ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Lakshmi Nivasa Serial: ಅಂದು ಸೀರಿಯಲ್‌ ಬಗ್ಗೆ ಬೇಸರ! ಇದೀಗ ಧಾರಾವಾಹಿಯಿಂದಲೇ ಔಟ್‌, ಏನಿದು `ಲಕ್ಷ್ಮೀ ನಿವಾಸ' ವಿವಾದ?

Vijayalakshmi Subramani: ಈ ಸೀರಿಯಲ್‌ ಟಿಆರ್‌ಪಿ ರೇಸ್‌ನಲ್ಲಿಯೂ ಮುಂದೆ ಇದೆ. ಅಷ್ಟೇ ಅಲ್ಲ ಇಲ್ಲಿ ನಟಿಸಿರೋ ಅನೇಕ ಕಲಾವಿದರು ಧಾರಾವಾಹಿಯಿಂದ ಔಟ್‌ ಕೂಡ ಆಗಿದ್ದಾರೆ. ಆದರೆ ಹಿಂದೊಮ್ಮೆ ಅಂಜಲಿ ಸುಧಾಕರ್ ಹೊರಗೆ ಬಂದ್ಮೇಲೆ ನಟಿ ವಿಜಯಲಕ್ಷ್ಮೀ ಸುಬ್ರಮಣಿ ಸಹ ಬಹಿರಂಗವಾಗಿ ತಮ್ಮ ಅಸಮಾಧಾನವನ್ನ ಹೊರ ಹಾಕಿದ್ದರು. ಇದರ ಬೆನ್ನಲ್ಲೇ ಈಗ ವಿಜಯಲಕ್ಷ್ಮೀ ಸುಬ್ರಮಣಿ ಧಾರಾವಾಹಿಯಿಂದ ಹೊರಗೆ ಬಂದಿದ್ದಾರೆ. ಕಾರಣವೇನು?

ಸೀರಿಯಲ್‌ನಿಂದಲೇ ಔಟ್‌ ಆದ ಖ್ಯಾತ ನಟಿ! ಏನಿದು `ಲಕ್ಷ್ಮೀ ನಿವಾಸ' ವಿವಾದ?

ಲಕ್ಷ್ಮೀ ನಿವಾಸ ಧಾರಾವಾಹಿ -

Yashaswi Devadiga
Yashaswi Devadiga Dec 16, 2025 6:35 PM

ಜೀ ಕನ್ನಡ ವಾಹಿನಿಯಲ್ಲಿ (Zee Kannada) ಪ್ರಸಾರ ಕಾಣುತ್ತಿರುವ ಲಕ್ಷ್ಮೀ ನಿವಾಸ (Lakshmi Nivasa Serial) ಧಾರಾವಾಹಿ ಅದ್ದರದ್ದೇ ಆದ ಫ್ಯಾನ್ಸ್‌ ಇದೆ. ಈ ಸೀರಿಯಲ್‌ ಟಿಆರ್‌ಪಿ ರೇಸ್‌ನಲ್ಲಿಯೂ ಮುಂದೆ ಇದೆ. ಅಷ್ಟೇ ಅಲ್ಲ ಇಲ್ಲಿ ನಟಿಸಿರೋ ಅನೇಕ ಕಲಾವಿದರು ಧಾರಾವಾಹಿಯಿಂದ ಔಟ್‌ ಕೂಡ ಆಗಿದ್ದಾರೆ. ಆದರೆ ಹಿಂದೊಮ್ಮೆ ಅಂಜಲಿ ಸುಧಾಕರ್ (anjali Sudhakar) ಹೊರಗೆ ಬಂದ್ಮೇಲೆ ನಟಿ ವಿಜಯಲಕ್ಷ್ಮೀ ಸುಬ್ರಮಣಿ ಸಹ (Vijayalakshmi Subramani) ಬಹಿರಂಗವಾಗಿ ತಮ್ಮ ಅಸಮಾಧಾನವನ್ನ ಹೊರ ಹಾಕಿದ್ದರು. ಇದರ ಬೆನ್ನಲ್ಲೇ ಈಗ ವಿಜಯಲಕ್ಷ್ಮೀ ಸುಬ್ರಮಣಿ ಧಾರಾವಾಹಿಯಿಂದ ಹೊರಗೆ ಬಂದಿದ್ದಾರೆ.

ನಟಿ ಔಟ್‌!

ವಿಜಯಲಕ್ಷ್ಮೀ ಸುಬ್ರಮಣಿ ಸೀರಿಯಲ್‌ನಲ್ಲಿ ವಿಶ್ವನ ತಾಯಿ ಪಾತ್ರವನ್ನು ನಿಭಾಯಿಸುತ್ತಿದ್ದಾರೆ. ಇನ್ನೇನು ಜಾಹ್ನವಿ ಕಥೆ ಗೊತ್ತಾಗೋ ಹೊತ್ತಿಗೆ, ಅಂದರೆ ಪ್ರಮುಖ ಘಟದಲ್ಲೇ ಸೀರಿಯಲ್‌ನಿಂದ ಆಚೆ ಬಂದಿದ್ದಾರೆ. ಈ ಹಿಂದೆಯೇ ಈ ಸೀರಿಯಲ್‌ ಬಗ್ಗೆ ಬೇಸರ ಇದೆ. ಅದಕ್ಕೆ ಹೊರಗೆ ಬರ್ತೇನೆ ಅಂತ ಹೇಳಿದ್ದರು. ಆದರೆ ಧಾರಾವಾಹಿಯಲ್ಲಿ ನಟಿಸಿದ್ದರು. ಆದರೀಗ ಏಕಾಏಕಿ ಮತ್ತೊಂದು ಪೋಸ್ಟ್‌ ಮಾಡಿದ್ದಾರೆ.

ಇದನ್ನೂ ಓದಿ: Lakshmi Nivasa Serial: ಲಕ್ಷ್ಮೀ ನಿವಾಸ ಧಾರಾವಾಹಿಯಿಂದ ಹೊರಬಂದ ಸ್ಟಾರ್ ನಟಿ: ಕಾರಣವೇನು?

ಒಳ್ಳೆಯ ಪಾತ್ರವನ್ನು ಸುಮ್ಮನೆ ಸಾಯಿಸೋದು ಎಷ್ಟು ಸರಿ?ಹೀಗೆ ಪಾತ್ರ ಸಾಹಿಸೋದು ಈ ಧಾರಾವಾಹಿ ಕಥೆ ಮಾಡುವವರ ಪಾಂಡಿತ್ಯ ನೈಪುಣ್ಯತೆಗೆ ಕನ್ನಡಿ ಹಿಡಿದಿದೆ ಅಂತ ಬರೆದುಕೊಂಡಿದ್ದಾರೆ. ಈ ಬಗ್ಗೆ ಫ್ಯಾನ್ಸ್‌ ಪ್ರಶ್ನೆ ಮಾಡಿದ್ದಾರೆ, ನನಗೆ ಹೇಳದೇ ಪಾತ್ರ ಸಾಯಿಸಿದ್ದಾರೆ ಎಂದು ಬರೆದುಕೊಂಡಿದ್ದಾರೆ.

ಅಂಜಲಿ ಬರೆದುಕೊಂಡಿದ್ದೇನು?

‘ಲಕ್ಷ್ಮೀ ನಿವಾಸ ಸೀರಿಯಲ್‌ನಿಂದ ಹಿರಿಯ ನಟಿ ಶ್ವೇತಾ (ವಿನೋದಿನಿ) ಹೊರಬಂದರು. ಈಗ ಅವರ ಪಾತ್ರಕ್ಕೆ ಮಾಧುರಿ ರೀಪ್ಲೇಸ್ ಆಗಿದ್ದಾರೆ. ಅದರ ಬಳಿಕ ‘ಲಕ್ಷ್ಮೀ ನಿವಾಸ’ ಸೀರಿಯಲ್‌ಗೆ ಅಂಜಲಿ ಸುಧಾಕರ್‌ ಗುಡ್ ಬೈ ಹೇಳಿದ್ದರು. ಅಂಜಲಿ ಸುಧಾಕರ್ ಜೊತೆಗಿರುವ ಫೋಟೋವನ್ನ ಹಂಚಿಕೊಂಡು, ‘’ಲಕ್ಷ್ಮೀ ನಿವಾಸ’ ಸೀರಿಯಲ್‌ನಿಂದ ಹೊರನಡೆದ ನನ್ನ ಗೆಳತಿ ನಟಿ ಅಂಜಲಿ. ಅತಿಯಾದ ರಾಜಕೀಯ ನಿಜವಾದ ಕಲಾವಿದೆಯರಿಗೆ ಮನ್ನಣೆ, ಗೌರವ ಇಲ್ಲ. ಪಾತ್ರಕ್ಕೆ ನ್ಯಾಯ ಒದಗಿಸುವಲ್ಲಿ ನಾವಿಬ್ಬರು ಯಾವ ಕೊರತೆಯೂ ಮಾಡಿಲ್ಲ’’ ಎಂದು ಬರೆದುಕೊಂಡಿದ್ದರು.

ಇದನ್ನೂ ಓದಿ: Lakshmi Nivasa: ಲಕ್ಷ್ಮೀ ನಿವಾಸ ಧಾರಾವಾಹಿ ನಿರ್ಮಾಣಕ್ಕೆ ಹಣ ಪಡೆದು ಸೃಜನ್‌ ಲೋಕೇಶ್‌ಗೆ ಕೋಟಿಯ ವಂಚನೆ

‘’ಬೇಸರ.. ನೋವು.. ಗೆಳತಿ ಅಂಜಲಿ ಇಂದು ನೀನು ಹೊರಗೆ ಬಂದಿರುವೆ. ಅತೀ ಶೀಘ್ರದಲ್ಲಿ ನಾನೂ ಕೂಡ ಈ ಸೀರಿಯಲ್ ನಿಂದ ಹೊರ ಬರುವೆ’’ ಎಂದು ನಟಿ ವಿಜಯಲಕ್ಷ್ಮೀ ಸುಬ್ರಮಣಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದರು. ಲಕ್ಷ್ಮೀ ನಿವಾಸ’ ಸೀರಿಯಲ್‌ನಲ್ಲಿ ಸಿದ್ದೇಗೌಡ್ರು ತಾಯಿ ರೇಣುಕಾ ಪಾತ್ರವನ್ನ ಅಂಜಲಿ ಸುಧಾಕರ್ ನಿರ್ವಹಿಸುತ್ತಿದ್ದರು. ಇದೀಗ ಇದೇ ಪಾತ್ರಕ್ಕೆ ಹಿರಿಯ ನಟಿ ಲಕ್ಷ್ಮೀ ಭಟ್‌ ರೀಪ್ಲೇಸ್ ಆಗಿದ್ದಾರೆ.