ಚಂದನವನದ ತ್ರಿಮೂರ್ತಿಗಳ ಆಶೀರ್ವಾದ ಪಡೆದ ಗಿಲ್ಲಿ ನಟ; ದಿಗ್ಗಜರ ಪುಣ್ಯಭೂಮಿಯಲ್ಲಿ ಬಿಗ್ ಬಾಸ್ 12 ವಿನ್ನರ್
ಬಿಗ್ ಬಾಸ್ ಕನ್ನಡ ಸೀಸನ್ 12ರ ವಿಜೇತರಾದ ಗಿಲ್ಲಿ ನಟ ಅವರು ಚಂದನವನದ ತ್ರಿಮೂರ್ತಿಗಳಾದ ಡಾ. ರಾಜ್‌ಕುಮಾರ್, ಡಾ. ವಿಷ್ಣುವರ್ಧನ್ ಮತ್ತು ಡಾ. ಅಂಬರೀಷ್ ಅವರ ಪುಣ್ಯಭೂಮಿಗಳಿಗೆ ಭೇಟಿ ನೀಡಿ, ಅವರ ಆಶೀರ್ವಾದ ಪಡೆದುಕೊಂಡು ಬಂದಿದ್ದಾರೆ.
-
ಬಿಗ್ ಬಾಸ್ ಕನ್ನಡ 12ರಲ್ಲಿ ದಾಖಲೆಯ ಗೆಲುವು ಕಂಡಿರುವ ಗಿಲ್ಲಿ ನಟ ಅವರಿಗೆ ಈಗ ಎಲ್ಲಾ ಕಡೆ ಫ್ಯಾನ್ಸ್ ಮುತ್ತಿಕೊಳ್ಳುತ್ತಿದ್ದಾರೆ. ಸದ್ಯ ಯಾವುದೇ ಇವೆಂಟ್‌ಗಳು ನಡೆಯಲಿ, ಎಲ್ಲಾ ಕಡೆ ಈಗ ಗಿಲ್ಲಿ ನಟ ಅವರ ಹಾಜರಿ ಖಾಯಂ ಆಗಿದೆ. ಫಿನಾಲೆ ಮುಗಿದು 10 ದಿನಗಳಾದರೂ, ಗಿಲ್ಲಿಯ ಹವಾ ಮಾತ್ರ ಕಮ್ಮಿ ಆಗಿಲ್ಲ. ಈ ಮಧ್ಯೆ ಅವರು ಕನ್ನಡ ಚಿತ್ರರಂಗದ ತ್ರಿಮೂರ್ತಿಗಳ ಆಶೀರ್ವಾದವನ್ನು ಪಡೆದುಕೊಂಡಿದ್ದಾರೆ.
ತ್ರಿಮೂರ್ತಿಗಳ ಆಶೀರ್ವಾದ ಪಡೆದ ಗಿಲ್ಲಿ
ಹೌದು, ಕನ್ನಡ ಚಿತ್ರರಂಗದ ತ್ರಿಮೂರ್ತಿಗಳೆಂದರೆ, ವರನಟ ಡಾ. ರಾಜ್‌ಕುಮಾರ್, ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಮತ್ತು ರೆಬೆಲ್ ಸ್ಟಾರ್ ಡಾ. ಅಂಬರೀಷ್. ಈ ಮೂವರ ಪುಣ್ಯಭೂಮಿಗಳಿಗೆ ಬಿಗ್ ಬಾಸ್ ಟ್ರೋಫಿಯೊಂದಿಗೆ ಹೋಗಿಬಂದಿರುವ ಗಿಲ್ಲಿ ನಟ, ಅವರ ಆಶೀರ್ವಾದ ಪಡೆದುಕೊಂಡು ಬಂದಿದ್ದಾರೆ.
Chowkidar Movie : ಗಿಲ್ಲಿ ನಟ ನಟಿಸಿರೋ ಮತ್ತೊಂದು ಸಿನಿಮಾ ರಿಲೀಸ್ ಡೇಟ್ ಅನೌನ್ಸ್! ಪಾತ್ರ ಏನು?
ಫ್ಯಾನ್ಸ್ ಹೇಳಿದ್ದೇನು?
"ಚಂದನವನದ ತ್ರಿಮೂರ್ತಿ ಘಟಾನುಘಟಿಗಳ ಪುಣ್ಯಭೂಮಿಗೆ ಭೇಟಿ ನೀಡಿ ಆಶೀರ್ವಾದ ಪಡೆದ ದಿವ್ಯ ಘಳಿಗೆ. ವರನಟನ ಅಂತಃಕರಣ, ರೆಬೆಲ್ ಸ್ಟಾರ್‌ನ ಗತ್ತು, ಸಾಹಸ ಸಿಂಹನ ಸ್ನೇಹ ಸ್ವಭಾವ ಸದಾ ಕಾಲ ನಮ್ಮ ಗಿಲ್ಲಿಗೆ ಒಲಿಯಲಿ" ಎಂದು ಗಿಲ್ಲಿ ನಟ ಫ್ಯಾನ್ಸ್ ಹೇಳಿದ್ದಾರೆ. ಈ ಮಧ್ಯೆ ಅಪ್ಪು ಪುಣ್ಯಭೂಮಿಗೂ ಗಿಲ್ಲಿ ನಟ ಭೇಟಿ ಕೊಟ್ಟಿದ್ದರು.
ಗಿಲ್ಲಿ ನಟ ಹಂಚಿಕೊಂಡ ಪೋಸ್ಟ್
ಇನ್ನು, ಕಿಚ್ಚ ಸುದೀಪ್ ಅವರ ಮನೆಗೆ ಭೇಟಿ ನೀಡಿದ್ದ ಗಿಲ್ಲಿ, ಅವರ ಆಶೀರ್ವಾದ ಪಡೆದುಕೊಂಡಿದ್ದಾರೆ. ಜೊತೆಗೆ ಬಿಗ್ ಬಾಸ್ ವೇದಿಕೆಯಲ್ಲಿ ಕೊಟ್ಟ ಮಾತಿನಂತೆ ಗಿಲ್ಲಿಗೆ ಸುದೀಪ್ ಅವರು 10 ಲಕ್ಷ ರೂ.ಗಳನ್ನು ನೀಡಿದ್ದಾರೆ. ಇನ್ನು, ಶಿವಣ್ಣ ಅವರ ಮನೆಗೂ ಗಿಲ್ಲಿ ಭೇಟಿ ನೀಡಿದ್ದರು. ಅಂದಹಾಗೆ, ಗಿಲ್ಲಿ ಗೆದ್ದು ಬರಲಿ ಎಂದು ಆಶೀರ್ವಾದ ಮಾಡಿದ್ದ ಶಿವಣ್ಣ, "ಗಿಲ್ಲಿ ನಟನ ವಿಡಿಯೋಗಳನ್ನು ನಾನು ನೋಡಿದ್ದೇನೆ. ಅವನ ಮುಗ್ಧತೆ ಮತ್ತು ಅವನು ಮಾತನಾಡುವ ಶೈಲಿ ನನಗೆ ತುಂಬಾ ಇಷ್ಟವಾಯಿತು. ಗಿಲ್ಲಿ ಗೆದ್ದು ಬರುತ್ತಾನೆ" ಎಂದು ಹೇಳಿದ್ದರು. ಅಂತೆಯೇ ಗೆದ್ದಮೇಲೆ ಸೀದಾ ಶಿವರಾಜ್‌ಕುಮಾರ್ ನಿವಾಸಕ್ಕೆ ಗಿಲ್ಲಿ ಹೋಗಿಬಂದಿದ್ದರು.