ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಕನ್ನಡದಲ್ಲಿ ಅರಿಜಿತ್‌ ಸಿಂಗ್‌ ಹಾಡಿದ ಸಾಂಗ್‌ಗಳು ಯಾವುವು? ಒಂದು ಹಾಡಿಗೆ ಇವ್ರು ಪಡೆಯುತ್ತಿದ್ದ ಸಂಭಾವನೆ ಎಷ್ಟು?

ಅರಿಜಿತ್‌ ಸಿಂಗ್‌ ಅವರು ಹಿನ್ನೆಲೆ ಗಾಯನ ವೃತ್ತಿಯಿಂದ ನಿವೃತ್ತಿ ಘೋಷಿಸಿ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದಾರೆ. 21 ವರ್ಷಗಳ ವೃತ್ತಿಜೀವನದಲ್ಲಿ 700ಕ್ಕೂ ಹೆಚ್ಚು ಹಾಡುಗಳನ್ನು ಹಾಡಿರುವ ಇವರು, ಕನ್ನಡದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ 'ನಿನ್ನಿಂದಲೇ' ಚಿತ್ರದ "ಮೌನ ತಾಳಿದೆ" ಹಾಡಿನ ಮೂಲಕ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದ್ದರು.

ಗಾಯನಕ್ಕೆ ಅರಿಜಿತ್‌ ಸಿಂಗ್‌ ವಿದಾಯ; ಕನ್ನಡದಲ್ಲಿ ಹಾಡಿದ ಆ 1 ಹಾಡು ಯಾವುದು?

-

Avinash GR
Avinash GR Jan 28, 2026 1:04 PM

ಬಾಲಿವುಡ್‌ನ ಖ್ಯಾತ ಗಾಯಕ ಅರಿಜಿತ್‌ ಸಿಂಗ್‌ ಅವರು ತಮ್ಮ ಅಭಿಮಾನಿಗಳಿಗೆ ದಿಢೀರ್ ಅಂತ ಒಂದು ಶಾಕ್‌ ನೀಡಿದ್ದಾರೆ. "ಹಿನ್ನಲೆ ಗಾಯಕನಾಗಿ ನಾನು ಯಾವುದೇ ಹೊಸ ಯೋಜನೆಗಳನ್ನು ಅಥವಾ ಅವಕಾಶಗಳನ್ನು ಒಪ್ಪಿಕೊಳ್ಳುತ್ತಿಲ್ಲ ಎಂದು ತಿಳಿಸಲು ನನಗೆ ಸಂತೋಷವಾಗುತ್ತಿದೆ. ನಾನು ಈ ವೃತ್ತಿಜೀವನವನ್ನು ಇಲ್ಲಿಗೆ ಅಂತ್ಯಗೊಳಿಸುತ್ತಿದ್ದೇನೆ" ಎಂದು ಹೇಳುವ ಮೂಲಕ ಅಚ್ಚರಿ ನೀಡಿದ್ದಾರೆ.

ಹೌದು, ವೃತ್ತಿ ಬದುಕಿನಲ್ಲಿ ಉನ್ನತಮಟ್ಟದಲ್ಲಿರುವಾಗಲೇ ಅರಿಜಿತ್‌ ಸಿಂಗ್‌ ಅವರು ತಮ್ಮ ಹಿನ್ನೆಲೆ ಗಾಯನ ವೃತ್ತಿಗೆ ಬ್ರೇಕ್‌ ಹಾಕಿದ್ದಾರೆ. ಗೌರವಯುತವಾಗಿ ವಿದಾಯ ಹಾಡಿದ್ದಾರೆ. ತಮ್ಮ ಲಕ್ಷಾಂತರ ಅಭಿಮಾನಿಗಳಿಗೆ ನೋವು ನೀಡಿದ್ದಾರೆ. ಅಂದಹಾಗೆ, ಅರಿಜಿತ್‌ ಸಿಂಗ್‌ ಅವರು ಕನ್ನಡದಲ್ಲೂ ಒಂದು ಹಾಡನ್ನು ಹಾಡಿದ್ದರು ಎಂಬುದು ವಿಶೇಷ.

Arijit Singh: ಐಷಾರಾಮಿ ಕಾರುಗಳು, ಕೋಟಿ ಕೋಟಿ ಆಸ್ತಿ! ನಿವೃತ್ತಿ ಘೋಷಣೆಗೂ ಮೊದಲು ಅರಿಜಿತ್ ಬಳಿ ಇರೋ ಸಂಪತ್ತು ಎಷ್ಟು?

ಪುನೀತ್‌ ಸಿನಿಮಾಕ್ಕಾಗಿ ಹಾಡಿದ್ದ ಅರಿಜಿತ್‌

ಹೌದು, 2014ರಲ್ಲಿ ತೆರೆಕಂಡಿದ್ದ ಪುನೀತ್‌ ರಾಜ್‌ಕುಮಾರ್‌ ನಟನೆಯ ʻನಿನ್ನಿಂದಲೇʼ ಸಿನಿಮಾದ ಮೌನ ತಾಳಿದೆ ಹಾಡನ್ನು ಅರಿಜಿತ್‌ ಹಾಡಿದ್ದರು. ಇದು ಅವರ ಮೊದಲ ಕನ್ನಡ ಗೀತೆಯಾಗಿದೆ. ಜಯಂತ ಕಾಯ್ಕಿಣಿ ಬರೆದಿದ್ದ ಈ ಹಾಡನ್ನು ಮಣಿ ಶರ್ಮಾ ಕಂಪೋಸ್‌ ಮಾಡಿದ್ದರು. ಈ ಹಾಡಿನ ನಂತರ ಬ್ರಹ್ಮಾಸ್ತ್ರ ಸಿನಿಮಾದ ದೇವ ದೇವ ಎಂಬ ಡಬ್ಬಿಂಗ್‌ ಹಾಡನ್ನು ಅರಿಜಿತ್‌ ಹಾಡಿದ್ದರು. ಆದರೆ ನೇರವಾಗಿ ಕನ್ನಡ ಗೀತೆಯನ್ನು ಹಾಡಿದ್ದು ನಿನ್ನಿಂದಲೇ ಚಿತ್ರಕ್ಕಾಗಿ ಮಾತ್ರ.‌

Arijit Singh: ಅರಿಜಿತ್ ಸಿಂಗ್ ನಿವೃತ್ತಿಗೆ ಆಘಾತ ವ್ಯಕ್ತಪಡಿಸಿದ ಸಂಗೀತ ದಿಗ್ಗಜರು; ಫ್ಯಾನ್ಸ್‌ ಬೇಸರ

21 ವರ್ಷದ ವೃತ್ತಿ ಬದುಕು

38 ವರ್ಷ ವಯಸ್ಸಿನ ಅರಿಜಿತ್‌ ಸಿಂಗ್‌ ಅವರು 2005ರಲ್ಲಿ ಮೊದಲ ಬಾರಿಗೆ ಗಾಯಕರಾಗಿ ಪರಿಚಿತಗೊಂಡರು. ಹಿಂದಿ ಸೇರಿದಂತೆ ವಿವಿಧ ಭಾಷೆಗಳಲ್ಲಿ ಸುಮಾರು 700ಕ್ಕೂ ಅಧಿಕ ಹಾಡುಗಳನ್ನು ಅರಿಜಿತ್‌ ಹಾಡಿದ್ದಾರೆ. 2012ರ 'ಆಶಿಕಿ 2' ಚಿತ್ರದ "ತುಮ್ ಹಿ ಹೋ" ಹಾಡಿನ ಮೂಲಕ ಅವರು ರಾತ್ರೋರಾತ್ರಿ ಸ್ಟಾರ್ ಆದರು. ಹಿಂದಿ ಬಿಟ್ಟರೆ ಬೆಂಗಾಲಿಯಲ್ಲಿ ಹೆಚ್ಚು ಹಾಡುಗಳನ್ನು ಅರಿಜಿತ್‌ ಸಿಂಗ್ ಹಾಡಿದ್ದು‌, ಉಳಿದಂತೆ ಕನ್ನಡ, ತೆಲುಗು, ತಮಿಳು, ಅಸ್ಸಾಮಿ, ಗುಜರಾತಿ ಮುಂತಾದ ಭಾಷೆಗಳಲ್ಲಿ ಅವರು ಹಾಡಿರುವ ಹಾಡುಗಳ ಸಂಖ್ಯೆಯು 10 ಕೂಡ ದಾಟಿಲ್ಲ.

ಇನ್ನು, ಸಂಭಾವನೆ ವಿಚಾರಕ್ಕೆ ಬಂದರೆ, ಭಾರತದಲ್ಲೇ ಟಾಪ್‌ ಸಿಂಗರ್‌ ಆಗಿದ್ದರು ಅರಿಜಿತ್‌. ಒಂದು ಸಿನಿಮಾ ಹಾಡಿಗೆ ಅವರು ಸುಮಾರು 8 ಲಕ್ಷದಿಂದ 10 ಲಕ್ಷದವರೆಗೆ ಸಂಭಾವನೆ ಪಡೆಯುತ್ತಿದ್ದರಂತೆ. ಕೆಲವು ದೊಡ್ಡ ಬಜೆಟ್‌ನ ಸಿನಿಮಾಗಳಿಗೆ ಅಥವಾ ವಿಶೇಷ ಹಾಡುಗಳಿಗೆ ಈ ಮೊತ್ತ 15ರಿಂದ 20 ಲಕ್ಷದವರೆಗೂ ಇರುತ್ತಿತ್ತು ಎನ್ನಲಾಗಿದೆ. ಇನ್ನು, ಕನ್ಸರ್ಟ್ ಅಥವಾ ಲೈವ್ ಶೋಗಳು ಅರಿಜಿತ್ ಸಿಂಗ್ ಅವರ ಮುಖ್ಯ ಆದಾಯದ ಮೂಲವಾಗಿತ್ತು. ಒಂದು ಲೈವ್ ಕನ್ಸರ್ಟ್‌ಗೆ ಅವರು 2 ಕೋಟಿಯಿಂದ 5 ಕೋಟಿಯವರೆಗೆ ಸಂಭಾವನೆ ಪಡೆಯುವ ಅರಿಜಿತ್‌, ಇನ್ಮುಂದೆ ಆ ಕಡೆಗೆ ಹೆಚ್ಚು ಗಮನ ನೀಡುವ ಸಾಧ್ಯತೆ ಇದೆ.