ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Allu Sirish: ದೇವಸ್ಥಾನದಲ್ಲಿ ಭಾರಿ ಸೌಂಡ್: ದೂರು ನೀಡಿದ ಅಲ್ಲು ಅರ್ಜುನ್ ಸಹೋದರ

Allu Sirish: ಟಾಲಿವುಡ್ ಸ್ಟಾರ್ ಅಲ್ಲು ಅರ್ಜುನ್ ಅವರ ಸಹೋದರ ತೆಲುಗು ಚಲನಚಿತ್ರ ನಟ ಅಲ್ಲು ಸಿರೀಶ್ , ಸೋಮವಾರ ಹೈದರಾಬಾದ್‌ನ ದೇವಾಲಯವೊಂದರ ಅಬ್ಬರದ ಸಂಗೀತದ ಬಗ್ಗೆ ಪೋಸ್ಟ್ ಮಾಡಿದ್ದಕ್ಕಾಗಿ ಟ್ರೋಲ್‌ಗೆ ಒಳಗಾಗಿದ್ದರು. ದೇವಸ್ಥಾನವೊಂದರಲ್ಲಿ ತಡರಾತ್ರಿ ಪೈಪೋಟಿಯಿಂದ ಧ್ವನಿವರ್ಧಕ ಬಳಸಲಾಗುತ್ತಿದೆಯೆಂದು ಆರೋಪಿಸಿ ಹೈದರಾಬಾದ್ ಪೊಲೀಸರಿಗೆ (Hydarabad Police) ದೂರು ನೀಡಿದ್ದಾರೆ.

ದೇವಸ್ಥಾನದಲ್ಲಿ ಭಾರಿ ಸೌಂಡ್: ದೂರು ನೀಡಿದ ಅಲ್ಲು ಅರ್ಜುನ್ ಸಹೋದರ

ಅಲ್ಲು ಸಿರೀಶ್ -

Yashaswi Devadiga
Yashaswi Devadiga Sep 28, 2026 7:49 PM

ಟಾಲಿವುಡ್ ಸ್ಟಾರ್ ಅಲ್ಲು ಅರ್ಜುನ್ (allu Arjun) ಅವರ ಸಹೋದರ ತೆಲುಗು ಚಲನಚಿತ್ರ ನಟ ಅಲ್ಲು ಸಿರೀಶ್ (Allu Sirish), ಸೋಮವಾರ ಹೈದರಾಬಾದ್‌ನ ದೇವಾಲಯವೊಂದರ ಅಬ್ಬರದ ಸಂಗೀತದ ಬಗ್ಗೆ ಪೋಸ್ಟ್ ಮಾಡಿದ್ದಕ್ಕಾಗಿ ಟ್ರೋಲ್‌ಗೆ ಒಳಗಾಗಿದ್ದರು. ದೇವಸ್ಥಾನವೊಂದರಲ್ಲಿ ತಡರಾತ್ರಿ ಪೈಪೋಟಿಯಿಂದ ಧ್ವನಿವರ್ಧಕ ಬಳಸಲಾಗುತ್ತಿದೆಯೆಂದು ಆರೋಪಿಸಿ ಹೈದರಾಬಾದ್ ಪೊಲೀಸರಿಗೆ (Hydarabad Police) ದೂರು ನೀಡಿದ್ದಾರೆ. ಮಧ್ಯರಾತ್ರಿ 2ರಿಂದ 3 ಗಂಟೆಯವರೆಗೂ ಕರ್ಕಶ ಶಬ್ದ ಬರುವುದರಿಂದ ತಮಗೆ ಹಾಗೂ ನಿವಾಸಿಗಳಿಗೆ ನಿದ್ರೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಅವರು ಟ್ವಿಟರ್ ಮೂಲಕ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಪೊಲೀಸರನ್ನು ಟ್ಯಾಗ್ ಮಾಡಿದ ಸಿರೀಶ್

X ನಲ್ಲಿ ಹೈದರಾಬಾದ್ ಪೊಲೀಸರನ್ನು ಟ್ಯಾಗ್ ಮಾಡಿದ ಸಿರೀಶ್, ತನ್ನನ್ನು "ಶೈಕ್‌ಪೇಟೆಯ ಅಪರ್ಣ ಒನ್ ನಿವಾಸಿ" ಎಂದು ಪರಿಚಯಿಸಿಕೊಂಡು ಹೀಗೆ ಹೇಳಿದರು: "ಕಳೆದ ಕೆಲವು ದಿನಗಳಿಂದ ವಿನೋಭಾ ನಗರದಲ್ಲಿರುವ ಹನುಮಾನ್ ದೇವಸ್ಥಾನವು ರಾತ್ರಿ 2/3 ಗಂಟೆಯವರೆಗೆ ಅನುಮತಿಸಲಾದ ಡೆಸಿಬಲ್‌ಗಳನ್ನು ಮೀರಿ ಜೋರಾಗಿ ಸಂಗೀತ ಹಾಕಿದೆ. ನಾನು ಫಿಲ್ಮ್ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೇನೆ.

ಇದನ್ನೂ ಓದಿ: Shishir Shastry Birthday: ಗ್ರ್ಯಾಂಡ್‌ ಆಗಿ ಹುಟ್ಟುಹಬ್ಬ ಆಚರಿಸಿಕೊಂಡ 'Bigg Boss' ಶಿಶಿರ್‌ ಶಾಸ್ತ್ರಿ; ಇಲ್ಲಿವೆ ನೋಡಿ ಫೋಟೋಗಳು

ಸೆಪ್ಟೆಂಬರ್ 25 ರವರೆಗೆ ಗಣೇಶ ವಿಸರ್ಜನೆ ಆಗಿರುವುದರಿಂದ ತಡೆದುಕೊಳ್ಳುವಂತೆ ಅವರು ನಮ್ಮನ್ನು ಕೇಳಿಕೊಂಡಿದ್ದಾರೆ. ಆದರೆ ಗಣೇಶ ವಿಸರ್ಜನೆ ಆದರೂ ಜೋರಾಗಿ ಸಂಗೀತ ಹಾಕಲಾಗುತ್ತಿದೆ ನಮ್ಮ ಸಮಾಜದಲ್ಲಿ ಅನೇಕ ಹಿರಿಯರು, ಮಕ್ಕಳು ಮತ್ತು ಕೆಲಸ ಮಾಡುವ ಜನರು ಇದರಿಂದ ತೊಂದರೆಗೊಳಗಾಗಿದ್ದಾರೆ ಮತ್ತು ಹಿಂದೆ ಅನೇಕ ದೂರುಗಳನ್ನು ನೀಡಿದ್ದಾರೆ. ಆದರೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ದಯವಿಟ್ಟು ಇದನ್ನು ಪರಿಶೀಲಿಸಲು ವಿನಂತಿಸುತ್ತೇನೆ. ಧನ್ಯವಾದಗಳು”ಎಂದು ಬರೆದುಕೊಂಡಿದ್ದಾರೆ.



ಈ ಕುರಿತು ಸ್ಥಳೀಯ ಫಿಲ್ಮ್ ನಗರ ಪೊಲೀಸ್ ಠಾಣೆಗೆ ಈಗಾಗಲೇ ದೂರು ನೀಡಲಾಗಿತ್ತು ಎಂದು ಶಿರಿಷ್ ತಿಳಿಸಿದ್ದಾರೆ. ಗಣೇಶ ಚತುರ್ಥಿ ಆಚರಣೆಯ ಭಾಗವಾಗಿ ಗಣೇಶ ವಿಸರ್ಜನೆ (ಸೆಪ್ಟೆಂಬರ್ 25) ಮುಗಿಯುವವರೆಗೆ ತಾಳ್ಮೆಯಿಂದ ಇರುವಂತೆ ಪೊಲೀಸರು ಕೋರಿದ್ದರು.

ಇದನ್ನೂ ಓದಿ: Bigg Boss Kannada 13: 'ಇನ್ಮೇಲೆ ಖಂಡಿತ ಬಿಗ್ ಬಾಸ್ ನೋಡಲ್ಲ'; ಅವಿನಾಶ್ ನೇರ ಹೇಳಿಕೆ

ಅಲ್ಲು ಶಿರಿಷ್ ಅವರ ಪೋಸ್ಟ್‌ಗೆ ಹೈದರಾಬಾದ್ ನಗರ ಪೊಲೀಸ್ ಇಲಾಖೆ ತಕ್ಷಣ ಸ್ಪಂದಿಸಿದ್ದು, ‘ಈ ವಿಷಯವನ್ನು ಸೂಕ್ತ ಕ್ರಮಕ್ಕಾಗಿ ಫಿಲ್ಮ್ ನಗರ ಪೊಲೀಸ್ ಠಾಣಾಧಿಕಾರಿಗೆ ರವಾನಿಸಲಾಗಿದೆ’ ಎಂದು ಟ್ವೀಟ್ ಮಾಡಿದೆ. ಪೊಲೀಸರ ಶೀಘ್ರ ಪ್ರತಿಕ್ರಿಯೆಗೆ ಶಿರಿಷ್ ಧನ್ಯವಾದ ತಿಳಿಸಿದ್ದಾರೆ.