ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

BBK 12: ʻಬಿಗ್ ಬಾಸ್ʼ ಮನೆಯ ಕ್ಯಾಪ್ಟನ್ ಆದ ಕಾವ್ಯ ಶೈವ; ಅದೊಂದು ವಿಚಾರದಲ್ಲಿ ಗಿಲ್ಲಿ ಸೀರಿಯಸ್ ಆಗಿಬಿಟ್ರಾ?

BBK 12 Update: ಬಿಗ್ ಬಾಸ್ ಕನ್ನಡ 12ರಲ್ಲಿ ಕಾವ್ಯ ಶೈವ ಮನೆಯ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದಾರೆ. ಸೂರಜ್ ಸಿಂಗ್ ವಿರುದ್ಧ ನಡೆದ ಮತದಾನ ಪ್ರಕ್ರಿಯೆಯಲ್ಲಿ ಮನೆಯ ಬಹುತೇಕ ಸದಸ್ಯರು ಕಾವ್ಯ ಪರವಾಗಿ ವೋಟ್ ಹಾಕಿದರು. ಆದರೆ, ಕಾವ್ಯ ಕ್ಯಾಪ್ಟನ್ ಆದರೂ ಅವರ ಆಪ್ತ ಗೆಳೆಯ ಗಿಲ್ಲಿ ನಟ ಕ್ಯಾಪ್ಟನ್ ರೂಮ್‌ಗೆ ಹೋಗಲು ನಿರಾಕರಿಸಿದ್ದು ಎಲ್ಲರ ಅಚ್ಚರಿಗೆ ಕಾರಣವಾಯಿತು.

‌ʻಬಿಗ್ ಬಾಸ್ʼ ಮನೆಗೆ ಇನ್ಮೇಲೆ ಕಾವ್ಯ ಕ್ಯಾಪ್ಟನ್; ಗಿಲ್ಲಿ ಬದಲಾಗಿದ್ದೇಕೆ?

-

Avinash GR
Avinash GR Dec 20, 2025 9:18 AM

ಬಿಗ್‌ ಬಾಸ್‌ ಮನೆಯಲ್ಲಿ 12 ವಾರಗಳ ಬಳಿಕ ಕ್ಯಾಪ್ಟನ್‌ ಆಗುವ ಚಾನ್ಸ್‌ ಕಾವ್ಯ ಶೈವಗೆ ಸಿಕ್ಕಿದೆ. ಈ ಬಾರಿ ಕ್ಯಾಪ್ಟನ್ಸಿ ರೇಸ್ ಅನ್ನು ಬಹಳ ವಿಭಿನ್ನವಾಗಿ ಆಯೋಜಿಸಲಾಗಿತ್ತು. ಅಂತಿಮ ಸುತ್ತಿನಲ್ಲಿ ಕಾವ್ಯ ಮತ್ತು ಸೂರಜ್‌ ಸಿಂಗ್‌ ಫೈಟ್‌ ಮಾಡಿದರು. ಅಂತಿಮವಾಗಿ ಕ್ಯಾವ್ಯಗೆ ಮನೆಯ ಅಧಿಕಾರದ ಗದ್ದುಗೆ ಏರುವ ಚಾನ್ಸ್‌ ಸಿಕ್ಕಿದೆ.

ಹೇಗಿತ್ತು ಆಯ್ಕೆ ಪ್ರಕ್ರಿಯೆ?

ಕಾವ್ಯ ಮತ್ತು ಸೂರಜ್‌ ಅವರನ್ನು ಮನೆಯೊಳಗೆ ಇರುವ ಕನ್ಫೇಷನ್‌ ರೂಮ್‌ಗೆ ಕಳುಹಿಸಲಾಗಿತ್ತು. ಗಾರ್ಡನ್‌ ಏರಿಯಾದಲ್ಲಿ ಇಬ್ಬರ ಫೋಟೋಗಳನ್ನು ಇರಿಸಿ, ವೋಟಿಂಗ್‌ ಮಾಡಲಾಯಿತು. ಆರಂಭದಲ್ಲಿ ರಾಶಿಕಾ ಶೆಟ್ಟಿ ಮತ್ತು ಅಶ್ವಿನಿ ಗೌಡ ಅವರು ಸೂರಜ್‌ಗೆ ವೋಟ್‌ ಹಾಕಿ, ಸೂರಜ್‌ ಕ್ಯಾಪ್ಟನ್‌ ಆಗೋದಕ್ಕೆ ಒಂದಷ್ಟು ರೀಸನ್‌ ನೀಡಿದರು. ಆದರೆ ನಂತರದ ಎಲ್ಲಾ ವೋಟ್‌ಗಳು ಕಾವ್ಯಗೆ ಸಿಕ್ಕವು. ಗಿಲ್ಲಿ, ಸ್ಪಂದನಾ, ರಘು, ರಜತ್, ಮಾಳು ಇನ್ನಿತರರು ಕಾವ್ಯಗೆ ವೋಟ್‌ ಮಾಡಿ, ಅವರನ್ನು ಕ್ಯಾಪ್ಟನ್‌ ಮಾಡಿದರು.

The Devil Movie: `ಡೆವಿಲ್‌' ಸಿನಿಮಾದಲ್ಲಿ ಗಿಲ್ಲಿ ನಟನ ಪರ್ಫಾರ್ಮೆನ್ಸ್ ಹೇಗಿದೆ? ನಟ ಚಂದು ಗೌಡ ಮನದಾಳದ ಮಾತು!

ಗಿಲ್ಲಿಯಲ್ಲಿ ಕಂಡು ಬಂತು ಬದಲಾವಣೆ

ಪ್ರತಿಬಾರಿ ಯಾರೇ ಕ್ಯಾಪ್ಟನ್‌ ಆದರೂ, ಅವರನ್ನು ಕ್ಯಾಪ್ಟನ್‌ ರೂಮ್‌ಗೆ ಕರೆದುಕೊಂಡು ಹೋಗಿ, ಸಂಭ್ರಮಿಸುತ್ತಿದ್ದರು ಗಿಲ್ಲಿ. ಅಲ್ಲದೇ ನಾನೇ ವೈಸ್‌ ಕ್ಯಾಪ್ಟನ್‌ ಎಂದು ಬೀಗುತ್ತಿದ್ದರು. ಆದರೆ ಈ ಬಾರಿ ತಮ್ಮ ಗೆಳತಿ ಕಾವ್ಯ ಗೆದ್ದರೂ, ಕ್ಯಾಪ್ಟನ್‌ ರೂಮ್‌ ಬಳಿ ಗಿಲ್ಲಿ ಹೋಗಿರಲಿಲ್ಲ. ಅದಕ್ಕೂ ಒಂದು ಕಾರಣ ಇದೆ. ಈ ಹಿಂದೆ ಅಭಿ ಮತ್ತು ಸ್ಪಂದನಾ ಕ್ಯಾಪ್ಟನ್‌ ಆದಾಗ, ಗಿಲ್ಲಿ ಕ್ಯಾಪ್ಟನ್‌ ರೂಮ್‌ ಒಳಗೆ ಹೋಗಿ ಮಲಗಿದ್ದರು. ಅದು ಸುದೀಪ್‌ ಅವರ ಗಮನಕ್ಕೆ ಬಂದು, ಆ ರೂಮ್‌ಗೆ ಬೀಗ ಹಾಕಿಸಿದ್ದರು.

ಇದೆಲ್ಲವನ್ನೂ ಗಂಭೀರವಾಗಿ ತೆಗೆದುಕೊಂಡಿರುವ ಗಿಲ್ಲಿಯಲ್ಲಿ ಈಗ ಬದಲಾವಣೆ ಕಂಡು ಬಂದಿದೆ. ಕೊನೆಗೆ ಕಾವ್ಯ ಅವರೇ ಒತ್ತಾಯ ಮಾಡಿ, ಕರೆದ ಮೇಲೆ ಕ್ಯಾಪ್ಟನ್‌ ರೂಮ್‌ಗೆ ಹೋಗಿ ಹಾಗೇಯೇ ವಾಪಸ್‌ ಬಂದಿದ್ದಾರೆ ಗಿಲ್ಲಿ.

Bigg Boss Kannada 12: ರಜತ್‌ನ ಮನೆಯಿಂದ ಆಚೆ ಕಳುಹಿಸಿಯೇ ಹೋಗ್ತೇನೆ! ಗಿಲ್ಲಿ ನಟ ಓಪನ್‌ ಚಾಲೆಂಜ್‌

ಸದ್ಯ ಕಾವ್ಯ ಅವರು ಕ್ಯಾಪ್ಟನ್‌ ಆಗಿರುವುದರಿಂದ ಈ ವಾರ ಅವರಿಗೆ ಇಮ್ಯೂನಿಟಿ ಸಿಕ್ಕಿದೆ. ಈ ಮಧ್ಯೆ ಗಿಲ್ಲಿ ನಟ ಸರಿಯಾಗಿ ಕೆಲಸ ಮಾಡೋದಿಲ್ಲ ಎಂಬ ಆರೋಪ ಇದೆ. ಹಿಂದೆ ಕ್ಯಾಪ್ಟನ್‌ ಆದವರೆಲ್ಲಾ ಗಿಲ್ಲಿಯಿಂದ ಕೆಲಸ ಮಾಡಿಸಲು ಹರಸಾಹಸ ಪಟ್ಟಿದ್ದಾರೆ. ಆದರೆ ಈ ಬಾರಿ ಕಾವ್ಯ ಅದನ್ನು ಯಾವ ರೀತಿ ಹ್ಯಾಂಡಲ್‌ ಮಾಡುತ್ತಾರೆ ಎಂಬುದನ್ನು ಕಾದುನೋಡಬೇಕು.