ಬಿಗ್​ಬಾಸ್ ಬಿಹಾರ ರಿಸಲ್ಟ್​ ಫೋಟೋ ಗ್ಯಾಲರಿ ಫ್ಯಾಷನ್​ ವಿಶ್ವವಾಣಿ ಪ್ರಾಪರ್ಟಿ ವಿದೇಶ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bigg Boss 12: ʻಸುಮ್‌ ಸುಮ್ನೆ ಜಗಳ ಮಾಡೋಣ, ಮಾತು ಬಿಡೋಣʼ; ಜಾಹ್ನವಿ - ಅಶ್ವಿನಿ ಗೌಡಗೆ ಕಿಚ್ಚನ ಕ್ಲಾಸ್!‌

Bigg Boss Kannada 12: ‌ಬಿಗ್‌ ಬಾಸ್‌ ಮನೆಯ ಈ ವಾರದ ಪಂಚಾಯಿತಿಯಲ್ಲಿ ಕಿಚ್ಚ ಸುದೀಪ್ ಸಿಕ್ಕಾಪಟ್ಟೆ ಗರಂ ಆಗಿದ್ದಾರೆ. ಜಾಹ್ನವಿ ಮತ್ತು ಅಶ್ವಿನಿ ಗೌಡ 'ಸುಮ್ ಸುಮ್ನೆ ಜಗಳ ಮಾಡೋಣ' ಎಂದು ಮೈಕ್ ತೆಗೆದಿಟ್ಟು ಪ್ಲಾನ್ ಮಾಡಿರುವುದು ಬಯಲಾಗಿದೆ. ಇವರಿಗೆ ಕಿಚ್ಚ ಸುದೀಪ್‌ ಅವರು ಖಡಕ್ ಆಗಿ ಕ್ಲಾಸ್ ತೆಗೆದುಕೊಂಡಿದ್ದಾರೆ.

ಮೈಕ್‌ ಕೆಳಗಿಟ್ಟು ಪ್ಲ್ಯಾನ್‌ ಮಾಡಿದ ಜಾಹ್ನವಿ-ಅಶ್ವಿನಿಗೆ ಕಿಚ್ಚನ ಕ್ಲಾಸ್‌

-

Avinash GR
Avinash GR Nov 15, 2025 7:19 PM

ಬಿಗ್‌ ಬಾಸ್‌ ಮನೆಯಲ್ಲಿ ಈ ವಾರದ ಪಂಚಾಯಿತಿಯಲ್ಲಿ ಕಿಚ್ಚ ಸುದೀಪ್‌ ಅವರು ಸಿಕ್ಕಾಪಟ್ಟೆ ಗರಂ ಆಗಿದ್ದಾರೆ. ಒಂದಷ್ಟು ಸ್ಪರ್ಧಿಗಳು ಮಾಡಿರುವ ಮಿಸ್ಟೇಕ್‌ಗಳಿಗೆ ಕಿಚ್ಚ ಸುದೀಪ್‌ ತುಂಬಾ ಸಿಟ್ಟು ಮಾಡಿಕೊಂಡಿದ್ದಾರೆ. ಈ ಮಧ್ಯೆ ಜಾಹ್ನವಿ ಮತ್ತು ಅಶ್ವಿನಿ ಗೌಡ ಮಾಡಿರುವ ಒಂದು ಬಿಗ್‌ ಮಿಸ್ಟೇಕ್‌ ಕೂಡ ಹೊರಬಿದ್ದಿದೆ. ಅದರ ಬಗ್ಗೆ ಕಿಚ್ಚ ಕ್ಲಾಸ್‌ ತೆಗೆದುಕೊಂಡಿದ್ದಾರೆ.

ಜಗಳ ಮಾಡುವ ಡ್ರಾಮಾ ಮಾಡಿದ ಜೋಡಿ

"ನಾವಿಬ್ಬರೂ ದೂರ ಆಗಿರುವವರ ಥರ ನಾಟಕ ಮಾಡೋಣ, ಸುಮ್ ಸುಮ್ನೆ ಜಗಳ ಮಾಡಿಕೊಳ್ಳೋಣ" ಅಂತ ಅಶ್ವಿನಿ ಗೌಡಗೆ ಜಾಹ್ನವಿ ಹೇಳಿದ್ದರು. ಹೀಗೆ ಹೇಳುವಾಗ ಅವರಿಬ್ಬರು ಡ್ರೆಸ್ಸಿಂಗ್‌ ರೂಮ್‌ನಲ್ಲಿ ಮೈಕ್‌ ತೆಗೆದಿಟ್ಟು ಮಾತನಾಡಿದ್ದರು. ಅಸಲಿಗೆ ಬಿಗ್‌ ಬಾಸ್‌ ಮನೆಯಲ್ಲಿ ಮೈಕ್‌ ತೆಗೆದಿಟ್ಟು ಮಾತನಾಡುವಂತಿಲ್ಲ. ಮೈಕ್‌ ಧರಿಸಿದ್ದಾಗ ಗುಸು ಗುಸು ಪಿಸು ಪಿಸು ಮಾತುಗಳನ್ನು ಕೂಡ ಆಡಬಾರದು. ಹೀಗಿದ್ದರೂ, ಮೈಕ್‌ ತೆಗೆದಿಟ್ಟು, ಇಂಥದ್ದೊಂದು ದೊಡ್ಡ ಪ್ಲಾನ್‌ ಮಾಡಿದ್ದರು ಜಾಹ್ನವಿ ಮತ್ತು ಅಶ್ವಿನಿ ಗೌಡ.

ಇದನ್ನೂ ಓದಿ: BBK 12: ಬಿಗ್ ಬಾಸ್ ಕಾಲೇಜ್​ನಲ್ಲಿ ಅಶ್ವಿನಿ ಗೌಡ-ಜಾನ್ವಿಯಿಂದ ಪ್ರೀತಿಯ ವಿವರಣೆ

ವೀಕೆಂಡ್‌ ವೇದಿಕೆಯಲ್ಲಿ ಚರ್ಚೆಗೆ ಬಂತು ಈ ವಿಚಾರ

"ಜಾಹ್ನವಿ ಮತ್ತು ಅಶ್ವಿನಿ ಗೌಡ ಅವರೇ, ಜಗಳ ಆಡೋ ಥರ ನಾಟಕ ಮಾಡೋಣ ಅಂತ ಎಲ್ಲಿ ಮಾತಾನಾಡಿಕೊಂಡ್ರಿ" ಎಂದು ಕಿಚ್ಚ ಸುದೀಪ್‌ ಅವರು ಕೇಳಿದ್ದಾರೆ. ಇದಕ್ಕೆ ಉತ್ತರಿಸಿರುವ ಅಶ್ವಿನಿ ಗೌಡ, "ಡ್ರೆಸ್‌ ಚೇಂಜಿಂಗ್‌ ರೂಮ್‌ನಲ್ಲಿ ಮಾತನಾಡಿಕೊಂಡ್ವಿ" ಎಂದು ಹೇಳಿದ್ದಾರೆ. ಅದಕ್ಕೆ ಸುದೀಪ್‌, "ಚೇಂಜಿಂಗ್‌ ರೂಮ್‌ ಇರೋದು ಏನಕ್ಕೆ? ನಿಮಗೆ ನಂಬಿಕೆಯಿಂದ ಒಂದು ಜಾಗ ಕೊಟ್ಟಾಗ, ನೀವು ಅಲ್ಲಿ ಹೋಗಿ ಕೆಲವೊಂದು ಡಿಸ್ಕಷನ್‌ ಮಾಡ್ತಿರಿ, ಅದು ಓಕೆ ನಾ" ಎಂದು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: BBK 12: ಅಶ್ವಿನಿ ಗೌಡ-ಜಾನ್ವಿ ಮಧ್ಯೆ ಕಿತ್ತಾಟ: ಬೇರೆ-ಬೇರೆಯಾದ ಜೋಡೆತ್ತುಗಳು

ಜಾಹ್ನವಿಗೆ ಕಿಚ್ಚನ ಸಖತ್‌ ಕ್ಲಾಸ್!‌

ಜಾಹ್ನವಿ ಅವರು ಕಲರ್ಸ್‌ ಕನ್ನಡ ವಾಹಿನಿ ಬಗ್ಗೆ ಕಾಮೆಂಟ್‌ ಮಾಡಿದ್ದರು. "ನನಗೆ ಮೊದಲು ವೀಕ್‌ ಅಂತ ಕಾಣಿಸಿಕೊಂಡಿದ್ದೇ ಇಲ್ಲಿ ಸ್ಪಂದನಾ. ನನಗೆ ಒಂದು ಒಂದು ಪಾಯಿಂಟ್ ಹುಟ್ಟಿಕೊಂಡಿದೆ, ಅದೇನಪ್ಪ ಅಂದ್ರೆ, ಕಲರ್ಸ್‌ ಕನ್ನಡದವರೇ ಸ್ಪಂದನಾ ಅವರನ್ನ ಸೇವ್‌ ಮಾಡಿಬಿಡ್ತಾರೆ ಅಂತ" ಎಂದು ಜಾಹ್ನವಿ ಹೇಳಿದ್ದರು. ಅಲ್ಲದೆ, ರಾಶಿಕಾ ಜೊತೆ ಮಾತನಾಡುವಾಗ, "ನಿನ್ನ & ಸೂರಜ್‌ ಮಧ್ಯೆ ಒಂದು ಟ್ರ್ಯಾಕ್‌ ನಡೀತಿದೆ, ನಿಮ್ಮಿಬ್ಬರನ್ನು ತೆಗೆಯಲ್ಲ. ಆದರೆ ನಂಗೆ ಮದುವೆಯಾಗಿದೆ, ಮಗು ಕೂಡ ಇದೆ. ನಂದು ಅಂತ ಟ್ರ್ಯಾಕ್‌ ಏನಿಲ್ಲ, ಹಾಗಾಗಿ ನನ್ನನ್ನ ಕಳಿಸ್ತಾರೆ" ಎಂದು ಜಾಹ್ನವಿ ಅವರು ಹೇಳಿದ್ದರು.

ಇದೀಗ ಈ ವಿಚಾರವನ್ನು ವೀಕೆಂಡ್‌ ಪಂಚಾಯಿತಿಯಲ್ಲಿ ಕಿಚ್ಚ ಸುದೀಪ್‌ ಅವರು ತೆಗೆದುಕೊಂಡಿದ್ದಾರೆ. ಈ ಬಗ್ಗೆ ಸಿಕ್ಕಾಪಟ್ಟೆ ಗರಂ ಆಗಿ ರಿಯಾಕ್ಟ್‌ ಮಾಡಿದ್ದಾರೆ ಕಿಚ್ಚ ಸುದೀಪ್.‌ ಇದಕ್ಕೆ ಜಾಹ್ನವಿ ಏನು ಹೇಳುತ್ತಾರೆ? ಮೈಕ್‌ ತೆಗೆದಿಟ್ಟು ಮಾತನಾಡಿದ್ದಕ್ಕೆ ಏನು ಶಿಕ್ಷೆ ಸಿಗಲಿದೆ? ಇಂದಿನ (ನ.15) ಸಂಚಿಕೆಯಲ್ಲಿ ಹೆಚ್ಚಿನ ಮಾಹಿತಿ ಗೊತ್ತಾಗಲಿದೆ.