈ ಚಿತ್ರವನ್ನು ಅದ್ದೂರಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ಈ ಹಿಂದೆ ಇವರು ನಿರ್ಮಿಸಿರುವ 'ಎಲ್‌ ಎಸ್ ಡಿ' ಹಾಗೂ 'ನೀ ನಂಗೆ ಅಲ್ಲವಾ' ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿದ್ದು, ಇದೀಗ ಭಾರಿ ಬಜೆಟ್‌ನಲ್ಲಿ 'ಉಗ್ರಾಯುಧಮ್' ಸಿನಿಮಾವನ್ನು ಕೈಗೆತ್ತಿಕೊಂಡಿದ್ದಾರೆ.

700 ವರ್ಷಗಳ ಹಿಂದಿನ ಪಿರಿಯಾಡಿಕ್ ಕಥೆ

ಈ ಚಿತ್ರದ ಮೂಲ ಕಥಾಹಂದರವು ಸುಮಾರು 700 ವರ್ಷಗಳ ಹಿಂದಿನ ಪಿರಿಯಾಡಿಕ್ ಡ್ರಾಮಾ ಹಿನ್ನೆಲೆಯನ್ನು ಹೊಂದಿದೆ. ನಿರ್ದೇಶಕ ಪುನೀತ್ ರುದ್ರನಾಗ್ ಅವರು ಮೊದಲ ಯತ್ನದಲ್ಲೇ ಅತ್ಯಂತ ರೋಚಕ ಕಥೆ ಹಾಗೂ ಚಿತ್ರಕಥೆಯನ್ನು ಸಿದ್ಧಪಡಿಸಿ ನಿರ್ದೇಶನದ ಹೊಣೆ ಹೊತ್ತಿದ್ದಾರೆ. ಕಥೆ ಮತ್ತು ಚಿತ್ರಕಥೆ ರಚನೆಯಲ್ಲಿ ಮಂಜು ಅಥರ್ವ ಅವರು ನಿರ್ದೇಶಕರಿಗೆ ಸಾಥ್ ನೀಡಿದ್ದಾರೆ.

ಶ್ರೀಮುರಳಿ ನಟನೆಯ ‘ಪರಾಕ್’ ಚಿತ್ರದ ಟೀಸರ್ ರಿಲೀಸ್; ಹೊಸಬರ ಡಿಫರೆಂಟ್ ಪ್ರಯತ್ನಕ್ಕೆ ಬೆನ್ನೆಲುಬಾಗಿ ನಿಂತ ʻರೋರಿಂಗ್ ಸ್ಟಾರ್ʼ

ಬೃಹತ್ ಸೆಟ್‌ನಲ್ಲಿ 400ಕ್ಕೂ ಹೆಚ್ಚು ಕಲಾವಿದರ ಬಳಕೆ

ಇದೊಂದು ಚಾರಿತ್ರಿಕ ಹಿನ್ನೆಲೆಯ ಕಥೆಯಾಗಿರುವುದರಿಂದ ಹೆಚ್ಚಿನ ಭಾಗದ ಚಿತ್ರೀಕರಣವನ್ನು ಹೊರಾಂಗಣದಲ್ಲೇ ನಡೆಸಲು ಯೋಜಿಸಲಾಗಿದೆ. ಆದರೆ, ಪ್ರಸ್ತುತ ರಾಜ್ಯದೆಲ್ಲೆಡೆ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ, ಸದ್ಯಕ್ಕೆ ಬೆಂಗಳೂರಿನ ರಾಕ್‌ಲೈನ್ ಸ್ಟುಡಿಯೋದಲ್ಲಿ ಒಳಾಂಗಣ ಚಿತ್ರೀಕರಣವನ್ನು ನಡೆಸಲಾಗುತ್ತಿದೆ. ಕಲಾ ನಿರ್ದೇಶಕ ಅಮರ್ ಅವರು ಚಿತ್ರಕ್ಕಾಗಿ ಅದ್ಭುತ ಹಾಗೂ ಅದ್ದೂರಿ ಸೆಟ್‌ಗಳನ್ನು ನಿರ್ಮಿಸಿದ್ದು, ಈ ಒಳಾಂಗಣ ಸೆಟ್‌ನಲ್ಲಿ ನಾಯಕ ಶ್ರೀಮುರಳಿ ಅವರ ಜೊತೆಗೆ 400ಕ್ಕೂ ಹೆಚ್ಚು ಸಹ ಕಲಾವಿದರು ಭಾಗವಹಿಸುತ್ತಿದ್ದಾರೆ.

ತೀರ್ಥಹಳ್ಳಿಗೆ ಹೊರಡಲಿರುವ ಚಿತ್ರತಂಡ

ಬೆಂಗಳೂರಿನಲ್ಲಿ ಒಳಾಂಗಣ ಚಿತ್ರೀಕರಣ ಮುಗಿದ ತಕ್ಷಣ, ಮಳೆಗಾಲ ಮುಗಿದ ಮೇಲೆ ಮುಂದಿನ ಹಂತದ ಹೊರಾಂಗಣ ಚಿತ್ರೀಕರಣಕ್ಕಾಗಿ ಚಿತ್ರತಂಡವು ತೀರ್ಥಹಳ್ಳಿಯ ಸುಂದರ ತಾಣಗಳಿಗೆ ಪ್ರಯಾಣ ಬೆಳೆಸಲಿದೆ. ಶ್ರೀಮುರಳಿ ಅವರು ತಮ್ಮ ವೃತ್ತಿಜೀವನದಲ್ಲೇ ಇದುವರೆಗೆ ಮಾಡಿರದಂತಹ ತೀರಾ ವಿಭಿನ್ನ ಹಾಗೂ ಪವರ್‌ಫುಲ್ ಪಾತ್ರದಲ್ಲಿ ಪ್ರೇಕ್ಷಕರ ಎದುರು ಬರಲಿದ್ದಾರೆ. ಈ ಚಿತ್ರಕ್ಕೆ ಸಂಕೇತ್ ಅವರ ಛಾಯಾಗ್ರಹಣವಿದ್ದು, ಕಲಾ ನಿರ್ದೇಶನವನ್ನು ಅಮರ್ ವಹಿಸಿಕೊಂಡಿದ್ದಾರೆ.

ನಿರ್ಮಾಪಕ ಜಯರಾಮ್ ದೇವಸಮುದ್ರ ಅವರು ಯಾವುದೇ ರೀತಿಯ ಕೊರತೆಯಾಗದಂತೆ ಸಿನಿಮಾವನ್ನು ಅತ್ಯಂತ ವಿಜೃಂಭಣೆಯಿಂದ ನಿರ್ಮಿಸುತ್ತಿದ್ದಾರೆ. ಶ್ರೀಮುರಳಿ ಅವರಿಗೆ ಜೋಡಿಯಾಗಲಿರುವ ನಾಯಕಿ ಹಾಗೂ ಉಳಿದ ಪ್ರಮುಖ ತಾರಾಗಣದ ವಿವರಗಳನ್ನು ಚಿತ್ರತಂಡವು ಶೀಘ್ರದಲ್ಲೇ ಅಧಿಕೃತವಾಗಿ ಅನಾವರಣಗೊಳಿಸಲಿದೆ.