Bigg Boss Kannada 12: ಎರಡು ಮುಖ ಇದೆ ಅನ್ಸೋದು ಸಹಜ, ಆದ್ರೂ ತಾಯಿ ತಾಯಿನೇ! ಅಶ್ವಿನಿ ಬಗ್ಗೆ ಧ್ರುವಂತ್ ಗುಣಗಾನ
Dhruvanth: ಬಿಗ್ ಬಾಸ್ ಮನೆಯಲ್ಲಿ ಫಿನಾಲೆ ಹತ್ತಿರವಾಗುತ್ತಿದ್ದಂತೆ ಸ್ಪರ್ಧಿಗಳ ಮಧ್ಯೆ ಪೈಪೋಟಿ ಜೋರಾಗಿದೆ. ಹಾಗೇ ಮನೆಯಲ್ಲಿ ಅಲ್ಲಲ್ಲಿ ಗ್ರೂಪ್‌ಗಳು ಆಗಿವೆ. ಧ್ರುವಂತ್-ಅಶ್ವಿನಿ ಒಂದು ಟೀಂ ಆದ್ರೆ ಉಳಿದವರು ಇನ್ನೊಂದು ಟೀಂ ಆಗಿದೆ. ಇದೀಗ ಕ್ಯಾಮೆರಾ ಮುಂದೆ ಧ್ರುವಂತ್, ಅಶ್ವಿನಿ ಬಗ್ಗೆ ಹೊಗಳಿದ್ದಾರೆ. ಅಷ್ಟೆ ಅಲ್ಲ ನನ್ನ ತಾಯಿ ಅವರು, ಭುಜ ಕೊಡುವೆ ಅಂತ ಹೇಳಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಇಂದು ಪ್ರೋಮೋ ಔಟ್ ಆಗಿದೆ. ಅದರಲ್ಲಿ ಧ್ರುವಂತ್ ಹಾಗೂ ಅಶ್ವಿನಿ ಕಿತ್ತಾಡಿಕೊಂಡಿದ್ದಾರೆ.
ಬಿಗ್ ಬಾಸ್ ಕನ್ನಡ -
ಬಿಗ್ ಬಾಸ್ ಮನೆಯಲ್ಲಿ (Bigg Boss Kannada 12) ಫಿನಾಲೆ ಹತ್ತಿರವಾಗುತ್ತಿದ್ದಂತೆ ಸ್ಪರ್ಧಿಗಳ ಮಧ್ಯೆ ಪೈಪೋಟಿ ಜೋರಾಗಿದೆ. ಹಾಗೇ ಮನೆಯಲ್ಲಿ ಅಲ್ಲಲ್ಲಿ ಗ್ರೂಪ್‌ಗಳು ಆಗಿವೆ. ಧ್ರುವಂತ್-ಅಶ್ವಿನಿ (Dhruvanth -Ashwini) ಒಂದು ಟೀಂ ಆದ್ರೆ ಉಳಿದವರು ಇನ್ನೊಂದು ಟೀಂ ಆಗಿದೆ. ಇದೀಗ ಕ್ಯಾಮೆರಾ ಮುಂದೆ ಧ್ರುವಂತ್, ಅಶ್ವಿನಿ ಬಗ್ಗೆ ಹೊಗಳಿದ್ದಾರೆ. ಅಷ್ಟೆ ಅಲ್ಲ ನನ್ನ ತಾಯಿ ಅವರು, ಭುಜ ಕೊಡುವೆ ಅಂತ ಹೇಳಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಇಂದು ಪ್ರೋಮೋ ಔಟ್ (Promo) ಆಗಿದೆ. ಅದರಲ್ಲಿ ಧ್ರುವಂತ್ ಹಾಗೂ ಅಶ್ವಿನಿ ಕಿತ್ತಾಡಿಕೊಂಡಿದ್ದಾರೆ.
ತಾಯಿ ಸ್ಥಾನದಲ್ಲಿ ಇರೋರು
ಧ್ರುವಂತ್ ಕ್ಯಾಮೆರಾ ಮುಂದೆ ಮಾತನಾಡಿ, ಎಲ್ಲರೂ ಸೇರಿಕೊಂಡು ಅವರನ್ನ ಯಾವ ರೀತಿ ಆಟ ಆಡಿಸಬಹುದು ಅಂತ ನೀವೆಲ್ಲ ನೋಡಿಬರಹುದು. ಅವರು ಏನೇ ಮಾಡಿರಲಿ ಅವರು ನನಗೆ ತಾಯಿ ಸ್ಥಾನದಲ್ಲಿ ಇರೋರು ಮನೆಯಲ್ಲಿ. ನಾನು ಅವರಿಗೆ ಭುಜ ಕೊಟ್ಟಿದ್ದೇನೆ. ಸಪೋರ್ಟ್ ನಿಂತಿದ್ದೇನೆ. ಒಂದೊಂದು ಸಲ ಬೇಜಾರಾಗತ್ತೆ. ರೂಮ್ ಒಳಗೆ ಬಂದು ಕಂಪ್ಲೇಂಟ್ ಮಾಡ್ತಾರೆ.
ಇದನ್ನೂ ಓದಿ: Bigg Boss Kannada 12: ಅಶ್ವಿನಿ-ಧ್ರುವಂತ್ ಮೇಲೆ ದ್ವೇಷದ ನೀರೆರಚಾಟ! ಚುಚ್ಚು ಮಾತುಗಳನ್ನಾಡಿದ ರಾಶಿಕಾ
ಹೊರಗಡೆ ಹೋಗಿ ಕಂದ ಅಂತ ಪಾಲಿಶ್ಡ್ ಆಗಿಯೋ ಮಾತಾಡ್ತಾರೆ. ಎಲ್ಲೋ ಒಂದು ಕಡೆ ನಾನು ಹಾಗೂ ಮಾಡಬಾರದು ಅನ್ಸತ್ತೆ. ಅವರಲ್ಲಿ ಎರಡು ಮುಖ ಇದೆ ಅನ್ಸೋದು ಸಹಜ. ಆದ್ರೂ ತಾಯಿ ತಾಯಿನೇ. ಆ ಕಾರಣಕ್ಕೋಸ್ಕರ ಅವರ ಜೊತೆ ಇದ್ದು ಸಪೋರ್ಟ್ ಮಾಡ್ತೀನಿ. ಹಾಗಂತ ಅವರ ಗುಂಪಲ್ಲಿ ಇಲ್ಲ. ಅವರ ಆಟ ಅವರು ಆಡ್ತಾ ಇದ್ದಾರೆ. ನನ್ನ ಆಟ ನಾನು ಆಡ್ತಾ ಇದ್ದೀನಿ ಎಂದಿದ್ದಾರೆ.
ವೈರಲ್ ವಿಡಿಯೊ
Bro exposed fakewini in an unexpected manner.#bbk12 https://t.co/otQOmwo9gr
— VJ (@vj_adi_23) January 8, 2026
ಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣ ಸಂಕಟ!
ಇದೀಗ ಹೊಸ ಪ್ರೋಮೋ ಔಟ್ ಆಗಿದೆ. ಈಗ ಏಕಾಏಕಿ ಅಶ್ವಿನಿ ವಿರುದ್ಧವೇ ಗರಂ ಆಗಿದ್ದಾರೆ. ಆದ್ರೆ ಇದನ್ನ ಸಖತ್ ಮಜಾ ತೆಗೆದುಕೊಂಡಿದ್ದು ಮಾತಿನ ಮಲ್ಲ ಗಿಲ್ಲಿ (Gilli Nata).
ಹೊಸ ಪ್ರೋಮೋ ವೈರಲ್ ಆಗಿದೆ. ಧ್ರುವಂತ್ ಹಾಗೂ ಅಶ್ವಿನಿ ಮಧ್ಯೆ ಸಣ್ಣ ಜಗಳ ಆಗಿದೆ. ಇದು ಮನೆಯವರ ಗಮನಕ್ಕೆ ಬಂತು. ಏನು ಮ್ಯಾಟರ್‌ಗೆ ಜಗಳ ಆಗಿದ್ದು? ನೋಡಿ ಸಖತ್ ಬೇಜಾರ್ ಆಯ್ತು ಎಂದಿದ್ದಾರೆ ಗಿಲ್ಲಿ. ಅದಕ್ಕೆ ಧ್ರುವಂತ್, ಕಣ್ಣು ಮುಂದೆ ಆಗ್ತಾ ಇರೋದು ನೋಡಿಕೊಂಡು ಸುಮ್ಮನೆ ಇರೋಕೆ ಆಗ್ತಿಲ್ಲ ಎಂದಿದ್ದಾರೆ.
ಇದನ್ನೂ ಓದಿ: Bigg Boss Kannada 12: ಧ್ರುವಂತ್-ಅಶ್ವಿನಿ ಜಗಳ; ಗಿಲ್ಲಿಗೆ ಸಖತ್ ಮಜಾ! ನಕ್ಕು ನಕ್ಕು ಮನೆಮಂದಿ ಸುಸ್ತು
ಇದಕ್ಕೆ ಕುಮ್ಮಕ್ಕು ಕೊಟ್ಟ ಗಿಲ್ಲಿ, ಹೌದಣ್ಣ ಎಂದಿದ್ದಾರೆ. ರಘು ಕೂಡ ಗಿಲ್ಲಿ ಮತ್ತು ಧನುಷ್ ಜೊತೆ, ಅಶ್ವಿನಿ ಒಬ್ಬರೇ ಇದ್ದಾಗ, ಇವರೇ ಸಪೋರ್ಟ್ ಮಾಡಿದ್ದು ಎಂದಿದ್ದಾರೆ. ಇನ್ನು ಸಹವಾಸ ಬೇಡ ಅಂತ ಸೈಲೆಂಟ್ ಆಗ್ತೀರಾ ಅಂತ ಗಿಲ್ಲಿ ಮತ್ತಷ್ಟು ಧ್ರುವಂತ್‌ಗೆ ಕೇಳಿದ್ದಾರೆ. ಅದಕ್ಕೆ ಧ್ರುವಂತ್, ಆಗಿರೋದು, ಆಗುತ್ತ ಇರೋದು ಎಲ್ಲದೂ ಒಳ್ಳೆಯದಕ್ಕೆ ಎಂದಿದ್ದಾರೆ ಧ್ರುವಂತ್. ಅಶ್ವಿನಿ ಹಾಗೂ ಧ್ರುವಂತ್ ಜಗಳ ಮನೆಮಂದಿ ಸಖತ್ ಹಬ್ಬ ಮಾಡಿದ್ದಾರೆ.