ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Bigg Boss Kannada12: ನಿಮ್ಮನ್ನು ಇಷ್ಟ ಪಡೋರಿಗೆ ವ್ಯಾಲ್ಯೂ ಕೊಡಿ ; ಗಿಲ್ಲಿಗೆ ಸ್ನೇಹಿತೆ ರಕ್ಷಿತಾ ಬುದ್ಧಿಮಾತು

Gilli Nata: ಬಿಗ್‌ ಬಾಸ್‌ ಮನೆಯಲ್ಲಿ ಗಿಲ್ಲಿ, ಕಾವ್ಯ ಹಾಗೂ ರಕ್ಷಿತಾ ಸದಾ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗುತ್ತಲೇ ಇರ್ತಾರೆ. ರಕ್ಷಿತಾ ಶೆಟ್ಟಿ ಅವರು ತಮ್ಮದೇ ಆದ ಲೆಕ್ಕಾಚಾರದಲ್ಲಿ ಕಾವ್ಯಾ ಶೈವ (Kavya shaiva) ಅವರನ್ನು ಬಿಗ್ ಬಾಸ್ ಮನೆಯಲ್ಲಿ ಹಲವು ಬಾರಿ ನಾಮಿನೇಟ್ ಮಾಡಿದ್ದರು. ಇದು ಇತ್ತೀಚೆಗೆ ಹೆಚ್ಚಾಗಿದೆ. ಅದು ಗಿಲ್ಲಿಗೂ ಗೊತ್ತಾಗಿದೆ. ಕಾವ್ಯ ಹಾಗೂ ಗಿಲ್ಲಿ ಮಧ್ಯೆ ಸಣ್ಣ ಮನಸ್ತಾಪ ಆಗಿದೆ . ಹೀಗಾಗಿ ಪದೇ ಪದೇ ಗಿಲ್ಲಿ ಅವರು ಕಾವ್ಯಾಗೆ ಸಾರಿ ಕೇಳ್ತಾನೆ ಇದ್ದಾರೆ. ಆದರೂ ಕಾವ್ಯ ಸರಿ ಹೋದಂತಿಲ್ಲ. ಇದರ ಬೆನ್ನಲ್ಲೇ ರಕ್ಷಿತಾ ಗಿಲ್ಲಿಗೆ ಕೆಲವು ಬುದ್ದಿ ಮಾತುಗಳನ್ನು ಒಳ್ಳೆಯ ಸ್ನೇಹಿತೆಯಾಗಿ ಹೇಳಿದ್ದಾರೆ. ಏನದು?

ನಿಮ್ಮನ್ನು ಇಷ್ಟ ಪಡೋರಿಗೆ ವ್ಯಾಲ್ಯೂ ಕೊಡಿ ;ಗಿಲ್ಲಿಗೆ ರಕ್ಷಿತಾ ಬುದ್ಧಿಮಾತು

ಬಿಗ್‌ ಬಾಸ್‌ ಕನ್ನಡ -

Yashaswi Devadiga
Yashaswi Devadiga Jan 9, 2026 8:54 AM

ಬಿಗ್‌ ಬಾಸ್‌ ಮನೆಯಲ್ಲಿ (Bigg Boss Kannada 12) ಗಿಲ್ಲಿ, ಕಾವ್ಯ ಹಾಗೂ ರಕ್ಷಿತಾ (Rakshitha Shetty) ಸದಾ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗುತ್ತಲೇ ಇರ್ತಾರೆ. ರಕ್ಷಿತಾ ಶೆಟ್ಟಿ ಅವರು ತಮ್ಮದೇ ಆದ ಲೆಕ್ಕಾಚಾರದಲ್ಲಿ ಕಾವ್ಯಾ ಶೈವ (Kavya shaiva) ಅವರನ್ನು ಬಿಗ್ ಬಾಸ್ ಮನೆಯಲ್ಲಿ ಹಲವು ಬಾರಿ ನಾಮಿನೇಟ್ ಮಾಡಿದ್ದರು. ಇದು ಇತ್ತೀಚೆಗೆ ಹೆಚ್ಚಾಗಿದೆ. ಅದು ಗಿಲ್ಲಿಗೂ ಗೊತ್ತಾಗಿದೆ. ಕಾವ್ಯ ಹಾಗೂ ಗಿಲ್ಲಿ (Gilli Kavya) ಮಧ್ಯೆ ಸಣ್ಣ ಮನಸ್ತಾಪ ಆಗಿದೆ . ಹೀಗಾಗಿ ಪದೇ ಪದೇ ಗಿಲ್ಲಿ ಅವರು ಕಾವ್ಯಾಗೆ ಸಾರಿ ಕೇಳ್ತಾನೆ ಇದ್ದಾರೆ. ಆದರೂ ಕಾವ್ಯ ಸರಿ ಹೋದಂತಿಲ್ಲ. ಇದರ ಬೆನ್ನಲ್ಲೇ ರಕ್ಷಿತಾ ಗಿಲ್ಲಿಗೆ ಕೆಲವು ಬುದ್ದಿ ಮಾತುಗಳನ್ನು ಒಳ್ಳೆಯ ಸ್ನೇಹಿತೆಯಾಗಿ ಹೇಳಿದ್ದಾರೆ. ಏನದು?

ಸಮಯ ಕೊಡು ಅಂತ ಯಾರಿಗೂ ಒತ್ತಾಯ ಮಾಡಬೇಡಿ

ನನ್ನ ಜೊತೆಗೆ ಮಾತಾಡಿ ಅಂತ ಯಾರಿಗೂ ಒತ್ತಾಯ ಮಾಡಬೇಡಿ. ನಂಗೆ ಲವ್‌ ಮಾಡು, ಗೆಳತನ ಮಾಡು, ಸಮಯ ಕೊಡು ಅಂತ ಯಾರಿಗೂ ಒತ್ತಾಯ ಮಾಡಬೇಡಿ. ಇದು ಅರಿತುಕೊಳ್ಳಿ. ನಿಮ್ಮ ಭವಿಷ್ಯಕ್ಕೆ ತುಂಬಾ ಒಳ್ಳೆಯದು.

ಇದನ್ನೂ ಓದಿ: ‌Bigg Boss Kannada 12: ಗಿಲ್ಲಿ ನಟನಿಗೆ ಇನ್‌ಸ್ಟಾಗ್ರಾಮ್‌ನಲ್ಲಿ 1 ಮಿಲಿಯನ್‌ ಫಾಲೋವರ್ಸ್‌! ಮಿಕ್ಕ ಸ್ಪರ್ಧಿಗಳಿಗೆ ಎಷ್ಟಿದ್ದಾರೆ ಬೆಂಬಲಿಗರು?

ಇವತ್ತು ನಾನು ಇದೆಲ್ಲ ಹೇಳಿ ಕೊಡಲಿಕ್ಕೆ ನಿಮಗೆ ಇದ್ದೀನಿ. ನೀವು ಒಬ್ಬರಿಗೆ ನೂರು ಪರ್ಸೆಂಟ್‌ ಕೊಡ್ತೀರಾ, ಆದರೆ ಅವರು ನಿಮಗೆ ಕೇವಲ ಹತ್ತೇ ಪರ್ಸೆಂಟ್‌ ಸಮಯ ಕೊಡ್ತಾರೆ. ಆದರೆ ಯಾರು ನಿಮ್ಮನ್ನು ಇಷ್ಟ ಪಡ್ತಾರೆ ಅಲ್ವಾ? ಅವರಿಗೆ ನೀವು 10 ಪರ್ಸೆಂಟ್‌ ಕೊಟ್ಟರೆ, ಅವರು ನಿಮಗೆ ರಿಟರ್ನ್‌ 200 ಪರ್ಸೆಂಟ್‌ ವ್ಯಾಲ್ಯೂ ಕೊಡ್ತಾರೆ ಎಂದಿದ್ದಾರೆ.



ಗಿಲ್ಲಿ ರೀತಿ ಇರೋ ಹುಡುಗ ಇಷ್ಟ

ಗಿಲ್ಲಿ ಬಗ್ಗೆ ರಕ್ಷಿತಾ ಶೆಟ್ಟಿ ಅವರು ಮೊದಲಿನಿಂದಲೂ ಆಸಕ್ತಿ ಹೊಂದಿದ್ದಾರೆ. ಸಾಕಷ್ಟು ಬಾರಿ ಗಿಲ್ಲಿ ರೀತಿ ಇರೋ ಹುಡುಗ ಇಷ್ಟ ಅಂತಾನೂ ಹೇಳಿದ್ದಾರೆ. ಮೊದಲಿಗೆ 'ಗೌರಿ ಕಲ್ಯಾಣ' ಧಾರಾವಾಹಿಯ ತಂಡ ಮನೆಗೆ ಎಂಟ್ರಿ ಕೊಟ್ಟಿತ್ತು. ಈ ಸಮಯದಲ್ಲಿ ಎಲ್ಲರೂ ಮದುವೆ ಬಗ್ಗೆ ಮಾತನಾಡುತ್ತಿದ್ದರು. ಈ ವೇಳೆ ರಕ್ಷಿತಾ ಶೆಟ್ಟಿ ತಮ್ಮ ಮನಸ್ಸಿನ ಭಾವನೆಯನ್ನು ಎಲ್ಲರ ಮುಂದೆ ಹೇಳಿಕೊಂಡಿದ್ದರು.

ಈ ವೇಳೆ ಅನುಪಮಾ ಗೌಡ, ರಕ್ಷಿತಾ ಶೆಟ್ಟಿ ಬಳಿ ನೀನು ಮದುವೆ ಹುಡುಗ ಹೇಗಿರಬೇಕು ಎಂದು ಕೇಳುತ್ತಾರೆ. ಇದಕ್ಕೆ ರಕ್ಷಿತಾ ಗಿಲ್ಲಿ ಹಾಗಿರಬೇಕು ಎಂದು ಹೇಳಿದ್ದರು. ಈ ಮಾತು ಕೇಳಿ ಮನೆ ಮಂದಿಯೆಲ್ಲಾ ರಕ್ಷಿತಾ ಕಾಲೆಳೆದು ಎಂದು ತಮಾಷೆ ಮಾಡಿದ್ದರು.

ಇದನ್ನೂ ಓದಿ: Bigg Boss Kannada 12: ಧ್ರುವಂತ್ ತುಂಬಾ ಪಾಪ, ಕೆಟ್ಟ ಮನುಷ್ಯ ಅಲ್ಲ; ರಕ್ಷಿತಾ ಶೆಟ್ಟಿಗೆ ಮೂಡಿದೆ ಅನುಕಂಪ

ಸುದೀಪ್ ಕೂಡ ೀ ಬಗ್ಗೆ ಪ್ರಶ್ನೆ ಇಟ್ಟಿದ್ದರು. ‘ಜಾಸ್ತಿ ಯೋಚಿಸದೆ ಇರುವ, ಸೆನ್ಸ್ ಆಫ್ ಹ್ಯೂಮರ್ ಇರುವವರು ಇಷ್ಟ ಆಗುತ್ತಾರೆ. ಹೀಗಾಗಿ ಗಿಲ್ಲಿ ನಂಗೆ ಇಷ್ಟ’ ಎಂದು ಕಿಚ್ಚನ ಮುಂದೆಯೇ ಹೇಳಿದ್ದರು ರಕ್ಷಿತಾ