ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Bhagyalakshmi Serial Kannada: ಕನ್ನಿಕಾ ಅಸಲಿ ಮುಖ ರಿವೀಲ್‌! ಆದಿ ಮುಂದಿನ ನಿರ್ಧಾರ ಏನು?

Bhagyalakshmi Serial Kannada: ಗಂಡ ಏನೇ ಮಾಡಿದರೂ ಸಹಿಸಿಕೋ ಎಂದು ಹೇಳುವ ಸಮಾಜಕ್ಕೆ ಭಾಗ್ಯ ಪಾತ್ರ ಸವಾಲ್‌ ಹಾಕಿದೆ. ‘ಭಾಗ್ಯಲಕ್ಷ್ಮೀ’ ಧಾರಾವಾಹಿ ಒಂದೊಳ್ಳೆ ಸಂದೇಶದ ಮೂಲಕ ವೀಕ್ಷಕರಿಗೆ ಮನರಂಜನೆ ನೀಡುತ್ತಿದೆ. ಮಹಿಳೆಯ ಶಿಕ್ಷಣ, ಅವಳ ಆಸೆ, ಕನಸು, ತ್ಯಾಗ ಎಲ್ಲವನ್ನು ಒಳಗೊಂಡ ಭಾಗ್ಯ ಪಾತ್ರ ಅನೇಕ ಹೆಣ್ಮಕ್ಕಳಿಗೆ ಮಾದರಿಯಾಗಿದೆ. ಇದೀಗ ಭಾಗ್ಯಲಕ್ಷ್ಮಿ ಧಾರಾವಾಹಿ ಈಗ ರೋಚಕ ಘಟ್ಟಕ್ಕೆ ಬಂದು ತಲುಪಿದೆ. ಪ್ರೇಕ್ಷಕರು ಕುತೂಹಲದಿಂದ ಕಾಯುತ್ತಿದ್ದ ಕ್ಷಣ ಈಗ ಎದುರಾಗಿದೆ. ಕನ್ನಿಕಾಗೆ ಮುಖಭಂಗವಾಗಿದೆ.

ಕನ್ನಿಕಾ ಅಸಲಿ ಮುಖ ರಿವೀಲ್‌! ಆದಿ ಮುಂದಿನ ನಿರ್ಧಾರ ಏನು?

ಭಾಗ್ಯಲಕ್ಷ್ಮೀ ಧಾರಾವಾಹಿ -

Yashaswi Devadiga
Yashaswi Devadiga Mar 30, 2026 7:20 PM

ಗಂಡ ಏನೇ ಮಾಡಿದರೂ ಸಹಿಸಿಕೋ ಎಂದು ಹೇಳುವ ಸಮಾಜಕ್ಕೆ ಭಾಗ್ಯ ಪಾತ್ರ ಸವಾಲ್‌ ಹಾಕಿದೆ. ‘ಭಾಗ್ಯಲಕ್ಷ್ಮೀ’ (bhagyalakshmi serial kannada) ಧಾರಾವಾಹಿ ಒಂದೊಳ್ಳೆ ಸಂದೇಶದ ಮೂಲಕ ವೀಕ್ಷಕರಿಗೆ ಮನರಂಜನೆ ನೀಡುತ್ತಿದೆ. ಮಹಿಳೆಯ ಶಿಕ್ಷಣ, ಅವಳ ಆಸೆ, ಕನಸು, ತ್ಯಾಗ ಎಲ್ಲವನ್ನು ಒಳಗೊಂಡ ಭಾಗ್ಯ ಪಾತ್ರ ಅನೇಕ ಹೆಣ್ಮಕ್ಕಳಿಗೆ ಮಾದರಿಯಾಗಿದೆ. ಇದೀಗ ಭಾಗ್ಯಲಕ್ಷ್ಮಿ ಧಾರಾವಾಹಿ (Serial) ಈಗ ರೋಚಕ ಘಟ್ಟಕ್ಕೆ ಬಂದು ತಲುಪಿದೆ. ಪ್ರೇಕ್ಷಕರು ಕುತೂಹಲದಿಂದ ಕಾಯುತ್ತಿದ್ದ ಕ್ಷಣ ಈಗ ಎದುರಾಗಿದೆ. ಕನ್ನಿಕಾಗೆ (Kannika) ಮುಖಭಂಗವಾಗಿದೆ.

ಕನ್ನಿಕಾ ಅಸಲಿ ಮುಖ ರಿವೀಲ್‌

ಕನ್ನಿಕಾ ಸದಾ ಒಂದಲ್ಲ ಒಂದು ಪ್ಲ್ಯಾನ್‌ ಮಾಡಿ ಭಾಗ್ಯಳಿಗೆ ಮುಖಭಂಗ ಮಾಡಬೇಕು, ಸೋಲಿಸಬೇಕು ಅಂತ ಪ್ಲ್ಯಾನ್‌ ಮಾಡುತ್ತಲೇ ಇರ್ತಾಳೆ. ಕನ್ನಿಕಾಳ ಅಸಲಿ ಮುಖ ಎಲ್ಲರ ಮುಂದೆ ಬಯಲಾಗುತ್ತಿದೆ.

ಇದನ್ನೂ ಓದಿ: Rishab Shetty: ರಕ್ಷಿತ್‌ ಶೆಟ್ಟಿ ಸೇರಿ ಎಲ್ಲರನ್ನ ಅನ್‌ಫಾಲೋ ಮಾಡಿದ ರಿಷಬ್‌ ಶೆಟ್ಟಿ!

ಭಾಗ್ಯಗೆ ಆಸ್ತಿನೇ ಮುಖ ಅಂತ ಕನ್ನಿಕಾ ಎಲ್ಲರ ಮುಂದೆ ಹೇಳಿದಾಗ, ಈ ಒಡವೆ, ಆಸ್ತಿ ಅಂತಸ್ತು ನನಗೆ ಮುಖ್ಯವಲ್ಲ ಎಂದು ಭಾಗ್ಯ ಖಡಕ್‌ ಆಗಿ ಹೇಳಿದ್ದಾಳೆ. ಮನೆಯವರೆಲ್ಲರ ಮುಂದೆ ಕನ್ನಿಕಾ ಮುಖಕ್ಕೆ ಹೊಡೆದಂತೆ ಭಾಗ್ಯಾ ಮಾತನಾಡಿದ್ದಾಳೆ. ನನ್ನ ಪ್ರೀತಿ ಮತ್ತು ಆಸ್ತಿ ನಡುವೆ ಸಂಘರ್ಷ ಬಂದರೆ, ನನಗೆ ಈ ಆಸ್ತಿ ಅಂತಸ್ತು ಯಾವುದೂ ಬೇಡ ಎಂದು ಆದಿ ಕೂಡ ಹೇಳಿದ್ದಾನೆ.

ಕನ್ನಿಕಾಳ ಆಟ ಮುಗಿಯುವ ಲಕ್ಷಣ

ಕನ್ನಿಕಾಳ ಅಸಲಿ ಮುಖ ರಿವೀಲ್‌ ಆಗಿದೆ. ಇಷ್ಟೂ ದಿನ ಕನ್ನಿಕಾ ತಾನು ಮಾಡಿದ್ದೇ ಆಟ ಅನ್ನೋ ರೀತಿ ಇದ್ದಿದ್ದಳು.,ಆದರೀಗ ಆದಿ ನಿಜವಾಗಿಯೂ ಆಸ್ತಿ ಬಿಟ್ಟುಕೊಡುತ್ತಾನಾ? ಎಂಬ ಪ್ರಶ್ನೆ ಮೂಡಿದೆ.

ಕನ್ನಿಕಾ ತನ್ನ ಬ್ರೋ ಹಿಂದೆ ಬಿದ್ದು ಲವ್ ಮಾಡೋ ತರ ನಾಟಕ ಮಾಡಿದ್ದಾಳೆ ಎಂಬ ಸತ್ಯ ಈಗ ಹೊರಬರುತ್ತಿದೆ. ಭಾಗ್ಯಾ ಮತ್ತು ಆದಿ ನಡುವಿನ ಸಂಬಂಧವನ್ನು ಹಾಳುಮಾಡಲು ನೋಡಿದವರಿಗೆ ತಕ್ಕ ಶಾಸ್ತಿ ಆಗುವ ಕಾಲ ಬಂದಿದೆ. . ಭಾಗ್ಯಾಳ ಪ್ರಾಮಾಣಿಕತೆ ಮತ್ತು ಆದಿಯ ನಿರ್ಧಾರದಿಂದಾಗಿ ಕನ್ನಿಕಾಳ ಆಟ ಮುಗಿಯುವ ಲಕ್ಷಣಗಳು ಕಾಣುತ್ತಿವೆ.

ಇನ್ನೊಂದು ಕಡೆ ತಾಂಡವ್‌ ಶ್ರೇಷ್ಠಾಗೆ ಡಿವೋರ್ಸ್‌ ನೋಟಿಸ್‌ ಕೊಟ್ಟಿದ್ದಾನೆ. ಶ್ರೇಷ್ಠಾ ಕೂಡ ರೋಡ್‌ನಲ್ಲಿ ನಿಂತು ಕೂಗಾಡಿ ತಾಂಡವ್‌ ಮಾನ ಹರಾಜು ಹಾಕುತ್ತಿದ್ದಾಳೆ. ಭಾಗ್ಯ ಕೂಡ, ಇಷ್ಟೂ ದಿನ ನಾನೇ ಸರಿ ಅಲ್ಲ ಅಂತ ಡಿವೋರ್ಸ್‌ ಕೊಟ್ರಿ.

ಇದನ್ನೂ ಓದಿ: Shree Gandhada Gudi Serial: ಮುತ್ತು ಬಾಳಲ್ಲಿ ಹೊಸ ಬೆಳಕಿನ ಸೂಚನೆ? ಎಂಟ್ರಿ ಕೊಟ್ಟ 'ಮಿಸ್ ಉತ್ತರ ಕನ್ನಡ' ದೃಷ್ಟಿ ನಾಯಕ್

ಈಗ ಶ್ರೇಷ್ಠಾ ಜೀವನವನ್ನೂ ಹಾಳು ಮಾಡುತ್ತಿದ್ದೀರಾ ಅಂತ ಕೂಗಾಡಿದ್ದಾಳೆ. ಮುಂದೆ ಆದಿ ನಿರ್ದಾರ ಏನು? ತಾಂಡವ್‌ ಅಸಲಿ ಮುಖ ರಿವೀಲ್‌ ಆಗೋದು ಯಾವಾಗ? ಎಂಬುದರ ಬಗ್ಗೆ ವೀಕ್ಷಕರಲ್ಲಿ ಕುತೂಹಲ ಇದೆ. ಈ ಧಾರಾವಾಹಿಯು ಪ್ರತಿ ದಿನ ಸಂಜೆ 7 ಗಂಟೆಗೆ ಕಲರ್ಸ್ ಕನ್ನಡ ಚಾನೆಲ್ನಲ್ಲಿ ಪ್ರಸಾರವಾಗುತ್ತದೆ.