ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

3 ವರ್ಷಗಳ ನಂತರ ತೆರೆಮೇಲೆ ಮೋಡಿ ಮಾಡಲು ಬರ್ತಿದ್ದಾರೆ‌ ನಟಿ ಸಮಂತಾ; ಗೆಲುವಿನ ಚಿನ್ನ ತರಲಿದೆಯಾ ʻಮಾ ಇಂಟಿ ಬಂಗಾರಂʼ?

ನಟಿ ಸಮಂತಾ ಮೂರು ವರ್ಷಗಳ ಸುದೀರ್ಘ ಬಿಡುವಿನ ನಂತರ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ 'ಮಾ ಇಂಟಿ ಬಂಗಾರಂ' ಚಿತ್ರದ ಹೈ-ವೋಲ್ಟೇಜ್ ಆಕ್ಷನ್ ಟ್ರೇಲರ್ ಬಿಡುಗಡೆಯಾಗಿದೆ. ನಂದಿನಿ ರೆಡ್ಡಿ ನಿರ್ದೇಶನದ ಈ ಮಾಸ್ ಫ್ಯಾಮಿಲಿ ಎಂಟರ್‌ಟೇನರ್‌ನಲ್ಲಿ ಸಮಂತಾ ಸೀರೆ ಧರಿಸಿ ಸಾಹಸ ದೃಶ್ಯಗಳನ್ನು ಮಾಡಿದ್ದಾರೆ.

'ಮಾ ಇಂಟಿ ಬಂಗಾರಂ' ಟ್ರೇಲರ್‌ ರಿಲೀಸ್; ಖಳರನ್ನು ಚಚ್ಚಿ ಹಾಕಿದ ಸಮಂತಾ

-

Avinash GR
Avinash GR May 27, 2026 4:45 PM

ಬಹುಭಾಷಾ ನಟಿ ಸಮಂತಾ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಆಕ್ಷನ್ ಡ್ರಾಮಾ ‘ಮಾ ಇಂಟಿ ಬಂಗಾರಂ’ ಚಿತ್ರದ ಅಧಿಕೃತ ಟ್ರೇಲರ್ ಅನ್ನು ಚಿತ್ರತಂಡ ಇತ್ತೀಚೆಗಷ್ಟೇ ಬಿಡುಗಡೆ ಮಾಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಟ್ರೇಲರ್ ಲಿಂಕ್ ಹಂಚಿಕೊಂಡಿರುವ ಸಮಂತಾ, "ನನ್ನ ಪ್ರಾಣವೇ ಪಣಕ್ಕಿಟ್ಟರೂ.. ನನ್ನ ಕುಟುಂಬಕ್ಕೆ ಏನೂ ಆಗದಂತೆ ನಾನು ನೋಡಿಕೊಳ್ಳುತ್ತೇನೆ. ‘ಮಾ ಇಂಟಿ ಬಂಗಾರಂ’ ಈಗ ಹೊರಬಂದಿದೆ! ಹೊಸ ಟ್ವಿಸ್ಟ್ ಒಳಗೊಂಡಿರುವ ಈ ಮಾಸ್ ಫ್ಯಾಮಿಲಿ ಎಂಟರ್‌ಟೇನರ್‌ ಜೂನ್ 19 ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ" ಎಂದು ಬರೆದುಕೊಂಡಿದ್ದಾರೆ.

‘ಮಾ ಇಂಟಿ ಬಂಗಾರಂ’ ಟ್ರೇಲರ್‌ನಲ್ಲಿ ಏನಿದೆ?

ಟ್ರೇಲರ್‌ನ ಆರಂಭದಲ್ಲಿ ಸಮಂತಾ ತನ್ನ ಹುಡುಗನ ಮನೆಗೆ ಬರುವ ದೃಶ್ಯವಿದೆ. ಅಲ್ಲಿ ಅವಳಿಗೆ ಸಾಲು ಸಾಲು ಪ್ರಶ್ನೆಗಳು ಎದುರಾಗುತ್ತವೆ. ಈಕೆಯನ್ನು ಪ್ರೀತಿಸಿದ ಆಕೆಯ ಜೊತೆಗಾರ ಎರಡು ವರ್ಷಗಳ ಕಾಲ ಅವಳಿಗಾಗಿ ಕಾದಿರುತ್ತಾನೆ. ಈಗ ಆಕೆ ಅವನ ಮನೆಗೆ ಬಂದು ಸೇರಿಕೊಂಡಿದ್ದಾಳೆ ಎಂಬ ಸುಳಿವನ್ನು ಟ್ರೇಲರ್ ನೀಡುತ್ತದೆ. ಅಲ್ಲಿನ ಕುಟುಂಬದ ಸದಸ್ಯರು ಆಕೆಗೆ ಜಾತಿ ಯಾವುದು? ಅಡುಗೆ ಮಾಡಲು ಬರುತ್ತದೆಯೇ? ಎಷ್ಟು ಜನ ಒಡಹುಟ್ಟಿದವರಿದ್ದಾರೆ ಎಂದೆಲ್ಲಾ ಕೇಳುತ್ತಾರೆ. ಆದರೆ ಈ ಪ್ರಶ್ನೆಗಳು ಆಕೆಗೆ ಒಬ್ಬ ಅಪರಾಧಿಯನ್ನು ವಿಚಾರಣೆ ನಡೆಸಿದಂತೆ ಭಾಸವಾಗುತ್ತದೆ.

Samantha Ruth Prabhu: ಸಮಂತಾ-ನೀಡಿಮೋರ್ ಡೇಟಿಂಗ್ ಮಾಡುತ್ತಿರುವುದು ನಿಜವೇ? ಏನು ಹೇಳುತ್ತಿವೆ ಈ ಚಿತ್ರಗಳು?

ಈ ವೇಳೆ ಆ ಮನೆಯ ಸೊಸೆಯಂದಿರ ಸ್ಥಿತಿಯ ಬಗ್ಗೆ ಬೇಸರ ವ್ಯಕ್ತಪಡಿಸುವ ಸಮಂತಾ, "ಒಬ್ಬ ಸೊಸೆಯನ್ನು ಆದರ್ಶ ಮಹಿಳೆಯಾಗಿ ನೋಡಬೇಕಾದರೆ ಆಕೆಯ ಬಳಿ ಹಲವು ಗುಣಗಳನ್ನು ನಿರೀಕ್ಷಿಸಲಾಗುತ್ತದೆ. ಆಕೆ ಸುಂದರವಾಗಿರಬೇಕು, ಸಣ್ಣಗಿರಬೇಕು, ಸಂಸ್ಕಾರವಂತಳಾಗಿರಬೇಕು, ಅಡುಗೆ ಮತ್ತು ಹಾಡುಗಾರಿಕೆ ಗೊತ್ತಿರಬೇಕು" ಎನ್ನುತ್ತಾ, ತಕ್ಷಣವೇ "ನನ್ನ ಹತ್ತಿರ ಈ ಯಾವುದೇ ಗುಣಗಳಿಲ್ಲ. ಆದರೆ ನನ್ನಲ್ಲಿ ಒಂದು ಗುಣವಿದೆ. ನನ್ನ ಕುಟುಂಬವನ್ನು ಸುರಕ್ಷಿತವಾಗಿಡಲು ನಾನು ಏನನ್ನು ಬೇಕಾದರೂ ಪಣಕ್ಕಿಡಬಲ್ಲೆ" ಎಂದು ಹೇಳುತ್ತಾರೆ.

ಇದಾದ ಬೆನ್ನಲ್ಲೇ ಸಮಂತಾ ವಿಲನ್‌ಗಳನ್ನು ಮನಬಂದಂತೆ ಚಚ್ಚಿ ಹಾಕುವ ಭರ್ಜರಿ ಆಕ್ಷನ್ ದೃಶ್ಯಗಳು ಬರುತ್ತವೆ. ಟ್ರೇಲರ್ ನೋಡಿದರೆ ಇಡೀ ಸಿನಿಮಾ ಸಾಹಸ ದೃಶ್ಯಗಳಿಂದ ತುಂಬಿರುವುದು ಸ್ಪಷ್ಟವಾಗುತ್ತದೆ. ಚಿತ್ರದಲ್ಲಿ ಸಮಂತಾ ತನ್ನ ಪ್ರಸ್ತುತ ಕುಟುಂಬದಿಂದ ಮರೆಮಾಚಿರುವ ಒಂದು ಫ್ಲಾಶ್‌ಬ್ಯಾಕ್ ಹೊಂದಿರುವುದು ಗೊತ್ತಾಗುತ್ತದೆ. ಈ ಚಿತ್ರದ ಮತ್ತೊಂದು ಪ್ರಮುಖ ವಿಶೇಷವೆಂದರೆ, ಸಮಂತಾ ಹೆಚ್ಚಿನ ಆಕ್ಷನ್ ದೃಶ್ಯಗಳನ್ನು ಸೀರೆ ಧರಿಸಿಯೇ ಮಾಡಿದ್ದಾರೆ!

Samantha: ʻನಿಮ್ಮ ಸಿನಿಮಾದಲ್ಲಿ ಹೀರೋ ಯಾರುʼ ಅಂತ ಪ್ರಶ್ನಿಸಿದ್ದಕ್ಕೆ ನಟಿ ಸಮಂತಾ ಕೆಂಡ!

ಪತಿಯೇ ಇದರ ರೈಟರ್‌

'ಮಾ ಇಂಟಿ ಬಂಗಾರಂ' ಚಿತ್ರವನ್ನು ಖ್ಯಾತ ಕ್ರಿಯೇಟರ್ ರಾಜ್ ನಿಡಿಮೋರು ಬರೆದಿದ್ದು, ನಂದಿನಿ ರೆಡ್ಡಿ ನಿರ್ದೇಶಿಸಿದ್ದಾರೆ. ಪತ್ನಿ ಸಮಂತಾಗೆ ಸಖತ್‌ ಆಕ್ಷನ್‌ ಅವತಾರವನ್ನೇ ನೀಡಿದ್ದಾರೆ ರಾಜ್ ನಿಡಿಮೋರು. ಈ ಚಿತ್ರದಲ್ಲಿ ಕನ್ನಡ ನಟರಾದ ದಿಗಂತ್ ಮತ್ತು ಗುಲ್ಶನ್ ದೇವಯ್ಯ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ಪೋಷಕ ಪಾತ್ರಗಳಲ್ಲಿ ಶ್ರೀಮುಖಿ, ಗೌತಮಿ, ಆನಂದ್, ಲಕ್ಷ್ಮಿ, ಶ್ರೀನಿವಾಸ್ ಗಾವಿರೆಡ್ಡಿ ಮತ್ತು ಮಂಜುಷಾ ಕಾಣಿಸಿಕೊಂಡಿದ್ದಾರೆ. ಸ್ವತಃ ಸಮಂತಾ ಅವರ 'ತ್ರಲಾಲ ಮೂವಿಂಗ್ ಪಿಕ್ಚರ್ಸ್' ಈ ಚಿತ್ರವನ್ನು ನಿರ್ಮಿಸಿದೆ.

ಮೂರು ವರ್ಷಗಳ ನಂತರ ತೆರೆಮೇಲೆ ಸಮಂತಾ

2023ರಲ್ಲಿ ಶಾಕುಂತಲಂ ಮತ್ತು ಖುಷಿ ಸಿನಿಮಾಗಳಲ್ಲಿ ಸಮಂತಾ ನಟಿಸಿದ್ದರು. ಆದಾದ ಮೇಲೆ ಅವರು ನಾಯಕಿಯಾಗಿ ನಟಿಸಿರುವ ಯಾವುದೇ ಸಿನಿಮಾಗಳು ಬಂದಿರಲಿಲ್ಲ. ಅಲ್ಲದೆ, ಶಾಕುಂತಲಂ ಮತ್ತು ಖುಷಿ ಸಿನಿಮಾಗಳು ಹೇಳಿಕೊಳ್ಳುವಂತಹ ಸಾಧನೆ ಮಾಡಿರಲಿಲ್ಲ. ಇನ್ನು, 2025ರಲ್ಲಿ ಶುಭಂ ಸಿನಿಮಾವನ್ನು ಸಮಂತಾ ನಿರ್ಮಾಣ ಮಾಡಿದ್ದರು. ಆದರೆ ಈ ಬಾರಿ ನಿರ್ಮಾಣದ ಜೊತೆಗೆ ನಾಯಕಿಯಾಗಿಯೂ ಸಮಂತಾ ಕಾಣಿಸಿಕೊಂಡಿದ್ದು, ಈ ಬಾರಿ ದೊಡ್ಡ ಗೆಲುವನ್ನು ಸಮಂತಾ ಪಡೆಯಲಿದ್ದಾರಾ? ತೆರೆಮೇಲೆ ಮೋಡಿ ಮಾಡಲಿದ್ದಾರಾ ಎಂಬುದನ್ನು ಕಾದುನೋಡಬೇಕು.