Bigg Boss Kannada 12: ವೀಕೆಂಡ್‌ನಲ್ಲಿ ಕೆಲವರಿಗೆ ಮಾತ್ರ ಸುದೀಪ್ ಬೈಯೋದ್ಯಾಕೆ? ಕೊಟ್ಟರು ಕಾರಣ
Sudeep: ಸುದೀಪ್ ನಟನೆಯ 'ಮಾರ್ಕ್' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಹಾಗಾಗಿ ಸಾಕಷ್ಟು ಸಂದರ್ಶನಗಳಲ್ಲಿ ಭಾಗಿ ಆಗುತ್ತಿದ್ದಾರೆ. ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಹಿಂದಿ ಬಳಿಕ ಕನ್ನಡ, ತೆಲುಗು, ಮಲಯಾಳಂ, ತಮಿಳು ಸೇರಿ ಹಲವು ಭಾಷೆಗಳಲ್ಲಿ ಬಿಗ್‌ಬಾಸ್ ಕಾರ್ಯಕ್ರಮ ಶುರುವಾಯಿತು. ಆದರೆ ಕನ್ನಡದಲ್ಲಿ ಎಲ್ಲಾ ಸೀಸನ್‌ಗಳನ್ನು ಏಕಾಂಗಿಯಾಗಿ ನಿರೂಪಣೆ ಮಾಡುತ್ತಾ ಬರುತ್ತಿದ್ದಾರೆ ಸುದೀಪ್.
ಬಿಗ್ ಬಾಸ್ ಕನ್ನಡ -
ಸುದೀಪ್ (Sudeep) ನಟನೆಯ 'ಮಾರ್ಕ್' ಸಿನಿಮಾ (Mark Movie) ಬಿಡುಗಡೆಗೆ ಸಜ್ಜಾಗಿದೆ. ಹಾಗಾಗಿ ಸಾಕಷ್ಟು ಸಂದರ್ಶನಗಳಲ್ಲಿ ಭಾಗಿ ಆಗುತ್ತಿದ್ದಾರೆ. ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಹಿಂದಿ ಬಳಿಕ ಕನ್ನಡ, ತೆಲುಗು, ಮಲಯಾಳಂ, ತಮಿಳು ಸೇರಿ ಹಲವು ಭಾಷೆಗಳಲ್ಲಿ ಬಿಗ್‌ಬಾಸ್ ಕಾರ್ಯಕ್ರಮ ಶುರುವಾಯಿತು. ಆದರೆ ಕನ್ನಡದಲ್ಲಿ (Bigg Boss Kannada 12) ಎಲ್ಲಾ ಸೀಸನ್‌ಗಳನ್ನು ಏಕಾಂಗಿಯಾಗಿ ನಿರೂಪಣೆ ಮಾಡುತ್ತಾ ಬರುತ್ತಿದ್ದಾರೆ ಸುದೀಪ್. ಇದೀಗ ಸುದೀಪ್ ಕೆಲವರಿಗೆ ಮಾತ್ರ ಗರಂ ಆಗೋದೇಕೆ ಅಂತ ರಿವೀಲ್ ಮಾಡಿದ್ದಾರೆ.
ಚೆನ್ನಾಗಿ ಆಡಿಲ್ಲ ಅಂತಲ್ಲ!
ಕೆಲವ್ರು ಹೇಳ್ತಾರೆ ಸುದೀಪ್ ತುಂಬಾ ಗರಂ ಆಗಿಬಿಟ್ರು, ಬೈದ್ಬಿಟ್ರು ಅಂತಾರೆ. ಕೆಲ ಎಪಿಸೋಡ್‌ಗಳಲ್ಲಿ ಬೈಯಲು ಕಾರಣ ಏನಂದ್ರೆ ಅವ್ರು ಚೆನ್ನಾಗಿ ಆಡಿಲ್ಲ ಅಂತಲ್ಲ, ಚೆನ್ನಾಗಿ ಆಡ್ತಿದ್ದೀರಿ ಅಂತ ಅರ್ಥ. ಇವತ್ತು ನಿಮಗೆ ಬೈದು ತಿದ್ದತ್ತಾಇದ್ದೀನಿ. ಅಲ್ಲಿ ವರೆಗೂ ಹೋಗಿ ಹಾಳಾಗಬೇಡಿ ಅಂತ ಹೇಳೋದು. ನಿಮ್ಮ ಮಧ್ಯೆದಲ್ಲಿ ಬರೋರು, ಗೊತ್ತಾದಾಗ ನಾವು ಏನು ಹೇಳೋಕೆ ಹೋಗಲ್ಲ. ಎನರ್ಜಿ ಹಾಕಲ್ಲ. ಬೇಜಾರು ಮಾಡಿಕೊಂಡಿರೂ ಪರವಾಗಿಲ್ಲ. ಇಷ್ಟು ವರ್ಷ ನಡೆಸಬೇಕಾದರೂ ಕಾರಣ ಇರುತ್ತೆ ಎಂದರು.
ಪಾಸಿಟಿವ್ ಓಡ್ತಾ ಇರತ್ತೆ
ನಾನು ಹೊರಗಡೆ ಹೇಳ್ತಾ ಇರ್ತೀನಿ. ನಾನು ವೇದಿಕೆ ಏರುವ ಮುನ್ನ ಎಲ್ಲರಿಗೂ ಹೇಳ್ತಿರ್ತೀನಿ. ನನಗೆ ಮೂಡ್ ಔಟ್ ಮಾಡಬೇಡಿ. ಆ ಕೋಪವನ್ನು ಸ್ಪರ್ಧಿಗಳ ಮೇಲೆ ತೋರಿಸಿಬಿಡ್ತೀನಿ, ಸುಮ್ನೆ ಕಷ್ಟ ಆಗಿಬಿಡುತ್ತೆ ಅಂತ. ಬರ್ತಾ ಬರ್ತಾ ಬಿಗ್ ಬಾಸ್ ಅನ್ನ ನಮ್ಮದು ಅಂತ ನೋಡ್ತಾರೆ. ಸಾವಿರ ಪೇಜ್ ಓಪನ್ ಆಗ್ತಾ ಇದೆ. ಇದು ಒಳ್ಳೆಯ ವಿಚಾರ. ಎಷ್ಟೋ ಜನಕ್ಕೆ ಅನ್ನಕ್ಕೆ ಕೊಡತ್ತೆ. ಅಂತ ಒಂದು ಶೋ ಬಂದಾಗ, ನೆಗೆಟಿವ್, ಪಾಸಿಟಿವ್ ಓಡ್ತಾ ಇರತ್ತೆ. ಆದ್ರೆ ಅದರಿಂದ ಹಣ ಬರ್ತಾ ಇದೆ. ಇರೋ ತನಕ ಪೇಜ್‌ಗೆ ಬೆಲೆ ಇರುತ್ತೆ ಎಂದರು.
ಬಿಗ್ ಬಾಸ್ ಫಿನಾಲೆ ಯಾವಾಗ?
ಈ ವಾರ ವೋಟಿಂಗ್ ಲೈನ್ ಓಪನ್ ಇಲ್ಲದ ಕಾರಣ ಧ್ರುವಂತ್ ಹಾಗೂ ರಕ್ಷಿತಾ ಅವರು ಸೀಕ್ರೆಟ್ ರೂಂನಲ್ಲಿದ್ದಾರೆ. ಯಾರೂ ಈ ವಾರ ಎಲಿಮಿನೇಟ್ ಆಗಿಲ್ಲ. ಆದರೆ ಕಿಚ್ಚ ಸುದೀಪ್ ಅವರು ವೇದಿಕೆಯಲ್ಲಿ ಸ್ಪರ್ಧಿಗಳಿಗೆ ಒಂದು ಎಚ್ಚರಿಕೆ ಕೊಟ್ಟಿದ್ದಾರೆ.
ಸೆಪ್ಟೆಂಬರ್ 28ರಂದು ಬಿಗ್ ಬಾಸ್ ಕನ್ನಡ ಶುರು ಆಯ್ತು. ಪ್ರತಿ ದಿನ ರಾತ್ರಿ 9.30ಕ್ಕೆ ಶೋ ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗುದರ ಜೊತೆ ಜಿಯೋ ಹಾಟ್ ಸ್ಟಾರ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತೆ. ಕೆಲವು ವಿವಾದಗಳು ಆಗಿವೆ.ಅಷ್ಟೇ ಅಲ್ಲ ಈ ಬಾರಿ ಶೋನಲ್ಲಿ 24 ಜನರನ್ನು ತರಲಾಗಿದೆ. ಇದರ ಪೈಕಿ ಕೆಲವರು ವೈಲ್ಡ್ ಕಾರ್ಡ್ ಸ್ಪರ್ಧಿಗಳು.
ಇದನ್ನೂ ಓದಿ: Bigg Boss Kannada 12: ಧ್ರುವಂತ್‌ಗೆ ಆಟ, ರಕ್ಷಿತಾಗೆ ಪ್ರಾಣ ಸಂಕಟ; ಸೀಕ್ರೆಟ್ ರೂಮ್‌ನಲ್ಲಿ ಪುಟ್ಟಿ ನಡುಕ!
ಧ್ರುವಂತ್, ರಕ್ಷಿತಾ ಅವರನ್ನು ಸೀಕ್ರೆಟ್ ರೂಂನಲ್ಲಿ ಇಡಲಾಗಿದೆ.ಸ್ಪರ್ಧಿಗಳು ಹೆಚ್ಚಿರುವುದರಿಂದ ಮಿಡ್ ವೀಕ್ ಎಲಿಮಿನೇಶನ್ ಜೊತೆ ಡಬಲ್ ಎಲಿಮಿನೇಶನ್ ಇರಲಿದೆ ಎನ್ನಲಾಗುತ್ತಿದೆ. ಕೆಲವು ವರದಿಗಳ ಪ್ರಕಾರ ಜನವರಿ 17 ಹಾಗೂ 18ರಂದು ಫಿನಾಲೆ ನಡೆಯಲಿದೆ ಎನ್ನಲಾಗುತ್ತಿದೆ.