ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಗಿಲ್ಲಿ ನಟನ ಪರವಾಗಿ ಅಖಾಡಕ್ಕಿಳಿದ ಮಂಡ್ಯ ರಾಜಕಾರಣಿಗಳು; ʻಬಿಗ್‌ ಬಾಸ್‌ʼ ಕನ್ನಡ ಸೀಸನ್‌ 12ರ ಪಳಾರ್‌ಗೆ ಹೆಂಗಿದೆ ನೋಡಿ ಕ್ರೇಜ್‌

Bigg Boss 12 Contestant Gilli Nata: ಮಂಡ್ಯದ ರಾಜಕೀಯ ನಾಯಕರು ಈಗ ಗಿಲ್ಲಿ ನಟನ ಪರವಾಗಿ ಅಖಾಡಕ್ಕಿಳಿದಿದ್ದಾರೆ. ಮಳವಳ್ಳಿ ಶಾಸಕ ನರೇಂದ್ರ ಸ್ವಾಮಿ ಮತ್ತು ಮಾಜಿ ಸಚಿವ ಡಿ.ಸಿ. ತಮ್ಮಣ್ಣ ಅವರು ಗಿಲ್ಲಿ ನಟನಿಗೆ ವೋಟ್ ಮಾಡುವಂತೆ ಬಹಿರಂಗವಾಗಿ ಮನವಿ ಮಾಡಿದ್ದಾರೆ.

ಬಿಗ್ ಬಾಸ್ 12: ಗಿಲ್ಲಿ ನಟನ ಪರ ಮಂಡ್ಯ ಪೊಲಿಟಿಷಿಯನ್ಸ್ ಬ್ಯಾಟಿಂಗ್!

-

Avinash GR
Avinash GR Jan 13, 2026 7:31 PM

ಬಿಗ್‌ ಬಾಸ್‌ ಕನ್ನಡ ಸೀಸನ್‌ 12ರಲ್ಲಿ ಗಿಲ್ಲಿ ನಟ ಅವರು ತಮ್ಮ ಕ್ರೇಜ್‌ನಿಂದ ಎಲ್ಲರ ಗಮನಸೆಳೆದಿದ್ದಾರೆ. ಈಗಾಗಲೇ ಫಿನಾಲೆ ತಲುಪಿರುವ ಗಿಲ್ಲಿ ನಟ ಅವರು ಈ ಬಾರಿ ಟ್ರೋಫಿಯನ್ನು ಎತ್ತುವ ಸಾಧ್ಯತೆಗಳು ಜಾಸ್ತಿಯೇ ಇವೆ. ಯಾಕೆಂದರೆ, ಸೋಶಿಯ್‌ ಮೀಡಿಯಾದಲ್ಲಿ ಅವರ ಪರವಾದ ದೊಡ್ಡ ಅಲೆ ಇದೆ. ಜೋರಾಗಿ ಪ್ರಚಾರ ಮಾಡಲಾಗುತ್ತಿದೆ. ಈ ನಡುವೆ ಮಂಡ್ಯದ ಕೆಲ ರಾಜಕಾರಣಿಗಳು ಕೂಡ ಗಿಲ್ಲಿ ಪರವಾಗಿ ಧ್ವನಿ ಎತ್ತಿದ್ದಾರೆ.

ಶಾಸಕ ನರೇಂದ್ರ ಸ್ವಾಮಿ ಏನಂದ್ರು?

"ನಾಡಿನ ಸಮಸ್ತ ಜನತೆಗೆ ನಮಸ್ಕಾರ.. ಮಳವಳ್ಳಿಯ ಹೆಮ್ಮೆಯ ನಟರಾಜ್‌.. ಗಿಲ್ಲಿ ನಟ.. ಬಿಗ್‌ ಬಾಸ್‌ ಸ್ಪರ್ಧೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ, ಅಂತಿಮ ಘಟ್ಟಕ್ಕೆ ಬಂದಿರುವ ಸಂದರ್ಭದಲ್ಲಿ, ಆತನ ಕಲೆಗೆ ಮತ್ತು ಆತನ ಪ್ರಾಮಾಣಿಕ ಪ್ರಯತ್ನಕ್ಕೆ ಸರ್ವರು ಬೆಂಬಲಿಸಬೇಕು. ನಮ್ಮ ಮಳವಳ್ಳಿಯ ಹೊಸ ಪ್ರತಿಭೆಯನ್ನು ಸೃಷ್ಟಿಯಾಗಲು ಆಶೀರ್ವಾದ ಮಾಡಿಕೊಡಿ. ಗಿಲ್ಲಿ ನಟನನ್ನು ಬೆಂಬಲಿಸಿ, ಆತನಿಗೆ ಅತಿ ಹೆಚ್ಚಿನ ಮತಗಳನ್ನು ನೀಡಿ" ಎಂದು ಮಳವಳ್ಳಿಯ ಶಾಸಕ ನರೇಂದ್ರ ಸ್ವಾಮಿ ಮನವಿ ಮಾಡಿಕೊಂಡಿದ್ದಾರೆ.

Chowkidar Movie : ಗಿಲ್ಲಿ ನಟ ನಟಿಸಿರೋ ಮತ್ತೊಂದು ಸಿನಿಮಾ ರಿಲೀಸ್‌ ಡೇಟ್‌ ಅನೌನ್ಸ್‌! ಪಾತ್ರ ಏನು?

ಮಾಜಿ ಸಚಿವ ತಮ್ಮಣ್ಣ ಅವರಿಂದ ಮನವಿ

ಮಂಡ್ಯದ ಮತ್ತೋರ್ವ ರಾಜಕಾರಣಿ, ಮಾಜಿ ಸಚಿವ ಡಿ ಸಿ ತಮ್ಮಣ್ಣ ಕೂಡ ಗಿಲ್ಲಿ ನಟನ ಪರವಾಗಿ ಪೋಸ್ಟ್‌ ಹಂಚಿಕೊಂಡಿದ್ದಾರೆ. "ಬಿಗ್ ಬಾಸ್ ಕನ್ನಡ ಸೀಸನ್ 12 ತನ್ನ ಅಂತಿಮ ಹಂತವನ್ನು ತಲುಪಿದಂತೆ ಸ್ಪರ್ಧಿಗಳ ನಟನೆ, ಸ್ವಭಾವ, ಧೈರ್ಯ ಮತ್ತು ನೈಜತೆಯ ಬಗ್ಗೆ ಜನರಲ್ಲಿ ಉತ್ತೇಜನ ಜೋರಾಗಿದೆ. ಅನೇಕರ ಮಧ್ಯೆ ಗಮನ ಸೆಳೆದಿರುವ ಹೆಸರು 'ಗಿಲ್ಲಿನಟ'. ಇವರು ನಮ್ಮ ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕು ದಡದಪುರ ಗ್ರಾಮದ ರೈತ ಕುಟುಂಬದ ಅಪ್ಪಟ ಗ್ರಾಮೀಣ ಪ್ರತಿಭೆ" ಎಂದು ಹೊಗಳಿದ್ದಾರೆ.

ʻದಿ ಡೆವಿಲ್‌ʼ ಚಿತ್ರದಲ್ಲಿ ನಟಿಸಿದ್ದರ ಬಗ್ಗೆ ಖುಷಿಯಾಗಿರುವ ಗಿಲ್ಲಿ ನಟ; ʻಬಿಗ್‌ ಬಾಸ್‌ʼ ಮನೆಯ ಸ್ಪರ್ಧಿಗಳ ಜೊತೆ ಸಂತಸ ಹಂಚಿಕೊಂಡಿದ್ದ ʻಮಾತಿನ ಮಲ್ಲʼ

ಡಿ ಸಿ ತಮ್ಮಣ್ಣ ಅವರ ಸೋಶಿಯಲ್‌ ಮೀಡಿಯಾ ಪೋಸ್ಟ್

ಉತ್ತಮತನವೇ ಅಂತಿಮ ಗೆಲುವು

"ಗಿಲ್ಲಿ ನಟ ಅವರು ಕಾರ್ಯಕ್ರಮಕ್ಕೆ ಕಾಲಿಟ್ಟ ದಿನದಿಂದಲೂ ತಮ್ಮದೇ ಆದ ಗುರುತು ಮೂಡಿಸಿದ್ದು, ಕೃತಕ ಮತ್ತು ಆರ್ಭಟದ ಆಟವನ್ನು ಬಿಟ್ಟು ನೈಜತೆ, ಮಾನವೀಯತೆ ಮತ್ತು ಸಮತೋಲನದಿಂದ ನಡೆದುಕೊಂಡಿದ್ದಾರೆ ಇವರ ಗೆಲುವು ಕೇವಲ ಒಂದು ಪ್ರಶಸ್ತಿ ಅಲ್ಲ ಇದು ಲಕ್ಷಾಂತರ ಜನಗಳ ಧ್ವನಿ, ಅವರ ಮೇಲೆ ಇರುವ ನಂಬಿಕೆ, ಭರವಸೆ, ಮತ್ತು ಉತ್ತಮತನವೇ ಅಂತಿಮ ಗೆಲುವು ಎಂಬ ಸಂದೇಶಕ್ಕೆ ಮುದ್ರೆಯಾಗಲಿ. ಈ ಸೀಸನ್‌ನ ಟ್ರೋಫಿಗೆ ಇವರು ಅತ್ಯಂತ ಯೋಗ್ಯ ಸ್ಪರ್ಧಿಯಂದು ಭಾವಿಸುತ್ತಾ ಶುಭವಾಗಲಿ ಎಂದು ಹಾರೈಸುತ್ತೇನೆ" ಎಂದು ಡಿ ಸಿ ತಮ್ಮಣ್ಣ ಹೇಳಿದ್ದಾರೆ.