ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Amruthadhaare Serial: ʼಅಮೃತಧಾರೆʼ ಅಂತಿಮ ಅಧ್ಯಾಯದ ಪ್ರೋಮೋ ಕಂಡು ಅನ್ಯಾಯ ಅಂದ್ರು ವೀಕ್ಷಕರು! ಯಾಕೆ?

Amruthadhaare Serial:ಕನ್ನಡ ಕಿರುತೆರೆಯಲ್ಲಿ ತನ್ನದೇ ಆದ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಿರುವ ಜನಪ್ರಿಯ ಧಾರಾವಾಹಿ ‘ಅಮೃತಧಾರೆ’ (Amruthadhaare) ಇದೀಗ ಮುಕ್ತಾಯದ ಹಂತಕ್ಕೆ ಬಂದಿದೆ. ಕಳೆದ ಮೂರೂವರೆ ವರ್ಷಗಳಿಂದ ಪ್ರೇಕ್ಷಕರನ್ನು ರಂಜಿಸುತ್ತಾ, ಒಂದರ ಮೇಲೊಂದು ತಿರುವುಗಳನ್ನು ನೀಡುತ್ತಾ ಸಾಗಿದ್ದ ಈ ಧಾರಾವಾಹಿ ಇದೀಗ ತನ್ನ ಕಥೆಗೆ ಪೂರ್ಣವಿರಾಮ ಇಡಲು ಸಜ್ಜಾಗಿದೆ. ಧಾರಾವಾಹಿಯ ಅಂತಿಮ ಅಧ್ಯಾಯದ ಪ್ರೋಮೋ ಬಿಡುಗಡೆಯಾಗಿದ್ದು, ಅಭಿಮಾನಿಗಳು ಭಾವುಕರಾಗಿದ್ದಾರೆ.

ʼಅಮೃತಧಾರೆʼ ಪ್ರೋಮೋ ಕಂಡು ಅನ್ಯಾಯ ಅಂದ್ರು ವೀಕ್ಷಕರು! ಯಾಕೆ?

ಅಮೃತಧಾರೆ ಧಾರಾವಾಹಿ -

Yashaswi Devadiga
Yashaswi Devadiga Nov 9, 2026 7:46 PM

ಕನ್ನಡ ಕಿರುತೆರೆಯಲ್ಲಿ ತನ್ನದೇ ಆದ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಿರುವ ಜನಪ್ರಿಯ ಧಾರಾವಾಹಿ ‘ಅಮೃತಧಾರೆ’ (Amruthadhaare) ಇದೀಗ ಮುಕ್ತಾಯದ ಹಂತಕ್ಕೆ ಬಂದಿದೆ. ಕಳೆದ ಮೂರೂವರೆ ವರ್ಷಗಳಿಂದ ಪ್ರೇಕ್ಷಕರನ್ನು ರಂಜಿಸುತ್ತಾ, ಒಂದರ ಮೇಲೊಂದು ತಿರುವುಗಳನ್ನು ನೀಡುತ್ತಾ ಸಾಗಿದ್ದ ಈ ಧಾರಾವಾಹಿ ಇದೀಗ ತನ್ನ ಕಥೆಗೆ ಪೂರ್ಣವಿರಾಮ ಇಡಲು ಸಜ್ಜಾಗಿದೆ. ಧಾರಾವಾಹಿಯ ಅಂತಿಮ ಅಧ್ಯಾಯದ ಪ್ರೋಮೋ ಬಿಡುಗಡೆಯಾಗಿದ್ದು, ಅಭಿಮಾನಿಗಳು ಭಾವುಕರಾಗಿದ್ದಾರೆ.

ಸಾಮಾನ್ಯವಾಗಿ ಯಾವುದೇ ಧಾರಾವಾಹಿ ಆರಂಭದಲ್ಲಿ ಕುತೂಹಲಕಾರಿ ಕಥೆಯೊಂದಿಗೆ ಪ್ರೇಕ್ಷಕರನ್ನು ಸೆಳೆಯುತ್ತದೆ. ಆದರೆ ದಿನಗಳು ಕಳೆದಂತೆ ಕಥೆಯನ್ನು ಎಳೆಯುವ ಪ್ರಯತ್ನದಲ್ಲಿ ಅದರ ಆಸಕ್ತಿ ಕಡಿಮೆಯಾಗುವುದು ಸಹಜ. ಆದರೆ ‘ಅಮೃತಧಾರೆ’ ವಿಚಾರದಲ್ಲಿ ಅಂಥ ಪರಿಸ್ಥಿತಿ ನಿರ್ಮಾಣವಾಗಲಿಲ್ಲ.

ಕಥೆಯಲ್ಲಿ ಹಲವು ತಿರುವುಗಳು ಬಂದರೂ, ಹೊಸ ಹೊಸ ಪಾತ್ರಗಳು ಹಾಗೂ ಸನ್ನಿವೇಶಗಳು ಸೇರ್ಪಡೆಯಾದರೂ ಪ್ರೇಕ್ಷಕರ ಆಸಕ್ತಿ ಕೊನೆಯವರೆಗೂ ಉಳಿದಿತ್ತು. ಅದರಲ್ಲೂ ನಾಯಕ ಗೌತಮ್ ಪಾತ್ರದಲ್ಲಿ ರಾಜೇಶ್ ನಟರಂಗ ಹಾಗೂ ನಾಯಕಿ ಭೂಮಿಕಾ ಪಾತ್ರದಲ್ಲಿ ಛಾಯಾ ಸಿಂಗ್ ಅವರ ಅಭಿನಯ ಧಾರಾವಾಹಿಯ ಪ್ರಮುಖ ಆಕರ್ಷಣೆಯಾಗಿತ್ತು.

ಇದನ್ನೂ ಓದಿ: Bigg Boss Kannada 13: ಬಿಗ್ ಬಾಸ್ ಮನೆಗೆ ಮಂಜ ಎಂಟ್ರಿ ಕೊಟ್ಟಿದ್ದು ಹೇಗಿತ್ತು? ಸ್ಪರ್ಧಿಗಳು ಶಾಕ್‌

ಬಿಡುಗಡೆಯಾಯ್ತು ಅಂತಿಮ ಅಧ್ಯಾಯದ ಪ್ರೋಮೋ!

ಧಾರಾವಾಹಿಯ ಚಿತ್ರೀಕರಣ ಇತ್ತೀಚೆಗಷ್ಟೇ ಪೂರ್ಣಗೊಂಡಿದ್ದು, ಗೌತಮ್ ಪಾತ್ರಧಾರಿ ರಾಜೇಶ್ ನಟರಂಗ ಅವರೇ ಈ ವಿಚಾರವನ್ನು ಹಂಚಿಕೊಂಡಿದ್ದರು. ಇದೀಗ ವಾಹಿನಿಯು ಸಾಮಾಜಿಕ ಜಾಲತಾಣದಲ್ಲಿ ‘ಅಂತಿಮ ಅಧ್ಯಾಯ’ ಎಂಬ ಶೀರ್ಷಿಕೆಯೊಂದಿಗೆ ಹೊಸ ಪ್ರೋಮೋ ಬಿಡುಗಡೆ ಮಾಡಿದೆ.

ಈ ಪ್ರೋಮೋದಲ್ಲಿ ಕಳೆದ ಮೂರೂವರೆ ವರ್ಷಗಳ ಅಮೃತಧಾರೆ ಪಯಣವನ್ನು ಕೆಲವೇ ಸೆಕೆಂಡ್‌ಗಳಲ್ಲಿ ಕಟ್ಟಿಕೊಡಲಾಗಿದೆ. ಧಾರಾವಾಹಿಯ ಆರಂಭದಿಂದ ಇಲ್ಲಿಯವರೆಗಿನ ಪ್ರಮುಖ ಕ್ಷಣಗಳನ್ನು ನೆನಪಿಸುವ ಮೂಲಕ ಕ್ಲೈಮ್ಯಾಕ್ಸ್‌ಗೆ ವೇದಿಕೆ ಸಿದ್ಧಪಡಿಸಲಾಗಿದೆ.

ಆನಂದ್ ನಡುವಿನ ಸ್ನೇಹ

‘ಅಮೃತಧಾರೆ’ ಧಾರಾವಾಹಿಯಲ್ಲಿ ಗೌತಮ್ ಮತ್ತು ಆನಂದ್ ನಡುವಿನ ಸ್ನೇಹ ಆರಂಭದಿಂದಲೂ ಪ್ರಮುಖ ಆಕರ್ಷಣೆಯಾಗಿತ್ತು. ಗೌತಮ್‌ಗೆ ಕಷ್ಟ ಬಂದಾಗ ಬೆನ್ನಿಗೆ ನಿಲ್ಲುತ್ತಿದ್ದ ಆನಂದ್, ನಿಜವಾದ ಸ್ನೇಹಿತ ಎಂದರೆ ಹೇಗಿರಬೇಕು ಎಂಬುದಕ್ಕೆ ಉದಾಹರಣೆಯಾಗಿದ್ದರು.

ಇವರಿಬ್ಬರ ಸ್ನೇಹವನ್ನು ಕಂಡ ವೀಕ್ಷಕರು ಕೂಡ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು. ಇಂಥ ಗೆಳೆಯರು ಎಲ್ಲರಿಗೂ ಸಿಗಬೇಕು, ಗೌತಮ್ ಮತ್ತು ಆನಂದ್‌ನಂತಹ ಸ್ನೇಹ ನಮ್ಮ ಬದುಕಿನಲ್ಲೂ ಇರಬೇಕು ಎಂದು ಅಭಿಮಾನಿಗಳು ಹೇಳಿಕೊಳ್ಳುತ್ತಿದ್ದರು.

ಆದರೆ ಕಳೆದ ಕೆಲವು ಸಂಚಿಕೆಗಳಿಂದ ಆನಂದ್ ಪಾತ್ರವೇ ಕಾಣಿಸುತ್ತಿಲ್ಲ. ಆನಂದ್ ಅವರ ನಿಜವಾದ ಹೆಸರೂ ಆನಂದ್ ಎಂಬುದು ವಿಶೇಷ. ಅವರ ಪತ್ನಿಯ ಪಾತ್ರ ಆಗಾಗ್ಗೆ ಕಾಣಿಸಿಕೊಳ್ಳುತ್ತಿದ್ದರೂ, ಆನಂದ್ ಮಾತ್ರ ಧಾರಾವಾಹಿಯಿಂದ ದೂರವಾಗಿದ್ದಾರೆ.

ಗೌತಮ್ ಮತ್ತು ಆನಂದ್ ಸ್ನೇಹವೇ ಧಾರಾವಾಹಿಯ ಪ್ರಮುಖ ಹೈಲೈಟ್‌ಗಳಲ್ಲಿ ಒಂದಾಗಿತ್ತು. ಅಂಥ ಆಪ್ತ ಸ್ನೇಹದ ಪಾತ್ರವೇ ಕೊನೆಯ ಹಂತದಲ್ಲಿ ಕಾಣಿಸಿಕೊಳ್ಳದಿರುವುದು ಅಭಿಮಾನಿಗಳಿಗೆ ನಿರಾಸೆ ತಂದಿದೆ.

ಅಂತಿಮ ಅಧ್ಯಾಯದ ಪ್ರೋಮೋದಲ್ಲಿಯೂ ಇವರಿಬ್ಬರು ಇಲ್ಲದಿರುವುದರಿಂದ ಧಾರಾವಾಹಿಯ ಕೊನೆಯ ಸಂಚಿಕೆಯಲ್ಲಿ ಆನಂದ್ ಮತ್ತು ಆಕಾಶ್ ಕಾಣಿಸಿಕೊಳ್ಳುತ್ತಾರಾ ಎಂಬ ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಿದೆ.

ಇದನ್ನೂ ಓದಿ: Bigg Boss Kannada 13: ‘ಬಿಗ್‌ ಬಾಸ್‌’ ಗಾನವಿ ಗೌಡ ಫ್ಯಾಮಿಲಿ ವಿಚಾರ ರಿವೀಲ್‌ ಮಾಡಿದ ಕಿಚ್ಚ!

ಅಮೃತಧಾರೆ ಮುಗಿಯಲಿದೆ ಎಂಬ ಸುದ್ದಿ ಈ ಹಿಂದೆಯೇ ಹರಿದಾಡುತ್ತಿದ್ದರೂ, ಅಭಿಮಾನಿಗಳಲ್ಲಿ ಧಾರಾವಾಹಿ ಇನ್ನಷ್ಟು ದಿನ ಮುಂದುವರಿಯಲಿ ಎಂಬ ಆಸೆ ಇತ್ತು. ಕಥೆಯಲ್ಲಿ ಮತ್ತಷ್ಟು ಟ್ವಿಸ್ಟ್‌ಗಳು ಬರಬಹುದು, ಇನ್ನೂ ಕೆಲವು ತಿಂಗಳು ಧಾರಾವಾಹಿ ಮುಂದುವರಿಯಬಹುದು ಎಂದು ಅನೇಕರು ನಿರೀಕ್ಷಿಸಿದ್ದರು.

ಆದರೆ ಇದೀಗ ವಾಹಿನಿಯೇ ಅಂತಿಮ ಅಧ್ಯಾಯದ ಪ್ರೋಮೋ ಬಿಡುಗಡೆ ಮಾಡಿರುವುದರಿಂದ ಧಾರಾವಾಹಿ ಮುಕ್ತಾಯವಾಗುವುದು ಖಚಿತ ಎಂಬ ಭಾವನೆ ವೀಕ್ಷಕರಲ್ಲಿ ಮೂಡಿದೆ.