Bigg Boss Kannada: ಈ ಒಂದು ಕಾರಣಕ್ಕೆ ಗಿಲ್ಲಿ ಬಜ್ಜಿ ಟಾಸ್ಕ್ ಹಾಳು ಮಾಡಿದ್ರಂತೆ! ಕಾವ್ಯ ಮುಂದೆ ಸತ್ಯ ಒಪ್ಪಿಕೊಂಡ ನಟ
ಬಿಗ್ ಬಾಸ್ (bbk 12) ಒಂದು ಟಾಸ್ಕ್‌ವನ್ನು ನೀಡಿದ್ದರು. ಅದುವೇ ಬಜ್ಜಿ ಟಾಸ್ಕ್. ಈ ಟಾಸ್ಕ್‌ನಲ್ಲಿ ತಂಡ ಸೋಲಲು ಗಿಲ್ಲಿ (gILLI) ನಟ ಕಾರಣ ಅಂತ ಜಾಹ್ನವಿ ಹಾಗೂ ಅಭಿಷೇಕ್ ನೇರವಾಗಿ ಆರೋಪಿಸಿದ್ದರು. ವೀಕ್ಷಕರ ಅಭಿಪ್ರಾಯ ಮಾಳು (Bigg boss Malu) ಅವರು ಫೇವರಿಸಮ್ ಮಾಡಿದ್ದಾರೆ ಎಂದು. ಚಂದ್ರಪ್ರಭ ಹಾಗೂ ಧ್ರುವಂತ್ (Dgruvanth) ಆ ಟೀಂ ಇದ್ದ ಕಾರಣ, ಬೇಕು ಎಂದೇ ಮಾಳು ಅವರ ಪರ ತೀರ್ಪು ನೀಡಿದ್ದಾರೆ ಎಂದು ಕಮೆಂಟ್ ಮಾಡಿದ್ದಾರೆ. ಅಸಲಿ ಸತ್ಯ ಏನು?
Gilli Bigg boss kannada -
ಬಿಗ್ ಬಾಸ್ ಸೀಸನ್ 12ರ (Bigg Boss Kannada 12) ಮೂರನೇ ಕ್ಯಾಪ್ಟನ್ ಮಾಳು ಆಗಿದ್ದಾರೆ. ಚಂದ್ರಪ್ರಭ ಉತ್ತಮರಾದರೆ, ಗಿಲ್ಲಿಗೆ (Gilli Kalape) ಕಳಪೆ ಕೊಟ್ಟಿದ್ದಾರೆ. ಬಹುತೇಕರು ಗಿಲ್ಲಿ ಅವರಿಗೆ ಕಳಪೆ ಕೊಟ್ಟಿರುವ ಕಾರಣವೇ ಟಾಸ್ಕ್ ವಿಚಾರವಾಗಿ. ಬಜ್ಜಿ ಟಾಸ್ಕ್ ಸರಿಯಾಗಿ ನಿಭಾಯಿಸದೇ ಇರದ ಕಾರಣ ಗಿಲ್ಲಿ ಅವರಿಗೆ ಕಳಪೆ ಕೊಟ್ಟಿದ್ದಾರೆ. ಆದರೆ ನಿಜಕ್ಕೂ ಈ ಟಾಸ್ಕ್ (Task) ಸೋಲಲು ಗಿಲ್ಲಿನೇ ಕಾರಣನಾ? ಇದರ ಹಿಂದಿನ ಉದ್ದೇಶವಾದ್ರೂ ಏನು?
ಬಜ್ಜಿ ಬೊಂಡಾ ಟಾಸ್ಕ್
ಬಿಗ್ ಬಾಸ್ ಒಂದು ಟಾಸ್ಕ್‌ವನ್ನು ನೀಡಿದ್ದರು. ಅದುವೇ ಬಜ್ಜಿ ಬೊಂಡಾ ಟಾಸ್ಕ್. ಈ ಟಾಸ್ಕ್‌ನಲ್ಲಿ ತಂಡ ಸೋಲಲು ಗಿಲ್ಲಿ ನಟ ಕಾರಣ ಅಂತ ಜಾಹ್ನವಿ ಹಾಗೂ ಅಭಿಷೇಕ್ ನೇರವಾಗಿ ಆರೋಪಿಸಿದ್ದರು. ರಘು, ಅಶ್ವಿನಿ ಗೌಡ, ರಕ್ಷಿತಾ ಶೆಟ್ಟಿ, ಧನುಷ್, ಧ್ರುವಂತ್, ಕಾವ್ಯ ಹಾಗೂ ಸೂರಜ್ ಒಂದು ತಂಡದಲ್ಲಿದ್ದರು. ಇನ್ನೊಂದು ತಂಡದಲ್ಲಿ ಕಾಕ್ರೋಚ್ ಸುಧಿ, ಅಭಿಷೇಕ್, ಜಾಹ್ನವಿ, ಗಿಲ್ಲಿ ನಟ, ರಾಶಿಕಾ, ರಿಷಾ ಮತ್ತು ಸ್ಪಂದನಾ ಇದ್ದರು.
ಇದನ್ನೂ ಓದಿ: Bigg Boss Kannada 12: ಈ ವಾರ ಔಟ್ ಆಗೋದು ಯಾರು? ಬಿಗ್ ಬಾಸ್ ಕೊಟ್ಟ ಹಿಂಟ್ ಏನು?
In the #BBK12 TL, They (so cald viewrs) narrated the story differently frm wt actually happened Nd here’s (in vid) why #Gilli did all dat.
— 👁️🗨️ (@BBK_Updates) November 7, 2025
Whn evry1 keeps caling sum1 a liar again & again, evn if he isn’t one, avru helta erodanna prove madle bekagutte
pic.twitter.com/rexp8CI6RM
ಗಿಲ್ಲಿ ವರ್ತನೆಗೆ ತಂಡ ಬೇಸರ
ಚಂದ್ರಪ್ರಭ ಕಾಮೆಂಟರಿ ಮಾಡುತ್ತಿದ್ದರು. ಅದರ ತೀರ್ಪನ್ನು ಮಾಳು ಕೊಡಬೇಕಿತ್ತು. ಆದರೆ ಈ ಟಾಸ್ಕ್ ಆಡುವಾಗ ಗಿಲ್ಲಿ ಸರಿಯಾಗಿ ಆಡಲಿಲ್ಲ. ಪ್ರತಿಸ್ಪರ್ಧಿಯ ವಸ್ತುಗಳನ್ನು ಕದ್ದುಕೊಂಡು ಮಜವಾಗಿ ತಮಾಷೆ ಮಾಡಿದ್ದಾರೆ. ಈ ವರ್ತನೆಗೆ ತಂಡ ಬೇಸರ ಹೊರ ಹಾಕಿತ್ತು. ನಾವು ಮಾಡಿದ ಪ್ರಮಾಣ ನೋಡಲಿಲ್ಲ, ಡೆಕೋರೇಷನ್ ನೋಡಲಿಲ್ಲ. ಗಿಲ್ಲಿನ ಮಾತ್ರ ನೋಡಿದ್ದು ಎಂದು ಮಾಳು ನಿರ್ಧಾರದ ಬಗ್ಗೆ ಜಾಹ್ನವಿ ಬೇಸರಗೊಂಡರು. ಸ್ಪಂದನಾ ಕೂ ಈ ಬಗ್ಗೆ ಮಾಳು ಅವರಿಗೆ ಪ್ರಶ್ನೆ ಇಟ್ಟರು.
ಮಾಳು ಹೇಳಿದ್ದೇನು ಗೊತ್ತಾ?
ಒಂದ್ಸಲ ಅಲ್ಲ, ಎರಡ್ಮೂರು ಬಾರಿ ಹೇಳಿದರೂ ಅರ್ಥ ಆಗಲಿಲ್ಲ. ಅವನನ್ನ ಚೇನ್ ಹಾಕಿ ಕೂರಿಸೋಕೆ ಆಗೋದಿಲ್ಲ ಎಂದು . ಅಂದರೆ ಅಲ್ಲಿ ಬಜ್ಜಿಯ ಪ್ರಮಾಣ, ಮಾಡಿದ ರೀತಿ ಗಮನಿಸಿಲೇ ಇಲ್ಲ. ಹೀಗಾಗಿ ಜಾಹ್ನವಿ ಕೂಡ ನಮ್ಮ ತಂಡ ಸೋಲಲು ಗಿಲ್ಲಿಯೇ ಕಾರಣ ಎಂದರು. ಹಾಗೇ ಗಿಲ್ಲಿಗೆ ಈ ಬಗ್ಗೆ ಪ್ರತ್ಯೇಕವಾಗಿ ಕಾವ್ಯ ಅವರು ಪ್ರಶ್ನೆ ಹಾಕ್ತಾರೆ. ಏಕೆ ಆಟದಲ್ಲಿ ಸೀರಿಯೆಸ್ ಆಗಿರಲಿಲ್ಲ? ತಮಾಷೆ ಯಾಕೆ ಮಾಡಿದ್ದು ಎಂದು ಪ್ರಸ್ತಾಪಿಸುತ್ತಾರೆ. ಅದಕ್ಕೆ ಅಸಲಿ ಕಾರಣವನ್ನು ಗಿಲ್ಲಿ ನೀಡುತ್ತಾರೆ.
ಮಾಡೇ ಮಾಡ್ತೀನಿ ಅಂತ ಹಾಗೆ ಮಾಡಿದೆ
ಗಿಲ್ಲಿನ ಸ್ವಲ್ಪ ದೂರ ನಿಲ್ಲಿಸಿ ಅಂತ ಜಾಹ್ನವಿ ಹೇಳ್ತಾನೆ ಇದ್ದರು. ನಾನು ಕೂಡ ಅವರದ್ದೇ ಟೀಂ. ಹೀಗ್ಯಾಕೆ ನನಗೆ ಹೇಳಬೇಕು? ಗಿಲ್ಲಿ ಬೇಡವೇ ಬೇಡ. ದೂರ ನಿಲ್ಲಿಸಿ ಅಂದರು. ಅದು ನನಗೆ ಸ್ವಲ್ಪ ಬೇಸರವಾಯ್ತು. ಸರಿ ಅಂತ ನಾನು ಹಾಳು ಮಾಡೇ ಮಾಡ್ತೀನಿ ಅಂತ ಹಾಗೆ ಮಾಡಿದೆ ಎಂದು ಹೇಳಿಕೊಂಡಿದ್ದಾರೆ.
ಇನ್ನು ವೀಕ್ಷಕರ ಅಭಿಪ್ರಾಯ ಮಾಳು ಅವರು ಫೇವರಿಸಮ್ ಮಾಡಿದ್ದಾರೆ ಎಂದು. ಚಂದ್ರಪ್ರಭ ಹಾಗೂ ಧ್ರುವಂತ್ ಆ ಟೀಂ ಇದ್ದ ಕಾರಣ, ಬೇಕು ಎಂದೇ ಮಾಳು ಅವರ ಪರ ತೀರ್ಪು ನೀಡಿದ್ದಾರೆ ಎಂದು ಕಮೆಂಟ್ ಮಾಡಿದ್ದಾರೆ. ಒಂದು ವೇಳೆ ಹಾಗೂ ಇದ್ದರೆ ಬಜ್ಜಿ ಹೇಗಿದೆ ಎಂದು ನೋಡಿ ಕೋಡಬೇಕಿತ್ತು. ಗಿಲ್ಲಿ ವರ್ತನೆ ಕಂಡು ಆ ರೀತಿ ತೀರ್ಪು ಕೊಟ್ಟಿರೋದು ಸರಿಯಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.