Hanumantha, BBK 11: ಇನ್ನೂ 50 ಲಕ್ಷ ಸಿಕ್ಕಿಲ್ಲ: ವೇದಿಕೆ ಮೇಲೆ ಶಾಕಿಂಗ್ ಹೇಳಿಕೆ ನೀಡಿದ ಹನುಮಂತ
ಹನುಮಂತು ದಾಖಲೆಯ 5 ಕೋಟಿ 23 ಲಕ್ಷದ 89 ಸಾವಿರದ 318 (5,23,89,318) ವೋಟ್ಸ್ ಅನ್ನು ಪಡೆದುಕೊಂಡು 50 ಲಕ್ಷದ ಜೊತೆ ಬಿಗ್ ಬಾಸ್ ಟ್ರೋಫಿ ಪಡೆದುಕೊಂಡರು. ಆದರೆ ಅಸಲಿ ವಿಚಾರ ಅಂದ್ರೆ ಹನುಮಂತನಿಗೆ ಇಲ್ಲಿವರೆಗೆ ಹಣ ಕೈಸೇರಲೇ ಇಲ್ವಂತೆ. ಈ ವಿಚಾರವನ್ನು ಕಾರ್ಯಕ್ರಮದ ವೇದಿಕೆಯಲ್ಲೇ ಹನುಮಂತ ಹೇಳಿದ್ದಾರೆ.
![ಇನ್ನೂ 50 ಲಕ್ಷ ಸಿಕ್ಕಿಲ್ಲ: ವೇದಿಕೆ ಮೇಲೆ ಶಾಕಿಂಗ್ ಹೇಳಿಕೆ ನೀಡಿದ ಹನುಮಂತ](https://cdn-vishwavani-prod.hindverse.com/media/original_images/Hanumantha_7.jpg)
Hanumantha
![Profile](https://vishwavani.news/static/img/user.png)
ಹಳ್ಳಿ ಹೈದ ಹನುಮಂತ ಲಮಾಣಿ ಅವರು ಬಿಗ್ ಬಾಸ್ ಕನ್ನಡ ಸೀಸನ್ 11 ಟ್ರೋಫಿ ಗೆದ್ದ ಬಳಿಕ ಬೇಡಿಕೆ ಹೆಚ್ಚಾಗಿದೆ. ಈಗಾಗಲೇ ಕಲರ್ಸ್ ಕನ್ನಡದ ಮತ್ತೊಂದು ರಿಯಾಲಿಟಿ ಶೋ ಬಾಯ್ಸ್ vs ಗರ್ಲ್ನಲ್ಲಿ ಇವರು ಭಾಗವಹಿಸುತ್ತಿದ್ದಾರೆ. ಸಿನಿಮಾ ಆಫರ್ಗಳು ಕೂಡ ಬರುತ್ತಿವೆಯಂತೆ. ಮೊನ್ನೆಯಷ್ಟೆ ಟ್ರೋಫಿ ಹಿಡಿದುಕೊಂಡು ಹುಟ್ಟೂರಿಗೆ ಹೋದಾಗ ಇವರನ್ನು ನೋಡಲು ಜನಸಾಗರವೇ ಬಂದಿತ್ತು. ಹೀಗೆ ಹನುಮಂತನ ಹವಾ ಕರುನಾಡಲ್ಲಿ ಭರ್ಜರಿ ಆಗೇ ಇದೆ.
ಬಿಗ್ ಬಾಸ್ ಕನ್ನಡ ಇಷ್ಟು ಸೀಸನ್‌ದು ಒಂದು ಲೆಕ್ಕ, ಈ ಸೀಸನ್‌ದೆ ಇನ್ನೊಂದು ಲೆಕ್ಕ ಎಂದೇ ಹೇಳಬಹುದು. ಇಷ್ಟು ದಿನ ವೈಲ್ಡ್ ಕಾರ್ಡ್ ಎಂಟ್ರಿ ಪಡೆದ ಯಾರೊಬ್ಬರೂ ಟ್ರೋಫಿ ಎತ್ತಿರಲಿಲ್ಲ. ಆ ದಾಖಲೆಯನ್ನು ಹನುಮಂತ ಮಾಡಿದರು. ಕುರಿ ಕಾಯುತ್ತಿದ್ದ ಹಳ್ಳಿ ಹೈದ ಹನುಮಂತ ಯಾರೂ ಊಹಿಸದ ರೀತಿಯಲ್ಲಿ ಬಂದು ಸೈಲೆಂಟ್ ಆಗಿ ಟ್ರೋಫಿ ಎತ್ತಿ ಹಿಡಿದರು. ಬಿಗ್ ಬಾಸ್ ವಿನ್ ಆದ ಬಳಿಕ ಹನುಮಂತನ ಜನಪ್ರಿಯತೆ ಮತ್ತಷ್ಟು ಹೆಚ್ಚಾಗಿದೆ.
ಹನುಮಂತು ದಾಖಲೆಯ 5 ಕೋಟಿ 23 ಲಕ್ಷದ 89 ಸಾವಿರದ 318 (5,23,89,318) ವೋಟ್ಸ್ ಅನ್ನು ಪಡೆದುಕೊಂಡು 50 ಲಕ್ಷದ ಜೊತೆ ಟ್ರೋಫಿ ಪಡೆದುಕೊಂಡರು. ಆದರೆ ಅಸಲಿ ವಿಚಾರ ಅಂದ್ರೆ ಹನುಮಂತನಿಗೆ ಇಲ್ಲಿವರೆಗೆ ಹಣ ಕೈಸೇರಲೇ ಇಲ್ವಂತೆ. ಈ ವಿಚಾರವನ್ನು ಕಾರ್ಯಕ್ರಮದ ವೇದಿಕೆಯಲ್ಲೇ ಹನುಮಂತ ಹೇಳಿದ್ದಾರೆ.
ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲ್ಲೂಕಿನ ಚಿಕ್ಕಣಜಿ ಗ್ರಾಮದಲ್ಲಿ ನಡೆದ ಕಾರ್ಯಕ್ರಮಕ್ಕೆ ಹನುಮಂತ ಅತಿಥಿಯಾಗಿ ಆಗಮಿಸಿದ್ದರು. ಹನುಮಂತನ ದರ್ಶನಕ್ಕೆ ಅನೇಕರು ನೆರೆದಿದ್ದರು. ಈ ಸಮಯದಲ್ಲಿ ತಮ್ಮದೇ ಶೈಲಿಯಲ್ಲಿ ಕಪ್ ಗೆದ್ದೇನಬೇ ಅವ್ವ ಎಂದು ಡೈಲಾಗ್ ಹೊಡೆದ ಹನುಮಂತ ಐದು ಕೋಟಿ ಮತ ಹಾಕಿ ನನ್ನ ಗೆಲ್ಲಿಸಿದ ಎಲ್ಲರಿಗೆ ಧನ್ಯವಾದ ಹೇಳಿದ್ದಾರೆ.
ಇದೇ ಸಮಯದಲ್ಲಿ ಅಲ್ಲಿಯೇ ನೆರೆದ ಅಭಿಮಾನಿಯೊಬ್ಬ ಗೆದ್ದಿರೋ ಹಣ ಏನ್ಮಾಡಿದ್ರೀ? ಎಂದು ಹನುಮಂತನಿಗೆ ಪ್ರಶ್ನೆಯನ್ನು ಕೇಳಿದ್ದು ಆಗ ಹನುಮಂತ ಬಿಗ್ ಬಾಸ್‌ನಿಂದ 50 ಲಕ್ಷ ರೂ. ಇನ್ನೂ ಬಂದಿಲ್ಲ. ಬರೋಕೆ ಸ್ವಲ್ಪ ತಡವಾಗುತ್ತದೆ. ಬಂದ್ಮೇಲೆ ಹೇಳ್ತೀನಿ ಅಣ್ಣ ಆಗ ಮನೆ ಕಡೆ ಬರಬಹುದು ಎಂದು ತಮಾಷೆಯಾಗಿ ಉತ್ತರಿಸಿದ್ದಾರೆ.
ಟ್ರೋಫಿ ಜೊತೆಗೆ ಹನುಮಂತ ಅವರಿಗೆ 50 ಲಕ್ಷ ರೂಪಾಯಿ ಹಣ ಸಿಕ್ಕಿದೆ ನಿಜ. ಆದರೆ ಈ ಹಣ ಸಂಪೂರ್ಣವಾಗಿ ಗೆದ್ದ ವ್ಯಕ್ತಿಗೆ ಸಿಗುವುದಿಲ್ಲ. ಗೆದ್ದ ಹಣಕ್ಕೆ ಸರ್ಕಾರ ದೊಡ್ಡ ಮೊತ್ತದ ಟ್ಯಾಕ್ಸ್ ಹೇರುತ್ತದೆ. ಬಹುಮಾನ ಮೊತ್ತಕ್ಕೆ ಸರ್ಕಾರ ಬರೋಬ್ಬರಿ ಶೇ. 30ರಷ್ಟು ಟ್ಯಾಕ್ಸ್ ವಿಧಿಸುತ್ತದೆ. ಈ ಹಣವನ್ನು ಸಂಸ್ಥೆಯವರು ಕಡಿತ ಮಾಡಿಯೇ ವಿಜೇತರಿಗೆ ನೀಡುತ್ತಾರೆ. ಹೀಗಾಗಿ ಹನುಮಂತಗೆ ಸಿಗೋದು ಕೇವಲ 35 ಲಕ್ಷ ರೂಪಾಯಿ ಮಾತ್ರ.
Aishwarya Shindogi: ಮದುವೆಯಾಗೊ ಹುಡುಗನ ಬಗ್ಗೆ ಮಾತನಾಡಿದ ಐಶ್ವರ್ಯಾ ಸಿಂಧೋಗಿ