Amruthadhaare Serial: ಭೂಮಿ ಬೆಹುಗಾರಿಕೆ ಚುರುಕಾಗೋ ಹೊತ್ತು! ಹಸಿದ ತೋಳ ಹಳ್ಳಕ್ಕೆ ಬೀಳಲೇ ಬೇಕು!
Amruthdhaare: ಅಮೃತಧಾರೆ ಧಾರಾವಾಹಿಯಲ್ಲಿ , ದಿಯಾ ಮತ್ತು ಅನು ಎಂಬ ಯುವತಿಯರ ಕಣ್ಮರೆಗೆ ಕಾರಣನಾದ ಜೈದೇವ್‌ನನ್ನು ಹಿಡಿಯಲು ಭೂಮಿಕಾ ಮತ್ತು ಮಲ್ಲಿ ಸಂಚು ರೂಪಿಸಿದ್ದಾರೆ. ಜೈದೇವ್‌ನ ವೀಕ್ನೆಸ್ ಬಳಸಿ ಸತ್ಯ ಹೊರತರಲು ಹನಿಟ್ರ್ಯಾಪ್ ಮಾಡಲು ನಿರ್ಧರಿಸಿದ್ದಾರೆ. ಆದರೆ ಭೂಮಿಕಾ ಹಿಂದೆ ಶಕುಂತಲಾ ಕೂಡ ಬಿದ್ದಿದ್ದಾಳೆ. ಈ ಕೆಲಸಕ್ಕೆ ತೊಂದರೆ ಮಾಡ್ತಾಳಾ?
ಅಮೃತಧಾರೆ ಧಾರಾವಾಹಿ -
ಜೀ ಕನ್ನಡ ವಾಹಿನಿಯಲ್ಲಿ (Zee kannada)ಪ್ರಸಾರ ಕಾಣುತ್ತಿರುವ ಅಮೃತಧಾರೆ ಧಾರಾವಾಹಿಯಲ್ಲಿ (Amruthdhaare Serial), ದಿಯಾ ಮತ್ತು ಅನು ಎಂಬ ಯುವತಿಯರ ಕಣ್ಮರೆಗೆ ಕಾರಣನಾದ ಜೈದೇವ್‌ನನ್ನು ಹಿಡಿಯಲು ಭೂಮಿಕಾ (Bhoomika) ಮತ್ತು ಮಲ್ಲಿ ಸಂಚು ರೂಪಿಸಿದ್ದಾರೆ. ಜೈದೇವ್‌ನ ವೀಕ್ನೆಸ್ ಬಳಸಿ ಸತ್ಯ ಹೊರತರಲು ಹನಿಟ್ರ್ಯಾಪ್ ಮಾಡಲು ನಿರ್ಧರಿಸಿದ್ದಾರೆ. ಆದರೆ ಭೂಮಿಕಾ ಹಿಂದೆ ಶಕುಂತಲಾ (Shakuntala) ಕೂಡ ಬಿದ್ದಿದ್ದಾಳೆ. ಈ ಕೆಲಸಕ್ಕೆ ತೊಂದರೆ ಮಾಡ್ತಾಳಾ?
ಭೂಮಿ, ಮತ್ತೊಂದು ಪ್ಲ್ಯಾನ್
ಜೈದೇವ್ (Jaidev) ದಿಯಾಳನ್ನ ಕೊಲೆ ಮಾಡಿ, ಏನೂ ಗೊತ್ತಿಲ್ಲದಂತೆ ಇದ್ದ. ಆದರೆ ಈಗ ಹಾಗಲ್ಲ. ಜೀವಾ ಈ ಬಗ್ಗೆ ಮಲ್ಲಿ ಮುಂದೆ ಹೇಳಿದ್ದಾನೆ. ಮಲ್ಲಿ ಈ ಬಗ್ಗೆ ಭೂಮಿಕಾ ಮುಂದೆ ಹೇಳಿದ್ದಾಳೆ. ದಿಯಾಳ ವಿಷಯ ತಿಳಿದುಕೊಂಡು ಬರಲು ಲಕ್ಷ್ಮೀಕಾಂತ್‌ನನ್ನು ಜೈದೇವ್ ಮನೆಗೆ ಕಳುಹಿಸಿದ ಭುಮಿಕಾ ಪ್ಲಾನ್ ಫೇಲ್ ಆಗಿದೆ. ಆದರೆ ಇಲ್ಲಿಗೆ ಸುಮ್ಮನಾಗದ ಭೂಮಿ, ಮತ್ತೊಂದು ಪ್ಲ್ಯಾನ್ ಮಾಡ್ತಿದ್ದಾರೆ.
ಇದನ್ನೂ ಓದಿ: Kannada New Movie: ʻಪ್ರೇಮದ ಊರಲಿ' ಚಿತ್ರದ ಸಾಂಗ್ ಔಟ್; ಕಣ್ಮನ ಸೆಳೆದ ತಪಸ್ವಿನಿ ಪೂಣಚ್ಚ–ಶ್ರೀರಾಮ್ !
ಯುವತಿಯರ ಕಾಣೆಯ ಹಿಂದೆ ಇರುವ ಕೈವಾಡ
ದಿಯಾ ಮತ್ತು ಅನು ಎನ್ನುವ ಯುವತಿಯರ ಕಾಣೆಯ ಹಿಂದೆ ಇರುವ ಕೈವಾಡ ಯಾರದ್ದು ಎಂದು ನೋಡಲು ಇನ್ನೋರ್ವ ಹುಡುಗಿಯನ್ನು ಕಳುಹಿಸುವ ಪ್ಲ್ಯಾನ್ ಸಿದ್ಧವಾಗುತ್ತಿದೆ. ಯುವತಿ ಅನು ಎಂಬಾಕೆ ಕಾಣೆಯಾಗಿದ್ದಾಳೆ.
ಈ ಇಬ್ಬರ ಕಾಣೆಯ ಹಿಂದೆ ಜೈದೇವನ ಕೈವಾಡ ಇದೆ ಎನ್ನುವುದು ಭೂಮಿಕಾ ಮತ್ತು ಮಲ್ಲಿಗೆ ತಿಳಿದಿದೆ ಈಗ ಜೈದೇವನನ್ನು ಅವನ ವೀಕ್ನೆಸ್ ಬಳಸಿ ನಾವೇ ಒಬ್ಬಳನ್ನು ಕಳಿಸಿ ಟ್ರ್ಯಾಪ್ ಮಾಡಬೇಕು. ಅವಳಿಗೆ ಏನೂ ಹಾನಿಯಾಗದಂತೆ ನೋಡಬೇಕು. ಇದನ್ನು ಬಿಟ್ಟರೆ ಬೇರೆ ದಾರಿ ಇಲ್ಲ ಮಲ್ಲಿ ಹೇಳಿದ್ದಾಳೆ. ಜೀವಅ ಸಾಥ್ ಕೊಟ್ಟರೂ ಭೂಮಿ ಒಪ್ಪಿಲ್ಲ.
ಆದರೆ ಇಲ್ಲಿ ಮಲ್ಲಿಯೇ ಮುಂದೆ ಹೋಗ್ತಾಳಾ ಅನ್ನೋ ಕುತೂಕಲ ವೀಕ್ಷಕರಲ್ಲಿದೆ.ಇದಕ್ಕೂ ಮುಂಚೆಯೇ ಈ ನಡುವೆ, ಭೂಮಿಕಾ ಮತ್ತು ಮಲ್ಲಿಯ ಮುಂದಿನ ಯೋಜನೆಯನ್ನು ಶಕುಂತಲಾ ಕೇಳಿಸಿಕೊಂಡಿದ್ದು, ಜೈದೇವ್‌ನನ್ನು ಎಚ್ಚರಿಸುವ ಸಾಧ್ಯತೆ ಇದೆ. ಹೀಗಾಗಿ ಮುಂದೆ ಜೈದೇವ್ ಕೂಡ ಅಲರ್ಟ್ ಆಗಿರಬಹುದು.
ಗೌತಮ್ ಕುಟುಂಬವನ್ನು ಬೀದಿಗೆ ತರುವ ಉದ್ದೇಶದಿಂದ ಜೈದೇವ್ ಮತ್ತು ಶಕುಂತಲಾ ನಿರಂತರವಾಗಿ ಕುತಂತ್ರ ನಡೆಸುತ್ತಿದ್ದಾರೆ. ಇಲ್ಲಿಯವರೆಗೆ ಹಲವು ಬಾರಿ ತಮ್ಮ ತಪ್ಪುಗಳಿಂದ ತಪ್ಪಿಸಿಕೊಂಡಿರುವ ಇವರಿಬ್ಬರ ನಿಜ ಬಣ್ಣ ಯಾವಾಗ ಬಯಲಾಗುತ್ತದೆ ಎಂಬುದೇ ಈಗ ಕುತೂಹಲ.
ಇದನ್ನೂ ಓದಿ: Amruthadhaare serial: ಭೂಮಿಕಾ ಪ್ಲಾನ್ ಪ್ಲಾಪ್; ಶಕುಂತಲಾಗೆ ಗೊತ್ತಾಗೇ ಹೋಯ್ತು ಮಹಾಸತ್ಯ!
`ಅಮೃತಧಾರೆʼ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ಪ್ರಸಾರ ಕಾಣುತ್ತಿದೆ