Bhavya Gowda, BBK 11: ಬಿಗ್ ಬಾಸ್ ಮುಗಿದ ಬೆನ್ನಲ್ಲೇ ಬದಲಾಯಿತು ಭವ್ಯಾ ಗೌಡ ಅದೃಷ್ಟ: ಸಿಕ್ತು ಸರ್ಪ್ರೈಸ್ ಗಿಫ್ಟ್
ಭವ್ಯಾ ಅವರು ಬಿಗ್ ಬಾಸ್ನಿಂದ ಹೊರಬಂದ ಬೆನ್ನಲ್ಲೇ ಎಲ್ಲಿ ಹೋದರು ಅಭಿಮಾನಿಗಳು ಪ್ರೀತಿ ತೋರಿಸುತ್ತಿದ್ದಾರೆ. ಇದರ ನಡುವೆ ಭವ್ಯ ಗೌಡಗೆ ಅಭಿಮಾನಿಗಳು ಸರ್ಪ್ರೈಸ್ ಗಿಫ್ಟ್ ನೀಡಿದ್ದಾರೆ. ಭವ್ಯಾ ಗೌಡ ಅವರ ಅಭಿಮಾನಿಗಳು ಬಿಗ್ ಬಾಸ್ ನಂತರ ಅವರಿಗೆ ಉಡುಗೊರೆಯೊಂದನ್ನು ನೀಡಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಮುಕ್ತಾಯಗೊಂಡು ಒಂದು ವಾರ ಕಳೆದಿದೆ. ಹಳ್ಳಿ- ಹೈದ ಹನುಮಂತ ಟ್ರೋಫಿ ಎತ್ತಿ ಹಿಡಿದರೆ ತ್ರಿವಿಕ್ರಮ್ ಮೊದಲ ರನ್ನರ್-ಅಪ್ ಆಗಿ ಹೊರಹೊಮ್ಮಿದರು. ಸದ್ಯ ಟಾಪ್ 6 ಫೈನಲಿಸ್ಟ್ಗಳು ದೊಡ್ಮನೆಯಿಂದ ಹೊರಬಂದು ಫುಲ್ ಬ್ಯುಸಿಯಾಗಿದ್ದಾರೆ. ಕೆಲವರು ಇಂಟರ್ವ್ಯೂ ಕೊಡುತ್ತಿದ್ದರೆ ಇನ್ನೂ ಕೆಲವರು ಕುಟುಂಬದ ಜೊತೆ ಸಮಯ ಕಳೆಯುತ್ತಿದ್ದಾರೆ. ಇದರ ಮಧ್ಯೆ ಕೆಲವರು ಪಾರ್ಟಿ ಮಾಡಿದರೆ ಇನ್ನೂ ಕೆಲವರು ದೇವರ ದರ್ಶನ ಪಡೆದರು. ಭವ್ಯಾ ಗೌಡ ಹಾಗೂ ತ್ರಿವಿಕ್ರಮ್ ಅವರು ರಜತ್ ಜೊತೆ ಕಾರಿನಲ್ಲಿ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗುತ್ತಿದೆ.
ಫಿನಾಲೆ ವರೆಗೆ ಟಫ್ ಫೈಟ್ ಕೊಟ್ಟಿದ್ದ ಸ್ಪರ್ಧಿ ಭವ್ಯ ಗೌಡ ಐದನೇ ರನ್ನರ್ ಅಪ್ ಆಗಿ ಮೊದಲಿಗೆ ದೊಡ್ಮನೆಯಿಂದ ಹೊರಬಂದರು. ಈ ಬಾರಿಯ ಸೀಸನ್ನಲ್ಲಿ ಮಹಿಳಾ ಸ್ಪರ್ಧಿ ಟ್ರೋಫಿ ಗೆಲ್ಲುವ ಸಾಧ್ಯತೆ ಇದೆ ಎನ್ನಲಾಗಿತ್ತು. ಇದರಲ್ಲಿ ಭವ್ಯಾ ಗೌಡ ಹೆಸರು ಮುಂಚೂಣಿಯಲ್ಲೇ ಇತ್ತು. ಇವರು ಬಿಗ್ ಬಾಸ್ ಇತಿಹಾಸದಲ್ಲೇ ಮೂರು ಬಾರಿ ಕ್ಯಾಪ್ಟನ್ ಆದ ದಾಖಲೆ ಕೂಡ ಬರೆದಿದ್ದರು. ಆದರೆ, ಐದನೇ ಸ್ಥಾನಕ್ಕೆ ತೃಪ್ತಿ ಪಡೆದುಕೊಂಡು ಹೊರಬಂದರು.
ಭವ್ಯಾ ಅವರು ಹೊರಬಂದ ಬೆನ್ನಲ್ಲೇ ಎಲ್ಲಿ ಹೋದರು ಅಭಿಮಾನಿಗಳು ಪ್ರೀತಿ ತೋರಿಸುತ್ತಿದ್ದಾರೆ. ಇದರ ನಡುವೆ ಭವ್ಯ ಗೌಡಗೆ ಅಭಿಮಾನಿಗಳು ಸರ್ಪ್ರೈಸ್ ಗಿಫ್ಟ್ ನೀಡಿದ್ದಾರೆ. ಭವ್ಯಾ ಗೌಡ ಅವರ ಅಭಿಮಾನಿಗಳು ಬಿಗ್ ಬಾಸ್ ನಂತರ ಅವರಿಗೆ ಉಡುಗೊರೆಯೊಂದನ್ನು ನೀಡಿದ್ದಾರೆ. ಬಿಗ್ ಬಾಸ್ ಮುಗಿಯುವ ಸಂದರ್ಭದಲ್ಲಿ ಭವ್ಯಾ ಗೌಡ ಅವರು ಗೆಲ್ಲಬೇಕು ಎಂದು ಸಾಕಷ್ಟು ಪೋಸ್ಟ್ ಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದವು. ಆದರೆ, ಬಿಗ್ ಬಾಸ್ ಮನೆಯಿಂದ ಹೊರ ನಡೆದಾಗ ಅಭಿಮಾನಿಗಳು ಬಹಳ ಬೇಸರ ಮಾಡಿಕೊಂಡಿದ್ದರು. ಈಗ ಅಭಿಮಾನಿಗಳು ಭವ್ಯಾ ಗೌಡ ಅವರಿಗಾಗಿ ದೊಡ್ಡ ಫೋಟೋ ಫ್ರೇಮ್ ಗಿಫ್ಟ್ ಆಗಿ ನೀಡಿದ್ದಾರೆ.
ಭವ್ಯ ಗೌಡ ಅವರಿಗೆ ಗಿಫ್ಟ್ ಕೊಡಲೆಂದು ಅವರ ಅಭಿಮಾನಿಗಳ ಬಳಗವೊಂದು ಅವರ ಮನೆಗೆವೇ ತೆರಳಿದೆ. ಇಲ್ಲಿ ಭವ್ಯ ಗೌಡ ಭೇಟಿಯಾಗಿ ಉಡುಗೊರೆ ನೀಡಲು ಮುಂದಾಗಿದ್ದಾರೆ. ಆದರೆ ಅಭಿಮಾನಿಗಳು ಮನೆಗೆ ತೆರಳಿದಾಗ ಭವ್ಯ ಮನೆಯಲ್ಲಿ ಇರಲಿಲ್ಲ. ಹೀಗಾಗಿ ಅಭಿಮಾನಿಗಳ ಬಳಗ ಮನೆಯಲ್ಲಿ ಭವ್ಯ ಗೌಡಗೆ ಗಿಫ್ಟ್ ತಲುಪಿಸಲು ಹೇಳಿ ಹೊರಟಿದ್ದಾರೆ. ಇತ್ತ ಭವ್ಯ ಗೌಡ ಮರಳಿ ಮನೆಗೆ ಬಂದಾಗ ಅಭಿಮಾನಿಗಳ ನೀಡಿದ ಗಿಫ್ಟ್‌ನ್ನು ಕುಟುಂಬಸ್ಥರು ಹಸ್ತಾಂತರಿಸಿದ್ದಾರೆ. ಈ ಗಿಫ್ಟ್ ನೀಡಿ ಭವ್ಯಾ ಖುಷಿಯಾಗಿದ್ದಾರೆ.
ಈ ಫೋಟೋ ಪ್ರೇಮ್ನಲ್ಲಿ ಬಿಗ್ ಬಾಸ್ ಸೀಸನ್ 11 The Rebel Queen, True Champion ಎಂದು ಬರೆಯಲಾಗಿದೆ. ಅಭಿಮಾನಿಗಳು ಮನೆಯ ತನಕ ಬಂದು ಉಡುಗೊರೆ ನೀಡಿದ್ದಕ್ಕೆ ಭವ್ಯಾ ಅವರು ಖುಷಿ ಪಟ್ಟಿದ್ದಾರೆ. ಫೋಟೋ ಫ್ರೇಮ್ ಅನ್ನು ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಅಪ್ ಲೋಡ್ ಮಾಡಿದ್ದು, ಅಭಿಮಾನಿಗಳಿಗೆ ಧನ್ಯವಾದವನ್ನು ತಿಳಿಸಿದ್ದಾರೆ. ಮನೆಯ ತನಕ ಬಂದು ಫೋಟೋ ಫ್ರೇಮ್ ಕೊಟ್ಟಿದ್ದೀರಿ ಥ್ಯಾಂಕ್ಯೂ ಸೋ ಮಚ್. ನೀವು ಬಂದಾಗ ನಾನು ಮನೆಯಲ್ಲಿ ಇರಲಿಲ್ಲ ಅದಕ್ಕೆ ಕ್ಷಮಿಸಿ. ಆದಷ್ಟು ಬೇಗ ನಿಮ್ಮ ಜೊತೆಗೆ ನಾನು ಮಾತಾಡುತ್ತೇನೆ ಎಂದು ಹೇಳಿದ್ದಾರೆ.
BBK 11: ಚಾಮುಂಡಿ ಬೆಟ್ಟಕ್ಕೆ ತೆರಳುವಾಗ ಕಾರಿನಲ್ಲಿ ಜೊತೆಯಾಗಿ ಕಾಣಿಸಿಕೊಂಡ ತ್ರಿವಿಕ್ರಮ್-ಭವ್ಯಾ