ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ʻಬಿಗ್‌ ಬಾಸ್‌ʼ ಕನ್ನಡ 12ರಲ್ಲಿ ರಘುಗೆ ಒಮ್ಮೆಯೂ ಸಿಗಲಿಲ್ಲ ʻಉತ್ತಮʼ; ಬೇಸರಗೊಂಡ ಗೆಳೆಯನಿಗೆ ಖತರ್ನಾಕ್‌ ಸಲಹೆ ಕೊಟ್ಟ ಗಿಲ್ಲಿ ನಟ!

Bigg Boss Kannada 12 Update: ಬಿಗ್ ಬಾಸ್ ಕನ್ನಡ 12ರ ಫಿನಾಲೆ ಸಮೀಪಿಸುತ್ತಿದ್ದಂತೆ ಸ್ಪರ್ಧಿಗಳ ನಡುವೆ ಅಸಮಾಧಾನ ಹೊಗೆಯಾಡುತ್ತಿದೆ. ಸದಾ ಅಡುಗೆ ಮತ್ತು ಟಾಸ್ಕ್‌ನಲ್ಲಿ ತೊಡಗಿಸಿಕೊಂಡರೂ ತಮಗೆ ಒಮ್ಮೆಯೂ 'ಉತ್ತಮ' ಪಟ್ಟ ಸಿಕ್ಕಿಲ್ಲ ಎಂದು ರಘು ಬೇಸರ ವ್ಯಕ್ತಪಡಿಸಿದ್ದಾರೆ.

ರಘುಗೆ ಒಮ್ಮೆಯೂ ಸಿಗದ 'ಉತ್ತಮ'; ಗೆಳೆಯನ ಬೇಸರಕ್ಕೆ ಗಿಲ್ಲಿಯ ಖತರ್ನಾಕ್ ಸಲಹೆ

-

Avinash GR
Avinash GR Jan 11, 2026 12:01 AM

ʻಬಿಗ್‌ ಬಾಸ್‌ʼ ಕನ್ನಡ ಸೀಸನ್‌ 12ರ ಮುಕ್ತಾಯಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಇಂದಿನ ಸಂಚಿಕೆಯಲ್ಲಿ ಕಿಚ್ಚ ಸುದೀಪ್‌ ಅವರು ಕೊನೆಯ ಕಿಚ್ಚನ ಚಪ್ಪಾಳೆಯನ್ನು ಕೂಡ ಕೊಟ್ಟಿದ್ದಾರೆ. ಇದೇ ಮೊದಲ ಬಾರಿಗೆ ಈ ಸೀಸನ್‌ನ ಚಪ್ಪಾಳೆ ಎಂದು ಧ್ರುವಂತ್‌ಗೆ ಕೊಟ್ಟರೆ, ಅಶ್ವಿನಿ ಗೌಡಗೆ ಈ ವಾರದ ಚಪ್ಪಾಳೆ ಸಿಕ್ಕಿದೆ. ಇದು ಈ ವಾರದ ಕೊನೆಯ ಕಿಚ್ಚನ ಚಪ್ಪಾಳೆ. ಈ ಮಧ್ಯೆ ಉತ್ತಮ ಪಟ್ಟದ ಬಗ್ಗೆಯೂ ಮನೆಯೊಳಗೆ ಚರ್ಚೆ ಆಗಿದೆ.

ರಘು ಸಿಕ್ಕಿಲ್ಲ ಉತ್ತಮ

ಹೌದು, ಈ ವಾರ ಅಶ್ವಿನಿ ಗೌಡ ಅವರಿಗೆ ಮನೆಯ ಎಲ್ಲಾ ಸದಸ್ಯರು ಸೇರಿಕೊಂಡು ಉತ್ತಮ ನೀಡಿದ್ದಾರೆ. ಇದರ ಬಗ್ಗೆ ಗಿಲ್ಲಿ ನಟ ಮತ್ತು ರಕ್ಷಿತಾ ಶೆಟ್ಟಿ ಜೊತೆ ರಘು ಚರ್ಚೆ ಮಾಡಿದ್ದಾರೆ. "ಏನೇನೋ ಮಾಡಿ, ಎರಡು ವಾರ ಉತ್ತಮ ಪಡೆದುಕೊಂಡರು. ನನಗೆ ಒಂದು ವಾರ ಕೂಡ ಉತ್ತಮ ಬಂದಿಲ್ಲ. ನನಗೆ ಉತ್ತಮ ಕೊಟ್ಟಿಲ್ಲ. ನಾನು ದಿವಸ ಅಡುಗೆ ಮಾಡ್ತಿದ್ದೆ. ಟಾಸ್ಕ್‌ ಚೆನ್ನಾಗಿ ಆಡುತ್ತಿದ್ದೆ. ಆದರೆ ಯಾರೂ ಹೇಳಲ್ಲ. ಅದೇ ಮಧ್ಯೆದಲ್ಲಿ ತಪ್ಪು ಮಾಡಿದ್ರೆ ಹಿಡಿತಾರೆ" ಎಂದು ರಘು ಹೇಳಿದ್ದಾರೆ.

Bigg Boss Kannada 12: ʻನಿನ್ನಮ್ಮಂಗೆʼ ಹೇಳು ಅನ್ನೋ ರೇಂಜಿಗೆ ಗಲಾಟೆ! ಅಶ್ವಿನಿ ಗೌಡ-ಕಾವ್ಯ ನಡುವೆ ವಾರ್‌

"ಅಶ್ವಿನಿಗೆ ಉತ್ತಮ ಕೊಡುವಾಗ ಧನುಷ್‌ ಹೇಳ್ತಾರೆ, ಈ ವಾರ ಅವರು ಟಾಸ್ಕ್‌ ಆಡಿದ್ರೂ, ಜೊತೆಗೆ ಅಡುಗೆನೂ ಮಾಡಿದ್ರು ಅಂತಾನೆ. ಹಾಗಾದರೆ ನಾನು ಮಾಡಿದ್ದೇನು? ನಾನು ಟಾಸ್ಕ್‌ ಎಲ್ಲಾ ಆಡಿ, ಬಿದ್ದು ಒದ್ದಾಡಿ, ಆಮೇಲೆ ಅಡುಗೆ ಮಾಡಿಲ್ವಾ? ಯಾರು ಸಪೋರ್ಟ್‌ ಮಾಡಿಲ್ಲ" ಎಂದು ರಘು ಹೇಳಿದ್ದಾರೆ.

BBK 12: ಬಿಗ್ ಬಾಸ್ ಕಾಲೇಜ್​ನಲ್ಲಿ ಅಶ್ವಿನಿ ಗೌಡ-ಜಾನ್ವಿಯಿಂದ ಪ್ರೀತಿಯ ವಿವರಣೆ

ರಘು ಮಾತಿಗೆ ಪ್ರತಿಕ್ರಿಯಿಸಿದ ಗಿಲ್ಲಿ ನಟ, ಉತ್ತಮ ಪಡೆಯುವುದು ಹೇಗೆ ಎಂದು ಹೇಳಿದ್ದಾರೆ. ಆದರೆ ಇನ್ನುಮುಂದೆ ಬಿಗ್‌ ಬಾಸ್‌ ಮನೆಯಲ್ಲಿ ಉತ್ತಮ ಪಟ್ಟವೇ ಇರುವುದಿಲ್ಲ ಅನ್ನೋದು ಬೇಸರ. ಅಂದಹಾಗೆ, ಗಿಲ್ಲಿ ಏನ್‌ ಹೇಳಿದ್ರು ಅಂದ್ರೆ, "ಡೈಲಿ ಕೆಲಸ ಮಾಡಿದ್ರೆ ಇಲ್ಲಿ ಯಾರೂ ನೋಡೋದಿಲ್ಲ. ಬಿಟ್ಟು ಬಿಟ್ಟು ಕೆಲಸ ಮಾಡಬೇಕು. ಧ್ರುವಣ್ಣ ಡೈಲಿ ಕ್ಲೀನ್‌ ಮಾಡ್ತಾನೆ. ಯಾರೂ ಅದನ್ನು ಗಮನಿಸೋದಿಲ್ಲ" ಎಂದು ಗಿಲ್ಲಿ ನಟ ಹೇಳಿದ್ದಾರೆ.

ರಘು ಅವರು ಆರಂಭದಿಂದಲೂ ಮನೆಯೊಳಗೆ ಒಳ್ಳೆಯ ವ್ಯಕ್ತಿತ್ವದಿಂದ ಗುರುತಿಸಿಕೊಂಡಿದ್ದಾರೆ. ಅವರನ್ನು ವೀಕ್ಷಕರು ಕೂಡ ಜಂಟಲ್‌ಮನ್‌ ಎಂದೇ ಕರೆಯುತ್ತಾರೆ. ಇನ್ನೇನು ಶೋ ಮುಗಿಯುತ್ತಿರುವಾಗ ಅವರಿಗೆ ಚಪ್ಪಾಳೆ ಸಿಕ್ಕಿಲ್ಲ ಎಂಬ ಬೇಸರ ಕಾಡಿದೆ.