ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Amruthadhaare Serial: ಜೈದೇವ್‌ ಕೈಯಲ್ಲಿ ಮುದ್ದು ಕಂದಮ್ಮಗಳು! ಮಕ್ಕಳನ್ನ ಕಾಪಾಡ್ಕೊಳ್ತಾಳಾ ಮಲ್ಲಿ?

Kannada Serial: ಅಮೃತಧಾರೆ ಧಾರಾವಾಹಿಯು ಇತ್ತೀಚೆಗ ರೋಚಕ ತಿರುವುಗಳಿರುವ ಸಂಚಿಕೆಗಳನ್ನು ಪ್ರೇಕ್ಷಕರಿಗೆ ಉಣಬಡಿಸಲು ಮುಂದಾಗಿದೆ. ಸೀರಿಯಲ್‌ನ ಇತ್ತೀಚಿನ ಪ್ರೋಮೋ ರೋಚಕ ತಿರುವಿನಿಂದ ಕೂಡಿದೆ. ಮಲ್ಲಿ ಆಕಾಶ್​ ಮತ್ತು ಮಿಂಚುನ್ನ ಕರೆದುಕೊಂಡು ಮಾಲ್​ಗೆ ಹೋಗಿದ್ದಾಳೆ. ಅಲ್ಲಿಗೂ ಜೈದೇವ್ ಬಂದುಬಿಟ್ಟಿದ್ದಾನೆ. ಆದರೆ ಮಲ್ಲಿಯನ್ನೆನೋ ಶಕುನಿ ಮಾಮ ತಪ್ಪಿಸಿದ್ದರೂ ಮಕ್ಕಳು ಸಿಕ್ಕಿಹಾಕಿಕೊಂಡು ಬಿಟ್ಟಿದ್ದಾರೆ.

ಜೈದೇವ್‌ ಕೈಯಲ್ಲಿ ಮುದ್ದು ಕಂದಮ್ಮಗಳು! ಮಕ್ಕಳನ್ನ ಕಾಪಾಡ್ಕೊಳ್ತಾಳಾ ಮಲ್ಲಿ?

ಅಮೃತಧಾರೆ ಧಾರಾವಾಹಿ -

Yashaswi Devadiga
Yashaswi Devadiga Nov 25, 2025 7:42 PM

ಜೀ ಕನ್ನಡ (Zee Kannada) ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಅಮೃತಧಾರೆ (Amruthadhaare Serial) ಧಾರಾವಾಹಿಯಲ್ಲಿ ಸಖತ್‌ ಟ್ವಿಸ್ಟ್‌ ಪಡೆದು ಸಾಗುತ್ತಿದೆ. ಅಮೃತಧಾರೆ ಧಾರಾವಾಹಿಯು ಇತ್ತೀಚೆಗ ರೋಚಕ ತಿರುವುಗಳಿರುವ ಸಂಚಿಕೆಗಳನ್ನು ಪ್ರೇಕ್ಷಕರಿಗೆ ಉಣಬಡಿಸಲು ಮುಂದಾಗಿದೆ. ಸೀರಿಯಲ್‌ನ ಇತ್ತೀಚಿನ ಪ್ರೋಮೋ (Promo) ರೋಚಕ ತಿರುವಿನಿಂದ ಕೂಡಿದೆ.

ಮುದ್ದು ಕಂದಮ್ಮಗಳು ಜೈದೇವ್‌ ಹತ್ತಿರ!

ಕಾನೂನಿನ ತೊಡಕಿನಲ್ಲಿ ಸಿಲುಕಿರುವ ಜೈದೇವ್, ಪ್ರಾಪರ್ಟಿ ಪೇಪರ್‌ಗೆ ಸಹಿ ಹಾಕಿಸಿಕೊಳ್ಳಲು ಮಲ್ಲಿಯನ್ನು ಹುಡುಕಿಕೊಂಡು ಮಾಲ್‌ಗೆ ಬರುತ್ತಾನೆ. ಅದೇ ವೇಳೆಗೆ ಭೂಮಿಕಾ ಮಕ್ಕಳು ಮಿಂಚು ಹಾಗೂ ಆಕಾಶ್‌ ಸಿಕ್ಕಿಹಾಕಿಕೊಳ್ತಾರೆ. ಅದೇ ಇನ್ನೊಂದೆಡೆ ಮಲ್ಲಿ, ಆಕಾಶ್​ ಮತ್ತು ಮಿಂಚುನ್ನ ಕರೆದುಕೊಂಡು ಮಾಲ್​ಗೆ ಹೋಗಿದ್ದಾಳೆ.

ಇದನ್ನೂ ಓದಿ: Amruthadhare Serial: ಅಮೃತಧಾರೆ ಧಾರಾವಾಹಿಯಲ್ಲಿ ಮತ್ತೊಂದು ಟ್ವಿಸ್ಟ್: ಮುಖಾಮುಖಿಯಾದರು ಅಪ್ಪ-ಮಗ

ಅಲ್ಲಿಗೂ ಜೈದೇವ್ ಬಂದುಬಿಟ್ಟಿದ್ದಾನೆ. ಹೇಗಾದ್ರೂ ಮಾಡಿ ಈ ವಿಷಯವನ್ನು ಮಲ್ಲಿಗೆ ತಲುಪಿಸಲು ಶಕುನಿಮಾಮಾ ಪ್ಲ್ಯಾನ್​ ಮಾಡ್ತಿದ್ದಾನೆ.

ಕಿಡ್​ನ್ಯಾಪ್​ ಮಾಡುವ ಸಾಧ್ಯತೆ

ಮಲ್ಲಿ ಆಕಾಶ್​ ಮತ್ತು ಮಿಂಚುನ್ನ ಕರೆದುಕೊಂಡು ಮಾಲ್​ಗೆ ಹೋಗಿದ್ದಾಳೆ. ಅಲ್ಲಿಗೂ ಜೈದೇವ್ ಬಂದುಬಿಟ್ಟಿದ್ದಾನೆ. ಆದರೆ ಮಲ್ಲಿಯನ್ನೆನೋ ಶಕುನಿ ಮಾಮ ತಪ್ಪಿಸಿದ್ದರೂ ಮಕ್ಕಳು ಸಿಕ್ಕಿಹಾಕಿಕೊಂಡು ಬಿಟ್ಟಿದ್ದಾರೆ.

ಜೈದೇವ್‌ಗೆ ಮಿಂಚು ಹಾಗೂ ಆಕಾಶ್‌ ಯಾರೆಂಬುದು ಗೊತ್ತಿಲ್ಲ. ಹೀಗಾಗಿ ಮಲ್ಲಿಯ ಫೋಟೋ ವನ್ನು ಸೀದಾ ಆಕಾಶ್​ ಮತ್ತು ಮಿಂಚು ಬಳಿ ಬಂದು ತೋರಿಸಿ ಇವರನ್ನು ನೋಡಿದ್ರಾ ಎಂದು ಕೇಳಿದ್ದಾನೆ. ಅವರೇನಾದ್ರೂ ಬಾಯಿಬಿಟ್ಟರೆ ಜೈದೇವ್​ ಮಕ್ಕಳನ್ನೇ ಕಿಡ್​ನ್ಯಾಪ್​ ಮಾಡುವ ಸಾಧ್ಯತೆ ಇದೆ.

ಗೌತಮ್‌ ಪರ ಭೂಮಿಕಾ ಬ್ಯಾಟಿಂಗ್‌!

ಇನ್ನೊಂದು ಕಡೆ ಭೂಮಿಕಾ ,ಗೌತಮ್‌ ಪರ ನಿಲ್ಲುತ್ತಿದ್ದಾಳೆ. ಆಕಾಶ್‌ ಹಾಗೂ ಮಿಂಚು, ಕ್ಲಾಸ್‌ಮೆಟ್‌ ಜೊತೆ ಜಗಳ ಮಾಡಿಕೊಂಡಿದ್ದರು. ಗೌತಮ್‌ ಡ್ರೈವರ್‌ ಅನ್ನೋ ಕಾರಣಕ್ಕೆ ಹುಡುಗ ಹೀಯಾಳಿಸಿದ್ದ. ಅದಕ್ಕೆ ಆಕಾಶ್‌, ಮಿಂಚು ಜಗಳ ಮಾಡಿಕೊಂಡಿದ್ದಾರೆ.

ಅಮೃತಧಾರೆ ಧಾರಾವಾಹಿ

ಆ ಹುಡುಗನ ತಾಯಿ ಭೂಮಿಕಾ ಬಳಿ, ಡ್ರೈವರ್‌ ಪರ ಮಾತಾಡೋಕೆ ಅವರೇನು ನಿಮ್ಮ ಗಂಡನಾ? ಅಂತತ ಬೇಕಾ ಬಿಟ್ಟಿ ಮಾತಾಡಿದ್ದಾರೆ. ಇದನ್ನು ಸಹಿಸದ ಭೂಮಿಕಾ, ಗೌತಮ್‌ ಪರ ನಿಂತು ಮಾತನಾಡಿದ್ದಾಳೆ. ಇನ್ನೊಂದು ಕಡೆ ಹೌದು ಅಪ್ಪು ಹಾಗೂ ಮಿಂಚು ಇಬ್ಬರು ಸೇರಿ ಭೂಮಿಕಾ ಹಾಗೂ ಗೌತಮ್‌ ಅವರನ್ನು ಒಂದು ಮಾಡಲು ಪಣ ತೊಟ್ಟಿದ್ದಾರೆ. ಇವರಿಬ್ಬರದ್ದು ಮದುವೆ ಆಗಿದೆ ಎಂದು ಅಪ್ಪು ಹಾಗೂ ಮಿಂಚುಗೆ ಗೊತ್ತಾಗಿರೋ ವಿಚಾರ ಭೂಮಿಕಾ, ಗೌತಮ್‌ಗೆ ಗೊತ್ತಿಲ್ಲ.

ಇದನ್ನೂ ಓದಿ: Bigg Boss Kannada 12: ಅಶ್ವಿನಿ ಸೈಲೆಂಟ್‌ ಇರೋದೇ ಗಿಲ್ಲಿಗೆ ಸಮಸ್ಯೆ ಅಂತೆ! ಧನುಷ್‌ ಹೇಳಿಕೆಗೆ ಫ್ಯಾನ್ಸ್‌ ಕೆಂಡ

ಇನ್ನು ಮುಂದೆ ಪುಟಾಣಿಗಳ ಮುದ್ದಾದ ಕಸರತ್ತು ಶುರುವಾಗಲಿದೆ. ಅದಕ್ಕಾಗಿಯೇ ವೀಕ್ಷಕರು ಸಿಕ್ಕಾಪಟ್ಟೆ ಕುತೂಹಲದಿಂದ ಕಾಯುತ್ತಿದ್ದಾರೆ. ಅಮೃತಧಾರೆ’ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ಪ್ರಸಾರ ಕಾಣುತ್ತಿದೆ.