Bigg Boss 12: ʻಎಂಥಾ ಒಳ್ಳೇ ಮನ್ಸು ರೀ ಗಿಲ್ಲಿದು..ʼ; ಛೇ, ಕಾವ್ಯಗೆ ನೋವುಂಟು ಮಾಡಿದ್ದಕ್ಕೆ ನೆಚ್ಚಿನ ಊಟವನ್ನೇ ಬಿಟ್ರಾ ಈ ಮಾತಿನ ಮಲ್ಲ?
BBK 12: ʻಬಿಗ್ ಬಾಸ್ʼ ಮನೆಯಲ್ಲಿ ಕ್ಯಾಪ್ಟನ್ಸಿ ರೇಸ್‌ಗೆ ನೇರವಾಗಿ ಹೋಗುವ ಚಾನ್ಸ್‌ಗಾಗಿ ಕಾವ್ಯ ಅವರಿಗೆ ನೋವುಂಟು ಮಾಡಿ ಅಳಿಸುವ ಟಾಸ್ಕ್ ಅನ್ನು ಗಿಲ್ಲಿ ನಟ ಯಶಸ್ವಿಯಾಗಿ ಮುಗಿಸಿದ್ದಾರೆ. ಆದರೆ ಟಾಸ್ಕ್‌ಗಾಗಿ ಕಾವ್ಯಗೆ "ನೀವು ಫ್ರೀ ಪ್ರಾಡಕ್ಟ್" ಎಂದು ಹೇಳಿ ನೋವು ಮಾಡಿದ ಪಾಶ್ಚಾತ್ತಾಪ ಗಿಲ್ಲಿ ಅವರನ್ನು ಕಾಡುತ್ತಿದೆ. ಇದರಿಂದಾಗಿ ನೆಚ್ಚಿನ ಮಾಂಸಾಹಾರವನ್ನೂ ಗಿಲ್ಲಿ ಸೇವಿಸಿಲ್ಲ.
-
ಬಿಗ್ ಬಾಸ್ ಮನೆಯಲ್ಲಿ ಈಗ ಗಿಲ್ಲಿ ನಟಗೆ ಕ್ಯಾಪ್ಟನ್ ಆಗುವ ಚಾನ್ಸ್ ಲಭಿಸಿದೆ. ಯಾಕೆಂದರೆ, ಈ ಬಾರಿ ಗಿಲ್ಲಿ ನಟಗೆ ಬಿಗ್ ಬಾಸ್ ಒಂದು ಟಾಸ್ಕ್ ನೀಡಿದ್ದರು. ಅದರಲ್ಲಿ ಭಾಗಶಃ ಗೆದ್ದಿರುವ ಗಿಲ್ಲಿ ನಟ, ಕ್ಯಾಪ್ಟನ್ಸಿ ರೇಸ್‌ಗೆ ನೇರವಾಗಿ ಎಂಟ್ರಿ ಕೊಡುವ ಸಾಧ್ಯತೆ ಇದೆ. ಈ ಮಧ್ಯೆ ಅವರಿಗೆ ಒಂದು ನೋವು ಕಾಡುತ್ತಿದೆ. ಅದಕ್ಕಾಗಿ ಗಿಲ್ಲಿ ಊಟವನ್ನೇ ಮಾಡುತ್ತಿಲ್ಲ. ನೆಚ್ಚಿನ ಮಾಂಸಾಹಾರ ಸಿಕ್ಕಿದರೂ ಗಿಲ್ಲಿಗೆ ಊಟ ಮಾಡುವ ಮನಸ್ಸು ಆಗುತ್ತಿಲ್ಲ. ಏಕೆ? ಮುಂದೆ ಓದಿ.
ಕಾವ್ಯಗೆ ನೋವು ಮಾಡಿದ ಗಿಲ್ಲಿ
ಕ್ಯಾಪ್ಟನ್ಸಿ ರೇಸ್‌ಗೆ ನೇರವಾಗಿ ಹೋಗುವ ಚಾನ್ಸ್ ಸಿಗಬೇಕೆಂದರೆ, ಕಾವ್ಯಗೆ ಅಳಿಸಬೇಕು, ಅವರು ಕಣ್ಣೀರು ಹಾಕುವಂತೆ ಮಾಡಬೇಕು ಎಂದು ಬಿಗ್ ಬಾಸ್ ಟಾಸ್ಕ್ ನೀಡಿದ್ದರು. ಅದಕ್ಕೆ ಗಿಲ್ಲಿ ನಟ ಒಲ್ಲದ ಮನಸ್ಸಿನಿಂದಲೇ ಓಕೆ ಎಂದಿದ್ದರು. ಕಾವ್ಯಗೆ ನೋವಾಗಲಿ ಎಂದು, ಅವರ ಮುಂದೆ ಹೋಗಿ, "ಬೆನ್ನಿಗೆ ಚೂರಿ ಹಾಕಿಬಿಟ್ರಲ್ರೀ, ನಾನು ಜಂಟಿಯಾಗಿ ಹೋಗಬಾರದಿತ್ತು. ಅಲ್ಲೇ ನಾನು ತಪ್ಪು ಮಾಡಿದ್ದು.. ನಿಜವಾಗಿಯೂ ಸ್ಪಂದನಾ ಅಲ್ಲ ಲಕ್ಕಿ.. ನೀವು ಲಕ್ಕಿ.. ನಾನು ಈಗಲೂ ಹೇಳ್ತೀನಿ.. ನೀವು ಫ್ರೀ ಪ್ರಾಡಕ್ಟ್" ಎಂದು ಹೇಳಿ ಕಾವ್ಯಗೆ ನೋವು ಮಾಡಿದ್ದರು ಗಿಲ್ಲಿ ನಟ.
The Devil Movie: `ಡೆವಿಲ್' ಸಿನಿಮಾದಲ್ಲಿ ಗಿಲ್ಲಿ ನಟನ ಪರ್ಫಾರ್ಮೆನ್ಸ್ ಹೇಗಿದೆ? ನಟ ಚಂದು ಗೌಡ ಮನದಾಳದ ಮಾತು!
ಇದೆಲ್ಲವೂ ಗಿಲ್ಲಿ ಮಾಡಿದ್ದು ಬರೀ ಟಾಸ್ಕ್‌ಗಾಗಿ. ಅದು ಗಿಲ್ಲಿಗೂ ಗೊತ್ತಿದೆ. ಆದರೂ ಗಿಲ್ಲಿಗೆ ಈ ಘಟನೆ ನೋವು ತಂದಿರುವಂತೆ ಕಾಣುತ್ತಿದೆ. ಹಾಗಾಗಿ, ಕಾವ್ಯ ಅತ್ತಿರುವುದನ್ನು ಕಂಡು ಬೇಸರ ಮಾಡಿಕೊಂಡಿರುವ ಗಿಲ್ಲಿ ನಟ ಊಟವನ್ನೇ ಬಿಟ್ಟಿದ್ದಾರೆ. ರಾತ್ರಿಯಿಂದ ಊಟವನ್ನೇ ಮಾಡಿಲ್ಲ.
ಅಡುಗೆ ಉಸ್ತುವಾರಿ ವಹಿಸಿಕೊಂಡ ಗಿಲ್ಲಿ & ಅಶ್ವಿನಿ
ಹೌದು, ಇಬ್ಬರೇ ಅಡುಗೆ ಮಾಡುವುದಾಗಿ ಒಪ್ಪಿಕೊಂಡು ಬಂದಿರುವ ಅಶ್ವಿನಿ ಗೌಡ, ಗಿಲ್ಲಿ, ಅದಕ್ಕಾಗಿ ಮನೆಗೆ ಚಿಕನ್ ಮತ್ತು ಮಟನ್ ಅನ್ನು ಪಡೆದುಕೊಂಡಿದ್ದಾರೆ. ಎಲ್ಲರಿಗೂ ರುಚಿ ರುಚಿಯಾದ ಅಡುಗೆ ಮಾಡಿಕೊಟ್ಟಿದ್ದಾರೆ. ಆದರೆ ಮಾಂಸಾಹಾರ ಎಂದರೆ ಜೀವ ಬಿಡುವ ಗಿಲ್ಲಿ ಮಾತ್ರ ಊಟ ಮಾಡಿಲ್ಲ. ಕಾವ್ಯಗೆ ಬೇಸರ ಮಾಡಿದ್ದೇ ಇದಕ್ಕೆ ಕಾರಣವೇ? ಗೊತ್ತಿಲ್ಲ.
ಬಿರಿಯಾನಿ ಮಾಡಿದ್ರು ತಿಂತಿಲ್ಲ ಎಂದ ಅಶ್ವಿನಿ
ಗಿಲ್ಲಿ ನಿನ್ನೆಯಿಂದ ಇಲ್ಲಿವರೆಗೂ ಊಟ ಮಾಡಿಲ್ಲ 💔🥹
— Harsha (@Harshavardha601) December 10, 2025
ಅದು ಅವ್ನ ಇಷ್ಟ ಪಡೋ ಮಟನ್ ಬಿರಿಯಾನಿ & ನಲ್ಲಿ ಮೂಳೆ 😢#BBK12live #BBKSeason12 #BBK12 #Gilli #GilliNata pic.twitter.com/1YtYNmCRfv
ಗಿಲ್ಲಿ ಊಟ ಮಾಡಿಲ್ಲ ಎಂಬುದನ್ನು ಕಾವ್ಯ ಕೂಡ ಗಮನಿಸಿದ್ದಾರೆ. ರಜತ್ ಬಳಿ ಇದನ್ನು ಹೇಳಿರುವ ಕಾವ್ಯ, "ನಿನ್ನೆಯಿಂದ ಅವನು ಏನೂ ತಿಂತಾ ಇಲ್ಲ. ಇವಾಗಲೂ ತಿಂಡಿ ತಿಂದಿಲ್ಲ. ಅವನು ಊಟ ಮಾಡದೇ ಇರೋನೇ ಅಲ್ಲ" ಎಂದು ಹೇಳಿದ್ದಾರೆ. ಅತ್ತ ಅಶ್ವಿನಿ ಗೌಡ ಅವರಿಗೂ ಈ ವಿಚಾರ ಗೊತ್ತಾಗಿದೆ. "ಬಿರಿಯಾನಿ ಮಾಡಿದ್ರೂ ಯಾಕೆ ಅದನ್ನು ಗಿಲ್ಲಿ ತಿನ್ನುತ್ತಿಲ್ಲ" ಎಂದು ಧ್ರುವಂತ್ ಬಳಿ ಅಶ್ವಿನಿ ಹೇಳಿದ್ದಾರೆ. ಅಲ್ಲದೆ, ಗಿಲ್ಲಿಗೆ "ಬಿರಿಯಾನಿ ತಿನ್ನು ಬಾ" ಎಂದು ಕರೆದಿದ್ದಾರೆ.
ಗಿಲ್ಲಿ ಊಟ ಮಾಡಿಲ್ಲ ಎಂಬುದು ಕಾವ್ಯಗೆ ಗೊತ್ತಾಗಿದೆ
#bbk12 #bbk12live
— krishna kiran (@hotice197) December 10, 2025
Concerned Kavya discussing with Rajath about Gilly not eating since yesterday. pic.twitter.com/4Jt3wRcfOF
ಸೋಶಿಯಲ್ ಮೀಡಿಯಾದಲ್ಲಿ ಇದು ಚರ್ಚೆ ಆಗುತ್ತಿದೆ. ʻಎಂಥಾ ಒಳ್ಳೇ ಮನ್ಸು ರೀ ಗಿಲ್ಲಿದು..ʼ, ʻಗಿಲ್ಲಿ ನಿನ್ನೆಯಿಂದ ಇಲ್ಲಿವರೆಗೂ ಊಟ ಮಾಡಿಲ್ಲʼ, ʻಗಿಲ್ಲಿ ನಿನ್ನೆಯಿಂದ ಊಟ ಮಾಡದಿರುವ ಬಗ್ಗೆ ರಜತ್ ಜೊತೆ ಕಾವ್ಯ ಚರ್ಚಿಸುತ್ತಿದ್ದಾಳೆʼ, ʻಗಿಲ್ಲಿ ಪ್ಯೂರ್ ಜೆಮ್ ಕಣ್ರೋ, ಕಾವ್ಯಗೆ ಅಳಿಸಬೇಕು ಎಂದು ಹೇಳಿದಾಕ್ಷಣ ಆ ಜೀವ ಎಷ್ಟ ಒದ್ದಾಡುತ್ತಿದೆ ನೋಡ್ರೋʼ, ʻಗಿಲ್ಲಿ ನಿನ್ನೆ ರಾತ್ರಿ ಏನನ್ನೂ ತಿನ್ನಲಿಲ್ಲ ಮತ್ತು ಇಂದು ಬೆಳಿಗ್ಗೆಯೂ ಅವನು ಬಿರಿಯಾನಿ ತಿನ್ನಲು ಹೊರಟಿದ್ದನು. ಆದರೆ ಮತ್ತೆ ನಿರಾಕರಿಸಿ ತನ್ನ ಮಲಗುವ ಕೋಣೆಗೆ ಹೋದನು. ಅವನಿಗೆ ತುಂಬಾ ವಿಷಾದವಾಗುತ್ತಿದೆʼ ಎಂದು ಲೈವ್‌ನಲ್ಲಿ ಬಿಗ್ ಬಾಸ್ ನೋಡುತ್ತಿರುವ ವೀಕ್ಷಕರು ಹಂಚಿಕೊಂಡಿದ್ದಾರೆ. ಇಂದಿನ ಸಂಚಿಕೆಯಲ್ಲಿ ಈ ವಿಚಾರ ಬರಲಿದೆಯಾ? ಕಾದುನೋಡಬೇಕು.