ಸೆಪ್ಟೆಂಬರ್ ಮೊದಲ ವಾರದಲ್ಲಿ ಮುಖ್ಯಮಂತ್ರಿಗಳಿಂದ ಕೃಷ್ಣೆಗೆ ಬಾಗಿನ ಅರ್ಪಣೆ ?
ದಕ್ಷಿಣ ಕರ್ನಾಟಕ ವ್ಯಾಪ್ತಿಯಲ್ಲಿ ಯಲ್ಲಿ ಬರುವ ಕೃಷ್ಣರಾಜ ಸಾಗರ, ಕಬನಿ, ಹಾರಂಗಿ ಮುಂತಾದ ಜಲಾಶಯಗಳಿಗೆ ನೀರಿನ ಪ್ರಮುಖ ಮೂಲ ಕಾವೇರಿ ಕಣಿವೆ, ರಾಜ್ಯದ ಮಲೆನಾಡು ಪ್ರದೇಶದ ಪಶ್ಚಿಮ ಘಟ್ಟದ ಜಿಲ್ಲೆಗಳಲ್ಲಿ ಜೂನ್ ತಿಂಗಳಲ್ಲಿಯೆ ವ್ಯಾಪಕ ಮಳೆಯಾಗುವುದರಿಂದ ಕಾವೇರಿ ಕಣಿವೆಯ ಜಲಾಶಯಗಳು ಬೇಗನೆ ಭರ್ತಿಯಾಗುತ್ತವೆ, ಹೀಗಾಗಿ ಕಾವೇರಿ ಕಣಿವೆಯ ಜಲಾಶಯಗಳಿಗೆ ಬೇಗನೆ ಬಾಗಿನ ಅರ್ಪಿಸಲಾಗುತ್ತದೆ.

-

ಆಲಮಟ್ಟಿ: ರಾಜ್ಯದ ಪ್ರತಿಷ್ಠಿತ ನೀರಾವರಿ ಯೋಜನೆಯ ಮಾತೃ ಜಲಾಶಯವಾದ ಆಲಮಟ್ಟಿಯ ಲಾಲ್ ಬಹಾದ್ದೂರ್ ಶಾಸ್ತ್ರಿ ಜಲಾಶಯ ಹೆಚ್ಚು ಕಡಿಮೆ ಭರ್ತಿಯಾಗಿದೆ , ಆದರೆ ಪ್ರತಿ ವರ್ಷದ ಸಂಪ್ರದಾಯದಂತೆ ಈ ವರ್ಷವೂ ಕೂಡಾ ಉತ್ತರ ಕರ್ನಾಟಕದ ಜೀವನದಿ ಕೃಷ್ಣೆಗೆ ರಾಜ್ಯದ ಮುಖ್ಯ ಮಂತ್ರಿಗಳಿಂದ ಬಾಗಿನ ಅರ್ಪಿಸುವ ಧಾರ್ಮಿಕ ಸಂಪ್ರದಾಯ ಮಾತ್ರ ಬಾಕಿ ಇದೆ.
ದಕ್ಷಿಣ ಕರ್ನಾಟಕ ವ್ಯಾಪ್ತಿಯಲ್ಲಿ ಯಲ್ಲಿ ಬರುವ ಕೃಷ್ಣರಾಜ ಸಾಗರ, ಕಬನಿ, ಹಾರಂಗಿ ಮುಂತಾದ ಜಲಾಶಯಗಳಿಗೆ ನೀರಿನ ಪ್ರಮುಖ ಮೂಲ ಕಾವೇರಿ ಕಣಿವೆ, ರಾಜ್ಯದ ಮಲೆನಾಡು ಪ್ರದೇಶದ ಪಶ್ಚಿಮ ಘಟ್ಟದ ಜಿಲ್ಲೆಗಳಲ್ಲಿ ಜೂನ್ ತಿಂಗಳಲ್ಲಿಯೆ ವ್ಯಾಪಕ ಮಳೆಯಾಗುವುದರಿಂದ ಕಾವೇರಿ ಕಣಿವೆಯ ಜಲಾಶಯಗಳು ಬೇಗನೆ ಭರ್ತಿಯಾಗುತ್ತವೆ, ಹೀಗಾಗಿ ಕಾವೇರಿ ಕಣಿವೆಯ ಜಲಾಶಯಗಳಿಗೆ ಬೇಗನೆ ಬಾಗಿನ ಅರ್ಪಿಸಲಾಗುತ್ತದೆ.
ಆದರೆ ಕಷ್ಣಾ ಕಣಿವೆಯುವ ನೀರಿನ ಹರವಿಗಾಗಿ ಮಹಾರಾಷ್ಟ್ರ ದ ಪಶ್ಚಿಮ ಘಟ್ಟದ ಬೆಟ್ಟ ಪ್ರದೇಶಗಳ ಮೇಲೆ ಬೀಳುವ ಮಳೆ ಪ್ರಮಾಣದ ಮೇಲೆ ಕೃಷ್ಣಾ ಕಣಿವೆಯ ಪ್ರಮುಖ ಪ್ರಮುಖ ನದಿ ಕೃಷ್ಣೆ ಅವಲಂಬಿತವಾಗಿದೆ. ಜೂನ್ ಮೂರನೆಯ ವಾರದಿಂದ ಅಗಷ್ಟ್ ಎರಡನೆಯ ವಾರದವರೆಗೆ ಮಹಾರಾಷ್ಟ್ರ ದ ಪಶ್ಚಿಮ ಘಟ್ಟದಲ್ಲಿ ವ್ಯಾಪಕ ಮಳೆಯಾಗಿ ಕೃಷ್ಣೆಯ ಮುಖ್ಯ ಹರವು ಹಾಗೂ ಅದರ ಉಪನದಿಗಳಲ್ಲಿ ಅಪಾರ ಪ್ರಮಾಣದ ನೀರು ಹರಿದು ಬರುವುದರಿಂದ ನದಿ ತೀರದ ಗ್ರಾಮಗಳಲ್ಲಿ ವ್ಯಾಪಕ ಪ್ರವಾಹ ಪರಿಸ್ಥಿತಿವುಂಟಾಗಿ ಜನಜಾನುವಾರಗಳಿಗೆ ಜೀವ ಹಾನಿಯಾಗದಿರಲಿ ಎನ್ನುವ ಉದ್ದೇಶದಿಂದ ಕರ್ನಾಟಕ ಹಾಗೂ ಮಹಾರಾಷ್ಟ್ರ ಸರ್ಕಾರಗಳು ಪರಸ್ಪರ ಮಾತನಾಡಿ ಪ್ರವಾಹ ಸಮಯದಲ್ಲಿ ಆಲಮಟ್ಟಿಯ ಜಲಾಶಯದಲ್ಲಿ ೫೧೯.೬೦ ಬದಲಾಗಿ ೫೧೭ ಮೀಟರವರೆಗೆ ಮಾತ್ರ ನೀರು ಸಂಗ್ರಹಿಸಲು ಪರಸ್ಪರ ಮಾತುಕತೆ ಮೂಲಕ ಎರಡು ರಾಜ್ಯಗಳು ಸಹಮತಿಗೆ ಬಂದ ಕಾರಣ ಕೃಷ್ಣೆಗೆ ಬಾಗಿನ ಅರ್ಪಿಸುವ ಕಾರ್ಯ ಸಾಮಾನ್ಯವಾಗಿ ಅಗಷ್ಟ ಕೊನೆಯ ವಾರ ಅಥವಾ ಸೆಪ್ಟೆಂಬರ್ ಮೊದಲ ವಾರ ಜಲಾಶಯಕ್ಕೆ ಬಾಗಿನ ಅರ್ಪಿಸುವ ಕಾರ್ಯವನ್ನು ಪ್ರತಿ ವರ್ಷ ನೆರವೇರಿಸಿಕೊಂಡು ಬರಲಾಗುತ್ತದೆ.
ಇದನ್ನೂ ಓದಿ: Surabhi Hudigere Column: ಧಾರ್ಮಿಕ ಪ್ರಜ್ಞೆಗೊಂದು ಆಘಾತ: ಮಹಿಳೆಯರು, ನಂಬಿಕೆ ಮತ್ತು ವದಂತಿಗಳು
ತುಂಬಿ ತುಳುಕುತ್ತಿರುವ ಆಲಮಟ್ಟಿ ಜಲಾಶಯದಲ್ಲಿ ಇಂದು ೫೧೯.೫೩ ಮೀಟರವರೆಗೆ ನೀರು ಸಂಗ್ರಹವಿದ್ದು, ೧೨೧.೭೮೨ ಟಿ.ಎಮ್.ಸಿ. ನೀರು ಸಂಗ್ರಹವಿದೆ, ೮೪೨೭೭ ಕ್ಯೂಸೆಕ್ ನೀರು ಜಲಾಶಯಕ್ಕೆ ಹರಿದು ಬರುತ್ತಿದ್ದು ೪೨೫೦೦ ಕ್ಯೂಸೆಕ್ ನೀರನ್ನು ಜಲಾಶಯದ ವಿಧ್ಯುತ್ ಉತ್ಪಾದನಾ ಘಟಕಕ್ಕೆ ಬಳಸಿಕೊಳ್ಳಲಾಗುತ್ತಿದ್ದು ೪೭೫೦೦ ಕ್ಯೂಸೆಕ್ ನೀರನ್ನು ಜಲಾಶಯದ ಗೇಟುಗಳ ಮೂಲಕ ನದಿಗೆ ಹರಿಯ ಬಿಡಲಾಗುತ್ತದೆ
ಸೆಪ್ಟೆಂಬರ್ ೬ ಕ್ಕೆ ಜಲಾಶಯಕ್ಕೆ ಬಾಗಿನ ಅರ್ಪಣೆ.?
ಕೃಷ್ಣಾ ಜಲಾನಯನ ಪ್ರದೇಶದ ಸುಮಾರು ಆರು ಜಿಲ್ಲೆಗಳ ರೈತ ಸಮುದಾಯ ಸರ್ಕಾರದಿಂದ ನಡೆಯುವ ಬಾಗಿನ ಅರ್ಪಣೆ ಕಾರ್ಯಕ್ರಮಕ್ಕೆ ಜಾತಕ ಪಕ್ಷಯಂತೆ ಕಾಯುತ್ತಿದ್ದು ಇದೆ ತಿಂಗಳು ಸೆಪ್ಟಂಬರ್ ೬ ಕ್ಕೆ ಜಲಾಶಯಕ್ಕೆ ಬಾಗಿನ ಅರ್ಪಿಸುವ.
ಸೆಪ್ಟೆಂಬರ್ ೬ರ ರಂದು ಆಲಮಟ್ಟಿಯ ಲಾಲ್ ಬಹಾದ್ದೂರ್ ಶಾಸ್ತ್ರಿ ನಿಗದಿ ಮಾಡುವ ಸಾಧ್ಯತೆಗಳು ದಟ್ಟವಾಗಿವೆ ಅಧಿಕೃತವಾಗಿ ಈ ದಿನಾಂಕವನ್ನು ಪ್ರಕಟಿಸಲು ಮುಖ್ಯ ಮಂತ್ರಿಗಳ ಕಚೇರಿಯಿಂದ ಹಸಿರು ನಿಶಾನೆ ಸಿಗಬೇಕಾಗಿದೆ ಎಂದು ಜಲಸಂಪನ್ನೂಲ ಇಲಾಖೆಯ ಉನ್ನತ ಮೂಲಗಳಿಂದ ತಿಳಿದು ಬಂದಿದೆ.
ಏತನ್ಮದ್ದೆ ವಿಜಯಪುರದ್ದಲ್ಲಿ ಸೆಪ್ಟೆಂಬರ್ ೧೮ ರಂದು ರಾಜ್ಯ ಸರ್ಕಾರದ ಸಚಿವ ಸಂಪುಟ ಸಭೆ ನಿಗದಿಯಾದರೆ ಬಾಗಿನ ಜಲಾಶಯಕ್ಕೆ ಬಾಗಿನ ಅರ್ಪಿಸುವ ಕಾರ್ಯಕ್ರಮ ಸ್ವಲ್ಪು ವಿಳಂಬವಾಗ ಬಹುದೆಂದು ಕೃಷ್ಣಾ ಭಾಗ್ಯ ಜಲನಿಗಮದ ಉನ್ನತ ಮೂಲಗಳಿಂದ ತಿಳಿದು ಬಂದಿದೆ.