ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಆರೇ ದಿನಕ್ಕೆ ʻಆಡುಜೀವಿತಂʼ ದಾಖಲೆ ಧೂಳೀಪಟ ಮಾಡಿದ ʻದೃಶ್ಯಂ 3ʼ; ಬಾಕ್ಸ್‌ ಆಫೀಸ್‌ನಲ್ಲಿ ಮೋಹನ್‌ಲಾಲ್ ಮ್ಯಾಜಿಕ್‌!

ಜೀತು ಜೋಸೆಫ್ ನಿರ್ದೇಶನದ ಹಾಗೂ ಮೋಹನ್‌ಲಾಲ್ ನಟನೆಯ ‘ದೃಶ್ಯಂ 3’ ಸಿನಿಮಾ ವಾರದ ದಿನಗಳಲ್ಲೂ ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಕಲೆಕ್ಷನ್‌ ಮಾಡುತ್ತಾ ತನ್ನ ಗೆಲುವಿನ ನಾಗಾಲೋಟವನ್ನು ಮುಂದುವರಿಸಿದೆ. ಕೇವಲ 6 ದಿನಗಳಲ್ಲೇ ವಿಶ್ವಾದ್ಯಂತ 170.32 ಕೋಟಿ ರೂಪಾಯಿಗಳ ಗಡಿಯನ್ನು ದಾಟುವ ಮೂಲಕ ‘ಆಡುಜೀವಿತಂ’ ಚಿತ್ರದ ಲೈಫ್‌ಟೈಮ್ ದಾಖಲೆಯನ್ನು ಹಿಂದಿಕ್ಕಿದೆ.

Mohanlal: 200 ಕೋಟಿ ಕ್ಲಬ್‌ನತ್ತ ಮುನ್ನುಗ್ಗುತ್ತಿದೆ ʻದೃಶ್ಯಂ 3ʼ

-

Avinash GR
Avinash GR May 27, 2026 3:43 PM

ಮೋಹನ್‌ಲಾಲ್ ನಟನೆಯ ಮತ್ತು ಜೀತು ಜೋಸೆಫ್ ನಿರ್ದೇಶನದ ‘ದೃಶ್ಯಂ 3’ ಸಿನಿಮಾ ವಾರದ ದಿನಗಳಲ್ಲೂ ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಕಲೆಕ್ಷನ್‌ ಮಾಡುತ್ತಾ ತನ್ನ ಗೆಲುವಿನ ನಾಗಾಲೋಟವನ್ನು ಮುಂದುವರಿಸಿದೆ. ಮಂಗಳವಾರ ಸ್ಥಿರವಾದ ಕಲೆಕ್ಷನ್ ಕಾಯ್ದುಕೊಂಡಿರುವ ಈ ಚಿತ್ರ, ಬಿಡುಗಡೆಯಾದ ಕೇವಲ 6 ದಿನಗಳಲ್ಲೇ ವಿಶ್ವಾದ್ಯಂತ 170 ಕೋಟಿ ರೂಪಾಯಿಗಳ ಗಡಿಯನ್ನು ದಾಟಿದೆ.

ಭಾರತದಲ್ಲಿ 68.60 ರೂ. ಕಲೆಕ್ಷನ್‌

'ಸ್ಯಾಕ್ನಿಲ್ಕ್' ವರದಿಯ ಪ್ರಕಾರ, ಈ ಚಿತ್ರವು ಭಾರತದಲ್ಲಿ 6ನೇ ದಿನ (ಮಂಗಳವಾರ) 6.45 ಕೋಟಿ ರೂಪಾಯಿಗಳ ನಿವ್ವಳ ಗಳಿಕೆ ಮಾಡಿದೆ. ಇದು ಸೋಮವಾರದ ಕಲೆಕ್ಷನ್‌ಗೆ (7.70 ಕೋಟಿ ರೂ.) ಹೋಲಿಸಿದರೆ ಶೇ.16.2 ರಷ್ಟು ಕುಸಿತ ಕಂಡಿದ್ದರೂ, ಇದು ಉತ್ತಮ ಗಳಿಕೆಯಾಗಿದೆ. ಇದರೊಂದಿಗೆ ಚಿತ್ರದ ಒಟ್ಟು ಭಾರತದ ನಿವ್ವಳ ಕಲೆಕ್ಷನ್ 79.62 ಕೋಟಿ ರೂಪಾಯಿ ತಲುಪಿದೆ.

Drishyam 3 Update: 'ದೃಶ್ಯಂ 3' ಕುರಿತು ನಟ ಮೋಹನ್ ಲಾಲ್ ಕೊಟ್ರು ಬಿಗ್ ಅಪ್‌ಡೇಟ್‌

ವಿದೇಶಿ ಮಾರುಕಟ್ಟೆಯಲ್ಲಿ ದೃಶ್ಯಂ 3 ಅಬ್ಬರ

ಮಂಗಳವಾರ ದೇಶಾದ್ಯಂತ ಒಟ್ಟು 4,668 ಪ್ರದರ್ಶನಗಳನ್ನು ಕಂಡ ಈ ಚಿತ್ರವು ಓವರ್‌ಸೀಸ್‌ ಮಾರುಕಟ್ಟೆಯಲ್ಲಿ 6 ಕೋಟಿ ರೂಪಾಯಿ ಗಳಿಸಿದೆ. ಇದರೊಂದಿಗೆ ಚಿತ್ರದ ಒಟ್ಟು ವಿದೇಶಿ ಗಳಿಕೆ 90.70 ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ. ಪ್ರಸ್ತುತ ಚಿತ್ರದ ವಿಶ್ವಾದ್ಯಂತ ಒಟ್ಟು ಕಲೆಕ್ಷನ್ 170.32 ಕೋಟಿ ರೂಪಾಯಿ ಆಗಿದೆ.

ಆರೇ ದಿನಕ್ಕೆ ಇಷ್ಟೊಂದು ದೊಡ್ಡ ಮೊತ್ತವನ್ನು ಕಲೆಹಾಕುವ ಮೂಲಕ ‘ದೃಶ್ಯಂ 3’ ಸಿನಿಮಾವು ಪೃಥ್ವಿರಾಜ್ ಸುಕುಮಾರನ್ ನಟನೆಯ ಹಾಗೂ ಬ್ಲೆಸ್ಸಿ ನಿರ್ದೇಶನದ ‘ಆಡುಜೀವಿತಂ’ (ಜಾಗತಿಕ ಗಳಿಕೆ 157.6 ಕೋಟಿ ರೂ.) ಚಿತ್ರದ ಲೈಫ್‌ಟೈಮ್ ಕಲೆಕ್ಷನ್ ದಾಖಲೆಯನ್ನು ಹಿಂದಿಕ್ಕಿದೆ. ಈ ಚಿತ್ರವು ಈಗ ವಿಶ್ವಾದ್ಯಂತ ಅತಿ ಹೆಚ್ಚು ಗಳಿಕೆ ಮಾಡಿದ 7ನೇ ಮಲಯಾಳಂ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

Drishyam 3 trailer out: ದೃಶ್ಯಂ 3 ಟ್ರೈಲರ್‌ ಔಟ್‌! ಜಾರ್ಜ್‌ಕುಟ್ಟಿಗೆ ಇದೇಕೆ ಪಶ್ಚಾತ್ತಾಪ, ಭಯ?

ಅಲ್ಲದೆ, 2026 ರಲ್ಲಿ ‘ವಾಳಾ 2’ (Vaazha II) ನಂತರ 150 ಕೋಟಿ ರೂಪಾಯಿಗಳ ಗಡಿ ದಾಟಿದ ಎರಡನೇ ಮಲಯಾಳಂ ಸಿನಿಮಾ ಇದಾಗಿದೆ. ಜೊತೆಗೆ ಮೋಹನ್‌ಲಾಲ್ ಅವರ ವೃತ್ತಿಜೀವನದಲ್ಲಿ ‘ಥುಡರುಂ’ (Thudarum) ಮತ್ತು ‘L2: ಎಂಪೂರನ್’ ಚಿತ್ರಗಳ ನಂತರ 200 ಕೋಟಿ ಕ್ಲಬ್‌ನತ್ತ ಮುನ್ನುಗ್ಗುತ್ತಿರುವ ಮೂರನೇ ಚಿತ್ರ ಇದಾಗಿದೆ.

ಮೋಹನ್‌ಲಾಲ್‌ ಜೊತೆಗೆ ಮೀನಾ, ಆಶಾ ಶರತ್‌, ಮುರಳಿ ಗೋಪಿ, ಸಿದ್ಧಿಕಿ, ಅನ್ಸಿಬಾ ಹಾಸನ್, ಎಸ್ತರ್ ಅನಿಲ್, ಕಲಾಭವನ್ ಶಾಜೋನ್, ಬೀಜು ಮೆನನ್ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಆಂಟೋನಿ ಪೆರುಂಬಾವೂರ್ ಈ ಚಿತ್ರವನ್ನು ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ.‌