BGMI ಗೇಮ್ ಜೊತೆ ಕೈಜೋಡಿಸಿದ ʻರಾಕಿಂಗ್ ಸ್ಟಾರ್ʼ ಯಶ್; ಬಿಡುಗಡೆಗೂ ಮುನ್ನವೇ ಗೇಮಿಂಗ್ ಲೋಕದಲ್ಲಿ ‘ಟಾಕ್ಸಿಕ್’ ಅಬ್ಬರ!
ಭಾರತದ ಜನಪ್ರಿಯ ಮೊಬೈಲ್ ಗೇಮ್ ‘ಬ್ಯಾಟಲ್‌ಗ್ರೌಂಡ್ಸ್ ಮೊಬೈಲ್ ಇಂಡಿಯಾ’ (BGMI) ʻರಾಕಿಂಗ್ ಸ್ಟಾರ್ʼ ಯಶ್ ಅಭಿನಯದ 'ಟಾಕ್ಸಿಕ್' ಚಿತ್ರದ ಜೊತೆ ಕೈಜೋಡಿಸಿ ಗೇಮಿಂಗ್ ಇತಿಹಾಸದಲ್ಲೇ ಬೃಹತ್ ಸಹಯೋಗ ಘೋಷಿಸಿದೆ. ಹೊಸ 4.4 ಅಪ್ಡೇಟ್‌ನಲ್ಲಿ 'ಯಶ್ x ಬಿಜಿಎಂಐ: ದಿ ಟಾಕ್ಸಿಕ್ ವಾಯ್ಸ್ ಪ್ಯಾಕ್' ಲಭ್ಯವಾಗಲಿದ್ದು, ಜೂನ್ 2 ರಿಂದ ಆಟಗಾರರು ಯಶ್ ಅವರ ಖಡಕ್ ಕನ್ನಡ ಮತ್ತು ಹಿಂದಿ ಧ್ವನಿಯನ್ನು ಬಳಸಬಹುದು.
-
ಭಾರತದ ಗೇಮಿಂಗ್ ಲೋಕ ಮತ್ತು ಸಿನಿಮಾ ರಂಗದ ಎರಡು ದೈತ್ಯ ಶಕ್ತಿಗಳು ಈಗ ಒಂದಾಗಿವೆ. ದೇಶದ ಅತ್ಯಂತ ಜನಪ್ರಿಯ ಮೊಬೈಲ್ ಗೇಮ್ ಆದ ‘ಬ್ಯಾಟಲ್‌ಗ್ರೌಂಡ್ಸ್ ಮೊಬೈಲ್ ಇಂಡಿಯಾ’ (BGMI), ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಚಿತ್ರ ‘ಟಾಕ್ಸಿಕ್’ ಜೊತೆ ಕೈಜೋಡಿಸಿರುವುದಾಗಿ ಅಧಿಕೃತವಾಗಿ ಘೋಷಿಸಿದೆ. ಬಿಜಿಎಂಐ ಗೇಮ್‌ನ ಹೊಸ 4.4 ಅಪ್ಡೇಟ್‌ನ ಭಾಗವಾಗಿ ಈ ವಿಶೇಷ ಸಹಯೋಗವನ್ನು ಪ್ರಕಟಿಸಲಾಗಿದ್ದು, ಇದನ್ನು 'ಯಶ್ x ಬಿಜಿಎಂಐ: ದಿ ಟಾಕ್ಸಿಕ್ ವಾಯ್ಸ್ ಪ್ಯಾಕ್' ಎಂದು ಹೆಸರಿಸಲಾಗಿದೆ. ಇದು ಬಿಜಿಎಂಐ ಇತಿಹಾಸದಲ್ಲೇ ಅತ್ಯಂತ ದೊಡ್ಡ ಸೆಲೆಬ್ರಿಟಿ ಕೊಲಾಬರೇಷನ್‌ಗಳಲ್ಲಿ ಒಂದಾಗಿದೆ.
ಎರಡು ಹಂತಗಳಲ್ಲಿ ಲಭ್ಯವಾಗಲಿದೆ ‘ಟಾಕ್ಸಿಕ್’ ಹವಾ
ಮನರಂಜನೆ, ಅಭಿಮಾನಿ ಬಳಗ ಮತ್ತು ಇಂಟರಾಕ್ಟಿವ್ ಗೇಮಿಂಗ್ ಜಗತ್ತನ್ನು ಬೆಸೆಯುವ ಈ ವಿಶೇಷ ಆಫರ್ ಒಟ್ಟು ಎರಡು ಹಂತಗಳಲ್ಲಿ ಗೇಮರ್‌ಗಳಿಗೆ ಲಭ್ಯವಾಗಲಿದೆ. ಗೇಮರ್‌ಗಳು 'ಟಾಕ್ಸಿಕ್ ಎಕ್ಸ್‌ಚೇಂಜ್ ಈವೆಂಟ್'ನಲ್ಲಿ ಭಾಗವಹಿಸಬಹುದಾಗಿದೆ. ಇದರಲ್ಲಿ ದಿನನಿತ್ಯದ ಮಿಷನ್‌ಗಳನ್ನು ಪೂರ್ಣಗೊಳಿಸುವ ಮೂಲಕ ಟಾಕ್ಸಿಕ್ ಡ್ಯಾಡಿ ಟ್ರೆಂಚ್‌ಕೋಟ್, ಟಾಕ್ಸಿಕ್ ಪ್ಯಾರಾಶೂಟ್, ಟಾಕ್ಸಿಕ್ ಅವತಾರ್, ಅವತಾರ್ ಫ್ರೇಮ್ ಸೇರಿದಂತೆ ಹಲವು ಆಕರ್ಷಕ ಇನ್-ಗೇಮ್ ರಿವಾರ್ಡ್ಸ್‌ಗಳನ್ನು ಪಡೆದುಕೊಳ್ಳಬಹುದು. ಇದರೊಂದಿಗೆ ಲಿಮಿಟೆಡ್ ವಾಯ್ಸ್ ಪ್ಯಾಕ್‌ಗಳು ಕೂಡ ಕನ್ನಡ ಮತ್ತು ಹಿಂದಿಯಲ್ಲಿ ಸಿಗಲಿವೆ.
ಎರಡನೇ ಹಂತದಲ್ಲಿ ಏನು ಸಿಗಲಿದೆ?
ಜೂನ್ 2 ರಿಂದ ಆಟಗಾರರಿಗೆ 'ಟಾಕ್ಸಿಕ್ ವಾಯ್ಸ್ ಪ್ಯಾಕ್ ಕ್ರೇಟ್' ಲಭ್ಯವಾಗಲಿದ್ದು, ಗೇಮರ್‌ಗಳು ರಾಕಿಂಗ್ ಸ್ಟಾರ್ ಯಶ್ ಅವರ ಖಡಕ್ ಧ್ವನಿಯ ವಿಶೇಷ ವಾಯ್ಸ್ ಪ್ಯಾಕ್ ಗಳನ್ನು ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಗೇಮ್‌ನೊಳಗೆ ಬಳಸಬಹುದಾಗಿದೆ.
ಗೇಮಿಂಗ್ ಜಗತ್ತಿನಲ್ಲಿ ರಾಕಿ ಭಾಯ್ ಅಧಿಪತ್ಯ
The Battlegrounds have gotten just more intense with #ToxicTheMovie
— TOXIC (@Toxic_themovie) May 27, 2026
🔥
Experience the exclusive #Toxic voice pack in #BGMI. Live Tomorrow! ☣️💥#BGMIxToxic #BGMIxYash @TheNameIsYash @KvnProductions #MonsterMindCreations pic.twitter.com/N9djzOn26i
ಇದರ ಬಗ್ಗೆ ಯಶ್ ಏನಂದ್ರು?
"ಇಂದಿನ ಜೆನ್ ಜೀ (Gen Z) ಪೀಳಿಗೆಯು ಸದಾ ರೋಮಾಂಚಕವಾದ ಮತ್ತು ವಿಶಿಷ್ಟ ಕಲ್ಪನೆಗಳ ಕಥಾಹಂದರವನ್ನು ಬಯಸುತ್ತದೆ. ಈ ಮನೋಭಾವ ನಮ್ಮ 'ಟಾಕ್ಸಿಕ್' ಚಿತ್ರದ ವೈಬ್‌ಗೆ ಸಂಪೂರ್ಣವಾಗಿ ಮ್ಯಾಚ್ ಆಗುತ್ತದೆ. ಬಿಜಿಎಂಐನಲ್ಲಿ ನನ್ನನ್ನು ಆಕರ್ಷಿಸಿದ್ದು ಅಲ್ಲಿನ ಗೇಮಿಂಗ್ ಸಮುದಾಯವು ಅದನ್ನು ಬಳಸಿಕೊಳ್ಳುವ ರೀತಿ. ಭಾರತದ ಅತ್ಯಂತ ಉತ್ಸಾಹಿ ಯುವ ಸಮುದಾಯಕ್ಕೆ ನನ್ನ ಧ್ವನಿ ಹಾಗೂ 'ಟಾಕ್ಸಿಕ್' ಚಿತ್ರವನ್ನು ತಲುಪಿಸುತ್ತಿರುವುದು ಒಂದು ಅದ್ಭುತ ಅನುಭವ" ಎಂದು ಹರ್ಷ ವ್ಯಕ್ತಪಡಿಸಿದ್ದಾರೆ ರಾಕಿಂಗ್ ಸ್ಟಾರ್ ಯಶ್.
Hari Paraak Column: ಟಾಕ್ಸಿಕ್, ಧುರಂದರ್-2 ಮಧ್ಯೆ ಯುದ್ದ ನಿಲ್ಸಿದ್ದು ನಾನೇ: ಟ್ರಂಪ್
"ಯಶ್ ಅವರು ಪ್ಯಾನ್-ಇಂಡಿಯಾ ಸೂಪರ್‌ಸ್ಟಾರ್. ಅವರ ಸ್ವಂತ ಧ್ವನಿ ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಲಭ್ಯವಿರಲಿದ್ದು, ಆಟಗಾರರು ಪ್ರತಿ ಬಾರಿ ಪಂದ್ಯವನ್ನು ಆಡುವಾಗಲೂ ಯಶ್ ಅವರ ಉಪಸ್ಥಿತಿಯನ್ನು ನಿಜವಾಗಿ ಅನುಭವಿಸಲಿದ್ದಾರೆ" ಎಂದು ಕ್ರಾಫ್ಟನ್ ಇಂಡಿಯಾದ ಬಿಸಿನೆಸ್ ಡೆವಲಪ್‌ಮೆಂಟ್ ಹೆಡ್ ಸಿದ್ದಾರ್ಥ್ ಮೆಹ್ರೋತ್ರಾ ಹೇಳಿದ್ದಾರೆ.
ಅತೀ ಶೀಘ್ರದಲ್ಲೇ ಟಾಕ್ಸಿಕ್ ರಿಲೀಸ್
ಗೀತು ಮೋಹನದಾಸ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್' ಚಿತ್ರದಲ್ಲಿ ಯಶ್ ಜೊತೆಗೆ ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ರುಕ್ಮಿಣಿ ವಸಂತ್ ಮತ್ತು ತಾರಾ ಸುತಾರಿಯಾ ಸೇರಿದಂತೆ ದೊಡ್ಡ ತಾರಾಬಳಗವೇ ಇದೆ. ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಸಂಸ್ಥೆಗಳು ಜಂಟಿಯಾಗಿ ನಿರ್ಮಿಸುತ್ತಿರುವ ಈ ಬೃಹತ್ ಆಕ್ಷನ್ ಸಿನಿಮಾ, ಸದ್ಯ ಕನ್ನಡ, ಇಂಗ್ಲಿಷ್, ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲೂ ಏಕಕಾಲಕ್ಕೆ ಅತೀ ಶೀಘ್ರದಲ್ಲೇ ಟಾಕ್ಸಿಕ್ ರಿಲೀಸ್ ಆಗಲಿದೆ.