Amruthadhaare Serial: 'ಅಪ್ಪು'ಗೆ ಅಪ್ಪನ ಗುಟ್ಟು ಗೊತ್ತಾಯ್ತು! ಮನೆಯಿಂದ ಓಡಿ ಹೋಗ್ತಾಳಾ ಮಿಂಚು?
ಅಮೃತಧಾರೆಯಲ್ಲಿ (Amruthadhaare Serial) ಸದ್ಯ ಅಪ್ಪ ಮಗ ಒಂದಾಗೋ ಸಮಯ ಬಂದಾಗಿದೆ. ಮನೆಯ ಕಪಾಟಿನ ಮೇಲಿರುವ ಸೂಟ್‌ಕೇಸ್ ತೆಗೆಯುವಾಗ, ಅಪ್ಪುಗೆ ಫೋಟೋ (Photo) ಸಿಕ್ಕಿದೆ. ಇಷ್ಟು ದಿನ ತನ್ನ ಜೊತೆ ಸಲುಗೆಯಿಂದ ಇದ್ದ ಗೌತಮ್ ಯಾರೆಂಬುದು ಅಂತೂ ಅಪ್ಪುಗೆ ಗೊತ್ತಾಗಿದೆ. ಮಿಂಚುಗೆ (Minchu) ಮಾತ್ರ ಶಾಕ್ ಆಗಿದೆ. ಹಲವು ವರ್ಷಗಳ ಕಾಲ ದೂರವಿದ್ದ ಜೋಡಿ, ಈಗ ಒಂದಾಗೋ ಸಮಯ ಬಂದಾಗಿದೆ. ಗೌತಮ್ ಮತ್ತು ಆಕಾಶ್ (akash) ಖುಷಿ ಖುಷಿಯಾಗಿ ಕಾಲ ಕಳೆಯುತ್ತಿರುವ ಫೋಟೊಗಳನ್ನು ನೋಡಿ ಮಿಂಚುಗೆ ತುಂಬಾ ನೋವಾಗಿದೆ.
ಅಮೃತಧಾರೆ ಧಾರಾವಾಹಿ -
ಜೀ ಕನ್ನಡ ವಾಹಿನಿಯಲ್ಲಿ (Zee Kannada) ಪ್ರಸಾರ ಕಾಣುತ್ತಿರುವ ಅಮೃತಧಾರೆ (amruthadhaare Serial) ಟ್ವಿಸ್ಟ್ ಪಡೆದು ಸಾಗುತ್ತಿದೆ. ಅಂತೂ ಅಪ್ಪುಗೆ, ಅಪ್ಪ ಯಾರೆಂಬುದು ಗೊತ್ತಾಗಿದೆ. ಮಿಂಚುಗೆ (Minchu) ಮಾತ್ರ ಶಾಕ್ ಆಗಿದೆ. ಹಲವು ವರ್ಷಗಳ ಕಾಲ ದೂರವಿದ್ದ ಜೋಡಿ, ಈಗ ಒಂದಾಗೋ ಸಮಯ ಬಂದಾಗಿದೆ. ಗೌತಮ್ (Gowtham) ಆರೋಗ್ಯ ತಪ್ಪಿದಾಗ, ಭೂಮಿ (Bhoomika) ಆರೈಕೆ ಮಾಡಿದ್ದಾಳೆ. ಆದರೆ ವಠಾರ ಜನ ಈ ಬಗ್ಗೆ ಕೆಟ್ಟದ್ದಾಗಿ ಮಾತನಾಡಿದಾಗ, ಕ್ಲಾಸ್ ಕೂಡ ತೆಗೆದುಕೊಂಡಿದ್ದಾಳೆ ಭೂಮಿಕಾ.
ಅಪ್ಪ ಮಗ ಒಂದಾಗೋ ಸಮಯ
ಅಮೃತಧಾರೆಯಲ್ಲಿ ಸದ್ಯ ಅಪ್ಪ ಮಗ ಒಂದಾಗೋ ಸಮಯ ಬಂದಾಗಿದೆ. ಮನೆಯ ಕಪಾಟಿನ ಮೇಲಿರುವ ಸೂಟ್‌ಕೇಸ್ ತೆಗೆಯುವಾಗ, ಅಪ್ಪುಗೆ ಫೋಟೋ ಸಿಕ್ಕಿದೆ. ಇಷ್ಟು ದಿನ ತನ್ನ ಜೊತೆ ಸಲುಗೆಯಿಂದ ಇದ್ದ ಗೌತಮ್ ಯಾರೆಂಬುದು ಅಂತೂ ಅಪ್ಪುಗೆ ಗೊತ್ತಾಗಿದೆ.
ಖುಷಿಯಿಂದ ಓಡಿ ಹೋಗಿರುವ ಆಕಾಶ್, ಗೌತಮ್‌ನನ್ನು ಕಂಡು ಅಪ್ಪಿಕೊಂಡಿದ್ದಾನೆ. ಅಪ್ಪ ಎಂದು ಕರೆದಿದ್ದಾನೆ. ಭೂಮಿಕಾಗೆ ಅಪ್ಪ ಮಗನನ್ನು ಕಂಡು ಖುಷಿಯಾಗಿದೆ. ಇದೇ ಸಮಯದಲ್ಲಿ ಮಿಂಚುಗೆ ಕೂಡ ಮನೆಯಲ್ಲಿ ಆಲ್ಬಂ ಸಿಕ್ಕಿದ್ದು ತನಗೆ ಸಿಕ್ಕ ಆಲ್ಬಂನಲ್ಲಿ ಗೌತಮ್ ಮತ್ತು ಆಕಾಶ್ ಜೊತೆಯಲ್ಲಿರುವ ಫೋಟೊಗಳನ್ನು ಕಂಡು ಮಿಂಚು ಆಶ್ಚರ್ಯಗೊಂಡಿದ್ದಾಳೆ. ಆಘಾತಗೊಂಡಿದ್ದಾಳೆ.
ಇದನ್ನೂ ಓದಿ: Bigg Boss Kannada 12: ಕಿಚ್ಚ ಚರ್ಚಿಸಬೇಕಾದ ಈ ವಾರದ ಸಮಾಚಾರಗಳಿವು!
ಗೌತಮ್ ಮತ್ತು ಆಕಾಶ್ ಖುಷಿ ಖುಷಿಯಾಗಿ ಕಾಲ ಕಳೆಯುತ್ತಿರುವ ಫೋಟೊಗಳನ್ನು ನೋಡಿ ಮಿಂಚುಗೆ ತುಂಬಾ ನೋವಾಗಿದೆ.
ಮನೆಯಿಂದ ಓಡಿ ಹೋಗ್ತಾಳಾ ಮಿಂಚು?
ಪ್ರೋಮೋ ಕಂಡ ವೀಕ್ಷಕರು ಇದೀಗ ಮಿಂಚು, ಗೌತಮ್‌ನಿಂದ ದೂರ ಆಗಬಹುದು ಎಂದು ಕಮೆಂಟ್ ಮಾಡ್ತಿದ್ದಾರೆ. ಒಂದು ವೇಳೆ ತನಗಿಂತ ಮಗನಿಗೆ ತುಂಬಾ ಪ್ರೀತಿ ಮಾಡಬಹುದು ಎಂದು ಅಂದುಕೊಂಡು ಗೌತಮ್ ನಿಂದ ಮಿಂಚು ದೂರ ಆಗಬಹುದು ಎಂದು ಕಮೆಂಟ್ ಮಾಡ್ತಿದ್ದಾರೆ, ಮತ್ತೊಬ್ಬರು ಒಂದು ಕ್ಷಣ ಕಣ್ಣಂಚಲ್ಲಿ ನೀರು ತುಂಬಿತು ಎಂದು ಹೇಳಿದ್ಧಾರೆ.
ಇನ್ನೊಂದು ಕಡೆ, ಮಲ್ಲಿಯನ್ನು ಆಸ್ತಿಗೆ ಸಹಿ ಹಾಕಲು ಮನೆಗೆ ಕರೆದ ಜೈದೇವ್‌ಗೆ ಮಲ್ಲಿ ಡಿವೋರ್ಸ್ ಶಾಕ್ ನೀಡಿದ್ದಾಳೆ. ತನ್ನ ಗಂಡನ ಮುಂದೆ ನಿಂತು ಮಾತನಾಡೊದಕ್ಕೆನೇ ಹೆದರುತ್ತಿದ್ದ ಮಲ್ಲಿಯ ಧೈರ್ಯಕ್ಕೆ ಎಲ್ಲರೂ ಶಾಕ್ ಆಗಿದ್ದಾರೆ.
ಮನೆಯ ಹೊಸಿಲು ದಾಟಿದ್ದ ಭೂಮಿ
ಶಕುಂತಲಾನ ಎದುರಿಸಲಾಗದೇ ಸೋಲು ಒಪ್ಪಿಕೊಂಡು ಮನೆಯಿಂದ ಹೊರ ನಡೆದಿದ್ದಳು ಭೂಮಿಕಾ. ಇನ್ನೊಂದು ಮಗುವನ್ನು ನಿನ್ನ ಕಣ್ಮುಂದೆಯೇ ಸಾಯಿಸಬೇಕೆಂದುಕೊಂಡಿದ್ದೇನೆ, ನಿನಗೆ ಈ ಮಗು ಮೇಲೆ ಆಸೆ ಇದ್ದರೆ ಮನೆ ಬಿಟ್ಟು ತೊಲಗು ಎಂದು ಶಕುಂತಲಾ ಹೇಳಿದ್ದು, ಭೂಮಿಕಾ ಕಣ್ಣೀರು ಹಾಕುತ್ತಾ ಮನೆಯ ಹೊಸಿಲು ದಾಟಿದ್ದಳು. ಆದರೀಗ ಮತ್ತೆ ಜೋಡಿ ಒಂದಾಗೋ ಸಮಯ ಬಂದಿದೆ.
ಇದನ್ನೂ ಓದಿ: Bigg Boss Kannada 12: ಕಿಚ್ಚನ ಕೋಪ ನೆತ್ತಿಗೆ ಏರಿಸಿದ್ರಾ ರಕ್ಷಿತಾ? ಗಿಲ್ಲಿ ಸೀಕ್ರೆಟ್ ಮ್ಯಾಚ್ ಬಗ್ಗೆ ಸುದೀಪ್ ಕೆಂಡ!
ಅಮೃತಧಾರೆ’ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ಪ್ರಸಾರ ಕಾಣುತ್ತಿದೆ.