BBK 12: 'ಬಿಗ್ ಬಾಸ್' ಸೀಕ್ರೆಟ್ ರೂಮ್ ಬಗ್ಗೆ ಆ ಇಬ್ಬರು ಸದಸ್ಯರಿಗೆ ಬಂತು ಡೌಟ್; ಸತ್ಯ ಗೊತ್ತಾಗೋದು ಯಾವಾಗ?
BBK 12 Secret Room Twist: ಬಿಗ್ ಬಾಸ್ ಕನ್ನಡ 12ರ ಮನೆಯಲ್ಲಿ 'ಸೀಕ್ರೆಟ್ ರೂಮ್' ಎನ್ನುವುದು ಈಗ ಸೀಕ್ರೆಟ್ ಆಗಿ ಉಳಿದಿಲ್ಲ! ಧ್ರುವಂತ್ ಮತ್ತು ರಕ್ಷಿತಾ ಶೆಟ್ಟಿ ಅವರನ್ನು ಮನೆಯಿಂದ ಎಲಿಮಿನೇಟ್ ಮಾಡದೆ ಸೀಕ್ರೆಟ್ ರೂಮ್‌ನಲ್ಲಿ ಇಡಲಾಗಿದೆ ಎಂಬ ಬಲವಾದ ಅನುಮಾನವನ್ನು ಕಾವ್ಯ ಮತ್ತು ಗಿಲ್ಲಿ ನಟ ವ್ಯಕ್ತಪಡಿಸಿದ್ದಾರೆ.
-
ಬಿಗ್ ಬಾಸ್ ಮನೆಯಲ್ಲಿ ಸೀಕ್ರೆಟ್ ರೂಮ್ ಟಾಸ್ಕ್ ನಡೆಯುತ್ತಿದೆ. ಧ್ರುವಂತ್ ಮತ್ತು ರಕ್ಷಿತಾ ಶೆಟ್ಟಿ ಅವರನ್ನು ಸೀಕ್ರೆಟ್ ರೂಮ್‌ಗೆ ಕಳುಹಿಸಿದ್ದಾರೆ. ಮನೆಯೊಳಗೆ ಏನು ನಡೆಯುತ್ತಿದೆ ಎಂಬುದನ್ನು ಅವರಿಬ್ಬರು ಅಲ್ಲಿಂದಲೇ ನೋಡುತ್ತಿದ್ದಾರೆ. ಈ ನಡುವೆ ಧ್ರುವಂತ್ ಮತ್ತು ರಕ್ಷಿತಾ ಎಲಿಮಿನೇಟ್ ಆಗಿಲ್ಲ, ಸೀಕ್ರೆಟ್ ರೂಮ್‌ನಲ್ಲಿ ಇಟ್ಟಿದ್ದಾರೆ ಎಂಬ ಅನುಮಾನವನ್ನು ಬಿಗ್ ಬಾಸ್ ಮನೆಯಲ್ಲಿರುವ ಸ್ಪರ್ಧಿಗಳಿಬ್ಬರು ವ್ಯಕ್ತಪಡಿಸಿದ್ದಾರೆ.
ಗಿಲ್ಲಿ ಮತ್ತು ಕಾವ್ಯಗೆ ಬಂತು ಅನುಮಾನ
ಬಿಗ್ ಬಾಸ್ ಮನೆಯಿಂದ ಧ್ರುವಂತ್ ಮತ್ತು ಕಾವ್ಯ ಅವರನ್ನು ಎಲಿಮಿನೇಟ್ ಮಾಡಿದಾಗ, ಬಹುತೇಕರಿಗೆ ಅಚ್ಚರಿ ಆಗಿತ್ತು. ಈಗಾಗಲೇ ರಘು ಅವರು ಬಹುಶಃ ಅವರಿಬ್ಬರು ಸೀಕ್ರೆಟ್ ರೂಮ್‌ಗೆ ಕಳುಹಿಸಿರಬಹುದಾ ಎಂಬ ಡೌಟ್ ಅನ್ನು ವ್ಯಕ್ತಪಡಿಸಿದ್ದರು. ಇದೀಗ ಅಂಥದ್ದೇ ಅನುಮಾವನ್ನು ಕಾವ್ಯ ಮತ್ತು ಗಿಲ್ಲಿ ಕೂಡ ಹೇಳಿಕೊಂಡಿದ್ದಾರೆ. ಮನೆಯ ಗಾರ್ಡನ್ ಏರಿಯಾದಲ್ಲಿ ಕುಳಿತಿದ್ದ ಕಾವ್ಯ ಮತ್ತು ಗಿಲ್ಲಿ ಈ ಬಗ್ಗೆ ಮಾತನಾಡಿಕೊಂಡಿದ್ದಾರೆ. "ಅವರಿಬ್ಬರನ್ನು ಇದೇ ಸೆಟ್ ಹಾಕಿ, ಪಕ್ಕದಲ್ಲಿ ಏನಾದರೂ ಇಟ್ಟಿರಬಹುದಾ? ಅಲ್ಲಿ ಇನ್ನೊಂದು ಬಿಗ್ ಬಾಸ್ ನಡೆಸ್ತಾ, ಅವರು ನಮ್ಮನ್ನು ನೋಡೋ ಥರ ವ್ಯವಸ್ಥೆ ಮಾಡಿರಬಹುದಾ" ಎಂದು ಗಿಲ್ಲಿ ಮಾತನಾಡಿದ್ದಾರೆ.
The Devil Movie: `ಡೆವಿಲ್' ಸಿನಿಮಾದಲ್ಲಿ ಗಿಲ್ಲಿ ನಟನ ಪರ್ಫಾರ್ಮೆನ್ಸ್ ಹೇಗಿದೆ? ನಟ ಚಂದು ಗೌಡ ಮನದಾಳದ ಮಾತು!
ಕಾವ್ಯ ಏನಂದ್ರು ನೋಡಿ!
"ಧ್ರುವಂತ್ ಮತ್ತು ರಕ್ಷಿತಾ ಶೆಟ್ಟಿ ಅವರನ್ನು ಸೀಕ್ರೆಟ್ ರೂಮ್‌ನಲ್ಲಿ ಇಡಲಾಗಿದೆ. ನಮ್ಮ ಆಟವನ್ನು ನೋಡಿ ಅವರು ಹೇಗೆ ಎಕ್ಸ್ಪ್ರೆಸ್ ಮಾಡುತ್ತಾರೆ ಎಂಬುದನ್ನು ತೋರಿಸಲಾಗುತ್ತದೆ" ಎಂದು ಕಾವ್ಯ ಕೂಡ ಹೇಳಿದ್ದಾರೆ. ಜೊತೆಗೆ ಅವರು ಮತ್ತೊಂದು ಇಂಟರೆಸ್ಟಿಂಗ್ ವಿಚಾರವನ್ನು ಊಹಿಸಿದ್ದಾರೆ. "ರಕ್ಷಿತಾ ಮತ್ತು ಧ್ರುವಂತ್ ಮಧ್ಯೆ ಮಾತುಕತೆ ನಡೆಯುತ್ತಿರಲಿಲ್ಲ. ಈಗ ಅವರಿಬ್ಬರನ್ನು ಒಂದೇ ರೂಮ್‌ನಲ್ಲಿ ಇರಿಸಿದ್ದರೆ, ಅವರಿಬ್ಬರು ಏನು ಮಾತನಾಡಿಕೊಳ್ಳುತ್ತಾರೆ ಅಂತ ಆಡಿಯೆನ್ಸ್‌ಗೆ ತೋರಿಸಲಾಗುತ್ತದೆ" ಎಂಬುದನ್ನು ಕಾವ್ಯ ಹೇಳಿದ್ದಾರೆ. ಸದ್ಯ ಸೀಕ್ರೆಟ್ ರೂಮ್‌ನಲ್ಲಿ ನಡೆಯುತ್ತಿರುವುದು ಅದೇ!
Bigg Boss Kannada 12: ರಜತ್‌ನ ಮನೆಯಿಂದ ಆಚೆ ಕಳುಹಿಸಿಯೇ ಹೋಗ್ತೇನೆ! ಗಿಲ್ಲಿ ನಟ ಓಪನ್ ಚಾಲೆಂಜ್
ಸೀಕ್ರೆಟ್ ರೂಮ್ ಬಗ್ಗೆ ಗಿಲ್ಲಿ & ಕಾವ್ಯ ಮಾತುಕತೆ
ಸೀಕ್ರೆಟ್ ರೂಮ್‌ನಿಂದ ಆಚೆ ಬರೋದು ಯಾವಾಗ?
ಸದ್ಯ ರಕ್ಷಿತಾ ಶೆಟ್ಟಿ ಮತ್ತು ಧ್ರುವಂತ್ ಅವರು ಸೀಕ್ರೆಟ್ ರೂಮ್‌ನಲ್ಲಿ ಇದ್ದಾಗ್ಯೂ ಗಲಾಟೆ ಮಾಡಿಕೊಳ್ಳುತ್ತಿದ್ದಾರೆ. ಅವರನ್ನು ಬಿಗ್ ಬಾಸ್ ಮನೆಯೊಳಗೆ ಯಾವಾಗ ಕಳುಹಿಸುತ್ತಾರೋ ಎಂಬ ಕುತೂಹಲ ವೀಕ್ಷಕರಲ್ಲಿದೆ ಮತ್ತು ಅವರು ಮನೆಯೊಳಗೆ ಹೋದಾಗ ಅಲ್ಲಿನ ಸ್ಪರ್ಧಿಗಳ ರಿಯಾಕ್ಷನ್ ಹೇಗಿರುತ್ತದೆ ಎಂಬುದನ್ನು ತಿಳಿಯಲು ವೀಕ್ಷಕರಿಗೂ ಕೂತುಹಲವಿದೆ. ಬಹುಶಃ ಬಿಗ್ ಬಾಸ್ ಮನೆಯೊಳಗೆ ಧ್ರುವಂತ್ ಮತ್ತು ರಕ್ಷಿತಾ ಬಂದಾಗ ಕಾವ್ಯ ಮತ್ತು ಗಿಲ್ಲಿ ನಟಗೆ ಏನೂ ಅಚ್ಚರಿ ಆಗುವುದಿಲ್ಲ ಎನಿಸುತ್ತದೆ. ಏಕೆಂದರೆ, ಈಗಾಗಲೇ ಅವರು ಸೀಕ್ರೆಟ್ ರೂಮ್ ವಿಚಾರವನ್ನು ಊಹಿಸಿದ್ದಾರೆ. ಇನ್ನು, ಬಿಗ್ ಬಾಸ್ ಮನೆಯೊಳಗೆ ಸೈಲೆಂಟ್ ಆಗಿ ಬಂದುಹೋಗಿರುವ ರಕ್ಷಿತಾ ಮತ್ತು ಧ್ರುವಂತ್, ಮನೆಯ ಸದಸ್ಯರಿಗೆ ದೊಡ್ಡ ಕೆಲಸವೊಂದನ್ನು ಕೊಟ್ಟಿದ್ದಾರೆ. ಅದರ ಪ್ರೋಮೋ ರಿಲೀಸ್ ಆಗಿದೆ.