Bigg Boss Kannada 12 : ಮಗ ಇರಲಿಲ್ಲ ಅಂದ್ರೆ ನನ್ನ ವೋಟ್ ಗಿಲ್ಲಿಗೆ, ಅವನಂದ್ರೆ ಇಷ್ಟ ಎಂದ ಧನುಷ್ ಅಮ್ಮ! ಸೂರಜ್ ತಾಯಿ ಏನಂದ್ರು?
Gilli Nata: ಬಿಗ್ ಬಾಸ್ ಈ ವಾರ ಫ್ಯಾಮಿಲಿ ವೀಕ್ ರೌಂಡ್ ಆಗಿದೆ. ಬಿಗ್ ಬಾಸ್ ವೀಕ್ಷಕರಿಗೆ ಗೊತ್ತೇ ಇದೆ ಗಿಲ್ಲಿ ಈ ಸೀಸನ್ ಪ್ರಮುಖ ಹೈಲೈಟ್. ಗಿಲ್ಲಿ ಕಾಮಿಡಿಗೆ ಫಿದಾ ಆಗದವರೇ ಇಲ್ಲ. ಗಿಲ್ಲಿ ಕಾಮಿಡಿ ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಕ್ರೇಜ್ ಹುಟ್ಟು ಹಾಕಿದೆ. ಧನುಷ್, ಸೂರಜ್, ರಾಶಿಕಾ ಮನೆಯವರೂ ಈಗ ಗಿಲ್ಲಿ ಬಗ್ಗೆಯೇ ಹೊಗಳಿದ್ದಾರೆ.
ಬಿಗ್ ಬಾಸ್ ಕನ್ನಡ -
ಬಿಗ್ ಬಾಸ್ (Bigg Boss Kannada 12) ಈ ವಾರ ಫ್ಯಾಮಿಲಿ ವೀಕ್ ರೌಂಡ್ (Family Week Round) ಆಗಿದೆ. ಬಿಗ್ ಬಾಸ್ ವೀಕ್ಷಕರಿಗೆ ಗೊತ್ತೇ ಇದೆ ಗಿಲ್ಲಿ ಈ ಸೀಸನ್ ಪ್ರಮುಖ ಹೈಲೈಟ್. ಗಿಲ್ಲಿ ಕಾಮಿಡಿಗೆ ಫಿದಾ ಆಗದವರೇ ಇಲ್ಲ. ಗಿಲ್ಲಿ (Gilli Nata Comedy) ಕಾಮಿಡಿ ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಕ್ರೇಜ್ ಹುಟ್ಟು ಹಾಕಿದೆ. ಧನುಷ್, ಸೂರಜ್, ರಾಶಿಕಾ ಮನೆಯವರೂ ಈಗ ಗಿಲ್ಲಿ ಬಗ್ಗೆಯೇ ಹೊಗಳಿದ್ದಾರೆ. ಅದರಲ್ಲೂ ಧನುಷ್ ಅವರ ತಾಯಿ (Dhanush Mother), ಗಿಲ್ಲಿ ಅಂದ್ರೆ ಇಷ್ಟ. ಧನುಷ್ ಇಲ್ಲ ಅಂದಿದ್ರೆ, ನನ್ನ ಎಲ್ಲಾ ವೋಟ್ ಗಿಲ್ಲಿಗೆ ಹಾಕ್ತಾ ಇದ್ದೆ. ಅವನ ಕಾಮಿಡಿ ನಂಗೆ ತುಂಬಾ ಇಷ್ಟ ಎಂದಿದ್ದಾರೆ.
ಮೊದಲಿಗೆ ಸೂರಜ್ ತಾಯಿ ಎಂಟ್ರಿ ಕೊಡುತ್ತಲೇ ಗಿಲ್ಲಿ ನೋಡಿ ಒಂದು ಕ್ಷಣ ಖುಷಿ ಆದ್ರು. ಗಿಲ್ಲಿ ಏನೇ ಮಾಡಿದ್ರು ಇಷ್ಟ. ಅವನು ಎಲ್ಲರನ್ನೂ ನಗಿಸ್ತಾನೆ. ಅವನು ಇಲ್ಲ ಅಂದ್ರೆ ಮನೆಲೇ ಬೇಜಾರು ಎಂದರು.
ಇದನ್ನೂ ಓದಿ: Bigg Boss Kannada 12: ಬಿಗ್ ಬಾಸ್ ನಿರೂಪಣೆಯಲ್ಲಿ ತಪ್ಪು ಕಂಡುಹಿಡಿಯೋರ ಬಗ್ಗೆ ಕಿಚ್ಚ ಹೇಳಿದ್ದೇನು?
ಗಿಲ್ಲಿ ಅಂದ್ರೆ ಇಷ್ಟ
ಇದಾದ ಬಳಿಕ ಧನುಷ್ ಅವರ ಅಮ್ಮ ಎಂಟ್ರಿ ಕೊಟ್ಟರು. ಕಾವ್ಯ ಅವರು ಧನುಷ್ ಅವರ ಅಮ್ಮಗೆ, ಧನು ಬಿಟ್ಟರೆ ಯಾರು ಇಷ್ಟ ಅಂತ ಕೇಳಿದ್ರು. ಅದಕ್ಕೆ ಉತ್ತರ ನೀಡಿ, ಗಿಲ್ಲಿ ಅಂದ್ರೆ ಇಷ್ಟ. ಧನುಷ್ ಇಲ್ಲ ಅಂದಿದ್ರೆ, ನನ್ನ ಎಲ್ಲಾ ವೋಟ್ ಗಿಲ್ಲಿಗೆ ಹಾಕ್ತಾ ಇದ್ದೆ. ಅವನ ಕಾಮಿಡಿ ನಂಗೆ ತುಂಬಾ ಇಷ್ಟ ಎಂದರು.
ಇನ್ನು ಈ ವಿಡಿಯೋಗಳನ್ನು ಗಿಲ್ಲಿ ಫ್ಯಾನ್ಸ್ ಶೇರ್ ಮಾಡಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲ ಫ್ಯಾಮಿಲಿ ವೀಕ್‌ನಲ್ಲಿಯೂ ಗಿಲ್ಲಿ ಮನೆಮಂದಿಯನ್ನ ನಗಿಸಿದ್ದಾರೆ.
·ಈ ಸೀಸನ್ ಜನಗಳ್ಗೆ ಇಷ್ಟ ಆಗೋಕೆ ಮೊದಲನೇ ಗಿಲ್ಲಿ. ಪ್ರತಿದಿನ ನಮ್ಮೆಲ್ಲರ ಮುಖದಲ್ಲಿ ನಗು ಮೂಡಿಸ್ತಿಯಾ ನಿನ್ನ ಕಾಮಿಡಿ ಯಿಂದ, ನಿನ್ನ ಮಾತಿಂದ ಈ ಸೀಸನ್ ಎಂಟರ್ಟೈನರ್ ಅವಾರ್ಡ್ ಇದ್ರೇ ಅದು ನಿಂಗೆ ಕೊಡ್ಬೇಕು ಅಂತ ಗಿಲ್ಲಿ ಬಗ್ಗೆ ಫ್ಯಾನ್ಸ್ ಕಮೆಂಟ್ ಮಾಡ್ತಿದ್ದಾರೆ.
ವೈರಲ್ ವಿಡಿಯೋ
Dhanush’s mom:
— Virat👑Rocky✨️ (@Virat_Rocky18) December 23, 2025
ಗಿಲ್ಲಿ ಅಂದ್ರೆ ಇಷ್ಟ. ಧನುಷ್ ಇಲ್ಲ ಅಂದಿದ್ರೆ, ನನ್ನ ಎಲ್ಲಾ votes ಗಿಲ್ಲಿಗೆ ಹಾಕ್ತಾ ಇದ್ದೆ. ಅವನ ಕಾಮಿಡಿ ನಂಗೆ ತುಂಬಾ ಇಷ್ಟ.
Suraj’s mom:
ಗಿಲ್ಲಿ ಏನೇ ಮಾಡಿದ್ರು ಇಷ್ಟ. ಅವನು ಎಲ್ಲರನ್ನೂ ನಗಿಸ್ತಾನೆ. ಅವನು ಇಲ್ಲ ಅಂದ್ರೆ ಮನೆಲೇ ಬೇಜಾರು.
This is #Gilli season. 😎💥#BBK12 pic.twitter.com/5L5MTnkJQh
ಈ ವಾರ ಫ್ಯಾಮಿಲಿ ವೀಕ್
ಬಿಗ್ ಬಾಸ್ ಮನೆಯಲ್ಲಿ ಈ ವಾರ ಫ್ಯಾಮಿಲಿ ವೀಕ್ ನಡೆಯುತ್ತಿದೆ. ಈಗಾಗಲೇ ಸೂರಜ್ ಅವರ ತಾಯಿ ಅಕ್ಕ, ರಾಶಿಕಾ ಅವರ ತಮ್ಮ ಅಮ್ಮ , ಧನುಷ್ ಅವರ ತಾಯಿ ಎಂಟ್ರಿ ಕೊಟ್ಟಿದ್ದಾಗಿದೆ. ಈಗ ರಕ್ಷಿತಾ ಶೆಟ್ಟಿ ಸರದಿ. ವಿಶೇಷ ಅಂದರೆ ಬಿಗ್ ಬಾಸ್ ಒಂದು ರಕ್ಷಿತಾಗೆ ಸರ್‌ಪ್ರೈಸ್ ಕೊಟ್ಟಿದ್ದಾರೆ. ಲೈವ್ ಬ್ಲಾಗಿಂಗ್ ಮಾಡುತ್ತಲೇ ಅಮ್ಮನಿಗೆ ಬಿಗ್ ಬಾಸ್ ಮನೆಯನ್ನ ತೋರಿಸಿದ್ದಾರೆ ರಕ್ಷಿತಾ. ಇದೀಗ ಈ ಪ್ರೋಮೋ ಔಟ್ ಆಗಿದೆ.
We Gilli fans love you Kaveramma❤#BBK12 #Gilli pic.twitter.com/Sj7aDx8yXV
— Gilli Trends™ (@Gilli_Trends) December 23, 2025
ರಕ್ಷಿತಾ ಅಮ್ಮ ಎಂಟ್ರಿ ಕೊಡುತ್ತಲೇ ಯಾರೊಂದಿಗೂ ಜಗಳ ಮಾಡಬೇಡ ಎಂದಿದ್ದಾರೆ. ಧ್ರುವಂತ್ ಬೆತ್ತ ತರಲಿಲ್ವಾ ಅಂತ ಕೇಳಿದ್ದಾರೆ. ಅದಕ್ಕೆ ಗಿಲ್ಲಿ, ಬೆತ್ತ ತಂದಿದ್ದರೆ ನಿನಗೆ ಹೊಡಿತಾ ಇದ್ದರು ಎಂದು ತಮಾಷೆ ಮಾಡಿದ್ದಾರೆ.
ಇದನ್ನೂ ಓದಿ: Bigg Boss Kannada 12: ರಕ್ಷಿತಾ ಅಮ್ಮನಿಗೆ ಧ್ರುವಂತ್ ಸಾಷ್ಟಂಗ ನಮಸ್ಕಾರ! ಡೊಡ್ಮನೆಯಲ್ಲಿ ಪುಟ್ಟಿ ತಾಯಿ ಜೊತೆ ವ್ಲಾಗ್
ಇನ್ನು ರಕ್ಷಿತಾ ಅವರಿಗೆ ಬಿಗ್ ಬಾಸ್ ಒಂದು ಸರ್‌ಪ್ರೈಸ್ ಕೊಟ್ಟಿದ್ದಾರೆ. ಮನೆಯಲ್ಲಿ ಮೀನು , ಕ್ಯಾಮೆರಾ ಎಲ್ಲವೂ ಇದೆ. ಲೈವ್ ಬ್ಲಾಗಿಂಗ್ ಶುರು ಮಾಡಿ ಎಂದಿದ್ದಾರೆ. ರಕ್ಷಿತಾ ಲೈವ್ ಬ್ಲಾಗಿಂಗ್ ಮಾಡುತ್ತ ಮೀನು ಫ್ರೈ ಮಾಡಿದ್ದಾರೆ.