ʻನಿಮ್ಮ ಋಣವನ್ನು ಯಾವತ್ತೂ ಮರೆಯೋಕೆ ಸಾಧ್ಯವಿಲ್ಲ ಸರ್ʼ; ಸಿ ಜೆ ರಾಯ್ ನಿಧನಕ್ಕೆ ʻಬಿಗ್ ಬಾಸ್ʼ ವಿನ್ನರ್ ಹನುಮಂತ ಸಂತಾಪ
CJ Roy Death News: ಗಾಯಕ ಹಾಗೂ ಬಿಗ್ ಬಾಸ್ ವಿನ್ನರ್ ಹನುಮಂತ ಅವರು ಸಿಜೆ ರಾಯ್ ಅವರ ಸಾವಿನ ಸುದ್ದಿ ಕೇಳಿ ತೀವ್ರ ಆಘಾತಕ್ಕೊಳಗಾಗಿದ್ದಾರೆ. ಕಾನ್ಫಿಡೆಂಟ್ ಗ್ರೂಪ್ ಒಡೆಯ ಸಿ.ಜೆ. ರಾಯ್ ಆತ್ಮಹತ್ಯೆ ಮಾಡಿಕೊಂಡಿದ್ದು, ಹನುಮಂತನ ಬದುಕಿನ ಕಷ್ಟದ ದಿನಗಳಲ್ಲಿ ಅವರು ನೆರವಾಗಿದ್ದರು.
-
ಸಾವಿರಾರು ಕೋಟಿ ರೂಪಾಯಿ ಆಸ್ತಿಯ ಒಡೆಯ, ದೇಶ-ವಿದೇಶಗಳಲ್ಲಿ ಕಾನ್ಫಿಡೆಂಟ್ ಗ್ರೂಪ್‌ನ ಸಾಮ್ರಾಜ್ಯ ಕಟ್ಟಿದ್ದ ಡಾ. ಸಿಜೆ ರಾಯ್ ಎದೆಗೆ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದೇಶಾದ್ಯಂತ ಈ ಸುದ್ದಿ ಅಚ್ಚರಿ ಮತ್ತು ಆಘಾತಕ್ಕೆ ಕಾರಣವಾಗಿದೆ. ರಾಯ್ ಅವರ ನಿಧನಕ್ಕೆ ಗಾಯಕ ಹನುಮಂತ ಲಮಾಣಿ ಕೂಡ ಸಂತಾಪ ಸೂಚಿಸಿದ್ದು, "ನಿಮ್ಮ ಋಣವನ್ನು ಯಾವತ್ತೂ ಮರೆಯೋಕೆ ಸಾಧ್ಯವಿಲ್ಲ ಸರ್" ಎಂದು ಹನುಮಂತ ಹೇಳಿದ್ದಾರೆ.
ಹನುಮಂತ ಹಂಚಿಕೊಂಡ ಪೋಸ್ಟ್‌ನಲ್ಲಿ ಏನಿದೆ?
"ತುಂಬಾ ದುಃಖಕರ ಸಂಗತಿ.. ಅಂದು ಸರಿಗಮಪ ಸೀಸನ್ 15ರಲ್ಲಿ ನಾನು ರನ್ನರ್-ಅಪ್ ಆಗಿದ್ದಾಗ, ನನಗೆ ಹಣ ನೀಡಿ ನನ್ನ ಬದುಕಿಗೆ ದಾರಿ ದೀಪವಾಗಿದ್ದವರು ನೀವು. ಅಲ್ಲಿಂದ ಹಿಡಿದು ಬಿಗ್ ಬಾಸ್ ಸೀಸನ್ 11ರಲ್ಲೂ ಕೂಡ ವಿಜೇತವಾಗಿರುವಾಗಲೂ ನನಗೆ ಪ್ರೀತಿಯಿಂದ ಹಣವನ್ನು ಕೊಡುವುದರ ಮೂಲಕ ಗೆಲುವನ್ನ ಸಂಭ್ರಮಿಸಿದವರು ನೀವು. ನಿಮ್ಮ ಈ ಋಣವನ್ನು ಯಾವತ್ತೂ ಮರೆಯೋಕೆ ಸಾಧ್ಯನೇ ಇಲ್ಲ ಸರ್.. ನಿಮ್ಮ ಅಗಲಿಕೆ ಸುದ್ದಿ ಕೇಳಿ ಮನಸ್ಸು ಭಾರವಾಗಿದೆ ಸರ್.. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ.. ಮಿಸ್ ಯೂ ರಾಯ್ ಸರ್.." ಎಂದು ಹನುಮಂತು ಹೇಳಿಕೊಂಡಿದ್ದಾರೆ.
CJ Roy's Death Note: ಉದ್ಯಮಿ ಸಿ.ಜೆ.ರಾಯ್ ನಿವಾಸದಲ್ಲಿ ಡೆತ್‌ನೋಟ್ ಪತ್ತೆ; ಏನಿದೆ ಅದರಲ್ಲಿ?
ಬಹುಮಾನವಾಗಿ ಫ್ಲಾಟ್ ನೀಡಿದ್ದ ರಾಯ್
ರಿಯಾಲಿಟಿ ಶೋನಲ್ಲಿ ಗೆದ್ದಾಗ ರಾಯ್ ಅವರು ಹನುಮಂತುಗೆ ಬೆಂಗಳೂರಿನಲ್ಲಿ ಒಂದು ಫ್ಲಾಟ್ ಅನ್ನು ಬಹುಮಾನವಾಗಿ ನೀಡಿದ್ದರು. ಆದರೆ, ಫ್ಲಾಟ್ ನಮಗೆ ಸೆಟ್ ಆಗೋದಿಲ್ಲ ಎಂದು ಅದರ ಬದಲು ಹಣವನ್ನು ಪಡೆದುಕೊಂಡಿದ್ದರು.
"ನಿಮ್ಮೂರಿನಲ್ಲಿ ಮನೆ ಕಟ್ಟಿಸು, ಅದರ ಗೃಹಪ್ರವೇಶಕ್ಕೆ ನನಗೆ ಆಹ್ವಾನಿಸು, ನಾನು ಬರುತ್ತೇನೆ ಎಂದು ರಾಯ್ ಸರ್ ಹೇಳಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ. ರಾಯ್ ಸರ್‌ಗೆ ನಮ್ಮೂರನ್ನು ನೋಡಬೇಕು ಅಂತ ತುಂಬಾ ಆಸೆಯಿತ್ತು. ಅದು ಕೊನೆಗೂ ಈಡೇರಲಿಲ್ಲ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಅಂತ ದೇವರಲ್ಲಿ ಬೇಡಿಕೊಳ್ಳುತ್ತೇನೆ" ಎಂದು ಹನುಮಂತು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಅಂದಹಾಗೆ, ಹನುಮಂತ ಅವರ ಸಹೋದರಿಯ ವಿದ್ಯಾಭ್ಯಾಸಕ್ಕೂ ಧನ ಸಹಾಯ ಮಾಡಿದ್ದರು.
ರಾಯ್ ಕಚೇರಿಯಲ್ಲಿ ಆಗಿದ್ದೇನು?
ಬೆಂಗಳೂರಿನಲ್ಲಿ ರಿಚ್‌ಮಂಡ್ ವೃತ್ತದ ಬಳಿ ಇರುವ ಕಾನ್ಫಿಡೆಂಟ್ ಗ್ರೂಪ್ ಕಚೇರಿ ಮೇಲೆ ಐಟಿ ದಾಳಿ ನಡೆದಿತ್ತು. ಐಟಿ ಅಧಿಕಾರಿಗಳು ರಾಯ್ ಅವರ ವಿಚಾರಣೆ ನಡೆಸುತ್ತಿದ್ದರು. ಕೆಲವು ದಾಖಲೆಗಳನ್ನು ತರುತ್ತೇನೆ ಎಂದು ಕಚೇರಿಯ ಒಳಗೆ ಹೋದವರು, ಇದ್ದಕ್ಕಿದ್ದಂತೆ ತಮ್ಮ ಎದೆಗೆ ಶೂಟ್ ಮಾಡಿಕೊಂಡು, ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳದಲ್ಲೇ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು ಎಂದು ಪ್ರಾಥಮಿಕ ಮಾಹಿತಿಯಿಂದ ಗೊತ್ತಾಗಿತ್ತು.