Bigg Boss Kannada 12: ಟಕರು ಟಕರು ಟಮಟೆ ಏಟು, ಕನ್ನಡ ಜನತೆ ಅಲ್ಟಿಮೇಟು; ಗಿಲ್ಲಿ ಡೈಲಾಗ್‌ಗೆ ಫ್ಯಾನ್ಸ್ ಫಿದಾ
Gilli Nata: ಬಿಗ್ ಬಾಸ್ ಫಿನಾಲೆ ಸನೀಹದಲ್ಲಿದೆ. ಸ್ಪರ್ಧಿಗಳ ಮಧ್ಯೆ ಪೈಪೋಟಿ ಜೋರಾಗಿದೆ. ರಾಶಿಕಾ ಈಗಾಗಲೇ ಔಟ್ ಆಗಿದ್ದಾರೆ. ಕಿಚ್ಚನ ಪಂಚಾಯ್ತಿಯಲ್ಲಿ ಸುದೀಪ್ ಹಲವಾರು ವಿಚಾರಗಳ ಬಗ್ಗೆ ಚರ್ಚಿಸಿದ್ದಾರೆ. ಮೊದಲಿಗೆ ಕಿಚ್ಚ ಅವರು ಎಲಿಮಿನೇಟ್ ಆಗಿದ್ದೀರಿ ಅಂದುಕೊಳ್ಳಿ, ಸಣ್ಣ ಸ್ಪೀಚ್ ಮಾಡಿ ಎಂದಿದ್ದಾರೆ. ಪ್ರತಿಯೊಬ್ಬರು ಮಾತನಾಡಿದ್ದಾರೆ. ಆದರೆ ಗಿಲ್ಲಿ ನಟನ ಭಾಷಣಕ್ಕೆ ಫ್ಯಾನ್ಸ್ ಫಿದಾ ಆಗಿದ್ದಾರೆ.
ಬಿಗ್ ಬಾಸ್ ಕನ್ನಡ -
ಬಿಗ್ ಬಾಸ್ ಫಿನಾಲೆ (Bigg Boss Kannada Finale) ಸನೀಹದಲ್ಲಿದೆ. ಸ್ಪರ್ಧಿಗಳ ಮಧ್ಯೆ ಪೈಪೋಟಿ ಜೋರಾಗಿದೆ. ರಾಶಿಕಾ ಈಗಾಗಲೇ ಔಟ್ (Rashika Shetty Out) ಆಗಿದ್ದಾರೆ. ಕಿಚ್ಚನ ಪಂಚಾಯ್ತಿಯಲ್ಲಿ ಸುದೀಪ್ ಹಲವಾರು ವಿಚಾರಗಳ ಬಗ್ಗೆ ಚರ್ಚಿಸಿದ್ದಾರೆ. ಮೊದಲಿಗೆ ಕಿಚ್ಚ ಅವರು ಎಲಿಮಿನೇಟ್ (Eliminate) ಆಗಿದ್ದೀರಿ ಅಂದುಕೊಳ್ಳಿ, ಸಣ್ಣ ಸ್ಪೀಚ್ ಮಾಡಿ ಎಂದಿದ್ದಾರೆ. ಪ್ರತಿಯೊಬ್ಬರು ಮಾತನಾಡಿದ್ದಾರೆ. ಆದರೆ ಗಿಲ್ಲಿ ನಟನ (Gilli Speech) ಭಾಷಣಕ್ಕೆ ಫ್ಯಾನ್ಸ್ ಫಿದಾ ಆಗಿದ್ದಾರೆ.
ಮನಸ್ಸಿನಿಂದ ಡಿಲೀಟ್ ಆಗಿಲ್ಲ
ಗಿಲ್ಲಿ ನಟ ಮಾತನಾಡಿದ್ದು ಹೀಗೆ, ನಾನು ಬಿಗ್ ಬಾಸ್ ಮನೆಗೆ ಬರುವಾಗ 7-8 ವಾರ ಮಾತ್ರ ಇರ್ತೀನಿ ಅಂತ ಬಂದೆ. ಇಲ್ಲಿ ತನಕ ವೋಟ್ ಹಾಕಿ ಹದಿನೈದು ವಾರ ನನ್ನನ್ನು ತಂದಿದ್ದೀರಾ. ನಾನು ಇಲ್ಲಿಂದ ಎವಿಕ್ಟ್ ಆಗಿದ್ದೀನಿ ಹೌದು. ಆದರೆ ಜನರ ಮನಸ್ಸಿನಿಂದ ಡಿಲೀಟ್ ಆಗಿಲ್ಲ ಎಂದು ಹೇಳೋಕೆ ಇಷ್ಟ ಪಡ್ತೀನಿ. ನಾನು ಬಹುತೇಕವಾಗಿ ಒಂದು ಡೈಲಾಗ್ ಹೇಳ್ತಾ ಇರ್ತೀನಿ. ಟಕರು ಟಕರು ಟಮಟೆ ಏಟು! ಗಿಲ್ಲಿ ಅಲ್ಟಿಮೇಟು ಅಂತ ಇರ್ತೀನಿ. ಆದರೀಗ ಹೇಳ್ತಾ ಇದ್ದೀನಿ ಟಕರು ಟಕರು ಟಮಟೆ ಏಟು! ಕನ್ನಡ ಜನತೆ ಅಲ್ಟಿಮೇಟು ಎಂದಿದ್ದಾರೆ.
ಇದನ್ನೂ ಓದಿ: Bigg Boss Kannada 12: ಎಪಿಸೋಡ್ ನೋಡಿ ಕಿಚ್ಚ ಮಾತನಾಡಲ್ವಾ? ರಾಶಿಕಾ-ರಕ್ಷಿತಾ ಮ್ಯಾಟರ್‌ಗೆ ನೆಟ್ಟಿಗರ ತರಾಟೆ
ಕನ್ನಡ ಜನತೆ ಕೈ ಹಿಡಿಯುತ್ತಾರೆ
ಸುದೀಪ್ ಅವರ ಮಾತು ಸದಾ ನೆನೆಸಿಕೊಳ್ಳುವೆ. ಅಮ್ಮಮ್ಮ ಅಂದರೆ ಮನುಷ್ಯ ಸೋಲಬಹುದು. ಆದರೆ ಸತ್ತಿಲ್ಲ ಅಂತ. ಹೊರಗಡೆ ನನ್ನ ಕನ್ನಡ ಜನತೆ ಕೈ ಹಿಡಿಯುತ್ತಾರೆ ಎಂದಿದ್ದಾರೆ. ಇದಾದ ನಂತರ ಸುದೀಪ್ ಅವರು ಗಿಲ್ಲಿ ಸೇಫ್ ಆಗಿದ್ದಾರೆ ಎಂದು ಘೋಷಣೆ ಮಾಡಿದರು.
ವೈರಲ್ ವಿಡಿಯೋ
Vipareeta entertainment by Druvant. Loved it. This is what Druvanth can do. Eee range ge, #BBK12https://t.co/QGAwMF7b9h
— Santhosh (@SanthoshKu43018) January 11, 2026
ಗಿಲ್ಲಿಗೆ ಕಾವ್ಯಾರಿಂದ ಕಠಿಣ ಶಿಕ್ಷೆ
ಈ ಪಯಣದಲ್ಲಿ ನಿಮ್ಮ ಜೊತೆಗೆ ನಿಂತ ವ್ಯಕ್ತಿಗೆ ನಿಮ್ಮ ವಸ್ತುವೊಂದನ್ನು ಉಡುಗೊರೆಯಾಗಿ ಕೊಟ್ಟು ಧನ್ಯವಾದ ಹೇಳಿ ಎಂದು ಸುದೀಪ್ ಹೇಳಿದರು. ಕೂಡಲೇ ಗಿಲ್ಲಿ, ಕಾವ್ಯಾಗೆ ಕೈಗೆ ಬೆಳ್ಳಿಯ ಬ್ರೇಸ್ಲೆಟ್ ಒಂದನ್ನು ನೀಡಿದರು. ಕಾವ್ಯಾ, ಗಿಲ್ಲಿ ಇಷ್ಟು ದಿನ ತಮ್ಮ ಪರವಾಗಿ ನಿಂತಿದ್ದಕ್ಕೆ ಅವರ ಬಾಚಣಿಗೆಯನ್ನು ಗಿಲ್ಲಿಗೆ ನೀಡಿದರು.
ಅಂದಹಾಗೆ ಗಿಲ್ಲಿ, ಕಾವ್ಯಾಗೆ ಉಡುಗೊರೆ ಕೊಡುವ ಮೊದಲು, ಇತ್ತೀಚೆಗೆ ಕಾವ್ಯಾ ಬಗ್ಗೆ ತಾವು ಆಡಿದ ಮಾತು ಸರಿ ಇರಲಿಲ್ಲ. ಏನೋ ತಮಾಷೆ ಮಾಡಲು ಹೋಗಿ ಏನೋ ಹೇಳಿಬಿಟ್ಟೆ ಹಾಗೆ ಹೇಳಬಾರದಿತ್ತು ಎಂದು ಹೇಳಿ ಕ್ಷಮೆ ಸಹ ಕೇಳಿದರು.
ಇದನ್ನೂ ಓದಿ: Bigg Boss Kannada 12: ಮಲ್ಲಮ್ಮ ಬಗ್ಗೆ ಧ್ರುವಂತ್ ಅಸಮಾಧಾನ! ನನಗೆ ನೀವು, ನಿಮಗೆ ನಾನು ಎಂದ ಅಶ್ವಿನಿ
ಕಾವ್ಯಾ, ಗಿಲ್ಲಿಗೆ ವ್ಯಾಕ್ಸ್ ಹಾಕಿ ಹೇರ್ ರಿಮೂವ್ ಮಾಡಿದರು. ಅದಾದ ಬಳಿಕ ಅಶ್ವಿನಿ, ಗಿಲ್ಲಿಗೆ ಕಶಾಯ ಕುಡಿಸಿದರು. ರಘು ಬಂದು ಕೈಯಿಂದ ಹೊಡೆದರು. ರಾಶಿಕಾ ಬಂದು ಮೆಣಸಿನಕಾಯಿ-ನಿಂಬೆ ತಿನ್ನುವಂತೆ ಮಾಡಿದರು ಹೀಗೆ ಹೆಚ್ಚು ಮಂದಿ ಗಿಲ್ಲಿಗೆ ಶಿಕ್ಷೆ ನೀಡಿದರು.