ಕೆಲವು ಖಾವಿಧಾರಿಗಳು ಸಮಾಜದ ದಾರಿ ತಪ್ಪಿಸುತ್ತಿದ್ದಾರೆ: ವಿಜಯಾನಂದ್ ಎಸ್.ಕಾಶಪ್ಪನವರ್
ರಾಜಕೀಯ ಹಿನ್ನಲೆ ಇರುವ ಕುಟುಂಬ ನಮ್ಮದು. ನಮ್ಮ ತಂದೆಯವರು ಕೃಷಿ ಸಹಕಾರ ಪತ್ತಿನ ಸಹಕಾರ ಸಂಘ ಮತ್ತು 1979ರಲ್ಲಿ ತಾಲೂಕ ಬೋರ್ಡ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಜನರ ಮತ್ತು ರೈತರ ನಡುವೆ ಗುರುತಿಸಿಕೊಂಡು ವೇಗವಾಗಿ ರಾಜಕೀಯದಲ್ಲಿ ಬೆಳವಣಿಗೆ ಪ್ರಾರಂಭ ವಾಯಿತು.
-
ಬೆಂಗಳೂರು: ಪ್ರೆಸ್ ಕ್ಲಬ್ ಸಭಾಂಗಣದಲ್ಲಿ ಕರ್ನಾಟಕ ವೀರಶೈವ -ಲಿಂಗಾಯಿತ ಅಭಿವೃದ್ಧಿ ನಿಗಮ ನಿಯಮಿತ ಅಧ್ಯಕ್ಷರು, ಶಾಸಕರಾದ ವಿಜಯಾನಂದ ಎಸ್.ಕಾಶಪ್ಪ ನವರ್ ರವರ ಜೊತೆ ಯಲ್ಲಿ ಮಾಧ್ಯಮ ಸಂವಾದ. ಪ್ರೆಸ್ ಕ್ಲಬ್ ಅಧ್ಯಕ್ಷರಾದ ಆರ್.ಶ್ರೀಧರ್, ಪ್ರಧಾನ ಕಾರ್ಯ ದರ್ಶಿ ಶಿವಕುಮಾರ್ ಬೆಳ್ಳಿತಟ್ಟೆ, ಕಾರ್ಯದರ್ಶಿ ಮಂಜುನಾಥ್, ಖಜಾಂಚಿ ಶರಣಬಸಪ್ಪ, ಹಿರಿಯ ಪತ್ರಕರ್ತರಾದ ಯಾಸಿರ್, ವೀರಶೈವ-ಲಿಂಗಾಯಿತ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಹಡಗಲಿ ಅರುಣ್ ಕುಮಾರ್ ಉಪಸ್ಥಿತರಿದ್ದರು.
ವಿಜಯಾನಂದ್ ಎಸ್.ಕಾಶಪ್ಪನವರ್ ಮಾತನಾಡಿ, ರಾಜಕೀಯ ಹಿನ್ನಲೆ ಇರುವ ಕುಟುಂಬ ನಮ್ಮದು. ನಮ್ಮ ತಂದೆಯವರು ಕೃಷಿ ಸಹಕಾರ ಪತ್ತಿನ ಸಹಕಾರ ಸಂಘ ಮತ್ತು 1979ರಲ್ಲಿ ತಾಲೂಕ ಬೋರ್ಡ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಜನರ ಮತ್ತು ರೈತರ ನಡುವೆ ಗುರುತಿಸಿಕೊಂಡು ವೇಗವಾಗಿ ರಾಜಕೀಯದಲ್ಲಿ ಬೆಳವಣಿಗೆ ಪ್ರಾರಂಭವಾಯಿತು.
ಮೂರು ಬಾರಿ ಶಾಸಕರಾಗಿ ನನ್ನ ತಂದೆಯವರು, ಮುಖ್ಯಮಂತ್ರಿ ಎಸ್.ಎಂ.ಕೃಷ್ಣರವರ ಸಚಿವ ಸಂಪುಟದಲ್ಲಿ ಮಂತ್ರಿಯಾಗಿ ಸೇವೆ ಸಲ್ಲಿಸಿದರು.
ಇದನ್ನೂ ಓದಿ: Bangalore News: ಪ್ರಾಧಿಕಾರದ ಸಮಗ್ರ ಅಭಿವೃದ್ದಿಗೆ ಸರ್ಕಾರದಿಂದ ಅಗತ್ಯ ಸಹಕಾರ: ಸಚಿವ ಎನ್ ಎಸ್ ಭೋಸರಾಜು ಭರವಸೆ
ನಾನು ಎಂ.ಎಸ್.ರಾಮಯ್ಯದಲ್ಲಿ ವೈದ್ಯಕೀಯ ವ್ಯಾಸಂಗ ಮುಗಿಸಿದೆ.1992ರಲ್ಲಿ ಮಾಜಿ ಮುಖ್ಯಮಂತ್ರಿ ಬಂಗಾರಪ್ಪರವರ ರಾಜಕೀಯ ಒಡನಾಟ ಸಿಕ್ಕಿತು.
ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಯುವ ಕಾಂಗ್ರೆಸ್ ಉಪಾಧ್ಯಕ್ಷ ಸ್ಥಾನದಲ್ಲಿ ಸೇವೆ ಸಲ್ಲಿಸಿದ್ದೇನೆ.2003ರಲ್ಲಿ ರಸ್ತೆ ಅಪಘಾತದಲ್ಲಿ ನಮ್ಮ ತಂದೆಯವರು ಮೃತಪಟ್ಟರು, ತದನಂತರ ಉಪ ಚುನಾವಣೆಯಲ್ಲಿ ನಮ್ಮ ತಾಯಿಯವರು ಶಾಸಕರಾಗಿ ಆಯ್ಕೆಯಾ ಗುತ್ತಾರೆ.
ರಾಜಕೀಯ ಜೀವನದಲ್ಲಿ ಹೇಗೆ ಇರಬೇಕು ಎಂಬ ಮಾರ್ಗದರ್ಶನವನ್ನು ಅಂದಿನ ಮುಖ್ಯ ಮಂತ್ರಿ ಧರ್ಮಸಿಂಗ್ ರವರು ನೀಡಿದರು.ರಾಜಕೀಯದಲ್ಲಿ ಸೋಲು-ಗೆಲುವು ಕಂಡಿದ್ದೇನೆ. ರೈತ ಮತ್ತು ನೇಕಾರ ಎರಡು ಕಣ್ಣುಗಳು ಇದ್ದಂತೆ.
ಹುನಗುಂದ ಮತಕ್ಷೇತ್ರಕ್ಕೆ ಹನಿ ನೀರಾವರಿ, ವಿವಿಧ ಅಭಿವೃದ್ದಿ ಕ್ಷೇತ್ರದ ಅಭಿವೃದ್ದಿ ಸಾವಿರಾರು ಕೋಟಿ ಅನುದಾನ ನೀಡಲಾಗಿದೆ. ಕೊಡಲ ಸಂಗಮ ಬಸವಣ್ಣನವರ ಕ್ಷೇತ್ರ ಅಭಿವೃದ್ದಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರು ನೂರಾರು ಕೋಟಿ ಅನುದಾನ ನೀಡಿದ್ದಾರೆ.
ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರು, ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವ ಕುಮಾರ್ ರವರ ನೇತೃತ್ವದಲ್ಲಿ 5 ಗ್ಯಾರೆಂಟಿ ಯೋಜನೆಗಳನ್ನು ಪ್ರತಿ ಹಳ್ಳಿಗಳಿಗೆ ತಲುಪಿಸ ಲಾಗಿದೆ. ವೀರಶೈವ ಲಿಂಗಾಯಿತ ಅಭಿವೃದ್ಧಿ ನಿಗಮ ನಿಯಮಿತ ಯಡಿಯೂರಪ್ಪರವರು ಮುಖ್ಯಮಂತ್ರಿರವರು ಪ್ರಾರಂಭವಾಗಿ 100ಕೋಟಿ ಅನುದಾನ ನೀಡಿದರು.
ಗುರುಗಳ ದೇವರಲ್ಲ ಅವರು ನಮ್ಮಂತೆ ಮನುಷ್ಯರು ಕೆಲವು ಖಾವಿಧಾರಿಗಳು ಜನರನ್ನು ದಾರಿ ತಪ್ಪಿಸುತ್ತಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯರವರ ಬಳಿ ಮನವಿ ಮಾಡಿ 300 ಕೋಟಿ ನೀಡಿದ್ದಾರೆ ಸಮರ್ಪಕವಾಗಿ ಯೋಜನೆಗಳಿಗೆ ಸಮರ್ಪಕವಾಗಿ ಬಳಕೆ ಮಾಡಲಾಗಿದೆ. ಬಸವ ಬೆಳಕು ವಿದ್ಯಾರ್ಥಿಗಳಿಗೆ ಸಾಲಸೌಲಭ್ಯ ಯೋಜನೆ ವಿದೇಶದಲ್ಲಿ ವಿದ್ಯಾಭ್ಯಾಸ ಮಾಡುವವರಿಗೆ ವಿದೇಶ ವಿದ್ಯಾವಿಕಾಸ, ರೈತರಿಗೆ ಜಮೀನಿಗೆ ನೀರಾವರಿ ಸೌಲಭ್ಯಕ್ಕೆ ಆರ್ಥಿಕ ನೆರವು ನೀಡಲು ಜೀವಜಲ ಯೋಜನೆ ಮತ್ತು ಕಾಯಕ ಕಿರಣ, ವಿಭೂತಿ ನಿರ್ಮಾಣ ಘಟಕ, ಭೋಜನಾ ಲಯ, ಸ್ವಾವಲಂಭ ಸಾರಥಿ, ಸ್ವಯಂ ಉದ್ಯೋಗ ಸಾಲ ಯೋಜನೆ, ಸ್ವಾತಂತ್ರ್ಯ ಅಮೃತ್ ಮಹೋತ್ಸವ ಮುನ್ನಡೆ, ಸ್ವ ಸಹಾಯ ಸಂಘಗಳಿಗ (ಸಾಲ ಮತ್ತು ಸಹಾಯಧನ) ಆಹಾರ ವಾಹಿನಿ ಯೋಜನೆಗಳು ಅನುಷ್ಠಾನಕ್ಕೆ ತರಲಾಗಿದೆ.
ಭ್ರಷ್ಟಚಾರಕ್ಕೆ ಕಡಿವಾಣ ಹಾಕಲಾಗಿದೆ ಶಾಸಕರ ಶಿಫಾರಸ್ಸಿನ ಮೇಲೆ ಅರ್ಹ ಫಲಾನುಭವಿ ಗಳಿನ್ನು ಗುರುತಿಸ ಲಾಗುತ್ತದೆ. ಈ ಎಲ್ಲ ಯೋಜನೆಗಳು ವೀರಶೈವ ಲಿಂಗಾಯಿತ ಸಮುದಾಯದ ಅಭಿವೃದ್ಧಿಗೆ ಸಹಕಾರಿಯಾಗಿದೆ. ಎಂದು ಹೇಳಿದರು.