Bigg Boss Kannada 12 Finale: ಅಯ್ಯೋ, ಕಾವ್ಯ ತಮ್ಮನ ಮಾತು ನಿಜವಾಗಲೇ ಇಲ್ಲ; ಬಿಗ್ ಬಾಸ್ ಶೋನಿಂದ ಹೊರಬಿದ್ದ ಕಾವು!
Kavya Shaiva: ಬಿಗ್ ಬಾಸ್ ಸೀಸನ್ 12ರಲ್ಲಿ ಜಂಟಿಯಾಗಿ ಮನೆಗೆ ಎಂಟ್ರಿ ಕೊಟ್ಟವರು ಅಂದರೆ ಅದುವೇ ಕಾವ್ಯ ಶೈವ . ಗಿಲ್ಲಿಯ ಜೋಡಿ ಅವರಾಗಿದ್ದರು. ʻಬಿಗ್ ಬಾಸ್ʼನಲ್ಲಿ ಫೈನಲ್ ಆಗಿ 6 ಸ್ಪರ್ಧಿಗಳು ಫಿನಾಲೆಗೆ ಎಂಟ್ರಿ ಕೊಟ್ಟರು. ಅದರಲ್ಲಿ ಕಾವ್ಯ ಕೂಡ ಒಬ್ಬರು. ಆದರೀಗ ಕಾವ್ಯ ಔಟ್ ಆಗಿದ್ದಾರೆ. ವಿನ್ನರ್ ಆಗೋ ಕನಸು ಭಗ್ನ ಆಗಿದೆ. ಗಿಲ್ಲಿ ಪಕ್ಕ ಕಾವ್ಯಾನೆ ಇರ್ತಾರೆ ಅಂತ ಅಂದುಕೊಂಡಿದ್ದ ಫ್ಯಾನ್ಸ್‌ಗೆ (Fans) ನಿರಾಸೆ ಆಗಿದೆ. ರಘು ಹಾಗೂ ಧನುಷ್ ಬೆನ್ನಲ್ಲೇ ಕಾವ್ಯ ಔಟ್ ಆದರು.
ಬಿಗ್ ಬಾಸ್ ಕನ್ನಡ -
ಬಿಗ್ ಬಾಸ್ ಸೀಸನ್ 12ರಲ್ಲಿ (Bigg Boss Kannada 12) ಜಂಟಿಯಾಗಿ ಮನೆಗೆ ಎಂಟ್ರಿ ಕೊಟ್ಟವರು ಅಂದರೆ ಅದುವೇ ಕಾವ್ಯ ಶೈವ (Kavya Shaiva Eliminate). ಗಿಲ್ಲಿಯ ಜೋಡಿ (Gilli Nata Kavya) ಅವರಾಗಿದ್ದರು. ʻಬಿಗ್ ಬಾಸ್ʼನಲ್ಲಿ ಫೈನಲ್ ಆಗಿ 6 ಸ್ಪರ್ಧಿಗಳು ಫಿನಾಲೆಗೆ ಎಂಟ್ರಿ ಕೊಟ್ಟರು. ಅದರಲ್ಲಿ ಕಾವ್ಯ ಕೂಡ ಒಬ್ಬರು. ಆದರೀಗ ಕಾವ್ಯ ಔಟ್ (Kavya Out) ಆಗಿದ್ದಾರೆ. ವಿನ್ನರ್ ಆಗೋ ಕನಸು ಭಗ್ನ ಆಗಿದೆ. ಗಿಲ್ಲಿ ಪಕ್ಕ ಕಾವ್ಯಾನೆ ಇರ್ತಾರೆ ಅಂತ ಅಂದುಕೊಂಡಿದ್ದ ಫ್ಯಾನ್ಸ್‌ಗೆ (Fans) ನಿರಾಸೆ ಆಗಿದೆ.
ಟಾಸ್ಕ್‌ಗಳಲ್ಲಿ ಸಕ್ರಿಯ
ಬಿಗ್ ಬಾಸ್ ಮನೆಯಲ್ಲಿ ಬಹುತೇಕರು ಗಿಲ್ಲಿ ಇಂದ ಕಾವ್ಯ ಅಂತ ಇದ್ದರು. ಅದರಲ್ಲೂ ಗಿಲ್ಲಿ ಅವರು ಕಾವು ಕಾವು ಅಂತಾನೇ ತಮಾಷೆ ಮಾಡ್ತಾ ಇದ್ದರು. ಕಾವ್ಯ ಅವರು ಸಾಕಷ್ಟು ಬಾರಿ ಟಾಸ್ಕ್‌ಗಳಲ್ಲಿ ತಮ್ಮನ್ನು ತಾವು ಪ್ರೂವ್ ಮಾಡಿಕೊಂಡಿದ್ದರು ಮೊದಲ ವಾರದಲ್ಲೇ ಅವರು ಟಾಸ್ಕ್‌ಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದರ ಜೊತೆಗೆ ಮನೆ ಸದಸ್ಯರೊಂದಿಗೆ ಮಿಂಗಲ್ ಆದರು. ಗಿಲ್ಲಿ ಕಾರಣ, ಜಂಟಿಯಾಗಿ ದೊಡ್ಮನೆಗೆ ಪ್ರವೇಶಿಸಿದ ಇವರಿಬ್ಬರ ಬಾಂಡಿಂಗ್ ಬಹಳಷ್ಟು ಚರ್ಚೆಗೆ ಕಾರಣವಾಯ್ತು. ಇವರಿಬ್ಬರ ಫ್ರೆಂಡ್ಶಿಪ್ ಈ ಸೀಸನ್‌ನ ಮತ್ತೊಂದು ಹೈಲೈಟ್ ಆಗಿತ್ತು.
ಇದನ್ನೂ ಓದಿ: Bigg Boss Kannada 12: ಈ ಸೀಸನ್ ವಿನ್ನರ್‌ಗೆ ಬಂದಿದೆ ಬರೋಬ್ಬರಿ 37 ಕೋಟಿಗೂ ಅಧಿಕ ವೋಟುಗಳು! ಯಾರದು?
ಕಾವ್ಯ ಹಾಗೂ ಗಿಲ್ಲಿ ನಡುವೆ ಒಳ್ಳೆಯ ಬಾಂಡಿಂಗ್
ಮೊದಲಿಗೆ ಕಾವ್ಯ ಹಾಗೂ ಗಿಲ್ಲಿ ನಡುವೆ ಒಳ್ಳೆಯ ಬಾಂಡಿಂಗ್ ಇತ್ತು. ಬರ್ತಾ ಬರ್ತಾ ಕಾವ್ಯ ಅವರಿಗೆ ಗಿಲ್ಲಿ ನಟನ ಫ್ರೆಂಡ್ಶಿಪ್ ಇರಿಟೇಟ್ ಆಗೋಕೆ ಶುರುವಾಯ್ತು. ನಾಮಿನೇಶನ್ ವೇಳೆ, ಕಳಪೆ ಸಮಯದಲ್ಲಿ ಗಿಲ್ಲಿ ಹೆಸರನ್ನೇ ಹೇಳ್ತಾ ಇದ್ದರು. ಗಿಲ್ಲಿ ಜೊತೆಗಿನ ಬಾಂಡಿಂಗ್ ಕೆಲವೊಮ್ಮೆ ಅವರ ಜರ್ನಿಯ ಬೆನ್ನೆಲುಬು ಅಂತ ಅನಿಸಿದ್ದುಂಟು. ಇನ್ನೂ ಫ್ಯಾಮಿಲಿ ವೀಕ್‌ನಲ್ಲಿ ತಮ್ಮನ ಮಿಸ್ಟೇಕ್‌ನಿಂದ ಕಾವ್ಯಗೆ ತೀರಾ ಪೆಟ್ಟು ಬಿತ್ತು. ಮನೆಯವರ ಮಾತು ಕೇಳಿ ಗಿಲ್ಲಿ ಜೊತೆ ಕ್ಲೋಸ್ ಆದರು ಅನ್ನೋದು ಕೆಲವರ ಅಭಿಪ್ರಾಯ ಆಗಿತ್ತು.
ಇದನ್ನೂ ಓದಿ: Bigg Boss Kannada 12: ನಾನು ಶಿವಣ್ಣ ಅವರ ಕಾಲು ಧೂಳಿಗೂ ಸಮ ಇಲ್ಲ ಎಂದ ಗಿಲ್ಲಿ ನಟ!
ಕಾವ್ಯ ಬಿಗ್ ಬಾಸ್‌ನಲ್ಲಿ ನಿರ್ಧಾರಗಳನ್ನು ಬಹಳ ಅಚ್ಚುಕಟ್ಟಾಗಿ ತೆಗೆದುಕೊಳ್ತಾ ಇದ್ದರು. ಇನ್ನೊಂದು ಪ್ಲಸ್ ಪಾಯಿಂಟ್ ಅಂದರೆ, ಟಾಸ್ಕ್‌ಗಳಲ್ಲಿ ಮತ್ತು ನಾಮಿನೇಷನ್‌ಗಳಲ್ಲಿ ವೈಯಕ್ತಿಕವಾಗಿ ಅವರು ಯಾರನ್ನೂ ಟಾರ್ಗೆಟ್ ಮಾಡುತ್ತಿರಲಿಲ್ಲ. ಗಿಲ್ಲಿ, ಅಶ್ವಿನಿ, ರಕ್ಷಿತಾ ಶೆಟ್ಟಿ ಕೂಡ ಬಲವಾದ ಸ್ಪರ್ಧೆಯಲ್ಲಿ ಇದ್ದ ಕಾರಣ ಕಾವ್ಯ ಅಂತೂ ಮನೆಯಿಂದ ಆಚೆ ಬಂದಿದ್ದಾರೆ. ಆದರೆ ಗಿಲ್ಲಿ ಫ್ಯಾನ್ಸ್ ಮನದಲ್ಲಿ ಸದಾ ಇರ್ತಾರೆ.