ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ʻಕಲಾವಿದರಿಗೆ ಕಾಂಡೋಮ್ ಸಪ್ಲೈ ಮಾಡ್ತಾರೆʼ; ಚಕ್ರವರ್ತಿ ಚಂದ್ರಚೂಡ್‌ ಮಾತಿಗೆ ಕನ್ನಡ ನಿರ್ಮಾಪಕರು ಕೆಂಡ! ಪೊಲೀಸರಿಗೆ ಕೊಟ್ಟ ದೂರಿನಲ್ಲಿ ಏನಿದೆ?

Chakravarthy Chandrachud Controversy: "ನಿರ್ಮಾಪಕರು ಹೀರೋಗಳಿಗೆ ಕಾಂಡೋಮ್ ಸಪ್ಲೈ ಮಾಡುತ್ತಾರೆ" ಎಂದು ಚಕ್ರವರ್ತಿ ಚಂದ್ರಚೂಡ್‌ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘ ದೂರು ನೀಡಿದೆ. ಚಂದ್ರಚೂಡ್ ವಿರುದ್ಧ ಐಟಿ ಕಾಯ್ದೆಯಡಿ ಕ್ರಮಕ್ಕೆ ಆಗ್ರಹಿಸಲಾಗಿದೆ.

ಚಕ್ರವರ್ತಿ ಚಂದ್ರಚೂಡ್ ವಿರುದ್ಧ ತಿರುಗಿಬಿದ್ದ ನಿರ್ಮಾಪಕರ ಸಂಘ!

-

Avinash GR
Avinash GR Feb 2, 2026 5:59 PM

ಪತ್ರಕರ್ತ, ಮಾಜಿ ಬಿಗ್‌ ಬಾಸ್‌ ಸ್ಪರ್ಧಿ ಚಕ್ರವರ್ತಿ ಚಂದ್ರಚೂಡ್‌ ಅವರ ಮೇಲೆ ನಿರ್ಮಾಪಕರ ಸಂಘ ದೂರು ನೀಡಿದೆ. ನಿರ್ಮಾಪಕರ ಬಗ್ಗೆ ಚಕ್ರವರ್ತಿ ಚಂದ್ರಚೂಡ್‌ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪ ಮಾಡಲಾಗಿದ್ದು, ಆ ಹಿನ್ನೆಲೆಯಲ್ಲಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ.

ದೂರಿನಲ್ಲಿ ಏನಿದೆ?

ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘವು ಕನ್ನಡ ಚಿತ್ರರಂಗದ ನಿರ್ಮಾಪಕರನ್ನು ಪ್ರತಿನಿಧಿಸುವ ಅಧಿಕೃತ ಸಂಘವಾಗಿರುತ್ತದೆ. ದಿನಾಂಕ. 01-02-2026ರಂದು ಚಕ್ರವರ್ತಿ ಅಖಾಡ ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಸಾರಗೊಂಡ ಸಂದರ್ಶನದಲ್ಲಿ “ಚಂದ್ರಚೂಡ ಅಲಿಯಾಸ್ ಚಕ್ರವರ್ತಿ ಚಂದ್ರಚೂಡ್" ಎಂಬ ವ್ಯಕ್ತಿ ಕನ್ನಡ ಚಲನಚಿತ್ರ ನಿರ್ಮಾಪಕರ ಕುರಿತು ಅತ್ಯಂತ ಅಸಭ್ಯ, ಅವಾಚ್ಯ, ಅವಮಾನಕಾರಕ ಮತ್ತು ಮಾನಹಾನಿಕರ ಪದಗಳನ್ನು ಬಳಸಿರುತ್ತಾರೆ. ಕನ್ನಡದ ನಟ ಸಾರ್ವಭೌಮ ದಿವಂಗತ ಡಾ॥ ರಾಜ್ ಕುಮಾರ್‌ರವರು ಕನ್ನಡದ ನಿರ್ಮಾಪಕರನ್ನು "ಅನ್ನದಾತರು" ಎಂದು ಸಂಭೋದಿಸಿದ್ದರು. ಆದರೆ ಈ ವ್ಯಕ್ತಿಯು ನಿರ್ಮಾಪಕರಿಗೆ ಗಂಡು ಮತ್ತು ಹೆಣ್ಣು ಮಕ್ಕಳನ್ನು ಒಳಗೊಂಡಂತೆ ಅಸಭ್ಯ ಮತ್ತು ಅವಹೇಳನಕಾರಿ ಪದ ಪ್ರಯೋಗ ಮಾಡಿದ್ದಾರೆ" ಎಂದು ದೂರಿನಲ್ಲಿ ತಿಳಿಸಲಾಗಿದೆ.

ಕಾಂಡೋಮ್ ಬೇಕಾದ್ರೂ ತಗೊಂಡು ಹೋಗ್ ಬಿಡ್ತಾರೆ

"ತನ್ನ ಯೂಟ್ಯೂಬ್ ಚಾನೆಲ್‌ನ ವೀಕ್ಷಕರ ಸಂಖ್ಯೆ ಹೆಚ್ಚಿಸಿಕೊಳ್ಳಲು ನಿರ್ಮಾಪಕರ ಬಗ್ಗೆ ಆಗೌರವ ತರುವ ಹೇಳಿಕೆಗಳನ್ನು ನೀಡಿರುತ್ತಾರೆ. ಕೆಳಕಂಡಂತೆ ನಿರ್ಮಾಪಕರ ವಿರುದ್ಧ ಇವರ ಸಂದರ್ಶನದಲ್ಲಿ ಮಾತನಾಡಿರುತ್ತಾರೆ. ʻಕೆಲ ನಿರ್ಮಾಪಕರು ಹೀರೋಗಳ ವಿಚಾರ ಬಂದರೆ ಅವರ ಮನೆಯ ಕಮೋಡ್ ನೋಡ್ಕೋತ್ತಾರೆ. ಕಾಂಡೋಮ್ ಬೇಕಾದ್ರೂ ತಗೊಂಡು ಹೋಗ್ ಬಿಡ್ತಾರೆ ಕೆಲವು ನಿರ್ಮಾಪಕರು ಹೀರೋ ಹತ್ತಿರʼ ಎಂಬಂತಹ ಅಶ್ಲೀಲ ಮತ್ತು ಅವಹೇಳನಕಾರಿ ಹೇಳಿಕೆಗಳನ್ನು ಸಾರ್ವಜನಿಕವಾಗಿ ಯೂಟ್ಯೂಬ್ ಚಾನೆಲ್ ಸಂದರ್ಶನದಲ್ಲಿ ನೀಡಿದ್ದಾರೆ. ಈ ಹೇಳಿಕೆಗಳು ಸಂಪೂರ್ಣ ಕನ್ನಡ ಚಲನಚಿತ್ರ ನಿರ್ಮಾಪಕರ ಘನತೆ, ಗೌರವ ಮತ್ತು ಮಾನಕ್ಕೆ ಗಂಭೀರ ಹಾನಿ ಉಂಟುಮಾಡಿವೆ. ಯೂಟ್ಯೂಬ್ ಚಾನೆಲ್‌ನ ಸಂದರ್ಶನದಲ್ಲಿ ಮಾತನಾಡಿರುವ ವಿಡಿಯೋವನ್ನು ಪೆನ್ ಡ್ರೈವ್ ಮೂಲಕ ಸಾಕ್ಷಿಯಾಗಿ ಒದಗಿಸಲಾಗಿದೆ" ಎಂದು ದೂರಿನಲ್ಲಿ ತಿಳಿಸಲಾಗಿದೆ.

Kiccha Sudeep: ʻಯುದ್ಧಕ್ಕೆ ರೆಡಿʼ ಎಂದು ಸುದೀಪ್‌ ಹೇಳಿದ್ದು ಯಾರಿಗೆ? ಚಕ್ರವರ್ತಿ ಚಂದ್ರಚೂಡ್‌ ಬಾಯಿಬಿಟ್ಟ ಸತ್ಯವಿದು!

"ಸಮಾಜದಲ್ಲಿ ನಿರ್ಮಾಪಕರ ಬಗ್ಗೆ ತಪ್ಪು ಕಲ್ಪನೆ, ದ್ವೇಷ ಮತ್ತು ಅವಿಶ್ವಾಸ ಮೂಡಿಸುವ ಉದ್ದೇಶದಿಂದ ಮಾತನಾಡಿರುತ್ತಾರೆ. ಯೂಟ್ಯೂಬ್ ದುರುಪಯೋಗಪಡಿಸಿಕೊಂಡು ಅಶ್ಲೀಲ ಮತ್ತು ಕಾನೂನು ವಿರೋಧಿ ವಿಷಯವನ್ನು ಪ್ರಸಾರ ಡಿಜಿಟಲ್ ಮಾದ್ಯಮವನ್ನು ಮಾಡಲಾಗಿದೆ. ಕನ್ನಡ ಚಲನಚಿತ್ರ ನಿರ್ಮಾಪಕರ ಘನತೆಗೆ ಮತ್ತು ಮೌಲ್ಯಗಳಿಗೆ ಸಮಾಜದಲ್ಲಿ ಬೆಲೆ ಇಲ್ಲದಂತೆ ಇನ್ನೂ ಅನೇಕ ಅವ್ಯಾದ ಶಬ್ದಗಳಲ್ಲಿ ಮಾತನಾಡಿರುತ್ತಾರೆ. ಇದರ ಬಗ್ಗೆ ಸಂಘಕ್ಕೆ ಅನೇಕ ನಿರ್ಮಾಪಕರು ಮತ್ತು ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆಯವರು ದೂರನ್ನು ನೀಡಿರುತ್ತಾರೆ. ಚಂದ್ರಚೂಡ್ ವಿರುದ್ಧ ಕೆಲವು ನಿರ್ಮಾಪಕರು ಪ್ರತಿಭಟನೆ ಮಾಡಲು ತಯಾರಾಗಿರುತ್ತಾರೆ. ತಾವುಗಳು ಸಮಾಜದಲ್ಲಿ ಶಾಂತಿಯನ್ನು ಉಂಟು ಮಾಡಲು ತತ್‌ಕ್ಷಣವಾಗಿ ಚಂದ್ರಚೂಡ ಅಲಿಯಾಸ್ ಚಕ್ರವರ್ತಿ ಚಂದ್ರಚೂಡ್ ವಿರುದ್ಧ ಮಾನಹಾನಿ, ಉದ್ದೇಶಪೂರ್ವಕ ಅವಮಾನ, ಸಮಾಜದಲ್ಲಿ ದ್ವೇಷ/ಶಾಂತಿ ಭಂಗ ಉಂಟುಮಾಡುವ ಹೇಳಿಕೆ, ಮಹಿಳೆಯರ ಗೌರವಕ್ಕೆ ಧಕ್ಕೆ ಹಾಗೂ IT Act ಸೆಕ್ಷನ್ ಅಡಿಯಲ್ಲಿ ಕ್ರಿಮಿನಲ್ ಪ್ರಕರಣ (FIR) ದಾಖಲಿಸಿ, ಕಾನೂನುಬದ್ಧ ಕ್ರಮ ಕೈಗೊಳ್ಳಬೇಕೆಂದು ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ವತಿಯಿಂದ ವಿನಂತಿಸುತ್ತೇವೆ. ಕನ್ನಡ ಚಿತ್ರರಂಗದ ಘನತೆ ಮತ್ತು ಗೌರವ ಕಾಪಾಡುವ ನಿಟ್ಟಿನಲ್ಲಿ ತಕ್ಷಣ ಕ್ರಮ ಕೈಗೊಳ್ಳಬೇಕಾಗಿ ವಿನಂತಿ" ಎಂದು ದೂರಿನಲ್ಲಿ ತಿಳಿಸಲಾಗಿದೆ.

KVN Productions: ಟಾಲಿವುಡ್‌ಗೆ ಕಾಲಿಟ್ಟ ಕೆವಿಎನ್‌ ಪ್ರೊಡಕ್ಷನ್ಸ್‌; ಚಿರಂಜೀವಿ ನಟನೆಯ ಚಿತ್ರ ನಿರ್ಮಾಣ

ಸ್ಪಷ್ಟನೆ ನೀಡರುವ ಚಂದ್ರಚೂಡ್‌

ಈ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಸ್ಪಷ್ಟನೆ ನೀಡಿರುವ ಚಕ್ರವರ್ತಿ ಚಂದ್ರಚೂಡ್‌, "ನಾನು ಮಾತನಾಡಿರುವುದು ತಮಿಳು ಸಿನಿಮಾ ಬಗ್ಗೆ, ಅಲ್ಲಿಯ ವಾತಾವರಣದ ಬಗ್ಗೆ, ಅಲ್ಲಿನ ರಾಜಕೀಯ ವ್ಯವಸ್ಥೆಯ ಬಗ್ಗೆ ಹೊರತು ಕನ್ನಡ ನಿರ್ಮಾಪಕರ ಬಗ್ಗೆ ಆಗಲಿ ಕನ್ನಡ ಚಿತ್ರರಂಗದ ಬಗ್ಗೆ ಅಲ್ಲವೇ ಅಲ್ಲ. ಅಲ್ಲದೆ ಕಮೋಡ್ ಟು ಕಾಂಡೋಮ್ ಅನ್ನುವ ಉಪಮೆಯನ್ನು ಬಳಸಿದ್ದೇನೆ ಅಷ್ಟೇ ವಿನಃ ಯಾವುದೇ ನಿರ್ಮಾಪಕರ ವಿರುದ್ಧ ಅಲ್ಲ. ಜೊತೆಗೆ ಒಬ್ಬ ಕನ್ನಡ ನಿರ್ಮಾಪಕ ತಮಿಳು ರಾಜಕೀಯಕ್ಕೆ ಹೇಗೆ ಸಿಲುಕಿದ್ದಾರೆ ಎಂಬ ಹಿನ್ನೆಲೆಯಲ್ಲೂ ಸಹ ದನಿ ಎತ್ತಿದ್ದೇನೆ" ಎಂದಿದ್ದಾರೆ.

ನಿರ್ಮಾಪಕರು ನೊಂದುಕೊಳ್ಳುವ ಅವಶ್ಯಕತೆ ಇಲ್ಲ

"ತಮಿಳು ಚಿತ್ರರಂಗದಲ್ಲಿಯೂ ಕೆಲಸ ಮಾಡಿದ ಅನುಭವ ಇರುವುದರಿಂದ ಅಲ್ಲಿ ನಾಯಕ ಕೇಂದ್ರೀತ ವಾತಾವರಣ ಹೇಗಿದೆ ಮತ್ತು ಅದರ ಪರಿಣಾಮಗಳನ್ನು ವಿವರಿಸಿದ್ದೇನೆ. ಅಖಾಡ ವಿಡಿಯೋದ ಹಿನ್ನೆಲೆಯನ್ನು ಅರ್ಥಮಾಡಿಕೊಳ್ಳದೆ, ಒಂದು ಭಾಗವನ್ನು ಮಾತ್ರ ಕತ್ತರಿಸಿ ಹಂಚುತ್ತಿರುವುದರಿಂದ ಈ ಪ್ರಮಾದವಾಗಿದೆ. ಯಾವುದೇ ನಿರ್ಮಾಪಕರು ಇದರಿಂದ ನೊಂದುಕೊಳ್ಳುವ ಅವಶ್ಯಕತೆಯೂ ಇಲ್ಲ" ಎಂದು ಚಕ್ರವರ್ತಿ ಚಂದ್ರಚೂಡ್ ಹೇಳಿದ್ದಾರೆ.