ಸಿಸಿಟಿವಿಯಲ್ಲಿ ಸೆರೆಯಾಯ್ತು ರಣಭೀಕರ ದೃಶ್ಯ; ಅಜಿತ್ ಪವಾರ್ ಇದ್ದ ವಿಮಾನ ಪತನದ ವಿಡಿಯೋ ವೈರಲ್
Ajit Pawar Plane Crash Video: ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಇಂದು ವಿಮಾನ ಅಪಘಾತದಲ್ಲಿ ನಿಧನರಾಗಿದ್ದಾರೆ. ಬುಧವಾರ ಬೆಳಗ್ಗೆ ಮುಂಬೈನಿಂದ ಬಾರಾಮತಿಗೆ ಹೊರಟಿದ್ದ ವಿಮಾನ ಪತನಗೊಂಡು ಮೃತಪಟ್ಟಿದ್ದಾರೆ. ಪೈಲಟ್‌ಗಳು ಮತ್ತು ಪವಾರ್ ಅವರ ಭದ್ರತಾ ಸಿಬ್ಬಂದಿ ಸೇರಿದಂತೆ ಇತರ ನಾಲ್ವರು ಕೂಡ ಸಾವನ್ನಪ್ಪಿದ್ದಾರೆ. ಪುಣೆ ಜಿಲ್ಲೆಯ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಬೆಳಿಗ್ಗೆ 8.45 ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ.
ಸಂಗ್ರಹ ಚಿತ್ರ -
ಮುಂಬೈ: ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಇಂದು ವಿಮಾನ (Ajit Pawar dies) ಅಪಘಾತದಲ್ಲಿ ನಿಧನರಾಗಿದ್ದಾರೆ. ಬುಧವಾರ ಬೆಳಗ್ಗೆ ಮುಂಬೈನಿಂದ ಬಾರಾಮತಿಗೆ ಹೊರಟಿದ್ದ ವಿಮಾನ ಪತನಗೊಂಡು ಮೃತಪಟ್ಟಿದ್ದಾರೆ. ಪೈಲಟ್‌ಗಳು ಮತ್ತು ಪವಾರ್ ಅವರ ಭದ್ರತಾ ಸಿಬ್ಬಂದಿ (Ajit Pawar Plane Crash Video) ಸೇರಿದಂತೆ ಇತರ ನಾಲ್ವರು ಕೂಡ ಸಾವನ್ನಪ್ಪಿದ್ದಾರೆ. ಪುಣೆ ಜಿಲ್ಲೆಯ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಬೆಳಿಗ್ಗೆ 8.45 ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಮಾಹಿತಿಯ ಪ್ರಕಾರ, ಮುಂಬೈನಿಂದ ಬಾರಾಮತಿಗೆ ಹಾರುತ್ತಿದ್ದ ಖಾಸಗಿ ಚಾರ್ಟರ್ ವಿಮಾನವು ಇಳಿಯುವ ಕೆಲವೇ ಕ್ಷಣಗಳಿಗೆ ಮೊದಲು ಬಂಡೆಗೆ ಡಿಕ್ಕಿ ಹೊಡೆದಿದೆ. ಸದ್ಯ ಈ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಸಿಸಿಟಿವಿಯಲ್ಲಿ ಕಂಡು ಬಂದ ದೃಶ್ಯದ ಪ್ರಕಾರ ಹೆದ್ದಾರಿ ಪಕ್ಕದಲ್ಲಿಯೇ ವಿಮಾನ ಪತನಗೊಂಡಿದೆ. ಹೆದ್ದಾರಿಯಲ್ಲಿ ಕೆಲ ವಾಹನಗಳು ಸಂಚರಿಸುತ್ತಿದ್ದವು. ಏಕಾಏಕಿ ವಿಮಾನ ಬಂದು ನೆಲಕ್ಕಪ್ಪಳಿಸಿದೆ. ಬಳಿಕ ಬೆಂಕಿ ಕಾಣಿಸಿಕೊಂಡಿದೆ. ಭಾರಿ ಸ್ಫೋಟ ಸಂಭವಿಸಿತು. ವಿಮಾನ ನೆಲಕ್ಕೆ ಅಪ್ಪಳಿಸಿದ ನಂತರ, ಬೆಂಕಿಯ ಕಿಡಿಗಳು ಹರಡಿದ್ದು, ಮತ್ತು ಮತ್ತಷ್ಟು ಸ್ಫೋಟಗಳು ಸಂಭವಿಸಿದವು ಎಂದು ತಿಳಿದು ಬಂದಿದೆ. ವಿಮಾನದಲ್ಲಿ ಅಜಿತ್ ಪವಾರ್ ಅಲ್ಲದೆ, ಇಬ್ಬರು ಪೈಲಟ್‌ಗಳು ಮತ್ತು ಭದ್ರತಾ ಸಿಬ್ಬಂದಿ ಇದ್ದರು. ಇದು ಲಿಯರ್‌ಜೆಟ್ 45ಎಕ್ಸ್‌ಆರ್ ಮಾದರಿಯ ಸಣ್ಣ ವಿಮಾನವಾಗಿತ್ತು.
ಅಜಿತ್ ಪವಾರ್ ವಿಮಾನ ಪತನ ವಿಡಿಯೋ
Ajit pawar plane crash cctv footage...#AjitPawar pic.twitter.com/WamCNlDxKn
— Sonu Kanojia (@NNsonukanojia) January 28, 2026
ಬಾರಾಮತಿ ಪ್ರದೇಶದಲ್ಲಿ ಭಾರೀ ಮಂಜಿನಿಂದಾಗಿ ಕುಸಿದ ಗೋಚರತೆ ಮಟ್ಟವು( low visibility level) ಅಪಘಾತಕ್ಕೆ ಪ್ರಮುಖ ಕಾರಣ ಎಂದು ಮೂಲಗಳು ಸೂಚಿಸಿವೆ. ದಟ್ಟವಾದ ಮಂಜು ವಿಮಾನವು ತನ್ನ ಹಾದಿಯನ್ನು ಕಾಯ್ದುಕೊಳ್ಳಲು ಅಡ್ಡಿಯಾಗಿದೆ ಎಂದು ನಂಬಲಾಗಿದೆ. ಗುಡ್ಡಗಾಡು ಪ್ರದೇಶದಲ್ಲಿ ಸಂಚರಿಸುತ್ತಿದ್ದಾಗ, ವಿಮಾನವು ನಿಯಂತ್ರಣ ಕಳೆದುಕೊಂಡು ಬಂಡೆಗೆ ಡಿಕ್ಕಿ ಹೊಡೆದಿದ್ದು, ದುರಂತಕ್ಕೆ ಕಾರಣವಾಯಿತು ಎಂದು ಹೇಳಲಾಗಿದೆ.
ಮುಂಬರುವ ಜಿಲ್ಲಾ ಪರಿಷತ್ ಚುನಾವಣೆಗಾಗಿ ಸಾರ್ವಜನಿಕ ರ್‍ಯಾಲಿಗಳಲ್ಲಿ ಭಾಗವಹಿಸಲು ಅಜಿತ್ ಪವಾರ್ ಮುಂಬೈನಿಂದ ಬಾರಾಮತಿಗೆ ಪ್ರಯಾಣಿಸುತ್ತಿದ್ದರು. ಅವರು ಇಲ್ಲಿ ನಾಲ್ಕು ಕಾರ್ಯಕ್ರಮಗಳನ್ನು ಉದ್ದೇಶಿಸಿ ಮಾತನಾಡಬೇಕಿತ್ತು. ಅಪಘಾತದ ನಿಖರವಾದ ಕಾರಣವನ್ನು ನಿರ್ಧರಿಸಲು ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಉನ್ನತ ಮಟ್ಟದ ತನಿಖೆಗೆ ಆದೇಶಿಸಿದೆ. ಅಧಿಕಾರಿಗಳು ತಾಂತ್ರಿಕ ದಾಖಲೆಗಳು, ಸಂವಹನ ದಾಖಲೆಗಳು ಮತ್ತು ಪೈಲಟ್ ಇನ್‌ಪುಟ್‌ಗಳನ್ನು ಪರಿಶೀಲಿಸುತ್ತಿದ್ದಾರೆ.