Bigg Boss Kannada 13: 'ಇನ್ಮೇಲೆ ಖಂಡಿತ ಬಿಗ್ ಬಾಸ್ ನೋಡಲ್ಲ'; ಅವಿನಾಶ್ ನೇರ ಹೇಳಿಕೆ
Bigg Boss Kannada 13: ‘ಬಿಗ್ ಬಾಸ್ ಕನ್ನಡ ಸೀಸನ್ 13’ ಶೋನಿಂದ ಹೊರಬಂದಿರುವ ನಟ ಅವಿನಾಶ್ (Avinash) ಅವರು ಮಾಧ್ಯಮದ ಜೊತೆ ಮಾತನಾಡಿದ್ದಾರೆ. ತಮ್ಮ ಮೂರು ವಾರಗಳ ಜರ್ನಿಯನ್ನು ಅವರು ಮೆಲುಕು ಹಾಕಿದ್ದಾರೆ. ನಾನು ಇನ್ಮೇಲೆ ಖಂಡಿತ ಬಿಗ್ ಬಾಸ್ ಶೋ ನೋಡಲ್ಲ. ನಾನು ಆಡಿಯನ್ಸ್ ಆಗಿ ಇವತ್ತಿನ ತನಕ ಟಿವಿ ಆನ್ ಮಾಡಿಲ್ಲ. ನನಗೆ ಟಿವಿ ನೋಡುವ ಅಭ್ಯಾಸವೇ ಇಲ್ಲ. ಈ ಶೋ ಅಂತ ಮಾತ್ರವಲ್ಲ, ನಾನು ಈ ಹಿಂದೆ ಧಾರಾವಾಹಿಗಳಲ್ಲಿ ನಟಿಸುವಾಗಲೂ ಸೀರಿಯಲ್ ನೋಡುತ್ತಿರಲಿಲ್ಲ. ನಾನೇ ನಟಿಸಿರುವ ಸಿನಿಮಾಗಳನ್ನು ಒಂದೆರಡು ಸಲ ನೋಡಿದರೆ ಹೆಚ್ಚು ಎಂದರು.
ಬಿಗ್ ಬಾಸ್ ಕನ್ನಡ -
‘ಬಿಗ್ ಬಾಸ್ ಕನ್ನಡ ಸೀಸನ್ 13’ (Bigg Boss Kannada 13) ಶೋನಿಂದ ಹೊರಬಂದಿರುವ ನಟ ಅವಿನಾಶ್ (Avinash) ಅವರು ಮಾಧ್ಯಮದ ಜೊತೆ ಮಾತನಾಡಿದ್ದಾರೆ. ತಮ್ಮ ಮೂರು ವಾರಗಳ ಜರ್ನಿಯನ್ನು ಅವರು ಮೆಲುಕು ಹಾಕಿದ್ದಾರೆ. ನಾನು ಇನ್ಮೇಲೆ ಖಂಡಿತ ಬಿಗ್ ಬಾಸ್ ಶೋ (Bigg Boss show) ನೋಡಲ್ಲ. ನಾನು ಆಡಿಯನ್ಸ್ ಆಗಿ ಇವತ್ತಿನ ತನಕ ಟಿವಿ ಆನ್ ಮಾಡಿಲ್ಲ. ನನಗೆ ಟಿವಿ ನೋಡುವ ಅಭ್ಯಾಸವೇ ಇಲ್ಲ. ಈ ಶೋ ಅಂತ ಮಾತ್ರವಲ್ಲ, ನಾನು ಈ ಹಿಂದೆ ಧಾರಾವಾಹಿಗಳಲ್ಲಿ ನಟಿಸುವಾಗಲೂ ಸೀರಿಯಲ್ ನೋಡುತ್ತಿರಲಿಲ್ಲ. ನಾನೇ ನಟಿಸಿರುವ ಸಿನಿಮಾಗಳನ್ನು ಒಂದೆರಡು ಸಲ ನೋಡಿದರೆ ಹೆಚ್ಚು ಎಂದರು.
‘ನಾನು ರಿಹರ್ಸಲ್ ಮಾಡಿಕೊಂಡು ಬಿಗ್ ಬಾಸ್ ಶೋಗೆ ಹೋಗಿಲ್ಲ. ರಿಹರ್ಸಲ್ ಮಾಡುವುದು ನಾಟಕಕ್ಕೆ. ರಿಯಲ್ ಆಗಿ ಇರೋಕೆ ಅಲ್ಲ. ನನ್ನ ಸ್ವಭಾವವನ್ನು ಬದಲಾಯಿಸೋಕೆ ಆಗಲ್ಲ. ಅಲ್ಲಿ ಸ್ಪರ್ಧಿಗಳು ನಿಯಮ ಪಾಲಿಸಲ್ಲ. ತೀರಾ ಅಸಹ್ಯವಾಗಿ ಮಾತನಾಡುತ್ತಾರೆ. ಯಾರಿಗೂ ಗೌರವ ಕೊಡಲ್ಲ. ಕದ್ದು ತಿನ್ನುತ್ತಾರೆ. ಅಂಥವರ ಮಧ್ಯೆ ಜೀವನ ಹೇಗೆ ಮಾಡೋದು? ಅಲ್ಲಿ ಇರುವ ಯಾರನ್ನೂ ನಾನು ಪರಿಗಣಿಸಿಲ್ಲ. ಯಾರೂ ನನಗೆ ಇಷ್ಟ ಆಗಿಲ್ಲ. ನನಗೆ ಬಿಗ್ ಬಾಸ್ ವೇದಿಕೆ ಬಗ್ಗೆ ಗೌರವ ಇದೆ ಎಂದರು.
ಇದನ್ನೂ ಓದಿ: Bigg Boss Kannada 13: ಬಿಗ್ ಬಾಸ್ ಆಟ ಅವಿನಾಶ್‌ಗೆ ಅರ್ಥ ಆಗಿಲ್ಲ! ಪತ್ನಿ ಪ್ರಿಯಾ ಕಣ್ಣೀರು
ನಮಗೆ ಇಷ್ಟವಾಗುವಂತಹ ಕನೆಕ್ಟ್ ಆಗುವಂತಹ ಯಾವುದಾದರೂ ಅದ್ಭುತ ವ್ಯಕ್ತಿತ್ವವಿದ್ದರೆ ಮಾತ್ರ ನೋಡುತ್ತೇನೆ. ಇಲ್ಲದಿದ್ದರೆ ಖಂಡಿತ ನೋಡಲ್ಲ ಎಂದು ಖಡಕ್ ಆಗಿ ಪ್ರತಿಕ್ರಿಯಿಸಿದ್ದಾರೆ.
ರಂಗಭೂಮಿ ಕಲಾವಿದ ಅವಿನಾಶ್ ಶಟಮರ್ಷಣ ಅವರಿಗೆ ಬಿಗ್ ಬಾಸ್ ಮನೆಯ ವಾತಾವರಣಕ್ಕೆ ಹೊಂದಿಕೊಳ್ಳಲು ಸಾಧ್ಯವಾಗಲಿಲ್ಲ. ವೇದಿಕೆಯಲ್ಲಿ ಅವರ ಜರ್ನಿ ವಿಡಿಯೋ ವೀಕ್ಷಿಸಿದ ಸುದೀಪ್, "ನಿಮ್ಮ ವ್ಯಕ್ತಿತ್ವ ಈ ರೀತಿಯ ಶೋಗೆ ಹೊಂದಾಣಿಕೆ ಆಗಲ್ಲ" ಎಂದಾಗ, ಸ್ವತಃ ಅವಿನಾಶ್ ಕೂಡ ಅದನ್ನು ಒಪ್ಪಿಕೊಂಡರು.
ಇದನ್ನೂ ಓದಿ: Bigg Boss Kannada 13: ದೊಡ್ಮನೆಗೆ ಎಂಟ್ರಿ ಕೊಟ್ಟ ಈ ಮೂವರು ವೈಲ್ಡ್ ಕಾರ್ಡ್ ಸ್ಪರ್ಧಿಗಳ ಜಾತಕ ಇಲ್ಲಿದೆ ನೋಡಿ!
ಈ ವೇಳೆ ವೇದಿಕೆಯಲ್ಲಿದ್ದ ಅವರ ಪತ್ನಿ, 'ಭೀಮ' ಖ್ಯಾತಿಯ ನಟಿ ಪ್ರಿಯಾ ಶಟಮರ್ಷಣ ಭಾವುಕರಾಗಿ, ಸಂತ ಶಿಶುನಾಳ ಶರೀಫರ "ತರವಲ್ಲ ತಗಿ ನಿನ್ನ ತಂಬೂರಿ" ತತ್ವಪದದ ಸಾಲುಗಳನ್ನು ಹಾಡಿದರು, ಬಿಗ್ ಬಾಸ್ ಆಟದ ಮರ್ಮ ತಮ್ಮ ಪತಿಗೆ ಅರ್ಥವಾಗಲಿಲ್ಲ ಎಂದು ಅವರು ಹೇಳಿದರು.