ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಭಾರತದ ಬೆನ್ನಲ್ಲೇ ಬಾಂಗ್ಲಾಗೂ ಕೊಡುಗೆ ನೀಡಿದ ಅಮೆರಿಕ; ಚುನಾವಣೆಗೂ ಮುನ್ನವೇ ಆಮದು ಸುಂಕ ಶೇ.19ಕ್ಕೆ ಇಳಿಕೆ

ಅಮೆರಿಕಾ ಮತ್ತು ಬಾಂಗ್ಲಾದೇಶ ನಡುವಿನ ಹೊಸ ವ್ಯಾಪಾರ ಒಪ್ಪಂದದಂತೆ, ಆಮದು–ರಫ್ತು ತೆರಿಗೆಯನ್ನು 20 ಶೇಕಡೆಯಿಂದ 19 ಶೇಕಡೆಗೆ ಇಳಿಸಲಾಗಿದೆ. ಬಾಂಗ್ಲಾದೇಶದಲ್ಲಿ ನಡೆಯಲಿರುವ ಚುನಾವಣೆಗೂ ಮುನ್ನ ಈ ನಿರ್ಧಾರ ಪ್ರಕಟವಾಗಿರುವುದು ರಾಜಕೀಯ ಹಾಗೂ ಆರ್ಥಿಕವಾಗಿ ಮಹತ್ವ ಪಡೆದುಕೊಂಡಿದೆ. ಈ ಒಪ್ಪಂದದಿಂದ ಎರಡೂ ದೇಶಗಳ ನಡುವಿನ ವ್ಯಾಪಾರ ಸಂಬಂಧಗಳು ಇನ್ನಷ್ಟು ಬಲಗೊಳ್ಳಲಿವೆ ಎನ್ನಲಾಗುತ್ತಿದೆ

ಚುನಾವಣೆಗೆ ಮುನ್ನ ಯುಎಸ್–ಬಾಂಗ್ಲಾದೇಶ ವ್ಯಾಪಾರ ಒಪ್ಪಂದ

ಡೊನಾಲ್ಡ್ ಟ್ರಂಪ್ -

Profile
Sushmitha Jain Feb 10, 2026 11:06 AM

ಬಾಂಗ್ಲಾದೇಶ: ಬಾಂಗ್ಲಾದೇಶ (Bangladesh)ದ ಸಾರ್ವತ್ರಿಕ ಚುನಾವಣೆ (election)ಗೆ ಕೇವಲ ಎರಡು ದಿನ ಬಾಕಿ ಇರುವಾಗ, ಅಮೆರಿಕ (America)ವು ಬಾಂಗ್ಲಾದೇಶದ ಉತ್ಪನ್ನಗಳ ಮೇಲಿನ ಆಮದು ಸುಂಕವನ್ನು (Tariff) ಶೇಕಡಾ 20 ರಿಂದ 19ಕ್ಕೆ ಇಳಿಸುವ ಮಹತ್ವದ ನಿರ್ಧಾರ ಕೈಗೊಂಡಿದೆ.

ಸೋಮವಾರದಂದು ಅಮೆರಿಕ ಮತ್ತು ಬಾಂಗ್ಲಾದೇಶ ಈ ವ್ಯಾಪಾರ ಒಪ್ಪಂದ (trade deal)ವನ್ನು ಘೋಷಿಸಿವೆ. ಈ ಒಪ್ಪಂದದ ಅಡಿಯಲ್ಲಿ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರ ಆಡಳಿತವು ಬಾಂಗ್ಲಾದೇಶದ ಸರಕುಗಳ ಮೇಲಿನ ಸುಂಕವನ್ನು ಒಂದು ಪ್ರತಿಶತದಷ್ಟು ಕಡಿಮೆ ಮಾಡಲಿದೆ. ಶ್ವೇತಭವನವು ಬಿಡುಗಡೆ ಮಾಡಿದ ಜಂಟಿ ಹೇಳಿಕೆಯಲ್ಲಿ ಈ ಸುಂಕ ಕಡಿತವನ್ನು ಖಚಿತಪಡಿಸಲಾಗಿದೆ.

ಜವಳಿ ಮತ್ತು ಸಿದ್ಧ ಉಡುಪುಗಳಿಗೆ ವಿನಾಯಿತಿ

ಈ ಒಪ್ಪಂದದ ಭಾಗವಾಗಿ, ಆಯ್ದ ಜವಳಿ ಮತ್ತು ಸಿದ್ಧ ಉಡುಪುಗಳಿಗೆ ಸಂಪೂರ್ಣ ಸುಂಕ ವಿನಾಯಿತಿ ನೀಡಲು ಅಮೆರಿಕ ಒಪ್ಪಿಕೊಂಡಿದೆ. ಕಳೆದ ವರ್ಷ ಆಮದು ಸುಂಕವನ್ನು ಶೇ. 37 ರಿಂದ ಶೇ. 20ಕ್ಕೆ ಇಳಿಸಿದ್ದ ಅಧ್ಯಕ್ಷ ಟ್ರಂಪ್, ಈಗ ಅದನ್ನು ಶೇ. 19ಕ್ಕೆ ತಗ್ಗಿಸಿದ್ದಾರೆ. ಅಮೆರಿಕದಲ್ಲಿ ಉತ್ಪಾದನೆಯಾದ ಹತ್ತಿ ಮತ್ತು ಮಾನವ ನಿರ್ಮಿತ ನಾರುಗಳನ್ನು (Man-made fibre) ಬಳಸಿ ತಯಾರಿಸಿದ ಬಾಂಗ್ಲಾದೇಶದ ಜವಳಿ ಉತ್ಪನ್ನಗಳಿಗೆ ಈ ಸಂಪೂರ್ಣ ಸುಂಕ ವಿನಾಯಿತಿ ಅನ್ವಯಿಸಲಿದೆ ಎಂದು ಬಾಂಗ್ಲಾದೇಶದ ಮಧ್ಯಂತರ ನಾಯಕ ಮುಹಮ್ಮದ್ ಯೂನುಸ್ ತಿಳಿಸಿದ್ದಾರೆ.

ವಿವಾದದ ಕೇಂದ್ರ ಬಿಂದುವಾಗಿರುವ ಜನರಲ್ ನರವಾಣೆ ಅವರ ಆತ್ಮಚರಿತ್ರೆ ಪಿಡಿಎಫ್ ರೂಪದಲ್ಲಿ ಜನರ ಕೈ ಸೇರಿತಾ? ದೆಹಲಿ ಪೊಲೀಸರಿಂದ ತನಿಖೆ ಶುರು

ಮಾರುಕಟ್ಟೆ ಪ್ರವೇಶ ಮತ್ತು ಇತರ ಸೌಲಭ್ಯಗಳು

ಈ ಒಪ್ಪಂದದ ಅಡಿಯಲ್ಲಿ ಬಾಂಗ್ಲಾದೇಶವು ಅಮೆರಿಕದ ಕೈಗಾರಿಕಾ ಮತ್ತು ಕೃಷಿ ಉತ್ಪನ್ನಗಳಿಗೆ ತನ್ನ ಮಾರುಕಟ್ಟೆಯಲ್ಲಿ ಆದ್ಯತೆಯ ಪ್ರವೇಶವನ್ನು ನೀಡಲಿದೆ. ಇದರಲ್ಲಿ ರಾಸಾಯನಿಕಗಳು, ವೈದ್ಯಕೀಯ ಉಪಕರಣಗಳು, ವಾಹನ ಬಿಡಿಭಾಗಗಳು ಮತ್ತು ಕೃಷಿ ಉತ್ಪನ್ನಗಳು ಸೇರಿವೆ.

ಒಪ್ಪಂದದ ಪ್ರಮುಖ ಅಂಶಗಳು:

* ಅಮೆರಿಕದ ನಿಯಮಾವಳಿಗಳಿಗೆ ಅನುಗುಣವಾಗಿರುವ ವಾಹನಗಳು ಮತ್ತು ಅಮೆರಿಕ ಸರ್ಕಾರದಿಂದ ಅನುಮೋದಿಸಲ್ಪಟ್ಟ ಔಷಧಗಳಿಗೆ ಬಾಂಗ್ಲಾದೇಶ ಮಾರುಕಟ್ಟೆ ಮುಕ್ತವಾಗಲಿದೆ.
* ಮುಂದಿನ 15 ವರ್ಷಗಳಲ್ಲಿ ಅಮೆರಿಕದಿಂದ 15 ಶತಕೋಟಿ ಡಾಲರ್ ಮೌಲ್ಯದ ಇಂಧನ ಮತ್ತು 3.5 ಶತಕೋಟಿ ಡಾಲರ್ ಮೌಲ್ಯದ ಕೃಷಿ ಉತ್ಪನ್ನಗಳ ಖರೀದಿಗೆ ಬಾಂಗ್ಲಾ ಮುಂದಾಗಿದೆ.
* ಬಾಂಗ್ಲಾದೇಶವು ಅಮೆರಿಕದ ಬೋಯಿಂಗ್ ಕಂಪನಿಯಿಂದ ವಿಮಾನಗಳನ್ನು ಖರೀದಿಸುವ ಸಾಧ್ಯತೆಯೂ ಇದೆ.

ಬಾಂಗ್ಲಾದೇಶದ ಒಟ್ಟು ರಫ್ತಿನಲ್ಲಿ ಶೇ. 80ರಷ್ಟು ಪಾಲು ಜವಳಿ ಉದ್ಯಮದ್ದಾಗಿದೆ. 2024ರಲ್ಲಿ ನಡೆದ ವಿದ್ಯಾರ್ಥಿ ದಂಗೆ ಮತ್ತು ರಾಜಕೀಯ ಅಸ್ಥಿರತೆಯ ನಂತರ ಚೇತರಿಸಿಕೊಳ್ಳುತ್ತಿರುವ ಈ ಉದ್ಯಮಕ್ಕೆ ಅಮೆರಿಕದ ಈ ನಿರ್ಧಾರವು ದೊಡ್ಡ ಆಸರೆಯಾಗಲಿದೆ ಎಂದು ತಜ್ಞರು ತಿಳಿಸಿದ್ದಾರೆ.